ಪೊಲೀಸ್ ಠಾಣೆ ಮುಂದೆಯೇ ಬಡಿದಾಡಿಕೊಂಡು ಎರಡು ಕುಟುಂಬಗಳು! ಎಲ್ಲಿ?
ಬಳ್ಳಾರಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಮುಂದೆಯೇ ಎರಡು ಗುಂಪುಗಳು ಹೊಡೆದಾಡಿಕೊಂಡಿರುವ ಘಟನೆ ಹೂವಿನಹಡಗಲಿ ಹಡಗಲಿ ಪಟ್ಟಣ ಪೊಲೀಸ್ ಠಾಣೆಯ ಮುಂಭಾಗ ನಡೆದಿದೆ. ಕೌಟುಂಬಿಕ ಕಲಹ ಕಾರಣದಿಂದ ಎರಡು ಕುಟುಂಬದ ಸದಸ್ಯರು ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿಯ ತಲೆಗೆ ಗಂಭೀರ ಗಾಯವಾಗಿದ್ದು, ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಲಾಟೆಯಲ್ಲಿ ಪೊಲೀಸ್ ಠಾಣೆಯ ಗಾಜು ಸಹ ಪುಡಿ ಪುಡಿಯಾಗಿದೆ. ಎರಡು ಕುಟುಂಬಗಳು ಬಡಿದಾಡಿಕೊಳ್ಳುತ್ತಿದ್ದರೂ ಪೊಲೀಸರು ಮೂಖ ಪ್ರೇಕ್ಷಕರಾಗಿ […]
ಬಳ್ಳಾರಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಮುಂದೆಯೇ ಎರಡು ಗುಂಪುಗಳು ಹೊಡೆದಾಡಿಕೊಂಡಿರುವ ಘಟನೆ ಹೂವಿನಹಡಗಲಿ ಹಡಗಲಿ ಪಟ್ಟಣ ಪೊಲೀಸ್ ಠಾಣೆಯ ಮುಂಭಾಗ ನಡೆದಿದೆ.
ಕೌಟುಂಬಿಕ ಕಲಹ ಕಾರಣದಿಂದ ಎರಡು ಕುಟುಂಬದ ಸದಸ್ಯರು ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿಯ ತಲೆಗೆ ಗಂಭೀರ ಗಾಯವಾಗಿದ್ದು, ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಗಲಾಟೆಯಲ್ಲಿ ಪೊಲೀಸ್ ಠಾಣೆಯ ಗಾಜು ಸಹ ಪುಡಿ ಪುಡಿಯಾಗಿದೆ. ಎರಡು ಕುಟುಂಬಗಳು ಬಡಿದಾಡಿಕೊಳ್ಳುತ್ತಿದ್ದರೂ ಪೊಲೀಸರು ಮೂಖ ಪ್ರೇಕ್ಷಕರಾಗಿ ನೋಡುತ್ತಿದ್ದರು. ಕೆಲ ಹೊತ್ತಿನ ಬಳಿಕ ಲಘು ಲಾಠಿ ಪ್ರಹಾರ ಮಾಡಿ ಗುಂಪು ಚದುರಿಸಿದ್ದಾರೆ.
Published On - 4:39 pm, Sun, 31 May 20