‘ಕಾಲೇಜು ಆರಂಭಕ್ಕೆ ಓಕೆ.. ಆದ್ರೆ ಕೊರೊನಾ ನಿಯಂತ್ರಣಕ್ಕೆ ಬಂದರಷ್ಟೇ LKG-UKG ಆರಂಭ’

  • TV9 Web Team
  • Published On - 16:11 PM, 16 Oct 2020
‘ಕಾಲೇಜು ಆರಂಭಕ್ಕೆ ಓಕೆ.. ಆದ್ರೆ  ಕೊರೊನಾ ನಿಯಂತ್ರಣಕ್ಕೆ ಬಂದರಷ್ಟೇ LKG-UKG ಆರಂಭ’
ಡಿಸಿಎಂ ಡಾ.ಅಶ್ವತ್ಥ್ ನಾರಾಯಣ

ಬೆಂಗಳೂರು: ರಾಜ್ಯದಲ್ಲಿ ಹಂತ ಹಂತವಾಗಿ ಶಾಲಾ ಕಾಲೇಜು ಆರಂಭಕ್ಕೆ ಸಿದ್ಧತೆ ನಡೆದಿದೆ. ಶಾಲಾ ಕಾಲೇಜು ಆರಂಭಿಸುವ ಬಗ್ಗೆ ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ ಸುಳಿವು ನೀಡಿದ್ದು ಈಗಾಗಲೇ ಕೇಂದ್ರ ಸರ್ಕಾರ ಶಾಲೆ ತೆರೆಯಲು ಅವಕಾಶ ಕಲ್ಪಿಸಿದೆ. ಕೇಂದ್ರದ ಅನುಮತಿ ಬೆನ್ನಲ್ಲೇ ಯುಜಿಸಿಯಿಂದಲೂ (UGC )‌ ಸೂಚನೆ ದೊರೆತಿದೆ. ಹಾಗಾಗಿ ನವೆಂಬರ್​ನಲ್ಲಿ ಕಾಲೇಜುಗಳನ್ನು ಆರಂಭಿಸುವ ಸೂಚನೆಗಳಿವೆ ಎಂದು ಅವರು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಪದವಿ ಕಾಲೇಜುಗಳ ಆರಂಭಗೊಳ್ಳಲಿವೆ. ಎರಡನೇ ಹಂತದಲ್ಲಿ 8ರಿಂದ 12ನೇ ತರಗತಿ ಆರಂಭ. 3ನೇ ಹಂತದಲ್ಲಿ 1-7ನೇ ತರಗತಿ ತೆರೆಯಲು ಅವಕಾಶ ಕಲ್ಪಿಸಲಾಗುವುದು. ಆದರೆ, ಕೊರೊನಾ ನಿಯಂತ್ರಣಕ್ಕೆ ಬಂದರಷ್ಟೇ LKG, UKG ಆರಂಭ ಮಾಡುತ್ತೇವಷ್ಟೇ ಎಂದು ಡಿಸಿಎಂ ಅಶ್ವತ್ಥ್​ ನಾರಾಯಣ ಸ್ಪಷ್ಟಪಡಿಸಿದ್ದಾರೆ.

ಸಿಎಂ ಜೊತೆ ಶಿಕ್ಷಣ ತಜ್ಞರು‌, ಆರೋಗ್ಯ ತಜ್ಞರ ಚರ್ಚೆ ನಡೆದಿದೆ. ಚರ್ಚೆ ‌ನಂತರ ಶಾಲೆ ಆರಂಭಿಸುವ ಬಗ್ಗೆ ಅಂತಿಮ ನಿರ್ಧಾರವಾಗಲಿದೆ. ನವೆಂಬರ್ 1 ಅಥವಾ 2ನೇ ವಾರದಲ್ಲಿ ಕಾಲೇಜು ಆರಂಭವಾಗುವ ಸೂಚನೆಯಿದೆ ಎಂದು ಡಿಸಿಎಂ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್​ ನಾರಾಯಣ ಹೇಳಿದ್ದಾರೆ.