ಕಾರ ಹುಣ್ಣಿಮೆ ಹಿನ್ನೆಲೆ ಯಾದಗಿರಿಯಲ್ಲೊಂದು ವಿಶೇಷ ಆಚರಣೆ; ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಕ್ಕಳು

ಸಸಿ ಆಡಿದ ನಂತರ ಮಕ್ಕಳ ಮದುವೆ ಮಾಡಲು ಸಿದ್ದತೆ ಮಾಡಿಕೊಳ್ಳಾಗುತ್ತದೆ. ನಿಜವಾದ ವಿವಾಹ ಮಾಡುವಾಗ ಯಾವ ರೀತಿ‌ ಸಂಪ್ರದಾಯಗಳನ್ನ ಪಾಲನೆ ಮಾಡುತ್ತಾರೋ ಅದೇ ರೀತಿ ಎಲ್ಲಾ ಸಂಪ್ರದಾಯ ಪಾಲನೆ ಮಾಡಲಾಗುತ್ತದೆ.

ಕಾರ ಹುಣ್ಣಿಮೆ ಹಿನ್ನೆಲೆ ಯಾದಗಿರಿಯಲ್ಲೊಂದು ವಿಶೇಷ ಆಚರಣೆ; ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಕ್ಕಳು
ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಕ್ಕಳು
Follow us
| Edited By: Ayesha Banu

Updated on: Jun 16, 2022 | 9:39 AM

ಯಾದಗಿರಿ: ಜಿಲ್ಲೆಯ ಅದೊಂದು ಗ್ರಾಮದಲ್ಲಿ ಗುರು ಹಿರಿಯರ ಸಮಕ್ಷಮದಲ್ಲಿಯೇ ಮಕ್ಕಳ ಮದುವೆ(Child Marriage) ಅದ್ದೂರಿಯಾಗಿ ಮಾಡಲಾಯಿತು. ಬಾಲ್ಯ ವಿವಾಹ ನಿಷೇಧವಿದ್ದರು ಮಕ್ಕಳ ಮದುವೆ ಹೇಗೆ ಮಾಡಲಾಯಿತು ಎಂದು ಶಾಕ್ ಆಗಬೇಡಿ. ಆ ಗ್ರಾಮದಲ್ಲಿ ನಡೆದಿದ್ದು ನಿಜವಾದ ಮದುವೆ ಅಲ್ಲ ಬದಲಿಗೆ ಸಂಪ್ರದಾಯದಂತೆ ಅಣಕು ಮದುವೆ ವೈಭವದಿಂದ ಮಾಡಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಕಾರ ಹುಣ್ಣಿಮೆ(Kara Hunnime) ಮರು ದಿನ ಅಂದರೆ ಕಾರ ಹುಣ್ಣಿಮೆ ಕರಿ ದಿವಸ ಸಸಿ ಹಬ್ಬ ಆಚರಣೆ ಮಾಡುತ್ತಾರೆ. ಸಸಿ ಹಬ್ಬ ಮಕ್ಕಳು ಆಚರಣೆ ಮಾಡುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ. ಆ ದಿನ ಸಸಿಗಳಿಗೆ ಪೂಜೆ ಮಾಡಲಾಗುತ್ತದೆ ನಂತರ ಬಾವಿ ಇಲ್ಲವೇ ಕೆರೆಯಲ್ಲಿ ಸಸಿಗಳನ್ನು ಬಿಡಲಾಗುತ್ತದೆ.

ಮಕ್ಕಳ ಮದುವೆ ಪೋಷಕರ ಸಂಭ್ರಮ ಸಸಿ ಆಡಿದ ನಂತರ ಮಕ್ಕಳ ಮದುವೆ ಮಾಡಲು ಸಿದ್ದತೆ ಮಾಡಿಕೊಳ್ಳಾಗುತ್ತದೆ. ನಿಜವಾದ ವಿವಾಹ ಮಾಡುವಾಗ ಯಾವ ರೀತಿ‌ ಸಂಪ್ರದಾಯಗಳನ್ನ ಪಾಲನೆ ಮಾಡುತ್ತಾರೋ ಅದೇ ರೀತಿ ಎಲ್ಲಾ ಸಂಪ್ರದಾಯ ಪಾಲನೆ ಮಾಡಲಾಗುತ್ತದೆ. ಒಂದು ಹೆಣ್ಣು ಮಗುವಿಗೆ ವರನ ಉಡುಗೆ ತೊಡಿಸಿ ಮತ್ತೊಂದು ಹೆಣ್ಣು ಮಗುವಿಗೆ ವಧುವಿನ ಅಲಂಕಾರ ಮಾಡಿ ಗುರು ಹಿರಿಯರ ಸಮಕ್ಷಮದಲ್ಲಿಯೇ ಸಾಂಕೇತಿಕವಾಗಿ ಮಾಂಗಲ್ಯ ಕಟ್ಟಿಸಿ ವಿವಾಹ ಮಾಡಲಾಗುತ್ತದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೆಗ್ಗಣ್ಣದೊಡ್ಡಿ ಗ್ರಾಮದಲ್ಲಿ ಇಂತಹದೊಂದು ವಿಶೇಷ ಮದುವೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಮಕ್ಕಳು ಸಸಿ ಹಬ್ಬ ಆಡಿದ ನಂತರ ಅಣಕು ಮದುವೆ ಮಾಡಲಾಯಿತು. ಹೆಗ್ಗಣ್ಣದೊಡ್ಡಿಯ ಹಿರೇಮಠದಲ್ಲಿ ಅಣಕು ಮದುವೆ ಕಾರ್ಯಕ್ರಮ ನಡೆಸಲಾಯಿತು. ಮಂತ್ರ ಘೋಷದೊಂದಿಗೆ ಭಾಜ ಭಜಂತ್ರಿ ವಾದ್ಯಗಳೊಂದಿಗೆ ವಿವಾಹ ಮಾಡಲಾಯಿತು. ಶಾಂತಯ್ಯ ಹಿರೇಮಠ ಅವರು ಅಣಕು ಮದುವೆ ನೇತೃತ್ವ ವಹಿಸಿದ್ದರು. ಅಣಕು ಮದುವೆಯು ಪ್ರತಿ ವರ್ಷ ಆಚರಣೆ ಮಾಡಿಕೊಂಡು ಬಂದ ಸಂಪ್ರದಾಯವಾಗಿದೆ ಅದರಂತೆ ಈ ಗ್ರಾಮದಲ್ಲಿ ಅಣಕು ಮದುವೆ ಮಾಡಲಾಯಿತು. ಇದನ್ನೂ ಓದಿ: Constable Suicide Attempt: ವಿಚಾರಣೆಗೆ ಹೆದರಿ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕಾನ್ಸ್ಟೇಬಲ್

kara hunnime

ಸಂಪ್ರದಾಯಿಕವಾಗಿ ನಡೆದ ಮದುವೆ

ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ಅಣಕು ಮದುವೆಗೆ ಗುರು ಹಿರಿಯರು, ಮಹಿಳೆಯರು, ಮಕ್ಕಳು ಸಾಕ್ಷಿಯಾದರು ಮದುವೆ ನೋಡಿ ಖುಷಿ ಪಟ್ಟರು. ಅಣಕು ಮದುವೆಯಾದವರಿಗೆ ಗ್ರಾಮದಲ್ಲಿ ಭಾಜ ಭಜಂತ್ರಿ ವಾದ್ಯಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಗ್ರಾಮಸ್ಥರು ಅಕ್ಷತೆ ಹಾಕಿ ಶುಭ ಹಾರೈಸಿದರು.

ಗ್ರಾಮಸ್ಥರಿಂದ ಶುಭ ಹಾರೈಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿಗಳಿಗೆ ಶುಭ ಹಾರೈಕೆ ಮಾಡುವಂತೆ ಅಣಕು ಮದುವೆಯಾದವರಿಗೆ ಗ್ರಾಮಸ್ಥರು ಶುಭ ಹಾರೈಸಿದರು. ಸ್ಟೇಜ್ ಮೇಲೆ ವಧು ಹಾಗೂ ವರ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂತೋಷಗೊಂಡರು. ಮಕ್ಕಳು, ಮಹಿಳೆಯರು, ಗುರು ಹಿರಿಯರು ಹಾರೈಸಿದರು. ಭಕ್ಷ್ಯ ಭೋಜನ ಸವಿದು ಜನರು ಖುಷಿಗೊಂಡರು. ಇದನ್ನೂ ಓದಿ: ಡಾಲಿ ಧನಂಜಯ್​-ಅಮೃತಾ ಅಯ್ಯಂಗಾರ್​ ನಡುವೆ ಏನು ನಡೆಯುತ್ತಿದೆ? ನೇರ ಉತ್ತರ ನೀಡಿದ ನಟಿ

ಮದುವೆಗೆ ಬಂದವರಿಗೆ ಶಾಕ್ ಮಕ್ಕಳ ಮದುವೆ ಇದೆ, ಬಾಲ್ಯ ವಿವಾಹ ನಿಷೇಧವಿದೆ ಅದ್ಹೇಗೆ ಮಾಡುತ್ತಾರೆಂದು ಕೆಲವರು ತಿಳಿದುಕೊಂಡಿದ್ದರು. ಆದರೆ, ಇದು ನಿಜವಾದ ಮದುವೆವಲ್ಲ. ಅಣಕು ಮದುವೆ. ಪುರಾತನ ಕಾಲದಿಂದಲೂ ಸಸಿ ಹಬ್ಬದ ಪ್ರಯುಕ್ತ ಅಣಕು ಮದುವೆ ಕಾರ್ಯಕ್ರಮ ಮಾಡುವುದು ವಿಶೇಷವಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಅಣಕು ಮದುವೆ ಕಾರ್ಯಕ್ರಮ ನಡೆದಿದ್ದು ವಿಶೇಷವಾಗಿದೆ.

ವರದಿ: ಅಮೀನ್‌ ಹೊಸ್ಸುರ್, ಟಿವಿ9 ಯಾದಗಿರಿ

ಯಾದಗಿರಿಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್