Good Friday 2024 : ಕ್ರಿಶ್ಚಿಯನ್ನರಿಗೆ ಶೋಕ ದಿನವಾದ ಈ ಗುಡ್ ಫ್ರೈಡೇಯ ವಿಶೇಷತೆ ಹಾಗೂ ಆಚರಣೆ ಹೇಗೆ?
ಪ್ರತಿವರ್ಷ ಈಸ್ಟರ್‌ಗೂ ಹಿಂದಿನ ಶುಕ್ರವಾರದಂದು ʼಗುಡ್‌ಫ್ರೈಡೇʼ ಆಚರಿಸಲಾಗುತ್ತದೆ. ಇದು ಯೇಸುವನ್ನು ಶಿಲುಬೆಗೇರಿಸಿದ್ದ ದಿನವಾಗಿದೆ. ಹೀಗಾಗಿ ಕ್ರಿಶ್ಚಿಯನ್ನರಿಗೆ ಇದು ದುಃಖದ ದಿನ ಎನ್ನಬಹುದು. ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯ ಆಚರಣೆಯು ಇರುತ್ತದೆ. ಹಾಗಾದ್ರೆ, ಗುಡ್‌ಫ್ರೈಡೇ ಹಿಂದಿನ ಇತಿಹಾಸ, ಮಹತ್ವ ಹಾಗೂ ಆಚರಣೆಯ ಬಗೆಗಿನ ಮಾಹಿತಿಯು ಇಲ್ಲಿದೆ.
ಗುಡ್ ಫ್ರೈಡೇ ಕ್ರಿಶ್ಚಿಯನ್ ಸಮುದಾಯದವರಿಗೆ ಮಹತ್ವದ ದಿನಗಳಲ್ಲಿ ಒಂದು. ಆದರೆ ಈ ದಿನವು ಸಂತೋಷ ದಿನವಲ್ಲ, ಬದಲಾಗಿ ದುಃಖದಾಯಕ ದಿನವಾಗಿದೆ. ಯೇಸುವನ್ನು ಶಿಲುಬೆಗೇರಿಸಿದ ದಿನವಾಗಿರುವುದರಿಂದ ಕಪ್ಪು ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಈ ಗುಡ್ ಫ್ರೈಡೆಯನ್ನು ಪವಿತ್ರ ಶುಕ್ರವಾರ, ಕಪ್ಪು ಶುಕ್ರವಾರ ಅಥವಾ ಗ್ರೇಟ್ ಫ್ರೈಡೆ ಎನ್ನಲಾಗುತ್ತದೆ. ಈ ಬಾರಿ ಮಾರ್ಚ್ 31 ರಂದು ಈಸ್ಟರ್ ಇದ್ದು, ಅದಕ್ಕೂ ಮುನ್ನ ಮಾರ್ಚ್ 29ರ ಶುಕ್ರವಾರದಂದು ʼಗುಡ್‌ಫ್ರೈಡೇʼ ಎಂದು ಆಚರಿಸಲಾಗುತ್ತದೆ.
ಗುಡ್ ಫ್ರೈಡೆ ಇತಿಹಾಸ
ಹೊಸ ಒಡಂಬಡಿಕೆಯ ಪ್ರಕಾರ, ರೋಮನ್ನರು ಯೇಸುವನ್ನು ಶಿಲುಬೆಗೇರಿಸಿದ ದಿನವನ್ನು ಗುಡ್ ಫ್ರೈಡೇ ಎಂದು ಕರೆಯಲಾಗುತ್ತದೆ . ಯಹೂದಿ ಧಾರ್ಮಿಕ ಮುಖಂಡರು ದೇವರ ಮಗನೆಂದು ಹೇಳಿಕೊಳ್ಳುವುದಕ್ಕಾಗಿ ಯೇಸುವಿಗೆ ದೇವದೂಷಣೆಯನ್ನು ಮಾಡಿ, ರೋಮನ್ನರ ಬಳಿಗೆ ಕರೆತಂದರು. ರೋಮನ್ ನಾಯಕನಾದ ಪೊಂಟಿಯಸ್ ಪಿಲಾತನು ಯೇಸುವನ್ನು ಶಿಲುಬೆಗೇರಿಸಲಾಯಿತು.
ಗುಡ್ ಫ್ರೈಡೇ ದಿನದ ಮಹತ್ವ
ಕ್ರಿಶ್ಚಿಯನ್ ಜನರಲ್ಲಿ ಗುಡ್ ಫ್ರೈಡೇಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ದಿನದಂದು ಯೇಸು ಕ್ರಿಸ್ತನು ಪಾಪಿಗಳ ಉಪಶಮನಕ್ಕಾಗಿ ಶಿಲುಬೆಯ ಮೇಲೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದಾನೆ ಎನ್ನುವ ನಂಬಿಕೆಯಿದೆ. ಹೀಗಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಯೇಸುವನ್ನು ಸ್ಮರಿಸಲಾಗುತ್ತದೆ.
ಇದನ್ನೂ ಓದಿ: ಬೇಸಿಗೆಗೆ ನಿಮ್ಮ ಚರ್ಮವನ್ನು ಸಿದ್ಧಪಡಿಸುವ 8 ಸುಲಭ ಮಾರ್ಗಗಳಿವು
ಕ್ರೈಸ್ತರ ಶುಭ ಶುಕ್ರವಾರದ ಆಚರಣೆ ಹೇಗೆ?
ಶುಭ ಶುಕ್ರವಾರವು ಶುಭವನ್ನು ಸೂಚಿಸಿದರೂ ಕೂಡ ಕ್ರಿಶ್ಚಿಯನ್ ಸಮುದಾಯಕ್ಕೆ ಇದು ದುಃಖದ ದಿನವಾಗಿದೆ. ಈ ದಿನದಂದು ಕೆಲವರು ಉಪವಾಸ ಮಾಡುತ್ತಾರೆ. ಕ್ರೈಸ್ತರು ಶುಭ ಶುಕ್ರವಾರದಂದು ಚರ್ಚ್ಗೆ ತೆರಳಿ ಯೇಸುವಿನ ತ್ಯಾಗವನ್ನು ನೆನಪಿಸಿಕೊಳ್ಳುತ್ತಾರೆ. ಅದಲ್ಲದೇ, ಕ್ರಿಶ್ಚಿಯನ್ ಸಮುದಾಯದ ಜನರು ಮೆರವಣಿಗೆಗಳಲ್ಲಿ ಭಾಗವಹಿಸುವ ಮೂಲಕ ಈ ದಿನವನ್ನು ಆಚರಿಸುತ್ತಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ