AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ಲಕ್ಷ ರೂ. ಹಣ ಪಡೆದು ಅಬಾರ್ಷನ್ ಮಾಡಿಸಿದ್ದಾಳೆ ಲೇಡಿ ಕಾನ್ಸ್‌ಟೇಬಲ್; ಪಿಎಸ್‌ಐ ವಿರೇಶ್‌ಗೆ ವಂಚಿಸಿ ಬೇರೆ ಯುವಕನ ಜೊತೆ ಹಸೆಮಣೆ ಏರಲು ಸಿದ್ಧ!

ಯಾದಗಿರಿ ಪಿಎಸ್‌ಐ ವೀರೇಶ್ ಮತ್ತು ಕಾನ್ಸ್‌ಟೇಬಲ್ ವಿಜಯಶ್ರೀ 8 ವರ್ಷಗಳ ಲಿವ್-ಇನ್ ಸಂಬಂಧದ ನಂತರ ಈಗ ಬೀದಿಪಾಲಾಗಿದೆ. ವಿಜಯಶ್ರೀ ತನ್ನಿಂದ ₹35 ಲಕ್ಷ ಪಡೆದು, ಎರಡು ಬಾರಿ ಗರ್ಭಪಾತ ಮಾಡಿಸಿ, ಈಗ ಬೇರೆ ಮದುವೆಗೆ ಸಜ್ಜಾಗಿದ್ದಾರೆಂದು ವೀರೇಶ್ ಆರೋಪಿಸಿದ್ದಾರೆ. ತನಗೆ ನ್ಯಾಯ ದೊರಕಿಸಿಕೊಡಲು ವೀರೇಶ್ ರಾಯಚೂರು ಎಸ್‌ಪಿ ಅವರಿಗೆ ದೂರು ನೀಡಿದ್ದು, ಇಲಾಖೆಗೆ ಮುಜುಗರ ತಂದಿದೆ.

5 ಲಕ್ಷ ರೂ. ಹಣ ಪಡೆದು ಅಬಾರ್ಷನ್ ಮಾಡಿಸಿದ್ದಾಳೆ ಲೇಡಿ ಕಾನ್ಸ್‌ಟೇಬಲ್; ಪಿಎಸ್‌ಐ ವಿರೇಶ್‌ಗೆ ವಂಚಿಸಿ ಬೇರೆ ಯುವಕನ ಜೊತೆ ಹಸೆಮಣೆ ಏರಲು ಸಿದ್ಧ!
ಯಾದಗಿರಿ ಪಿಎಸ್‌ಐ ವೀರೇಶ್
ಅಮೀನ್​ ಸಾಬ್​
| Edited By: |

Updated on: May 05, 2026 | 9:20 PM

Share

ಯಾದಗಿರಿ, ಮೇ.5 : ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸಿ, ಲಿವಿಂಗ್ ಟುಗೆದರ್‌ನಲ್ಲಿದ್ದ ಜೋಡಿಯೊಂದು ಈಗ ಬೀದಿಪಾಲಾಗಿದೆ. ಪ್ರಿಯಕರನಿಗೆ ಕೈಕೊಟ್ಟು ಬೇರೆ ಯುವಕನೊಂದಿಗೆ ಮದುವೆಯಾಗಲು ಸಜ್ಜಾಗಿರುವ ಲೇಡಿ ಕಾನ್ಸ್‌ಟೇಬಲ್ ವಿರುದ್ಧ ಪಿಎಸ್ಐ ಒಬ್ಬರು ರಾಯಚೂರು ಎಸ್ಪಿ ಮೊರೆ ಹೋಗಿದ್ದಾರೆ. ಯಾದಗಿರಿಯ ಶಹಾಪುರದಲ್ಲಿ ಗುಪ್ತಚರ ಇಲಾಖೆಯಲ್ಲಿ ಪಿಎಸ್ಐ ಆಗಿರುವ ವಿರೇಶ್ ಮತ್ತು ಕಾನ್ಸ್‌ಟೇಬಲ್ ವಿಜಯಶ್ರೀ 2017 ರಿಂದ ಪ್ರೀತಿಸುತ್ತಿದ್ದರು. ವಿಜಯಪುರದಲ್ಲಿ ವಿದ್ಯಾಭ್ಯಾಸ ಮಾಡುವಾಗ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು.

ವಿರೇಶ್ ಪಿಎಸ್ಐ ಆಗಿ ನೇಮಕಗೊಂಡ ಬಳಿಕ, ವಿಜಯಶ್ರೀ ಕೂಡ ಕಾನ್ಸ್‌ಟೇಬಲ್ ಆಗಿ ಕೆಲಸಕ್ಕೆ ಸೇರಿದ್ದರು. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಕೆಲಸ ಮಾಡುವಾಗ ಇಬ್ಬರೂ ನಾಲ್ಕು ವರ್ಷಗಳ ಕಾಲ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಿದ್ದರು. ಅಷ್ಟೇ ಅಲ್ಲದೆ, ದೇವಸ್ಥಾನವೊಂದರಲ್ಲಿ ಹಾರ ಬದಲಾಯಿಸಿಕೊಂಡು ಮದುವೆಯಾಗಿದ್ದರು ಎಂದು ವಿರೇಶ್ ಹೇಳಿದ್ದಾರೆ.

“ವಿಜಯಶ್ರೀ ನನ್ನಿಂದ ಸುಮಾರು 35 ಲಕ್ಷ ರೂಪಾಯಿ ಹಣ ಪಡೆದಿದ್ದಾಳೆ. ಎರಡು ಬಾರಿ ಗರ್ಭಿಣಿಯಾಗಿದ್ದಾಗ ನನಗೆ ತಿಳಿಯದಂತೆ ಅಬಾರ್ಷನ್ ಮಾಡಿಸಿದ್ದಾಳೆ. ಈಗ ಅಧಿಕೃತವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳೋಣ ಅಂದಾಗ ಜಾತಿಯ ನೆಪ ಹೇಳಿ ಬೇರೆ ಯುವಕನ ಜೊತೆ ಮದುವೆಗೆ ಸಜ್ಜಾಗಿದ್ದಾಳೆ” ಎಂದು ವಿರೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ: 20ರ ಯುವತಿ-46ರ ಅಂಕಲ್ ಲವ್: ಪ್ರೇಯಸಿ ಬೇಕು ಹೆಂಡ್ತಿನೂ ಬೇಕೆಂದ ಟೇಲರ್

ವಿಜಯಶ್ರೀ ಅವರ ಮದುವೆ ಇದೇ ಮೇ 7 ರಂದು ರಾಯಚೂರಿನಲ್ಲಿ ನಿಶ್ಚಯವಾಗಿದೆ. ತನಗೆ ನ್ಯಾಯ ಸಿಗಬೇಕು ಮತ್ತು ಈ ಮದುವೆ ನಡೆಯಬಾರದು ಎಂದು ವಿರೇಶ್ ಈಗ ಆನ್‌ಲೈನ್ ಮೂಲಕ ದೂರು ನೀಡಿದ್ದು, ಟಿವಿ9 ಮುಂದೆ ಅಳಲು ತೋಡಿಕೊಂಡಿದ್ದಾರೆ. ಇಬ್ಬರೂ ಒಂದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಈ ಪ್ರೀತಿ ಮತ್ತು ವಂಚನೆಯ ಪ್ರಕರಣವು ಈಗ ಹಾದಿಬೀದಿ ಹೈಡ್ರಾಮಾದಂತಾಗಿ ಇಲಾಖೆಗೆ ಮುಜುಗರ ತಂದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ತಮ್ಮೂರು ತುಮಕೂರಿನ ಬಗ್ಗೆ ಧ್ರುವ ಸರ್ಜಾ ಮಾತು: ವಿಡಿಯೋ ನೋಡಿ
ತಮ್ಮೂರು ತುಮಕೂರಿನ ಬಗ್ಗೆ ಧ್ರುವ ಸರ್ಜಾ ಮಾತು: ವಿಡಿಯೋ ನೋಡಿ
ಮೊದಲ ಬಾರಿಗೆ ಕಾನ್ಸರ್ಟ್ ನೀಡುತ್ತಿದ್ದಾರೆ ಅಜನೀಶ್: ಇಲ್ಲಿದೆ ಮಾಹಿತಿ
ಮೊದಲ ಬಾರಿಗೆ ಕಾನ್ಸರ್ಟ್ ನೀಡುತ್ತಿದ್ದಾರೆ ಅಜನೀಶ್: ಇಲ್ಲಿದೆ ಮಾಹಿತಿ
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ