ಭಾರತದಲ್ಲಿ ನಾಡಿನ ಕಾನೂನೇ ಅಂತಿಮ, ಅದನ್ನು ಪಾಲಿಸಬೇಕೇ ಹೊರುತು ನಿಮ್ಮ ನೀತಿಗಳನ್ನಲ್ಲ ಅಂತ ಟ್ವಿಟ್ಟರ್​ಗೆ ಹೇಳಿದ ಸಂಸದೀಯ ಸಮಿತಿ

ಸಮಿತಿಯ ಸದಸ್ಯರು, ‘ದೇಶದ ಕಾನೂನೇ ಅಂತಿಮವಾಗಿದ್ದು ಅದನ್ನೇ ಪಾಲಿಸಬೇಕೆಂದು,’ ಟ್ವಿಟ್ಟರ್ ಸಂಸ್ಥೆಗೆ ಸ್ಪಷ್ಟಪಡಿಸಿದರು. ದೇಶದ ಕಾನೂನುಗಳನ್ನು ಉಲ್ಲಂಘಿಸುತ್ತಿರುವುದಕ್ಕೆ ಅದರ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳಬಾರದು ಎನ್ನುವುದನ್ನು ತಿಳಿಸುವಂತೆ ಸಮಿತಿ ಹೇಳಿತು.

ಭಾರತದಲ್ಲಿ ನಾಡಿನ ಕಾನೂನೇ ಅಂತಿಮ, ಅದನ್ನು ಪಾಲಿಸಬೇಕೇ ಹೊರುತು ನಿಮ್ಮ ನೀತಿಗಳನ್ನಲ್ಲ ಅಂತ ಟ್ವಿಟ್ಟರ್​ಗೆ ಹೇಳಿದ ಸಂಸದೀಯ ಸಮಿತಿ
ಟ್ವಿಟ್ಟರ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 18, 2021 | 8:29 PM

ನವದೆಹಲಿ: ಮೈಕ್ರೊಬ್ಲಾಗಿಂಗ್ ಪ್ಲಾಟ್​ಫಾರ್ಮ್ ಟ್ಚಿಟ್ಟ್​ರ್​ನ ಭಾರತೀಯ ಪ್ರತಿನಿಧಿಗಳು ಶುಕ್ರವಾರದಂದು ಕಾಂಗ್ರೆಸ್ ಪಕ್ಷದ ಶಶಿ ತರೂರ ಅಧ್ಯಕ್ಷತೆಯ ಸಂಸದೀಯ ಸಮಿತಿ ಎದುರು ಹಾಜರಾಗಿ ತನ್ನ ಮಾರ್ಗಸೂಚಿ ಮತ್ತು ಪ್ಲಾಟ್​ಫಾರ್ಮ್ ದುರುಪಯೋಗವಾಗುತ್ತಿರುವ ಬಗ್ಗೆ ಚರ್ಚೆ ನಡೆಸಿತು. ಟ್ಚಿಟ್ಟರ್ ಇಂಡಿಯಾದ ಸಾರ್ವಜನಿಕ ನೀತಿ ಮ್ಯಾನೇಜರ್ ಶಗುಫ್ತಾ ಕಮ್ರನ್ ಮತ್ತು ಸಂಸ್ಥೆಯ ಕಾನೂನು ಸಲಹೆಗಾರ್ತಿ ಆಯುಷಿ ಕಪೂರ್ ಪ್ಲಾಟ್​ಫಾರ್ಮ್ ಪರ ಸಮಿತಿ ಎದುರು ಕಾಣಿಸಿಕೊಂಡರು. ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿರುವ ಪ್ರಕಾರ ಚರ್ಚೆಯ ಸಂದರ್ಭದಲ್ಲಿ ಸಮಿತಿಯು, ಈ ದೇಶದ ಕಾನೂನುಗಳನ್ನು ಪಾಲಿಸುತ್ತಿದೆಯೋ ಅಂತ ಟ್ವಿಟ್ಟರ್ ಸಂಸ್ಥೆಗೆ ಕೇಳಿದಾಗ, ಅದರ ಒಬ್ಬ ಪ್ರತಿನಿಧಿ, ‘ನಾವು ನಮ್ಮ ನೀತಿಗಳನು ಪಾಲಿಸುತ್ತೇವೆ,’ ಅಂತ ಹೇಳಿದರು.

ಆಗ ಸಮಿತಿಯ ಸದಸ್ಯರು, ‘ದೇಶದ ಕಾನೂನೇ ಅಂತಿಮವಾಗಿದ್ದು ಅದನ್ನೇ ಪಾಲಿಸಬೇಕೆಂದು,’ ಟ್ವಿಟ್ಟರ್ ಸಂಸ್ಥೆಗೆ ಸ್ಪಷ್ಟಪಡಿಸಿದರು. ದೇಶದ ಕಾನೂನುಗಳನ್ನು ಉಲ್ಲಂಘಿಸುತ್ತಿರುವುದಕ್ಕೆ ಅದರ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳಬಾರದು ಎನ್ನುವುದನ್ನು ತಿಳಿಸುವಂತೆ ಸಮಿತಿ ಹೇಳಿತು.

‘ಮಾಹಿತಿ ತಂತ್ರಜ್ಞಾನದ ಸ್ಥಾಯಿ ಸಮಿತಿ ಮುಂದೆ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ದೊರಕಿದ ಅವಕಾಶದಿಂದ ನಮಗೆ ಸಂತೋಷವಾಗಿದೆ. ಪಾರದರ್ಶಕತೆಯ ತತ್ವಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಖಾಸಗೀತನ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ನಾಗರಿಕರ ಹಕ್ಕುಗಳನ್ನು ಕಾಪಾಡಲು ಸಮಿತಿಯೊಂದಿಗೆ ಕೆಲಸ ಮಾಡುವುದಕ್ಕೆ ಟ್ಟಿಟ್ಟರ್ ಸಂಸ್ಥೆ ಸಿದ್ಧವಾಗಿದೆ,’ ಎಂದು ಟ್ಟಿಟ್ಟರ್​ನ ಬಾತ್ಮೀದಾರರೊಬ್ಬರು ಸಭೆಯ ನಂತರ ತಿಳಿಸಿದರೆಂದು ಎಎನ್ಐ ವರದಿ ಮಾಡಿದೆ.

‘ಸಾರ್ವಜನಿಕರ ನಡುವಿನ ಸಂಭಾಷಣೆಗಾಗಿ ಸೇವೆ ಒದಗಿಸಲು ಮತ್ತು ಅದನ್ನು ರಕ್ಷಿಸಲು ನಾವು ಮಾಡಿಕೊಂಡಿರುವ ಸಂಕಲ್ಪದ ಭಾಗವಾಗಿ ಭಾರತದ ಸರ್ಕಾರದೊಂದಿಗೂ ಕೆಲಸ ಮಾಡುವುದನ್ನು ಮುಂದುವರಿಸುತ್ತೆವೆ,’ ಎಂದು ಬಾತ್ಮೀದಾರ ಹೇಳಿದ್ದಾರೆ.

ಹೊಸ ಮಾಹಿತಿ ಮತ್ತು ತಂತ್ರಜ್ಞಾನದ ನಿಯಮಗಳನ್ನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಟ್ವಟ್ಟರ್​ ನಡುವೆ ಸಂಘರ್ಷ ಆರಂಭವಾಗಿದೆ. ಕಳೆದ ವಾರ, ಮಾಹಿತಿ ಮತ್ತು ತಂತ್ರಜ್ಞಾನ ಮೇಲಿನ ಸಂಸದೀಯ ಸ್ಥಾಯಿ ಸಮಿತಿಯು ಪ್ಲಾಟ್​ಫಾರ್ಮ್​ನ ದುರುಪಯೋಗ ಮತ್ತು ನಾಗರಿಕರ ಹಕ್ಕುಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಟ್ವಿಟ್ಟರ್ ಇಂಡಿಯಾ ಅಧಿಕಾರಗಳನ್ನು ಕರೆಸಿ ಮಾತಾಡಿತ್ತು.

ಬುಧವಾರದಂದು ಟ್ವಿಟ್ಟರ್ ಇಂಡಿಯಾ ಭಾರತದಲ್ಲಿ ಕಾನೂನು ರಕ್ಷಣೆ ಕಳೆದುಕೊಂಡ ಅಮೇರಿಕಾದ ಮೊದಲ ಸಾಮಾಜಿನ ಜಾಲತಾಣ ಸಂಸ್ಥೆಯೆನಿಸಿಕೊಂಡಿತು. ಅದರರ್ಥ ಟ್ವಿಟ್ಟರ್ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಟ್ವೀಟ್​ಗಳಿಗೆ, ದತ್ತಾಂಶಕ್ಕೆ ಸಂಸ್ಥೆಯು ಹೊಣೆಯಾಗಿರುವುದಿಲ್ಲ. ಯಾರೋ ಒಬ್ಬರು ಮಾಡುವ ಟ್ವೀಟ್​ಗೆ ಸದರಿ ಸಂಸ್ಥೆಯನ್ನು ವೇದಿಕೆಯೆಂದು ಪರಿಗಣಿಸುವುದಿಲ್ಲ, ಆದರೆ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಪೋಸ್ಟ್​ಗಳಿಗೆ ಸಂಪಾದಕೀಯತ್ವದ ಹೊಣೆ ಅದರ ಮೇಲಿರುತ್ತದೆ.

ಹಲವಾರು ಅವಕಾಶಗಳನ್ನು ನೀಡಿದಾಗ್ಯೂ ಸೋಷಿಯಲ್ ಮೀಡಿಯಾದ ದೈತ್ಯ ಎನಿಸಿಕೊಂಡಿರುವ ಟ್ವಿಟ್ಟರ್ ತಾನು ಜಾರಿ ಮಾಡಿರುವ ಹೊಸ ಮಾಹಿತಿ ಮತ್ತು ತಂತ್ರಜ್ಞಾನದ ನಿಯಮಗಳನ್ನು ಪಾಲಿಸುತ್ತಿಲ್ಲವೆಂಬ ಕಾರಣ ನೀಡಿ ಕೇಂದ್ರ ಸರ್ಕಾರವು ಸಂಸ್ಥಗೆ ಒದಗಿಸಿದ್ದ ಸಂರಕ್ಷಣೆಯನ್ನು ವಾಪಸ್ಸು ಪಡೆದಿತ್ತು.

ಕಳೆದ ತಿಂಗಳು, ಉಪ-ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೂ ಸೇರಿದಂತೆ ಅದರ ಹಲವಾರು ಪದಾಧಿಕಾರಿಗಳ ನೀಲಿ ಟಿಕ್ ಮಾರ್ಕಿನ ವೆರಿಫಿಕೇಷನ್ ಬ್ಯಾಡ್ಜ್​ ಅನ್ನು ಅಲ್ಪಾವಧಿಗೆ ತೆಗೆದ ಕಾರಣ ಟ್ವಿಟ್ಟರ್ ಸಂಸ್ಥೆಯು ಸರ್ಕಾರೀ ಅಧಿಕಾರಿಗಳಿಂದ ತೀವ್ರ ಸ್ವರೂಪದ ತರಾಟೆಗೆ ಒಳಗಾಗಿತ್ತು.

ಮೇ ತಿಂಗಳಲ್ಲಿ ದೆಹಲಿ ಪೊಲೀಸ್ ಟ್ವಿಟ್ಟರ್ ಇಂಡಿಯಾಗೆ ಒಂದು ನೋಟೀಸ್​ ಜಾರಿಗೊಳಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ಪಕ್ಷದ ಟೂಲ್​ಕಿಟ್​ ಟ್ವೀಟ್ ಅನ್ನು ಮ್ಯಾನಿಪುಲೇಟೆಡ್ ಮೀಡಿಯಾ ಎಂದು ಬಣ್ಣಿಸಿದ್ದು ಯಾಕೆ ಎಂದು ಕೇಳಿತ್ತು.

ದೆಹಲಿ ಪೊಲೀಸ್ ಮೇ 31ರಂದು ಟ್ವಿಟ್ಟರ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್​ ಮನೀಷ್ ಮಹೇಶ್ವರಿ ಅವರ ವಿಚಾರಣೆ ನಡೆಸಿತ್ತು ಮತ್ತು ಮೇ 24 ರಂದು ಸಂಸ್ಥೆಯ ಗೊರೆಗಾಂವ್ ಮತ್ತು ದೆಹಲಿ ಕಚೇರಿಗಳಿಗೆ ಭೇಟಿ ನೀಡಿತ್ತು.

ಇದನ್ನೂ ಓದಿ: ಕೇಂದ್ರ ಸಚಿವರ ಕಾಂಗ್ರೆಸ್ ಟೂಲ್​ಕಿಟ್ ಟ್ವೀಟ್​ಗಳನ್ನು ಮ್ಯಾನಿಪುಲೇಟೆಡ್ ಮೀಡಿಯಾ ಎಂದು ಗುರುತಿಸುವಂತೆ ಟ್ವಿಟರ್​ಗೆ ಪತ್ರ