AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Long Life Secrets: ದೀರ್ಘಾಯಸ್ಸು ನಿಮ್ಮದಾಗಲು ಬಯಸಿದರೆ ಈ ಅಭ್ಯಾಸಗಳನ್ನು ಪಾಲಿಸಲು ಮರೆಯದಿರಿ

ಪ್ರತಿಯೊಬ್ಬರೂ ಸಹ ದೀರ್ಘಾಯುಷ್ಯ ಮತ್ತು ಆರೋಗ್ಯಕರ ಜೀವನವನ್ನು ಬಯಸುತ್ತಾರೆ. ಆದರೆ ಇಂದಿನ ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಕಾರಣ ಅನೇಕರಿಗೆ ಇದನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಅನೇಕರು ಸಣ್ಣ ವಯಸ್ಸಿನಲ್ಲಿಯೇ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹೀಗಿರುವಾಗ ಜೀವನಶೈಲಿಯಲ್ಲಿ ಕೆಲವೊಂದು ಆರೋಗ್ಯಕರ ಬದಲಾವಣೆಗಳನ್ನು ಮಾಡುವ ಮೂಲಕ ಆರೋಗ್ಯವಂತರಾಗಿ ದೀರ್ಘಕಾಲ ಬಾಳಬಹುದು. ಅದಕ್ಕಾಗಿ ನಿತ್ಯ ಜೀವನದಲ್ಲಿ ಈ ಕೆಲವೊಂದು ಅಭ್ಯಸಗಳನ್ನು ಪಾಲಿಸಿ.

Long Life Secrets: ದೀರ್ಘಾಯಸ್ಸು ನಿಮ್ಮದಾಗಲು ಬಯಸಿದರೆ ಈ ಅಭ್ಯಾಸಗಳನ್ನು ಪಾಲಿಸಲು ಮರೆಯದಿರಿ
ಸಾಂದರ್ಭಿಕ ಚಿತ್ರImage Credit source: magnific
ಮಾಲಾಶ್ರೀ ಅಂಚನ್​
|

Updated on: Aug 23, 2026 | 8:40 PM

Share

ಪ್ರತಿಯೊಬ್ಬರೂ ಸಹ ದೀರ್ಘಕಾಲ (longevity) ಆರೋಗ್ಯವಾಗಿ ಬಾಳಲು ಮತ್ತು ಸಕ್ರಿಯವಾಗಿರಲು ಬಯಸುತ್ತಾರೆ, ಆದರೆ ಇಂದಿನ ವೇಗದ ಜೀವನದಲ್ಲಿ ಒತ್ತಡ, ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಸೇವನೆ ಈ ಎಲ್ಲದರ ಕಾರಣದಿಂದ ಅನೇಕರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಹೃದಯಾಘಾತದಂತಹ ಕಾಯಿಲೆಗಳಿಗೆ ತುತ್ತಾಗಿ ಸಣ್ಣ ವಯಸ್ಸಿನಲ್ಲಿಯೇ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಆರೋಗ್ಯ ಸಮಸ್ಯೆಗಳು ಬರಬಾರದೆಂದರೆ ನಾವು ನಮ್ಮ ಜೀವನಶೈಲಿ, ಆಹಾರ, ನಿದ್ರೆ, ವ್ಯಾಯಾಮ ಮತ್ತು ದೈನಂದಿನ ಅಭ್ಯಾಸಗಳಿಗೆ ಹೆಚ್ಚು ಗಮನ ಹರಿಸಬೇಕು. ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವ ಮೂಲಕ ನೂರ್ಕಾಲ ಆರೋಗ್ಯವಂತರಾಗಿ ಬಾಳಬಹುದು. ದೀರ್ಘಾಯುಷ್ಯಕ್ಕಾಗಿ ಯಾವೆಲ್ಲಾ ಅಭ್ಯಾಸಗಳನ್ನು ಪಾಲಿಸಬೇಕು ಎಂಬುದನ್ನು ನೋಡೋಣ ಬನ್ನಿ.

ದೀರ್ಘಾಯುಷ್ಯವನ್ನು ಪಡೆಯಲು ಈ ಅಭ್ಯಾಸಗಳನ್ನು ಪಾಲಿಸಿ:

ನಿಯಮಿತವಾಗಿ ವ್ಯಾಯಾಮ ಮಾಡಿ:

ಉತ್ತಮ ಆರೋಗ್ಯಕ್ಕೆ ದೈಹಿಕವಾಗಿ ಸಕ್ರಿಯರಾಗಿರುವುದು ಅತ್ಯಗತ್ಯ. ದಿನಕ್ಕೆ ಕೇವಲ 15 ನಿಮಿಷಗಳ ವ್ಯಾಯಾಮ ಕೂಡ ನಿಮ್ಮ ಆಯಸ್ಸನ್ನು ಹೆಚ್ಚಿಸಬಹುದು. ನಿಮ್ಮ ವಯಸ್ಸು ಏನೇ ಇರಲಿ, ನೀವು ಸ್ವಲ್ಪ ವ್ಯಾಯಾಮ ಮಾಡಬೇಕು. ವ್ಯಾಯಾಮವು ನಿಮ್ಮ ದೇಹವನ್ನು ಆರೋಗ್ಯವಾಗಿಡುವುದಲ್ಲದೆ, ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ನಿಮ್ಮ ಮೂಳೆಗಳು, ಸ್ನಾಯುಗಳು ಮತ್ತು ಕೀಲುಗಳಲ್ಲಿನ ದೌರ್ಬಲ್ಯವನ್ನು ತಡೆಯಲು ಸಹಾಯ ಮಾಡುತ್ತದೆ. ನೀವು ಯೋಗ ಮಾಡಬಹುದು, ಜಿಮ್‌ಗೆ ಹೋಗಬಹುದು ಅಥವಾ ಫಿಟ್‌ನೆಸ್ ತರಬೇತುದಾರರ ಸಹಾಯ ಪಡೆಯಬಹುದು.

ನಡೆಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ:

ನೀವು ವ್ಯಾಯಾಮ ಮಾಡಲು ಬಯಸದಿದ್ದರೆ, ನೀವು  ಪ್ರತಿನಿತ್ಯ ನಡೆಯಿರಿ. ಪ್ರತಿನಿತ್ಯ 10,000 ಹೆಜ್ಜೆಗಳು ನಡೆಯಿರಿ. ಹಾಗೆ ಮಾಡುವುದರಿಂದ ಅನಾರೋಗ್ಯವನ್ನು ದೂರವಿಡಬಹುದು, ನಿಮ್ಮ ಮನಸ್ಸನ್ನು ಆರೋಗ್ಯವಾಗಿಡಬಹುದು ಮತ್ತು ನಿಮ್ಮನ್ನು ಸದೃಢವಾಗಿರಿಸಿಕೊಳ್ಳಬಹುದು.

ಆರೋಗ್ಯಕರ ಆಹಾರವನ್ನು ಸೇವಿಸಿ:

ನೀವು ಫಿಟ್ ಆಗಿರಲು ಮತ್ತು ವಿವಿಧ ಕಾಯಿಲೆಗಳಿಂದ ಮುಕ್ತರಾಗಲು ಬಯಸಿದರೆ, ನೀವು ಯಾವಾಗಲೂ ಆರೋಗ್ಯಕರ ಆಹಾರಗಳನ್ನೇ ಸೇವಿಸಬೇಕು. ಆಹಾರದಲ್ಲಿ ಯಾವಾಗಲೂ ಆಹಾರದಲ್ಲಿ ಹಸಿರು ತರಕಾರಿಗಳು, ಋತುಮಾನದ ಹಣ್ಣುಗಳು, ಧಾನ್ಯಗಳು, ದ್ವಿದಳ ಧಾನ್ಯಗಳು, ಬೀನ್ಸ್ ಮತ್ತು ಬೀಜಗಳನ್ನು ಸೇರಿಸಿ. ಡ್ರೈ ಫ್ರೂಟ್ಸ್‌ ಮತ್ತು ನಟ್ಸ್‌ ಪ್ರೋಟೀನ್, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಈ ಎಲ್ಲಾ ಆಹಾರಗಳನ್ನು ತಿನ್ನುವ ಮೂಲಕ ದೀರ್ಘಾಕಾಲ ಆರೋಗ್ಯಕ ಜೀವನವನ್ನು ನಡೆಸಬಹುದು.

ಸಾಕಷ್ಟು ನಿದ್ರೆ ಪಡೆಯಿರಿ:

ನೀರು, ಉತ್ತಮ ಆಹಾರದಂತೆ ಉತ್ತಮ ನಿದ್ರೆಯನ್ನು ಪಡೆಯುವುದು ಸಹ ತುಂಬಾನೇ ಮುಖ್ಯ. ಹೌದು ಇದು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ನಿದ್ರೆಯ ಕೊರತೆಯು ಆಯಾಸ, ಕಿರಿಕಿರಿ ಮತ್ತು ಏಕಾಗ್ರತೆಯ ಕೊರತೆಗೆ ಕಾರಣವಾಗಬಹುದು, ಇದು ನಿಮ್ಮ ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ. ಅದೇ ಉತ್ತಮ ನಿದ್ರೆಯನ್ನು ಪಡೆದರೆ ದೇಹ ಮನಸ್ಸು ಎರಡೂ ಚೈತನ್ಯಶೀಲದಿಂದಿರುತ್ತದೆ.

ಧೂಮಪಾನ ಮಾಡುವುದನ್ನು ತಪ್ಪಿಸಿ:

ಧೂಮಪಾನವು ಅನೇಕ ರೋಗಗಳಿಗೆ ಪ್ರಮುಖ ಕಾರಣವಾಗಿದೆ ಮತ್ತು ಇದು ಜೀವಿತಾವಧಿಯನ್ನು ಸಹ ಕಡಿಮೆ ಮಾಡುತ್ತದೆ. ಆದ್ದರಿಂದ ಧೂಮಪಾನ ಮಾಡುವುದನ್ನು ಬಿಟ್ಟುಬಿಡಿ. ಈ ಮೂಲಕ ಆರೋಗ್ಯಕರ ಜೀವನವನ್ನು ನಡೆಸಬಹುದು.

ಇದನ್ನೂ ಓದಿ: ಬೆಳಗ್ಗೆ ಮೂರು ಕೆಲಸಗಳನ್ನು ಮಾಡಿ, ಆರೋಗ್ಯ, ಮನಸ್ಥಿತಿ ಎರಡೂ ಉತ್ತಮವಾಗಿರುತ್ತದೆ

ಒತ್ತಡವನ್ನು ನಿರ್ವಹಿಸಲು ಕಲಿಯಿರಿ:

ನೀವು ಹೆಚ್ಚು ಒತ್ತಡವನ್ನು ತೆಗೆದುಕೊಂಡರೆ, ನೀವು ಬಹಳಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಆದ್ದರಿಂದ ಒತ್ತಡವನ್ನು ನಿರ್ವಹಿಸಲು ಧ್ಯಾನವನ್ನು ಮಾಡಿ, ಉತ್ತಮ ನಿದ್ರೆಯನ್ನು ಪಡೆಯಿರಿ.

ನಿಯಮಿತ ಆರೋಗ್ಯ ತಪಾಸಣೆಗಳು:

ನೀವು ಪ್ರತಿದಿನ ನಿಯಮಿತವಾಗಿ ಆರೋಗ್ಯ ತಪಾಸಣೆಗಳನ್ನು ಮಾಡಿಕೊಳ್ಳಬೇಕು. ನಿಮ್ಮ ಆರೋಗ್ಯವನ್ನು ಸುಧಾರಿಸಲು ಇದು ನಿರ್ಣಾಯಕವಾಗಿದೆ. ನಿಮ್ಮ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನೀವು ಪರೀಕ್ಷಿಸಿಕೊಳ್ಳಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ