ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಏನು ಮಾಡಿದೆ? ಮೋದಿ ಬಂದು ಹೋದ್ರು ಅಷ್ಟೆ: ಡಿ.ಕೆ.ಶಿವಕುಮಾರ್

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿವೆ. ಹೀಗಾಗಿ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ಮೂಲಕ ರಾಜ್ಯದಲ್ಲಿ ಭರ್ಜರಿಯಾಗಿ ಪ್ರಚಾರ ಆರಂಭಿಸಿದ್ದು, ಇವತ್ತು(ಜ.28) ಕಾಂಗ್ರೆಸ್ ಯಾತ್ರೆ ಯಾದಗಿರಿ ಜಿಲ್ಲೆಗೆ ಎಂಟ್ರಿ ಕೊಟ್ಟಿತ್ತು. ತಮ್ಮ ಭಾಷಣದ ಮೂಲಕ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಭರ್ಜರಿಯಾಗಿ ವಾಗ್ದಾಳಿ ನಡೆಸಿದ್ದಾರೆ.

ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಏನು ಮಾಡಿದೆ? ಮೋದಿ ಬಂದು ಹೋದ್ರು ಅಷ್ಟೆ: ಡಿ.ಕೆ.ಶಿವಕುಮಾರ್
ಬಿಜೆಪಿ ವಿರುದ್ದ ಕಿಡಿಕಾರಿದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Jan 29, 2023 | 5:17 PM

ಯಾದಗಿರಿ: ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಭರ್ಜರಿಯಾಗಿ ಪ್ರಜಾಧ್ವನಿ ಬಸ್ ಯಾತ್ರೆ(praja dhwani yatra) ನಡೆಸುತ್ತಿದ್ದಾರೆ‌. ಇದೆ ಬಸ್ ಯಾತ್ರೆ ಇಂದು(ಜ.28) ಗಿರಿನಾಡು ಯಾದಗಿರಿ ಜಿಲ್ಲಾ‌ ಕೇಂದ್ರಕ್ಕೆ ಎಂಟ್ರಿ ಕೊಟ್ಟಿತ್ತು. ಬೃಹತ್ತಾದ ಹೂವಿನ ಹಾರ ಹಾಕುವ ಮೂಲಕ ಯಾತ್ರೆಗೆ ಗ್ರ್ಯಾಂಡ್ ವೆಲ್‌ಕಮ್‌ ಮಾಡಿಕೊಂಡರು. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಿಂದ 20 ಸಾವಿರಕ್ಕೂ ಅಧಿಕ ಜನ ಕಾರ್ಯಕರ್ತರು ಸೇರಿದ್ದರು. ಬಳಿಕ ಕಾರ್ಯಕ್ರಮವನ್ನ ಉದ್ದೇಶಿಸಿ ಭಾಷಣ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (D. K. Shivakumar)ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ಕೆಲವು ದಿನದ ಹಿಂದೆ ಯಾದಗಿರಿ ಜಿಲ್ಲೆಗೆ ಮೋದಿ ಬಂದಿರುವ ಬಗ್ಗೆ ಪ್ರಸ್ತಾಪ‌‌ ಮಾಡಿದ ಡಿ.ಕೆ ಶಿವಕುಮಾರ್ ಮೋದಿ ಬಂದು ಹೋದ್ರು ಏನು ಅಭಿವೃದ್ಧಿ ಆಗಲ್ಲ, ಕಲ್ಯಾಣ ಕರ್ನಾಟಕ ಹಿಂದುಳಿದಿದೆ ಅಂತ ಹೇಳಿದ್ದಾರೆ. ಆದರೆ ಬಿಜೆಪಿ ಈ ಭಾಗಕ್ಕೆ ಏನ್ ಮಾಡಿದೆ‌ ಎಂದು ಒಂದು ಸಾಕ್ಷಿ ತೋರಿಸಿ ಎಂದು ಪ್ರಶ್ನೆ ಮಾಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಹಾಗೂ ದಿವಂಗತ ಧರಂಸಿಂಗ್ ರನ್ನ ನೆನೆದ ಡಿ.ಕೆ ಶಿವಕುಮಾರ್​ ಈ ಭಾಗಕ್ಕೆ ಇಬ್ಬರು ನಾಯಕರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. 371 ಜೆ ತಿದ್ದುಪಡಿ ಮಾಡಿದ್ದೆ ಖರ್ಗೆ ಮಾತ್ತು ಧರಂಸಿಂಗ್, ಈ ಭಾಗಕ್ಕೆ ನಮ್ಮ ಸರ್ಕಾರ ಸಾಕಷ್ಟು ಕೊಡುಗೆ ಕೊಟ್ಟಿದೆ. ಬಿಜೆಪಿ ಏನ್ ಮಾಡಿದೆ ಯಾವುದೇ ಅಣೆಕಟ್ಟನ್ನ ಕಟ್ಟಿದ್ದಾರಾ, ನೀರಾವರಿ ಮಾಡಿದ್ದಾರಾ‌, ಕುಡಿಯೋ ನೀರಿನ ವ್ಯವಸ್ಥೆ ಮಾಡಿದ್ದಾರಾ ನಾವು ಸಾಕಷ್ಟು ಅಭಿವೃದ್ಧಿ ಮಾಡಿದ್ದೆವೆ. ಕಳೆದ ಚುನಾವಣೆಯಲ್ಲಿ ಒಂದೇ ಸ್ಥಾನ ಗೆಲ್ಲಿಸಿದ್ರಿ ಆದರೆ ಈ ಬಾರಿ ನಾಲ್ಕು ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡ್ರು.

ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಬಿಜೆಪಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ರು. ಈ ಬಿಜೆಪಿಯವರು ನಾವು ಮಾಡಿದ ಕಾರ್ಯಕ್ರಮವನ್ನ ಉದ್ಘಾಟನೆ ಮಾಡಲು ಮೋದಿಗೆ ಕರೆದುಕೊಂಡು ಬಂದಿದ್ರು, ತಾಂಡಗಳಲ್ಲಿ ವಾಸ ಮಾಡುವ ಜನರಿಗೆ ಯಾವುದೇ ದಾಖಲಾತಿಗಳು ಇರಲಿಲ್ಲ ನಾವು 2013 ರಲ್ಲಿ ಅಧಿಕಾರಕ್ಕೆ ಬಂದಾಗ ಕಂದಾಯ ಗ್ರಾಮ ಮಾಡಬೇಕು ಎಂದು ತೀರ್ಮಾನ ಮಾಡಿದ್ದು, ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಆರಂಭಿಸಿದ್ರು‌. ನರಸಿಂಹಯ್ಯ ನೇತೃತ್ವದಲ್ಲಿ ನಾವು ತಾಂತ್ರಿಕ ಸಮಿತಿ ನೇಮಕ ಮಾಡಿ, ಕಂದಾಯ ಗ್ರಾಮ ಮಾಡಲು ಏನೇನು ಕ್ರಮ ತೆಗೆದುಕೊಳ್ಳಬೇಕು ಎಂದು ಪರಿಶಿಲಿಸಿದ್ದೇವು. ಕಾಗೋಡು ತಿಪ್ಪಮ್ಮ ಕಂದಾಯ ಸಚಿವರಾಗಿದ್ರು ವಾಸಿಸುವವನೆ ಮನೆಯ ಒಡೆಯ ಎಂದು ನಾವು ಹೊಸ ಸೆಕ್ಷನ್ ಸೇರಿಸುವ ಕೆಲಸ ಮಾಡಿದ್ವಿ.‌ ಆದ್ರೆ ಅಡುಗೆ ಮಾಡಿದವರು ನಾವು ಬಿಜೆಪಿಯವರು ಊಟಕ್ಕೆ ಮೋದಿಗೆ ಕರೆದುಕೊಂಡು ಬಂದರು ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.

ಇದನ್ನೂ ಓದಿ:ಕಲಬುರಗಿ: ಪ್ರಜಾಧ್ವನಿ ಯಾತ್ರೆ ಬಸ್ಸಲ್ಲಿ ಮತ್ತೊಮ್ಮೆ ಅಕ್ಕಪಕ್ಕ ಕೂತು ಕಾರ್ಯಕರ್ತರನ್ನು ಉಲ್ಲಸಿತರಾಗಿಸಿದ ಶಿವಕುಮಾರ-ಸಿದ್ದರಾಮಯ್ಯ

ನಾರಾಯಣಪುರ ಸ್ಕಾಡಾ ಗೇಟ್​ಗಳು ನಾವು ಪ್ರಾರಂಭಸಿದ್ವಿ 2014 ರಲ್ಲಿ ನಾವು ಈ ಯೋಜನೆಯನ್ನ ಜನರಿಗೆ ತಂದು ಇದ್ದಕ್ಕಾಗಿ 3500 ಸಾವಿರ ಕೋಟಿ ರೂ. ಖರ್ಚು ಮಾಡಿದ್ವಿ ಆದ್ರೆ ಈ ಗೇಟ್​ಗಳನ್ನ ಮೋದಿ ಕೈಯಿಂದ ಉದ್ಘಾಟನೆ ಮಾಡಿಸಿದ್ದಾರೆ. ಈ ಬಿಜೆಪಿಯವರ ಬಂಡವಾಳವೇ ಮೋದಿ ರಾಜ್ಯ ಬಿಜೆಪಿ ನಾಯಕರ‌ ಮುಖ ನೋಡಿ ಜನ ಓಟ್ ಹಾಕಲ್ಲ. ಹೀಗಾಗಿ ಮೋದಿ, ಶಾ‌ ಹಾಗೂ ನಡ್ಡಾಗೆ ಕರೆದುಕೊಂಡು ಬರ್ತಾಯಿದ್ದಾರೆ. ಈ ಬಿಜೆಪಿ ಸಿಎಂ ಹಾಗೂ ಸಚಿವರು ಅಲಿ ಬಾಬಾ ಚಾಲಿಸ್ ಚೋರ್ ಇದ್ದ ಹಾಗೆ ಎಂದು ಬಿಜೆಪಿ ವಿರುದ್ದ ಸಿದ್ದು ವ್ಯಂಗ್ಯವಾಡಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಒಂದು ರೀತಿಯಲ್ಲಿ ಸೊರಗಿ ಹೋಗಿತ್ತು. ಆದರೆ ಚುನಾವಣೆ ಹತ್ರ ಬರ್ತಾ ಇದ್ದ ಹಾಗೆ ಸಿದ್ದು ಡಿಕೆಶಿ ಭೇಟಿಯಿಂದಾಗಿ ಕೈ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಹೊಸ ಜೋಶ್ ಬಂದಂತಾಗಿದೆ.

ವರದಿ: ಅಮೀನ್ ಹೊಸ್ಸುರ್ ಟಿವಿ9 ಯಾದಗಿರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:01 pm, Sun, 29 January 23

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​