Male Infertility: ಪುರುಷರಲ್ಲಿ ಹೆಚ್ಚಾಗುತ್ತಿರುವ ಬಂಜೆತನಕ್ಕೆ ಕಾರಣಗಳೇನು?

ಇತ್ತೀಚೆಗೆ ಪುರುಷ ಬಂಜೆತನವು ಬಹಳ ಸಾಮಾನ್ಯವಾಗಿದೆ. ಸ್ಥೂಲಕಾಯತೆ, ಒತ್ತಡ, ಕೆಟ್ಟ ಆಹಾರ ಪದ್ಧತಿ, ಮಾದಕ ದ್ರವ್ಯದ ಬಳಕೆ, ಆಲ್ಕೋಹಾಲ್ ಬಳಕೆ, ಧೂಮಪಾನ, ಕೀಮೋಥೆರಪಿ ಮತ್ತು ವೈದ್ಯಕೀಯ ಸಮಸ್ಯೆಗಳಂತಹ ಅಂಶಗಳಿಂದ ವೀರ್ಯಾಣುವಿನ ಗುಣಮಟ್ಟ ಕುಸಿಯಬಹುದು.

Male Infertility: ಪುರುಷರಲ್ಲಿ ಹೆಚ್ಚಾಗುತ್ತಿರುವ ಬಂಜೆತನಕ್ಕೆ ಕಾರಣಗಳೇನು?
ಪುರುಷರ ಬಂಜೆತನ Image Credit source: iStock
Follow us
|

Updated on: Nov 20, 2023 | 6:43 PM

ಮೊದಲೆಲ್ಲ ಮಕ್ಕಳು ಆಗದಿದ್ದರೆ ಅದಕ್ಕೆ ಮಹಿಳೆಯನ್ನೇ ಗುರಿಯಾಗಿಸಲಾಗುತ್ತಿತ್ತು. ಆದರೆ, ಈಗ ಬಹುತೇಕ ಜನರು ಗರ್ಭಧಾರಣೆಗೆ ಮಹಿಳೆಯ ಅಂಡಾಣು ಎಷ್ಟು ಮುಖ್ಯವೋ ಪುರುಷರ ವೀರ್ಯಾಣು ಅಷ್ಟೇ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ, ವೈದ್ಯರ ಬಳಿ ತಮ್ಮ ಫರ್ಟಿಲಿಟಿ ಟೆಸ್ಟ್ ಮಾಡಿಸಿಕೊಳ್ಳುತ್ತಿರುವ ಪುರುಷರ ಸಂಖ್ಯೆಯೂ ಹೆಚ್ಚುತ್ತಿದೆ. ಇತ್ತೀಚೆಗೆ ಪುರುಷ ಬಂಜೆತನವು ಬಹಳ ಸಾಮಾನ್ಯವಾಗಿದೆ. ಶೇ. 30ರಷ್ಟು ಪುರುಷರ ಬಂಜೆತನದ ಪ್ರಕರಣ ವರದಿಯಾಗುತ್ತಿವೆ. ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾದಾಗ ಈ ಸಮಸ್ಯೆ ಉದ್ಭವಿಸುತ್ತದೆ.

ಈ ವೈದ್ಯಕೀಯ ಸ್ಥಿತಿಯನ್ನು ಒಲಿಗೋಸ್ಪರ್ಮಿಯಾ ಎಂದು ಕರೆಯಲಾಗುತ್ತದೆ. ಆದರೆ, ವೀರ್ಯದ ಸಂಪೂರ್ಣ ಕೊರತೆಯನ್ನು ಅಜೋಸ್ಪೆರ್ಮಿಯಾ ಎಂದು ಕರೆಯಲಾಗುತ್ತದೆ.

ವೀರ್ಯಾಣು ಸಂಖ್ಯೆ ಕಡಿಮೆಯಾಗಲು ಕಾರಣಗಳು:

ವೀರ್ಯಾಣುವಿನ ಸಂಖ್ಯೆ ಕಡಿಮೆಯಾಗುವುದು ಪುರುಷ ಬಂಜೆತನಕ್ಕೆ ನೇರವಾಗಿ ಸಂಬಂಧಿಸಿದ ಸಮಸ್ಯೆಯಾಗಿದೆ. ಇದು ವಿವಿಧ ಕಾರಣಗಳಿಂದ ಉಂಟಾಗಬಹುದು. ಸ್ಥೂಲಕಾಯತೆ, ಒತ್ತಡ, ಕೆಟ್ಟ ಆಹಾರ ಪದ್ಧತಿ, ಮಾದಕ ದ್ರವ್ಯದ ಬಳಕೆ, ಆಲ್ಕೋಹಾಲ್ ಬಳಕೆ, ಧೂಮಪಾನ, ಕೀಮೋಥೆರಪಿ ಮತ್ತು ವೈದ್ಯಕೀಯ ಸಮಸ್ಯೆಗಳಂತಹ ಅಂಶಗಳಿಂದ ವೀರ್ಯಾಣುವಿನ ಗುಣಮಟ್ಟ ಕುಸಿಯಬಹುದು.

ಇದನ್ನೂ ಓದಿ: ವಿಶ್ವಾದ್ಯಂತ ಪುರುಷರಲ್ಲಿ ವೀರ್ಯಾಣು ಕುಸಿತಕ್ಕೆ ಕೀಟನಾಶಕಗಳ ಬಳಕೆಯೂ ಕಾರಣ

ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯ ಮೂತ್ರಶಾಸ್ತ್ರಜ್ಞ ಡಾ. ಗಿರಿರಾಜ ವೇಲಾಯುಥಮ್ ಪುರುಷರಲ್ಲಿ ಕಡಿಮೆಯಾಗುವ ವೀರ್ಯಾಣು ಸಂಖ್ಯೆಗೆ ಕಾರಣಗಳನ್ನು ನೀಡಿದ್ದಾರೆ.

1. ಜೀವನಶೈಲಿಯ ಅಂಶಗಳು:

ಕೆಲವು ಜೀವನಶೈಲಿಯ ವಿಧಾನಗಳು ವೀರ್ಯಾಣುಗಳ ಸಂಖ್ಯೆಯ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರಬಹುದು. ಧೂಮಪಾನ, ಅತಿಯಾದ ಮದ್ಯಪಾನ, ಮಾದಕ ದ್ರವ್ಯ ಸೇವನೆ ಮತ್ತು ಅನಾರೋಗ್ಯಕರ ಆಹಾರ ಸೇವನೆ ಇವೆಲ್ಲವೂ ಕಡಿಮೆ ವೀರ್ಯಾಣು ಎಣಿಕೆಗೆ ಕಾರಣವಾಗಬಹುದು.

2. ವೈದ್ಯಕೀಯ ಸಮಸ್ಯೆಗಳು:

ವಿವಿಧ ವೈದ್ಯಕೀಯ ಪರಿಸ್ಥಿತಿಗಳು ವೀರ್ಯದ ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು. ಇವುಗಳಲ್ಲಿ ಸೋಂಕುಗಳು, ಹಾರ್ಮೋನುಗಳ ಅಸಮತೋಲನ ಮತ್ತು ಕ್ಲೈನ್‌ಫೆಲ್ಟರ್ ಸಿಂಡ್ರೋಮ್‌ನಂತಹ ಆನುವಂಶಿಕ ಸಮಸ್ಯೆಗಳು ಸೇರಿವೆ.

3. ಪರಿಸರದ ಅಂಶಗಳು:

ಕೀಟನಾಶಕಗಳು, ಕೆಲವು ಲೋಹಗಳು ಮತ್ತು ವಿಕಿರಣಗಳಂತಹ ಪರಿಸರದ ವಿಷಗಳಿಗೆ ನಮ್ಮನ್ನು ಒಡ್ಡಿಕೊಳ್ಳುವುದರಿಂದ ವೀರ್ಯ ಉತ್ಪಾದನೆಗೆ ಹಾನಿಯಾಗಬಹುದು.

ಇದನ್ನೂ ಓದಿ: ಪುರುಷರಿಗೂ ಋತುಬಂಧವಾಗುತ್ತದಾ? ಅದರ ಲಕ್ಷಣಗಳೇನು?

4. ಶಾಖ:

ವೃಷಣಗಳ ಸುತ್ತ ಹೆಚ್ಚಿನ ತಾಪಮಾನ (ಉದಾಹರಣೆಗೆ, ಅತಿಯಾದ ಬಿಸಿ ನೀರಿನ ಸ್ನಾನ, ಬಿಗಿಯಾದ ಬಟ್ಟೆ, ಕಂಪ್ಯೂಟರ್​ನ ಬಿಸಿ) ವೀರ್ಯ ಉತ್ಪಾದನೆಯನ್ನು ಕಡಿಮೆ ಮಾಡಬಹುದು.

5. ಔಷಧದ ಮಿತಿಮೀರಿದ ಪ್ರಮಾಣ:

ಔಷಧದ ಅತಿಯಾದ ಸೇವನೆಯು ವೀರ್ಯ ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ