AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Arcturus Or The XBB.1.16 Variant: ಕೋವಿಡ್-19 ಹೊಸ ರೂಪಾಂತರವು ಹೆಚ್ಚು ಅಪಾಯಕಾರಿಯೇ?ಇಲ್ಲಿದೆ ಮಾಹಿತಿ

ಕೋವಿಡ್-19ರ ಹೊಸ ರೂಪಾಂತರವಾಗಿರುವ ಆರ್ಕ್ಟುರಸ್ ಅಥವಾ XBB.1.16 ಅಲೆಯು ವೇಗವಾಗಿ ಭಾರತದಲ್ಲಿ ಹೆಚ್ಚಾಗುತ್ತಿದೆ. ಆರ್ಕ್ಟುರಸ್​​ಗೆ ತುತ್ತಾದವರಲ್ಲಿ ಜ್ವರ, ತಲೆನೋವು, ಕಿಬ್ಬೊಟ್ಟೆಯ ಸಮಸ್ಯೆಗಳು, ಕೆಮ್ಮು ಮತ್ತು ಗಂಟಲು ನೋವು ಇತ್ಯಾದಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

Arcturus Or The XBB.1.16 Variant: ಕೋವಿಡ್-19 ಹೊಸ ರೂಪಾಂತರವು ಹೆಚ್ಚು ಅಪಾಯಕಾರಿಯೇ?ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 27, 2023 | 4:54 PM

Share

2-3 ವರ್ಷಗಳ ಹಿಂದೆ ಕೋವಿಡ್ (Covid-19) ಮಹಾಮಾರಿ ಬಂದು ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿತ್ತು. ಆ ಸೋಂಕು ಕಡಿಮೆಯಾಗುತ್ತಿದ್ದಂತೆ ಈಗ ಅದರ ಹೊಸ ರೂಪಾಂತರವಾದ ಆರ್ಕ್ಟುರಸ್ (Arcturus) ಅಥವಾ XBB.1.16 ಎಂಬ ಹೆಸರಿನ ಸೋಂಕುಗಳು ಕಾಣಿಸಿಕೊಳ್ಳುತ್ತಿದೆ. ಭಾರತದಲ್ಲಿಯೂ ಈ ಸೋಂಕಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತೀವ್ರವಾದ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ ಭಾರದಲ್ಲಿ ಕೋವಿಡ್​​​ನ ಹೊಸ ರೂಪಾಂತರವಾದ ಆರ್ಕ್ಟುರಸ್ ಗೆ ಸಂಬಂಧಿಸಿದಂತೆ 11,692 ಪ್ರಕರಣಗಳು ದಾಖಲಾಗಿವೆ. ಕಳೆದ ಕೆಲವು ವಾರಗಳಿಂದಲೂ ದೇಶದಲ್ಲಿ ಈ ಸೋಂಕಿನ ದೈನಂದಿನ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಪ್ರಸ್ತುತ ದೇಶದಲ್ಲಿ 66,170 ಸಕ್ರಿಯ ಕೋವಿಡ್ ಪ್ರಕರಣಗಳು ದಾಖಲಾಗಿವೆ. ವರದಿಗಳ ಪ್ರಕಾರ, ಈ ರೂಪಾಂತರವು ಇಲ್ಲಿಯವರೆಗೆ 29 ದೇಶಗಳಲ್ಲಿ ಪತ್ತೆಯಾಗಿದೆ. ಕೋವಿಡ್-19 ಸೋಂಕಿನ ಹೊಸ ರೂಪಾಂತರವಾದ ಇದನ್ನು ಆರ್ಕ್ಟುರಸ್ ಎಂದೂ ಕರೆಯುತ್ತಾರೆ.

ಆರ್ಕ್ಟುರಸ್ ಅಥವಾ XBB.1.16 ರೂಪಾಂತರ ಹೆಚ್ಚು ಅಪಾಯಕಾರಿಯೇ?

ಆರ್ಕ್ಟುರಸ್ ಎಂಬ ಕೋವಿಡ್​​​ನ ಹೊಸ ರೂಪಾಂತರವನ್ನು ಜನವರಿಯಲ್ಲಿ ಪತ್ತೆಹಚ್ಚಲಾಯಿತು. ಇದು ಓಮಿಕ್ರಾನ್ ಉಪ ರೂಪಾಂತರವಾಗಿದ್ದು, ಅದು ಸುಲಭವಾಗಿ ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ಇದು ಯಾವುದೇ ತೀವ್ರ ರೋಗ ಲಕ್ಷಣವನ್ನು ಉಂಟು ಮಾಡುವುದಿಲ್ಲ. ಇದು ಪ್ರಾಣಕ್ಕೆ ಅಪಾಯಕಾರಿಯಾಗಿಲ್ಲ.

ಇದನ್ನೂ ಓದಿ:Covid 19: ಕೋವಿಡ್-19ನ ವೈರಸ್ ಹುಟ್ಟಿದ್ದು ಮಾನವನಿಂದ ಎಂದ ಚೀನಾದ ವಿಜ್ಞಾನಿ

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಈ ಹೊಸ ರೂಪಾಂತರ ಭಾರತದಲ್ಲಿ ತ್ವರಿತವಾಗಿ ಹರಡುತ್ತಿದೆ. ಆದರೆ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ ಇದೆ. ಈ ರೂಪಾಂತರವು ಅಷ್ಟೇನು ತೀವ್ರವಾಗಿಲ್ಲ ಇದು ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದೆ ಮತ್ತು ಇಲ್ಲಿಯವರೆಗೆ ಯಾವುದೇ ತೀವ್ರವಾದ ತೊಡಕುಗಳು ಉಂಟಾಗಿಲ್ಲ.

ಆರ್ಕ್ಟುರಸ್ ಅಥವಾ ರೂಪಾಂತರದ XBB.1.16 ರೋಗಲಕ್ಷಣಗಳು

ಜ್ವರ, ತಲೆನೋವು, ಗಂಟಲು ಕೆರೆತ, ಮೂಗಿನಲ್ಲಿ ಸ್ರವಿಸುವಿಕೆ, ಆಯಾಸ, ಹೊಟ್ಟೆ ಸಂಬಂಧಿ ಸಮಸ್ಯೆಗಳು, ಕೆಮ್ಮು ಇತ್ಯಾದಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆರ್ಕ್ಟುರಸ್​​​ಗೆ ತ್ತುತ್ತಾದ ರೋಗಿಗಳಲ್ಲಿ ಕಣ್ಣಿನಲ್ಲಿ ತುರಿಕೆ, ಕಣ್ಣು ಗುಲಾಬಿ ಬಣ್ಣಕ್ಕೆತಿರುಗುವುದು ಈ ರೀತಿಯ ಕಣ್ಣಿಗೆ ಸಂಬಂಧಿಸಿದ ರೋಗಲಕ್ಷಣಗಳೂ ಕಂಡು ಬಂದಿದೆ ಎಂದು ತಜ್ಞರು ಹೇಳಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ