ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸುವ 5 ಮಾರ್ಗಗಳು

ನಾವು ಮಕ್ಕಳಿಗೆ ಎಲ್ಲಾ ಬಗೆಯ ಸುರಕ್ಷತೆಯ ಪಾಠವನ್ನು ಮಾಡುತ್ತೇವೆ ಹಾಗೆಯೇ ಅದರಲ್ಲಿ ಲೈಂಗಿಕ ದೌರ್ಜನ್ಯದಿಂದ ರಕ್ಷಿಸಿಕೊಳ್ಳುವ ಬಗೆಯನ್ನೂ ಕೂಡ ಹೇಳಿಕೊಡಬೇಕು.

ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸುವ 5 ಮಾರ್ಗಗಳು
Abuse
Follow us
TV9 Web
| Updated By: ನಯನಾ ರಾಜೀವ್

Updated on: Sep 16, 2022 | 4:12 PM

ನಾವು ಮಕ್ಕಳಿಗೆ ಎಲ್ಲಾ ಬಗೆಯ ಸುರಕ್ಷತೆಯ ಪಾಠವನ್ನು ಮಾಡುತ್ತೇವೆ ಹಾಗೆಯೇ ಅದರಲ್ಲಿ ಲೈಂಗಿಕ ದೌರ್ಜನ್ಯದಿಂದ ರಕ್ಷಿಸಿಕೊಳ್ಳುವ ಬಗೆಯನ್ನೂ ಕೂಡ ಹೇಳಿಕೊಡಬೇಕು. ಬಿಸಿ ಪದಾರ್ಥವನ್ನು ಮುಟ್ಟಬಾರದು, ಬಾಗಿಲಿನಲ್ಲಿ ಕೈ ಸಿಲುಕಿಸಿಕೊಳ್ಳಬಾರದು, ರಸ್ತೆ ದಾಟುವ ಬಗೆ ಹೀಗೆ ಹಲವು ರೀತಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತೇವೆ.

2017-20ರ ನಡುವಿನ ಮೂರು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ 24 ಲಕ್ಷಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಲಾಗಿದೆ. 80 ಪ್ರತಿಶತ ಬಲಿಪಶುಗಳು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಾಗಿದ್ದಾರೆ ಎಂದು ಇಂಟರ್‌ಪೋಲ್ ಡೇಟಾ ತಿಳಿಸಿದೆ.

ಬಲಿಪಶುವಾಗದಂತೆ ತಡೆಯಲು ನಿಮ್ಮ ಮಕ್ಕಳನ್ನು ಸಿದ್ಧಪಡಿಸುವುದು ಮತ್ತು ಲೈಂಗಿಕ ದೌರ್ಜನ್ಯದ ಕುರಿತು ಮೊದಲೇ ಎಚ್ಚರಿಕೆ ನೀಡುವುದು ಉತ್ತಮ.

1. ಭಯದ ಬಗ್ಗೆ ಮಾತನಾಡಿ ಮಕ್ಕಳನ್ನು ಭಯ ಪಡಿಸಿ ಲೈಂಗಿಕ ದೌರ್ಜನ್ಯವನ್ನು ಎಸಗುವವರೇ ಹೆಚ್ಚು, ಹಾಗಾಗಿ ಯಾರೇ ಎಷ್ಟೇ ಭಯ ಪಡಿಸದರೂ ಆತಂಕಕ್ಕೆ ಒಳಗಾಗಬೇಡಿ, ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ವಿಶ್ವಾಸವನ್ನು ಮಕ್ಕಳಲ್ಲಿ ತುಂಬಿ.

2. ಸುರಕ್ಷಿತ, ಅಸುರಕ್ಷಿತ ಭಾವನೆ ಎಂದರೇನು ತಿಳಿಸಿ ಯಾರೇ ದೂರದಿಂದ ಮಾತಾಡಿಸಿದರೆ ಅದು ಸುರಕ್ಷಿತ, ಆದರೆ ಮಕ್ಕಳ ಹೆಗಲಮೇಲೆ ಕೈ ಇಟ್ಟು ಮಾತನಾಡುವುದು, ತಲೆ ನೇವರಿಸುವುದು, ಮೈ-ಕೈ ಮುಟ್ಟುವುದು ಹಾಗೆಯೇ ಮಕ್ಕಳಿಗೆ ಕಿರಿಕಿರಿಯುಂಟಾಗುವ ಯಾವುದೇ ರೀತಿಯ ವರ್ತನೆಯನ್ನು ಅಸುರಕ್ಷಿತ ಎಂದು ವ್ಯಾಖ್ಯಾನಿಸಬಹುದು.

3.ಸಮಯಕ್ಕಿಂತ ಮೊದಲು ಮಕ್ಕಳನ್ನು ಕರೆದುಕೊಂಡು ಹೋಗಲು ಬಂದರೆ ಯಾವುದೇ ಟ್ಯೂಷನ್ ಆಗಿರಬಹುದು, ಬೇಬಿಸಿಟ್ಟಿಂಗ್ ಆಗಿರಬಹುದು, ಇನ್ಯಾವುದೇ ತರಗತಿಯಾಗಿರಬಹುದು, ಸಮಯಕ್ಕಿಂತ ಮೊದಲು ಮಕ್ಕಳಿಗೆ ಬರಲು ಹೇಳಿದರೆ ಆಗ ನೀವು ಆಲೋಚನೆ ಮಾಡಬೇಕು.

4.ಕಿರಿಕಿರಿ ಅನಿಸಿದರೆ ಮಕ್ಕಳಿಗೆ ಪರಿಚಯವಿದ್ದರೂ ಅವರಿಂದ ದೂರವಿಡುವುದು ಒಳಿತು ಮಕ್ಕಳಿಗೆ ಒಂದು ವ್ಯಕ್ತಿಯಿಂದ ಕಿರಿಕಿರಿ ಅನಿಸಿದರೆ ನೀವು ಮಕ್ಕಳಿಂದ ಅವರನ್ನು ದೂರವಿಡುವುದು ಒಳಿತು, ನಮಗೆ ಗೋಚರಿಸಿದ ಹಲವು ವಿಚಾರಗಳು ಮಕ್ಕಳಿಗೆ ತಿಳಿಯುತ್ತದೆ.

5.ಮಕ್ಕಳನ್ನು ಕ್ಯಾಬ್​, ಆಟೋಗಳಿಗೆ ಕಳುಹಿಸುವಾಗ ಎಚ್ಚರ ಮಕ್ಕಳನ್ನು ಯಾವುದೇ ಅಪರಿಚಿತ ಕ್ಯಾಬ್, ಆಟೋಗಳಿಗೆ ಕಳುಹಿಸುವಾಗ ಎಚ್ಚರದಿಂದಿರಿ, ಅವರ ಸಂಪೂರ್ಣ ಹಿನ್ನೆಲೆ, ಮೊಬೈಲ್ ನಂಬರ್, ವಿಳಾಸ ಎಲ್ಲವೂ ನಿಮ್ಮ ಬಳಿ ಇರಲಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ