AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆನೀರಲ್ಲಿ ಮೊಬೈಲ್‌ ಫೋನ್‌ ನೆನೆದರೆ ಯಾವುದೇ ಚಿಂತೆ ಬೇಡ, ತಕ್ಷಣವೇ ಈ ಸುರಕ್ಷತಾ ಕ್ರಮಗಳನ್ನು ಪಾಲಿಸಿ

ಜೋರು ಮಳೆ ಬರುವ ಸಂದರ್ಭದಲ್ಲಿ ನಾವು ಮನೆಯಿಂದ ಹೊರಗೆ ಹೋದರೆ ನಾವು ಒದ್ದೆಯಾಗುವುದರ ಜೊತೆಗೆ ಕೈಯಲ್ಲಿ ಅಥವಾ ಪಾಕೆಟ್‌ನಲ್ಲಿಟ್ಟಿದ್ದ ಮೊಬೈಲ್‌ ಕೂಡ ಒದ್ದೆಯಾಗುತ್ತದೆ. ಪೋನ್‌ ಏನಾದ್ರೂ ಸಂಪೂರ್ಣವಾಗಿ ಒದ್ದೆಯಾದರೆ ಇದರ ರಿಪೇರಿಗೆ ಇನ್ನೆಷ್ಟು ಖರ್ಚಾಗ್ಬೋದು ಎಂಬ ಟೆನ್ಷನ್‌ ಶುರುವಾಗುತ್ತದೆ. ಹೀಗೆ ನಿಮ್ಮ ಮೊಬೈಲ್‌ ಮಳೆಯಲ್ಲಿ ಒದ್ದೆಯಾದ್ರೆ ಚಿಂತೆ ಪಡುವ ಅಗತ್ಯವಿಲ್ಲ, ತಕ್ಷಣಕ್ಕೆ ಈ ಕೆಲವೊಂದು ಸುರಕ್ಷತಾ ಕ್ರಮಗಳನ್ನು ಪಾಲಿಸಿ. ಈ ಮೂಲಕ ರಿಪೇರಿಗೆ ಸಾವಿರಾರು ರೂಪಾಯಿ ಖರ್ಚಾಗೋದನ್ನು ತಪ್ಪಿಸಿ.

ಮಳೆನೀರಲ್ಲಿ ಮೊಬೈಲ್‌ ಫೋನ್‌ ನೆನೆದರೆ ಯಾವುದೇ ಚಿಂತೆ ಬೇಡ, ತಕ್ಷಣವೇ ಈ ಸುರಕ್ಷತಾ ಕ್ರಮಗಳನ್ನು ಪಾಲಿಸಿ
ಸಾಂದರ್ಭಿಕ ಚಿತ್ರImage Credit source: Getty Images
ಮಾಲಾಶ್ರೀ ಅಂಚನ್​
|

Updated on: Aug 04, 2026 | 6:19 PM

Share

ಮುಖ್ಯಾಂಶಗಳು

  • ಮಳೆಯಿಂದಾಗಿ ಕೈಯಲ್ಲಿದ್ದ ಫೋನ್‌ ಒದ್ದೆಯಾಗುವ ಸಾಧ್ಯತೆ ತುಂಬಾನೇ ಹೆಚ್ಚು
  • ಒದ್ದೆಯಾದ ಫೋನ್‌ ಸರಿ ಪಡಿಸಲು ತಕ್ಷಣವೇ ಕೆಲವೊಂದು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು
  • ಫೋನ್‌ ಒದ್ದೆಯಾದರೆ ತಕ್ಷಣವೇ ಮೊಬೈಲ್‌ ಸ್ವಿಚ್‌ ಆಫ್‌ ಮಾಡಬೇಕು

ಮಳೆಗಾಲದಲ್ಲಿ ವಾತಾವರಣ ತುಂಬಾನೇ ಆಹ್ಲಾದಕರವಾಗಿದ್ದರೂ, ಜೋರು ಮಳೆಗೆ ನೆರೆ, ಪ್ರವಾಹದಂತಹ ಸಮಸ್ಯೆಗಳು ಸಂಭವಿಸುತ್ತದೆ. ಇನ್ನೊಂದು ಕಡೆ ಭಾರೀ ಮಳೆಗೆ ನಾವೇನಾದರೂ ಮನೆಯಿಂದ ಹೊರಗೆ ಹೋದರೆ ಕೈಯಲ್ಲಿ ಹಿಡಿದುಕೊಂಡ, ಪಾಕೆಟ್‌ನಲ್ಲಿದ್ದ ಮೊಬೈಲ್‌ ಫೋನ್‌ (smartphone) ಒದ್ದೆಯಾಗುವ ಸಾಧ್ಯತೆ ಇರುತ್ತವೆ. ಕೆಲವೊಮ್ಮೆ ಫೋನ್‌ ಕೈಯಿಂದ ಜಾರಿ ನೀರಿಗೆ ಬೀಳುವ ಸಾಧ್ಯತೆಯೂ ಇರುತ್ತದೆ. ಇಂತಹ ಸಂದರ್ಭದಲ್ಲಿ ಫೋನ್‌ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಏನು ಮಾಡೋದೆಂಬ ಟೆನ್ಷನ್‌ ಇರುತ್ತದೆ. ಹೀಗೆ ಮಳೆನೀರಲ್ಲಿ ಮೊಬೈಲ್‌ ಫೋನ್‌ ಒದ್ದೆಯಾದರೆ ಆತಂಕಪಡುವ ಅಗತ್ಯವಿಲ್ಲ, ತಕ್ಷಣಕ್ಕೆ ಈ ಕೆಲವೊಂದು ಕೆಲಸಗಳನ್ನು ಮಾಡುವ ಮೂಲಕ ಮೊಬೈಲ್‌ ರಿಪೇರಿಗೆ ಸಾವಿರಾರು ರೂಪಾಯಿ ಖರ್ಚಾಗೋದನ್ನು ತಪ್ಪಿಸಬಹುದು.

ಮೊಬೈನ್‌ ಫೋನ್‌ ಮಳೆನೀರಿನಲ್ಲಿ ಒದ್ದೆಯಾದ್ರೆ ತಕ್ಷಣಕ್ಕೆ ಏನು ಮಾಡ್ಬೇಕು?

ಫೋನ್ ಅನ್ನು ತಕ್ಷಣ ಸ್ವಿಚ್ ಆಫ್ ಮಾಡಿ: ಮಳೆಯಿಂದಾಗಿ ನಿಮ್ಮ ಫೋನ್ ಒದ್ದೆಯಾದರೆ, ತಕ್ಷಣ ಅದನ್ನು ಆಫ್ ಮಾಡಿ. ಒದ್ದೆಯಾದ ಫೋನ್ ಅನ್ನು ಆನ್‌ನಲ್ಲಿ ಇಡುವುದರಿಂದ ಶಾರ್ಟ್ ಸರ್ಕ್ಯೂಟ್ ಮತ್ತು ಮದರ್‌ಬೋರ್ಡ್‌ಗೆ ಹಾನಿಯಾಗುವ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ, ಮೊಬೈಲ್‌ ಒದ್ದೆಯಾದರೆ ಫೋನ್‌  ಅನ್ನು ಆಫ್ ಮಾಡುವುದು.

ಸಿಮ್ ಟ್ರೇ, ಸಿಮ್ ಮತ್ತು ಮೆಮೊರಿ ಕಾರ್ಡ್‌ಗಳನ್ನು ತೆಗೆದುಹಾಕಿ: ಫೋನ್ ಆಫ್ ಮಾಡಿದ ನಂತರ, ಮೊದಲು ಸಿಮ್ ಟ್ರೇ ತೆಗೆದುಹಾಕಿ. ಅಲ್ಲದೆ, ಸಿಮ್ ಕಾರ್ಡ್ ಮತ್ತು ಮೆಮೊರಿ ಕಾರ್ಡ್ ತೆಗೆಯಿರಿ. ಇದು ಫೋನ್ ಒಳಗೆ ಗಾಳಿಯನ್ನು ಪರಿಚಲನೆ ಮಾಡಲು ಮತ್ತು ತೇವಾಂಶವನ್ನು ಬೇಗನೆ ಒಣಗಿಸಲು ಅನುವು ಮಾಡಿಕೊಡುತ್ತದೆ.

ಒಣ ಬಟ್ಟೆಯಿಂದ ಒರೆಸಿ: ಹೆಚ್ಚುವರಿ ನೀರನ್ನು ತೆಗೆದುಹಾಕಲು ಸ್ವಚ್ಛವಾದ ಮತ್ತು ಒಣಗಿದ ಹತ್ತಿ ಬಟ್ಟೆ ಅಥವಾ ಟಿಶ್ಯೂ ಪೇಪರ್‌ನಿಂದ ಫೋನ್ ಅನ್ನು ಚೆನ್ನಾಗಿ ಒರೆಸಿ. ಇದು ಹೊರಗಿನ ಮೇಲ್ಮೈಯಿಂದ ಯಾವುದೇ ತೇವಾಂಶವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದರೆ ಎಂದಿಗೂ ನೀರನ್ನು ಒಣಗಿಸಲು ಹೇರ್‌ ಡ್ರೈಯರ್‌ ಅನ್ನು ಬಳಸಬಾರದು. ಏಕೆಂದರೆ ಡ್ರೈಯರ್‌ನ ಬಲವಾದ, ಬಿಸಿ ಗಾಳಿಯು ಫೋನಿನ ಸೂಕ್ಷ್ಮವಾದ ವೈರಿಂಗ್ ಅನ್ನು ಸುಟ್ಟುಹಾಕಬಹುದು ಮತ್ತು ನೀರನ್ನು ಒಳಭಾಗಕ್ಕೆ ಆಳವಾಗಿ ತಳ್ಳಬಹುದು.

ಅಕ್ಕಿಯಲ್ಲಿ ಒಣಗಿಸಿ:  ಫೋನ್‌ನ ಮೇಲ್ಭಾಗವನ್ನು ಒರೆಸಿದ ನಂತರ ಮೊಬೈಲ್‌ ಅನ್ನು ಅಕ್ಕಿಯ ಮಧ್ಯೆ ಇಟ್ಟುಬಿಡಿ. ಅಕ್ಕಿಯು ತೇವಾಂಶವನ್ನು ಬೇಗನೆ ಹೀರಿಕೊಳ್ಳುವ ನೈಸರ್ಗಿಕ ಸಾಮರ್ಥ್ಯವನ್ನು ಹೊಂದಿದೆ. ಕನಿಷ್ಠ 24 ರಿಂದ 48 ಗಂಟೆಗಳ ಕಾಲ ಫೋನ್ ಅನ್ನು ಅಕ್ಕಿಯೊಳಗೆ ಬಿಡಿ ಮತ್ತು ಅದನ್ನು ಹೊರತೆಗೆದು ಮತ್ತೆ ಮತ್ತೆ ಪರಿಶೀಲಿಸುವ ತಪ್ಪನ್ನು ಮಾಡಬೇಡಿ.

ಇದನ್ನೂ ಓದಿ: ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಒಣಗಿಸಲು ಜಸ್ಟ್‌ ಈ ಸರಳ ಮಾರ್ಗಗಳನ್ನು ಅನುಸರಿಸಿ

ಚಾರ್ಜ್ ಮಾಡುವ ತಪ್ಪು ಮಾಡಬೇಡಿ: ಫೋನ್‌ ನೀರನ್ನು ತುಂಬಾನೇ ನೆನೆದರೆ  ಅದನ್ನು ಕನಿಷ್ಠ ಎರಡು ದಿನಗಳವರೆಗೆ ಚಾರ್ಜ್‌ ಮಾಡಬೇಡಿ. ಅನೇಕ ಜನರು ತಮ್ಮ ಫೋನ್ ಇನ್ನೂ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಲು ಚಾರ್ಜ್‌ ಮಾಡುತ್ತಾರೆ. ಹೀಗೆ ಒದ್ದೆಯಾದ ಫೋನ್ ಅನ್ನು ಚಾರ್ಜ್ ಮಾಡುವುದು ಅತ್ಯಂತ ಅಪಾಯಕಾರಿ. ಇದು ಶಾರ್ಟ್ ಸರ್ಕ್ಯೂಟ್ ಅಥವಾ ಇತರ ಹಾರ್ಡ್‌ವೇರ್ ಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ.

ಫೋನ್ ಅನ್ನು 48 ರಿಂದ 72 ಗಂಟೆಗಳ ಕಾಲ ಆಫ್ ಮಾಡಿಡಿ:  ಕನಿಷ್ಠ 72 ಗಂಟೆಗಳ ಕಾಲ ನಿಮ್ಮ ಫೋನ್ ಅನ್ನು ಆನ್ ಮಾಡಬೇಡಿ. ಅದನ್ನು ಆನ್ ಮಾಡಿ ಪದೇ ಪದೇ ಪರಿಶೀಲಿಸಬೇಡಿ. ಹಾಗೆ ಮಾಡುವುದರಿಂದ ಫೋನ್‌ಗೆ ಹಾನಿಯಾಗುವ ಅಪಾಯ ಹೆಚ್ಚಾಗಬಹುದು. 48 ರಿಂದ 72 ಗಂಟೆಗಳ ನಂತರವೇ ಫೋನ್‌ ಆನ್‌ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು