ಕನ್ನಡ ಕಿರುತೆರೆ ಪ್ರೇಕ್ಷಕರಿಗೆಲ್ಲರಿಗೂ ಚಿರಪರಿಚಿತ ಹೆಸರು ಅಗ್ನಿಸಾಕ್ಷಿ ವೈಷ್ಣವಿ. ಕಿರುತೆರೆ ಧಾರವಾಹಿಯ ಮೂಲಕ ಮನೆಮಗಳಂತೆ ಆಗಿದ್ದ ವೈಷ್ಣವಿ ಈಗ ಬಿಗ್ ಬಾಸ್ ಅತಿಥಿಯಾಗಿ ದಿನವೂ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಮೃದು ಮಾತು, ಮೊನಚು ನೋಟದಿಂದ ಅಗ್ನಿಸಾಕ್ಷಿಯಲ್ಲಿ ಮಿಂಚಿದ್ದ ವೈಷ್ಣವಿ, ಪ್ರತೀ ಮನೆಯ ಮಗಳಂತೆ ಪ್ರೀತಿ ಗಳಿಸಿದ್ದವರು. ತಮ್ಮ ಜನಪ್ರಿಯತೆಯನ್ನು ಈಗ ಬಿಗ್ ಬಾಸ್ ಮೂಲಕ ಮತ್ತಷ್ಟು ಹೆಚ್ಚಿಸಿಕೊಳ್ಳಲಿದ್ದಾರಾ? ಜನರು ಹೆಚ್ಚು ಹೆಚ್ಚು ಪ್ರೀತಿ ಸುರಿಯುವಂತೆ ತಮ್ಮ ನಡವಳಿಕೆಯಿಂದ ಜನರ ಮನಗೆಲ್ಲಲಿದ್ದಾರಾ ಎಂದು ಕುತೂಹಲ ಶುರುವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 8ರ 5ನೇ ಅಭ್ಯರ್ಥಿಯಾಗಿ ವೈಷ್ಣವಿ ಮನೆಗೆ ಬಲಗಾಲಿಟ್ಟಿದ್ದಾರೆ.
ಫೆಬ್ರವರಿ 20, 1992ರಲ್ಲಿ ಜನಿಸಿದ ವೈಷ್ಣವಿ ಗೌಡ ಮಾಡೆಲ್ ಆಗಿಯೂ ಮಿಂಚಿದ್ದಾರೆ. 1500ಕ್ಕೂ ಹೆಚ್ಚು ಎಪಿಸೋಡ್ಗಳನ್ನು ಕಂಡ ಅಗ್ನಿಸಾಕ್ಷಿ ಧಾರಾವಾಹಿ, ವಿಜಯ್ಸೂರ್ಯ-ವೈಷ್ಣವಿ ಗೌಡ ಜೋಡಿಯಿಂದಾಗಿಯೇ ಮನೆಮಾತಾಗಿತ್ತು. ಡ್ರಸ್ಕೋಡ್ ಮತ್ತು ಗಿರ್ಗಿಟ್ಲೆ ಸಿನಿಮಾಗಳಲ್ಲೂ ವೈಷ್ಣವಿ ಕಾಣಿಸಿಕೊಂಡಿದ್ದರು.
ನಾನು ಬಿಗ್ ಬಾಸ್ ಮನೆಗೆ ಹೋಗಲು ಅಷ್ಟಾಗಿ ಆಸಕ್ತಿ ವಹಿಸಿರಲಿಲ್ಲ. ಆದರೆ, ಈ ಬಾರಿ ಬರುವಂತಾಯಿತು. ಬಿಗ್ ಬಾಸ್ ಮನೆಯಲ್ಲಿ ಖುಷಿಖುಷಿಯಾಗೇ ಇರುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು. ವೈಷ್ಣವಿ ತಂದೆ, ತಾಯಿ ವೇದಿಕೆಯಲ್ಲಿ ಹಾಜರಿದ್ದರು. ನಿಮ್ಮ ಮಗಳಾಗಿ ಇರುತ್ತೇನೆ ಎಂದು ತಂದೆಯ ಬಳಿ ಹೇಳಿಕೊಂಡರು.
ಬಿಗ್ ಬಾಸ್ ವೀಕ್ಷಣೆ ಮಾಡೋದು ಎಲ್ಲಿ? ಭಾನುವಾರ ಸಂಜೆ 6 ಗಂಟೆಗೆ ಬಿಗ್ ಬಾಸ್ 8ಕ್ಕೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಪ್ರತಿ ದಿನ ರಾತ್ರಿ 9:30ರಿಂದ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗಲಿದೆ. ಬಿಗ್ ಬಾಸ್ ಎಲ್ಲಿ ವೀಕ್ಷಣೆ ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ 8 ಪ್ರಸಾರವಾಗುತ್ತದೆ. ಆನ್ಲೈನ್ನಲ್ಲಿ ಬಿಗ್ ಬಾಸ್ ನೋಡಬೇಕು ಎಂದಾದರೆ ನೀವು ವೂಟ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಜಿಯೋ ಟಿವಿಯಲ್ಲಿ ಕೂಡ ನೀವು ಬಿಗ್ ಬಾಸ್ ವೀಕ್ಷಣೆ ಮಾಡಬಹುದಾಗಿದೆ. ಜಿಯೋ ಟಿವಿಗೆ ತೆರಳಿ ಕಲರ್ಸ್ ಕನ್ನಡ ಎಂದು ಸರ್ಚ್ ಮಾಡಿದರೆ ಕಲರ್ಸ್ ಕನ್ನಡ ವಾಹಿನಿ ಸಿಗಲಿದೆ. ಅದರಲ್ಲಿ ನೀವು ಬಿಗ್ ಬಾಸ್ ವೀಕ್ಷಿಸಬಹುದು.
ಇದನ್ನೂ ಓದಿ: Bigg Boss Kannada 8 Launch LIVE Updates: ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ ಶಂಕರ್ ಅಶ್ವತ್ಥ್
Bigg Boss Kannada 8: ಕನ್ನಡ ಬಿಗ್ ಬಾಸ್ 8ಗಾಗಿ ಕೆಲಸ ಮಾಡುವ ತಂತ್ರಜ್ಞರ ಸಂಖ್ಯೆ ಕೇಳಿದ್ರೆ ಅಚ್ಚರಿ ಪಡ್ತೀರಾ!