AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತರ್ ಧರ್ಮೀಯ ವಿವಾಹ ಕಾನೂನುಬಾಹಿರ ಅಲ್ಲ; ಧಾರ್ಮಿಕ ಸ್ವಾತಂತ್ರ್ಯ ತಿದ್ದುಪಡಿ ಕಾಯ್ದೆಯ ಕೆಲ ಪರಿಚ್ಛೇದಗಳಿಗೆ ಗುಜರಾತ್ ಹೈಕೋರ್ಟ್​ ತಡೆ

ಒಂದು ಧರ್ಮಕ್ಕೆ ಸೇರಿರುವವರು ಮತ್ತೊಂದು ಧರ್ಮಕ್ಕೆ ಸೇರಿದವರೊಂದಿಗೆ ಮದುವೆಯಾದರು ಎನ್ನುವ ಕಾರಣಕ್ಕೆ ಅದನ್ನು ಒತ್ತಾಯದ ಮದುವೆ ಎಂದು ಕರೆಯಲು ಸಾದ್ಯವಿಲ್ಲ.

ಅಂತರ್ ಧರ್ಮೀಯ ವಿವಾಹ ಕಾನೂನುಬಾಹಿರ ಅಲ್ಲ; ಧಾರ್ಮಿಕ ಸ್ವಾತಂತ್ರ್ಯ ತಿದ್ದುಪಡಿ ಕಾಯ್ದೆಯ ಕೆಲ ಪರಿಚ್ಛೇದಗಳಿಗೆ ಗುಜರಾತ್ ಹೈಕೋರ್ಟ್​ ತಡೆ
ಗುಜರಾತ್ ಹೈಕೋರ್ಟ್​
TV9 Web
| Edited By: |

Updated on:Aug 19, 2021 | 7:13 PM

Share

ಅಹಮದಾಬಾದ್: ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆ 2021ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎರಡು ಅರ್ಜಿಗಳ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್​ ಗುರುವಾರ ಕಾಯ್ದೆಯ ಕೆಲ ಪರಿಚ್ಛೇದಗಳಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಅಂತರ್​ಧರ್ಮೀಯ ವಿವಾಹಗಳನ್ನು ಒತ್ತಾಯದ ಮತಾಂತರಕ್ಕೆ ಪುಷ್ಟಿ ನೀಡುವ ಕೃತ್ಯಗಳು ಎಂದು ಹೇಳುವ ಇದೇ ಕಾಯ್ದೆಯ ಅಂಶವನ್ನೂ ತಡೆಹಿಡಿದಿದೆ.

ಜೂನ್ 1ರಿಂದ ಈ ತಿದ್ದುಪಡಿ ಕಾಯ್ದೆ ಜಾರಿಯಾಗಿತ್ತು. ಈವರೆಗೆ ಮೂರು ಪ್ರಕರಣಗಳು ಈ ಕಾಯ್ದೆಯ ಅಡಿಯಲ್ಲಿ ದಾಖಲಾಗಿವೆ ಎಂದು ಅಡ್ವೊಕೇಟ್ ಜನರಲ್ ಕಮಲ್ ತ್ರಿವೇದಿ ತಿಳಿಸಿದರು. ಪ್ರಕರಣದ ವಿಚಾರಣೆಯ ನಂತರ ತೀರ್ಪಿನ ಕಾರ್ಯಾದೇಶ ಓದಿದ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್, ‘ಮುಂದಿನ ವಿಚಾರಣೆ ಕಾಯ್ದಿರಿಸಿ ಈ ಕಾಯ್ದೆಯ 3, 4, 4ಎ, 4ಬಿ, 4ಸಿ, 5, 6, ಮತ್ತು 6ಎ ಪರಿಚ್ಛೇದಗಳ ಅನುಷ್ಠಾನ ಸಲ್ಲದು. ಒಂದು ಧರ್ಮಕ್ಕೆ ಸೇರಿರುವವರು ಮತ್ತೊಂದು ಧರ್ಮಕ್ಕೆ ಸೇರಿದವರೊಂದಿಗೆ ಮದುವೆಯಾದರು ಎನ್ನುವ ಕಾರಣಕ್ಕೆ ಅದನ್ನು ಒತ್ತಾಯದ ಮದುವೆ ಎಂದು ಕರೆಯಲು ಸಾದ್ಯವಿಲ್ಲ. ಮೋಸದ ಉದ್ದೇಶವಿಲ್ಲದ ಇಂಥ ಮದುವೆಗಳನ್ನು ಕಾನೂನು ಬಾಹಿರ ಎನ್ನಲು ಆಗುವುದಿಲ್ಲ ಎಂದು ಹೇಳಿದರು.

ಮೇಲಿನ ಮಧ್ಯಂತರ ಆದೇಶವನ್ನು ಅಡ್ವೊಕೇಟ್ ಜನರಲ್ ಕಮಲ್ ತ್ರಿವೇದಿ ಅವರ ವಾದವನ್ನು ಮಾತ್ರ ಆಧರಿಸಿ ನೀಡಲಾಗಿದೆ. ಅಂತರ್​ ಧರ್ಮೀಯ ಮದುವೆ ಆದವರಿಗೆ ಅನಗತ್ಯ ಹಿಂಸೆ ಆಗಬಾರದು ಎಂಬು ಉದ್ದೇಶದಿಂದ ಮಧ್ಯಂತರ ಆದೇಶ ನೀಡಿದ್ದೇವೆ ಎಂದು ಹೇಳಿದರು.

ಆಗಸ್ಟ್​ 17ರಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಅಡ್ವೊಕೇಟ್ ಜನರಲ್ ತ್ರಿವೇದಿ ಅಂತರ್​ ಧರ್ಮೀಯ ಮದುವೆಗಳನ್ನು ಸರ್ಕಾರ ನಿಷೇಧಿಸಿಲ್ಲ ಎಂದು ಹೇಳಿದ್ದರು. ಆದರೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಬಿರೇನ್ ಯಾದವ್ ಅವರಿದ್ದ ವಿಭಾಗೀಯ ಪೀಠವು ಈ ವಾದವನ್ನು ಪುರಸ್ಕರಿಸಲಿಲ್ಲ. ಅಂತರ್ ಧರ್ಮೀಯ ಮದುವೆಗಳ ಮೇಲೆ ತೂಗುಗತ್ತಿ ಇರಿಸಿರುವ ಕಾಯ್ದೆಯು ಈ ವಿಷಯವನ್ನು ಸ್ಪಷ್ಟವಾಗಿ ಹೇಳುತ್ತಿಲ್ಲ ಎಂದರು.

ಆದೇಶ ಹೊರಬಿದ್ದ ನಂತರ ಪೂರಕ ಮನವಿ ಸಲ್ಲಿಸಿದ ಅಡ್ವೊಕೇಟ್ ಜನರಲ್, ಒಂದು ವೇಳೆ ಮದುವೆಯ ನಂತರ ಬಲಾತ್ಕಾರದ ಮತಾಂತರ ನಡೆದ ಸಂದರ್ಭದಲ್ಲಿಯೂ ಈ ಕಾಯ್ದೆಯಲ್ಲಿ ತಾವು ನಿರ್ಬಂಧಿಸಿರುವ ಪರಿಚ್ಛೇದಗಳು ಅನೂರ್ಜಿತವಾಗುತ್ತವೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕೋರಿದರು. ಒತ್ತಾಯ, ಪ್ರಲೋಭನೆ ಅಥವಾ ಮೋಸದಿಂದ ಮದುವೆ ನಡೆದಿದೆ ಎಂಬುದನ್ನು ಸಾಬೀತುಪಡಿಸದಿದ್ದರೆ ಅಂತರ್​ ಧರ್ಮೀಯ ಮದುವೆಗಳು ಕಾನೂನು ಬಾಹಿರ ಎನಿಸಿಕೊಳ್ಳುವುದಿಲ್ಲ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿತು.

ತಿದ್ದುಪಡಿ ಕಾಯ್ದೆಯ 3ನೇ ಪರಿಚ್ಛೇದವು ಒತ್ತಾಯದ ಮತಾಂತರವನ್ನು ನಿಷೇಧಿಸುತ್ತದೆ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ, ಒತ್ತಾಯದಿಂದ ಅಥವಾ ಪ್ರಲೋಭನೆಯಿಂದ ಅಥವಾ ಮದುವೆಯಿಂದ ಯಾವುದೇ ವ್ಯಕ್ತಿಯನ್ನು ಮತಾಂತರ ಮಾಡುವುದು ಅಥವಾ ಮತಾಂತರ ಮಾಡಲು ಪ್ರಯತ್ನಿಸುವುದು ತಪ್ಪು ಎಂದು ಕಾಯ್ದೆಯು ಹೇಳುತ್ತದೆ.

ಕಾಯ್ದೆಯ 3ನೇ ಪರಿಚ್ಛೇದದ ಉಲ್ಲಂಘನೆಗೆ ಇರುವ ಶಿಕ್ಷೆಗಳನ್ನು 4ನೇ ಪರಿಚ್ಛೇದ ಸ್ಪಷ್ಟಪಡಿಸುತ್ತದೆ. ಇಂಥ ಕೃತ್ಯಗಳಲ್ಲಿ ತೊಡಗಿಕೊಂಡವರಿಗೆ 3ರಿಂದ 7 ವರ್ಷದ ಜೈಲುವಾಸದ ಶಿಕ್ಷೆ ವಿಧಿಸಲು ಅವಕಾಶವಿದೆ.

(Interfaith Marriage is not offence clarifies Gujarat High Court puts some sections on hold)

ಇದನ್ನೂ ಓದಿ: ಕುಟುಂಬದ ಒಪ್ಪಿಗೆ ಇದ್ದರೂ ಅಂತರ್​​ಧರ್ಮೀಯ ವಿವಾಹಕ್ಕೆ ಪೊಲೀಸರ ತಡೆ

ಇದನ್ನೂ ಓದಿ: ಹಿಂದು-ಮುಸ್ಲಿಂ ಮದುವೆಯಾದ್ರೆ ಮಕ್ಕಳು ಮುಸ್ಲಿಂ ಆಗ್ತಾರೆ; ಹಿಂದು ಆಗಲ್ಲ ಯಾಕೆ? ಕಂಗನಾ ಪ್ರಶ್ನೆ

Published On - 7:07 pm, Thu, 19 August 21

ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ