Kitchen Tips in Kannada:ಫ್ರಿಡ್ಜ್ ವಾಸನೆ ಹೋಗಲಾಡಿಸುವುದು ಹೇಗೆ? ಈ ಟಿಪ್ಸ್ ಟ್ರೈ ಮಾಡಿ
ಈಗಿನ ಕಾಲದಲ್ಲಿ ಎಲ್ಲರ ಮನೆಯಲ್ಲಿಯೂ ಫ್ರಿಡ್ಜ್ ಇದ್ದೆ ಇರುತ್ತದೆ. ಹೀಗಾಗಿ ತರಕಾರಿಗಳು, ಹಣ್ಣುಗಳು ಹಾಲು, ಮೊಸರು ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಹಾಳಾಗದಂತೆ ಇಡಲಾಗುತ್ತದೆ. ಆದರೆ ಕೆಲವೊಮ್ಮೆ ಇದ್ದ ಬದ್ದ ಆಹಾರಗಳನ್ನು ತುಂಬಿಸಿಡುವ ಕಾರಣ ಫ್ರಿಡ್ಜ್ ನಿಂದ ಕೆಟ್ಟ ವಾಸನೆಯು ಬರಲು ಶುರುವಾಗುತ್ತದೆ. ಈ ದುರ್ನಾತವನ್ನು ಹೋಗಲಾಡಿಸಲು ಈ ಕೆಲವು ಟಿಪ್ಸ್ ಗಳನ್ನು ಪಾಲಿಸಿದರೆ ಒಳ್ಳೆಯದು.
ಕೆಲವೊಮ್ಮೆ ಫ್ರಿಡ್ಜ್ ಬಾಗಿಲು ತೆಗೆಯುತ್ತಿದ್ದಂತೆ ದುರ್ನಾತದಿಂದ ಮೂಗು ಮುಚ್ಚಿಕೊಳ್ಳಬೇಕಾಗುತ್ತದೆ. ಫ್ರಿಡ್ಜನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಇರುವುದು ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ. ತರಕಾರಿಗಳನ್ನು ತಿಂಗಳುಗಟ್ಟಲೇ ಫ್ರಿಡ್ಜ್ ನಲ್ಲಿಯೇ ಇಡುವುದು. ಹಾಲು, ಮೊಸರನ್ನು ಹಾಗೆ ಇಡುವುದು ಕೂಡ ಕೆಟ್ಟ ವಾಸನೆ ಬರಲು ಕಾರಣವಾಗುತ್ತದೆ. ಹೀಗಾಗಿ ವಾರಕ್ಕೊಮ್ಮೆಯಾದರೂ ಫ್ರಿಡ್ಜ್ ಅನ್ನು ಸ್ವಚ್ಛತೆಗೊಳಿಸುವತ್ತ ಗಮನ ಕೊಡುವುದು ಒಳ್ಳೆಯದು.
- ಒಂದು ಕಪ್ ಬೇಕಿಂಗ್ ಸೋಡಾವನ್ನು ಫ್ರಿಡ್ಜ್ ಒಳಗೆ ಇಟ್ಟು, ಒಂದು ಗಂಟೆಯ ನಂತರ ನೋಡಿದರೆ ಕೆಟ್ಟ ವಾಸನೆಯು ಹೋಗಿರುತ್ತದೆ.
- ಕಾಫಿ ಬೀಜಗಳನ್ನು ಫ್ರಿಡ್ಜ್ ನ ವಿವಿಧ ಮೂಲೆಗಳಲ್ಲಿ ಬೇಕಿಂಗ್ ಶೀಟ್‌ನಲ್ಲಿ ಹಾಕಿಟ್ಟು, ರಾತ್ರಿಯಿಡೀ ರೆಫ್ರಿಜರೇಟರ್ ಇಟ್ಟರೆ ದುರ್ವಾಸನೆಯನ್ನು ಹೀರಿಕೊಳ್ಳುತ್ತದೆ.
- ನೀರಿಗೆ ಉಪ್ಪು ಹಾಕಿ ಬಿಸಿ ಮಾಡಿ, ಈ ನೀರಿನಿಂದ ಫ್ರಿಡ್ಜ್ ಸ್ವಚ್ಛಗೊಳಿಸಿದರೆ ದುರ್ನಾತವು ಇಲ್ಲವಾಗುತ್ತದೆ.
- ಮನೆಯಲ್ಲಿ ನಿಂಬೆ ಹಣ್ಣು ಇದ್ದರೆ ಸಣ್ಣ ಸಣ್ಣ ಚೂರುಗಳಾಗಿ ಮಾಡಿಕೊಂಡು ಫ್ರಿಡ್ಜ್ ನಲ್ಲಿಟ್ಟರೆ ಕೆಟ್ಟ ವಾಸನೆಯನ್ನು ಹೀರಿಕೊಳ್ಳುತ್ತದೆ.
- ಅಲ್ಯುಮಿನಿಯಂ ಪಾತ್ರೆಯಲ್ಲಿ ಸ್ವಲ್ಪ ಓಟ್ಸ್ ನ್ನು ಇಡುವುದರಿಂದ ದುರ್ನಾತವು ಇಲ್ಲದಂತಾಗುತ್ತದೆ.
- ಹತ್ತಿ ಉಂಡೆಯನ್ನು ಸಾರಭೂತ ತೈಲಕ್ಕೆ ಅದ್ದಿ, ಫ್ರಿಡ್ಜ್ ನಲ್ಲಿ ಇಟ್ಟರೆ ಕೆಟ್ಟ ವಾಸನೆಯು ಹೋಗುತ್ತದೆ.
- ವೈಟ್ ವಿನೆಗರನ್ನು ಫ್ರಿಡ್ಜ್ ನಲ್ಲಿಡುವುದರಿಂದಲೂ ದುರ್ನಾತವು ಕಡಿಮೆಯಾಗುತ್ತದೆ.
- ಒಂದು ಪಾತ್ರೆಯಲ್ಲಿ ಇದ್ದಿಲನ್ನು ತೆಗೆದುಕೊಂಡು ಫ್ರಿಡ್ಜ್ ನಲ್ಲಿಟ್ಟು ತಾಪಮಾನವನ್ನು ಸೆಟ್ ಮಾಡಿಟ್ಟು ಒಂದು ಘಂಟೆ ಬಳಿಕ ನೋಡಿದರೆ ಕೆಟ್ಟ ವಾಸನೆಯೇ ಇರುವುದಿಲ್ಲ.
- ಎಸೆನ್ಷಿಯಲ್ ಆಯಿಲ್ ನಲ್ಲಿ ಹತ್ತಿ ಉಂಡೆಗಳನ್ನು ಅದ್ದಿಟ್ಟು ಫ್ರಿಡ್ಜ್ ಒಳಗಿಟ್ಟು, ಒಂದು ಗಂಟೆ ಬಳಿಕ ಬಾಗಿಲು ತೆರೆದರೆ ಈ ಕೆಟ್ಟ ವಾಸನೆ ಹೋಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ