ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಬೂದಿಹಾಳ್ ಗ್ರಾಮದ ಬಸವರಾಜ್ ಹಾಗೂ ಶಾಂತಮ್ಮ ದಂಪತಿ 450 ಕಿಲೋಮೀಟರ್ ಪಾದಯಾತ್ರೆ (Padayathra) ನಡೆಸುವ ಮೂಲಕ ಹರಕೆಯನ್ನ ತೀರಿಸಿದ್ದಾರೆ. ಬೂದಿಹಾಳ್ ಗ್ರಾಮದಿಂದ ಸುಮಾರು 450 ಕಿ.ಮೀ ದೂರದಲ್ಲಿರುವ ಹಾವೇರಿ (Haveri) ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆವರೆಗೆ ಪಾದಯಾತ್ರೆ ನಡೆಸಿ ದಂಪತಿ ಹರಕೆಯನ್ನು ತೀರಿಸಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಮಕ್ಕಳಾಗದ ಕಾರಣಕ್ಕೆ ಕಾಗಿನೆಲೆಯ ಸಂಗಮೇಶ್ವರ ದೇವರಲ್ಲಿ ಬೇಡಿಕೊಂಡಿದ್ದರು. ವರ ಬೇಡಿದ ಒಂದೆ ವರ್ಷದಲ್ಲಿ ಗಂಡು ಮಗು ಜನಿಸಿದೆ. ಗಂಡು ಮಗು ಜನಸಿದ್ದ ಕಾರಣಕ್ಕೆ ಬಸವರಾಜ್ ಹಾಗೂ ಶಾಂತಮ್ಮ ದಂಪತಿ ಕಾಗಿನೆಲೆ ವರೆಗೆ ಪಾದಯಾತ್ರೆ ಮಾಡಿದ್ದಾರೆ.
ಕೊರೊನಾದಿಂದ ಎರಡು ವರ್ಷಗಳಿಂದ ಆಗಲಿಲ್ಲ: ಕಳೆದ ಮೂರು ವರ್ಷಗಳ ಹಿಂದೆಯೇ ದಂಪತಿಗೆ ಗಂಡು ಮಗು ಜನಿಸಿದೆ. ಮಗು ಜನಸಿದ ವರ್ಷವೇ ಜಾತ್ರೆಯಲ್ಲಿ ಭಾಗವಹಿಸಿ ಹರಕೆ ತೀರಿಸಬೇಕು ಅಂತ ಅಂದುಕೊಂಡಿದ್ದರು. ಆದರೆ ಕೊರೊನಾ ಇದ್ದ ಕಾರಣಕ್ಕೆ ಪಾದಯಾತ್ರೆ ನಡೆಸಲು ಆಗಿರಲಿಲ್ಲ. ಹೀಗಾಗಿ ಈ ವರ್ಷ ದಂಪತಿಗಳು ಸುಮಾರು 450 ಕಿ.ಮೀ ಪಾದಯಾತ್ರೆ ನಡೆಸಿ ಹರಕೆ ತೀರಿಸಿದ್ದಾರೆ.
ಹೆಗಲ ಮೇಲೆ ಮಗನನ್ನ ಹೊತ್ತು ನಡೆದ ಅಪ್ಪ: ತಮ್ಮ ಊರಾದ ಬೂದಿಹಾಳ್ ಗ್ರಾಮದಿಂದ ಕಾಗಿನೆಲೆ ಸುಮಾರು 450 ಕಿ.ಮೀ ದೂರವಿದೆ. 10 ದಿನಗಳಲ್ಲಿ 450 ಕಿ.ಮೀ ನಡೆದಿದ್ದಾರೆ. ಊರಿಂದ ಬಸವರಾಜ್ ತಮ್ಮ ಮೂರು ವರ್ಷದ ಮಗುವನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಸಂಗಮೇಶ್ವರ ದೇವರ ದರ್ಶನವನ್ನ ಪಡೆದಿದ್ದಾರೆ.
ಕಾಗಿನಲೆಯಲ್ಲಿ ದಂಪತಿಗೆ ಸನ್ಮಾನ: ಬೂದಿಹಾಳ್ ಗ್ರಾಮದಿಂದ ಕಾಗಿನೆಲೆವರೆಗೆ ಪಾದಯಾತ್ರೆ ನಡೆಸಿ ಹರಕೆ ತೀರಿಸಿದ ದಂಪತಿಗೆ ಕಾಗಿನಲೆಯಲ್ಲಿ ಸನ್ಮಾನ ಮಾಡಲಾಗಿದೆ. ಕೊಡೆಕಲ್ನ ಬಸವ ಮಠದ ಪೀಠಾಧಿತಿಗಳಾದ ವೃಭೇಂದ್ರ ಶ್ರೀಗಳು ದಂಪತಿಗೆ ಸನ್ಮಾನ ಮಾಡಿ ಗೌರವಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಕಾಗಿನೆಲೆಯ ಸಂಗಮೇಶ್ವರ ದೇವಸ್ಥಾನದಲ್ಲಿ ನಡೆಯುವ ಜಾತ್ರೆಯಲ್ಲಿ ಭಾವಹಿಸಿದ್ದೆವು. ನಮಗೆ ಮಕ್ಕಳಾಗದ ಕಾರಣಕ್ಕೆ ದೇವರ ಹತ್ತಿರ ವರ ಬೇಡಿಕೊಂಡಿದ್ದೆವು. ವರ ಬೇಡಿದ ಒಂದೆ ವರ್ಷದಲ್ಲಿ ಗಂಡು ಮಗು ಜನಿಸಿದೆ. ಹೀಗಾಗಿ ಪಾದಯಾತ್ರೆ ನಡೆಸುವ ಮೂಲಕ ಹರಕೆಯನ್ನ ತೀರಿಸಿದ್ದೇವೆ ಅಂತ ಬಸವರಾಜ್ ಹೇಳಿದ್ದಾರೆ.
ಇದನ್ನೂ ಓದಿ
ಆ ಪುಣ್ಯಾತ್ಮ ವಸತಿ ಸಚಿವ ಒಂದು ಮನೆಯನ್ನೂ ನೀಡಿಲ್ಲ; ಸಚಿವ ವಿ.ಸೋಮಣ್ಣ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರು ಹಂಗೇರಿ ತಲುಪಿ: ಭಾರತೀಯ ರಾಯಭಾರ ಕಚೇರಿ ಸಲಹೆ