Raw Milk: ಹಸಿ ಹಾಲು ಕುಡಿಯುವುದರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳೇನು?

Raw Milk:ಹಾಲು ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆದರೆ ಹಸಿಹಾಲು ಕುಡಿಯುವುದು ಅಷ್ಟೇ ಅಪಾಯಕಾರಿಯೂ ಹೌದು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಹಾಲು ಆರೋಗ್ಯಕ್ಕೆ ಉತ್ತಮವಾಗಿದೆ. ಆದರೆ ಹಾಲನ್ನು ಯಾವಾಗಲೂ ಕುದಿಸಿ ಸೇವಿಸುವಂತೆ ನೋಡಿಕೊಳ್ಳಿ.

Raw Milk: ಹಸಿ ಹಾಲು ಕುಡಿಯುವುದರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳೇನು?
Raw Milk
Follow us
TV9 Web
| Updated By: ನಯನಾ ರಾಜೀವ್

Updated on: May 23, 2022 | 8:00 AM

ಹಾಲು ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆದರೆ ಹಸಿಹಾಲು ಕುಡಿಯುವುದು ಅಷ್ಟೇ ಅಪಾಯಕಾರಿಯೂ ಹೌದು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಹಾಲು ಆರೋಗ್ಯಕ್ಕೆ ಉತ್ತಮವಾಗಿದೆ. ಆದರೆ ಹಾಲನ್ನು ಯಾವಾಗಲೂ ಕುದಿಸಿ ಸೇವಿಸುವಂತೆ ನೋಡಿಕೊಳ್ಳಿ.

ಕೆಲವೊಮ್ಮೆ ಜನರು ಹಸಿ ಹಾಲನ್ನು(Raw milk) ಹೆಚ್ಚು ಪ್ರಯೋಜನವಾಗುತ್ತದೆ ಎಂದು ಭಾವಿಸಿ ಕುಡಿಯುತ್ತಾರೆ, ಆದರೆ ತಜ್ಞರ ಪ್ರಕಾರ, ಕಚ್ಚಾ ಹಾಲನ್ನು ಸೇವಿಸುವುದರಿಂದ ಹಾನಿಯಾಗಬಹುದು.

ಹಾಲು ಒಂದು ಪೌಷ್ಟಿಕ ಆಹಾರವಾಗಿದ್ದು ಅದು ಪ್ರೋಟೀನ್, ಜೀವಸತ್ವಗಳು, ಖನಿಜಗಳು ಮತ್ತು ಕೊಬ್ಬಿನಾಮ್ಲಗಳನ್ನು ಒದಗಿಸುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಅಧಿಕವಾಗಿದೆ, ಇದು ಆರೋಗ್ಯಕರ ಮೂಳೆಗಳು, ಜೀವಕೋಶದ ಕಾರ್ಯ, ಸ್ನಾಯುಗಳ ಆರೋಗ್ಯ ಮತ್ತು ಚಯಾಪಚಯ ಕ್ರಿಯೆಗೆ ಹೆಚ್ಚು ಪ್ರಯೋಜನಕಾರಿ ಆಗಿದೆ. ಹಾಗಾಗಿಯೇ ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಹಸಿ ಹಾಲನ್ನು ಏಕೆ ಕುಡಿಯಬಾರದು

ಅಪಾಯಕಾರಿ ಕಿಟಾಣುಗಳನ್ನು ಒಳಗೊಂಡಿದೆ ಹಸಿ ಹಾಲು ಇ.ಕೋಲಿ, ಹಿಸ್ಟೀರಿಯಾ ಮತ್ತು ಸಾಲ್ಮೊನೆಲ್ಲಾದಂತಹ ಅನೇಕ ಅಪಾಯಕಾರಿ ಕೀಟಾಣುಗಳನ್ನು ಒಳಗೊಂಡಿದೆ. ಈ ಕೀಟಾಣುಗಳು ತೀವ್ರ ಅನಾರೋಗ್ಯಕ್ಕೆ ಒಳಗಾಗುವಂತೆ ಮಾಡುವುದಲ್ಲದೆ, ನಿಮ್ಮನ್ನು ಸಾವಿನ ಮನೆಗೂ ನೂಕಬಹುದು ಎಂದು ಹೇಳಲಾಗುತ್ತದೆ.

-ಹಸಿ ಹಾಲನ್ನು ದೀರ್ಘಕಾಲದವರೆಗೆ ಸೇವಿಸಿದರೆ, ಅದು ಪ್ರತಿಕ್ರಿಯಾತ್ಮಕ ಸಂಧಿವಾತ ಮತ್ತು ಇತರ ಅನೇಕ ಗಂಭೀರ ರೋಗಗಳಿಗೆ ಕಾರಣವಾಗಬಹುದು.

-ಹಸಿ ಹಾಲು ಕುಡಿಯುವುದರಿಂದ ವಾಂತಿ(Vomit), ಅತಿಸಾರ ಮತ್ತು ಹೊಟ್ಟೆ ಸೆಳೆತ ಉಂಟಾಗಬಹುದು.

-ಈಗಾಗಲೇ ಗಂಭೀರ ಕಾಯಿಲೆ ಇರುವ ಮಕ್ಕಳು, ಗರ್ಭಿಣಿಯರು(Pregnant) ಮತ್ತು ದುರ್ಬಲ ರೋಗ ನಿರೋಧಕ ವ್ಯವಸ್ಥೆ ಹೊಂದಿರುವ ಜನರು ಹಸಿ ಹಾಲು ಕುಡಿಯಬಾರದು. ಯಾಕೆಂದರೆ ಇದರಿಂದ ಬೇಗನೆ ಆರೋಗ್ಯ ಸಮಸ್ಯೆಗಳು ದಾಳಿ ಮಾಡುವ ಸಾಧ್ಯತೆ ಇದೆ. ಆದುದರಿಂದ ಹಾಲನ್ನು ಕುದಿಸಿಯೇ ಸೇವಿಸಿ.

-ಹಸಿ ಹಾಲು ಕುಡಿಯುವುದರಿಂದ ಹೊಟ್ಟೆಯ ಸೋಂಕು (Stomach infection) ಉಂಟಾಗಬಹುದು ಮತ್ತು ತೀವ್ರ ಅನಾರೋಗ್ಯಕ್ಕೆ ಒಳಗಾಗಬಹುದು. ಹಸಿ ಹಾಲನ್ನು ಕುಡಿಯುವುದರಿಂದ ಮೂತ್ರಪಿಂಡ ವೈಫಲ್ಯದ ಅಪಾಯಕ್ಕೆ ಸಿಲುಕುತ್ತೀರಿ ಮತ್ತು ಸಾವಿಗೆ ಕಾರಣವಾಗಬಹುದು. ಆದುದರಿಂದ ಹಸಿ

ಹಾಲನ್ನು ಅವಾಯ್ದ್ ಮಾಡಿ ಸಾಮಾನ್ಯವಾಗಿ ಬಹುತೇಕ ಮಂದಿ ಹಸಿ ಹಾಲಿನ ಸೇವನೆ ಹೆಚ್ಚು ಪ್ರಯೋಜನಕಾರಿ ಎಂದು ವಾದಿಸುತ್ತಾರೆ. ಪಾಶ್ಚರೀಕರಿಸಿದ ಹಾಲಿಗಿಂತ ಹೆಚ್ಚು ಅಮೈನೋ ಆಮ್ಲಗಳು, ಆಂಟಿಮೈಕ್ರೊಬಿಯಲ್‌ಗಳು, ವಿಟಮಿನ್‌ಗಳು, ಖನಿಜಗಳು ಮತ್ತು ಕೊಬ್ಬಿನಾಮ್ಲಗಳನ್ನು ಒಳಗೊಂಡಿರುವ ಸಂಪೂರ್ಣ ನೈಸರ್ಗಿಕ ಆಹಾರವಾಗಿದೆ ಎಂದು ವಾದಿಸುತ್ತಾರೆ.

ಅಲ್ಲದೆ, ಪಾಶ್ಚರೀಕರಣದ ಸಮಯದಲ್ಲಿ ಬಿಸಿ ಮಾಡುವ ಪ್ರಕ್ರಿಯೆಯು ಹಾಲಿನ ಒಟ್ಟಾರೆ ಪೋಷಣೆ ಮತ್ತು ಆರೋಗ್ಯ ಪ್ರಯೋಜನಗಳನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ