Penguin Awareness Day 2025: ಅಳಿವಿನಂಚಿನಲ್ಲಿ ಪೆಂಗ್ವಿನ್ ಸಂತತಿ; ಮುದ್ದಾದ ಪಕ್ಷಿಯ ರಕ್ಷಣೆಯ ಕುರಿತು ಬೇಕಿದೆ ಜಾಗೃತಿ
ಮನುಷ್ಯನ ಸ್ವಾರ್ಥಕ್ಕೆ ಕಾಡುಗಳು ವಿನಾಶವಾಗಿರುವುದು ಮಾತ್ರವಲ್ಲದೆ ಅದೆಷ್ಟೋ ಪ್ರಾಣಿ ಪಕ್ಷಿಗಳ ಸಂತತಿಯೂ ಕೂಡಾ ಅವನತಿಯತ್ತ ತಲುಪಿದೆ. ಅವುಗಳಲ್ಲಿ ಪೆಂಗ್ವಿನ್ ಕೂಡಾ ಒಂದು. ವಿಪರೀತ ಜಾಗತಿಕ ತಾಪಮಾನದ ಕಾರಣದಿಂದಾಗಿ ರೆಕ್ಕೆಗಳಿದ್ದರೂ ಹಾರಲಾರದ ಈ ಕ್ಯೂಟ್ ಪಕ್ಷಿಯ ಸಂತತಿ ಅವನತಿಯತ್ತ ತಲುಪಿದ್ದು, ಈ ಪಕ್ಷಿಯ ಸಂತಾನವನ್ನು ರಕ್ಷಣೆ ಮಾಡಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಜನವರಿ 20 ರಂದು ಪೆಂಗ್ವಿನ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಿರಿ.
ಪೆಂಗ್ವಿನ್‌ಗಳು ನೋಡಲು ತುಂಬಾನೇ ಮುದ್ದು ಮುದ್ದಾಗಿರುವ ಪಕ್ಷಿಗಳು ಅಂಟಾರ್ಟಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಪಕ್ಷಿಗಳು ಒಂದೊಂದೇ ಹೆಜ್ಜೆಯನ್ನು ಇಡುತ್ತಾ ಪುಟಾಣಿ ಮಕ್ಕಳಂತೆ ಸಾಲುಗಟ್ಟಿ ಹೋಗುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಆದರೆ ಇಂದು ಪೆಂಗ್ವಿನ್ ಪಕ್ಷಿಯು ಅಪಾಯದ ಅಂಚಿನಲ್ಲಿದೆ. ದಿನದಿಂದ ದಿನಕ್ಕೆ ಇವುಗಳ ಸಂತತಿ ಕ್ಷೀಣಿಸುತ್ತಿದೆ. ವಿಪರೀತ ಜಾಗತಿಕ ತಾಪಮಾನ, ಹವಾಮಾನದ ವೈಪರಿತ್ಯದ ಕಾರಣದಿಂದಾಗಿ ರೆಕ್ಕೆಗಳಿದ್ದರೂ ಹಾರಲಾರದ ಈ ಕ್ಯೂಟ್ ಪಕ್ಷಿಯ ಸಂತತಿ ಅವನತಿಯತ್ತ ತಲುಪಿದ್ದು, ಈ ಪಕ್ಷಿಯ ಸಂತಾನವನ್ನು ರಕ್ಷಣೆ ಮಾಡಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಜನವರಿ 20 ರಂದು ಪೆಂಗ್ವಿನ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಿರಿ.
ಪೆಂಗ್ವಿನ್ ಜಾಗೃತಿ ದಿನದ ಇತಿಹಾಸ:
ಪೆಂಗ್ವಿನ್ ಪಕ್ಷಿಗಳ ಜಾಗತಿಕ ಮನ್ನಣೆ ಮತ್ತು ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಅವುಗಳ ಪ್ರಾಮುಖ್ಯತೆಯನ್ನು ಉತ್ತೇಜಿಸಲು ಪೆಂಗ್ವಿನ್ ಜಾಗೃತಿ ದಿನವನ್ನು ಸ್ಥಾಪಿಸಲಾಯಿತು. 1972 ರಲ್ಲಿ ಕ್ಯಾಲಿಫೋರ್ನಿಯಾದ ಅಲಮೊಗೊರ್ಡೊದ ಗೆರ್ರಿ ವ್ಯಾಲೇಸ್ ಅವರ ಪತ್ನಿ ಅಲೆಟಾ ಪೆಂಗ್ವಿನ್ ದಿನದ ಬಗ್ಗೆ ಉಲ್ಲೇಖಿಸಿದರು. ಅಂದಿನಿಂದ ಪ್ರತಿವರ್ಷ ಜನವರಿ 20 ರಂದು ಈ ಪಕ್ಷಿಗಳ ಸಂತತಿಯನ್ನು ಉಳಿಸಬೇಕು ಎನ್ನುವ ನಿಟ್ಟಿನಲ್ಲಿ ಪೆಂಗ್ವಿನ್ ಜಾಗೃತಿ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಪೆಂಗ್ವಿನ್‌ಗಳು ಏಕೆ ಮುಖ್ಯ?
ಆಹಾರ ಸರಪಳಿಯ ಸಮತೋಲನವನ್ನು ಕಾಪಾಡಿಕೊಳ್ಳುವ ಮೂಲಕ ಸಮುದ್ರ ಪರಿಸರ ವ್ಯವಸ್ಥೆಯಲ್ಲಿ ಪೆಂಗ್ವಿನ್‌ಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಕ್ರಿಲ್, ಸ್ಕ್ವಿಡ್ ಸೇರಿದಂತೆ ಮತ್ತಿತರ ಮೀನುಗಳನ್ನು ತಿಂದು ಬದುಕುವ ಇವುಗಳು ಸಮುದ್ರ ಜೀವಿಗಳ ಸಂಖ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಇಂದು ಇಂದು ಈ ಪಕ್ಷಿಗಳು ಹವಾಮಾನ ಬದಲಾವಣೆ, ಅತಿಯಾದ ಮೀನುಗಾರಿಕೆ ಮತ್ತು ಆವಾಸಸ್ಥಾನದ ನಾಶದಿಂದಾಗಿ ಅಳಿವಿನಂಚಿಗೆ ತಲುಪಿವೆ.
ಇದನ್ನೂ ಓದಿ: ಗರ್ಭಿಣಿಯರಿಗೆ ಮೆಹೆಂದಿ ಹಾನಿಕಾರಕವೇ? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ
ಪೆಂಗ್ವಿನ್ ಪಕ್ಷಿಯ ಕೆಲವೊಂದು ಆಸಕ್ತಿದಾಯಕ ಸಂಗತಿಗಳು:
• ಪೆಂಗ್ವಿನ್‌ಗಳಲ್ಲಿ ಹಲವಾರು ವಿಧಗಳಿವೆ. ಇವುಗಳು ರೆಕ್ಕೆಗಳನ್ನು ಹೊಂದಿರುವ ಪಕ್ಷಿಯಾಗಿದ್ದರೂ, ಅವುಗಳು ಹಾರುವುದಿಲ್ಲ. ಹೌದು ಅದರ ಹೆಚ್ಚಿನ ತೂಕದಿಂದಾಗಿ ಅವುಗಳು ಹಾರಲು ಸಾಧ್ಯವಿಲ್ಲ. ತುಂಬಾನೇ ನಾಚಿಕೆ ಸ್ವಭಾವದ ಪೆಂಗ್ವಿನ್‌ಗಳು ಮನುಷ್ಯರಂತೆಯೇ ಎರಡು ಕಾಲುಗಳ ಮೇಲೆ ನಡೆಯುತ್ತವೆ.
• ಕಿಂಗ್ ಪೆಂಗ್ವಿನ್‌ಗಳು 1,125 ಅಡಿಗಳವರೆಗೆ ಧುಮುಕಬಲ್ಲವು ಮತ್ತು ಜೆಂಟೂ ಪೆಂಗ್ವಿನ್‌ಗಳು 600 ಅಡಿ ಆಳವನ್ನು ತಲುಪಬಲ್ಲವು.
• ಪೆಂಗ್ವಿನ್‌ಗಳು ತಮ್ಮ ಆಹಾರವನ್ನು ಬೇಗನೆ ಜೀರ್ಣಿಸಿಕೊಳ್ಳುತ್ತವೆ, ಅವು ಪ್ರತಿ 20 ನಿಮಿಷಗಳಿಗೊಮ್ಮೆ ಮಲವಿಸರ್ಜನೆ ಮಾಡುತ್ತವೆ.
• ಜೆಂಟೂ ಪೆಂಗ್ವಿನ್‌ಗಳು ಅತಿವೇಗದ ಈಜುಗಾರ ಪಕ್ಷಿ. ಇವು ಗಂಟೆಗೆ 22 ಮೈಲುಗಳಷ್ಟು ವೇಗದಲ್ಲಿ ಈಜಬಲ್ಲವು.
• ರೆಕ್ಕೆಗಳ ಬದಲಿಗೆ, ಪೆಂಗ್ವಿನ್‌ಗಳು ಈಜಲು ತಮ್ಮ ಫ್ಲಿಪ್ಪರ್‌ಗಳನ್ನು ಬಳಸುತ್ತವೆ ಮತ್ತು ಇವುಗಳು 20 ನಿಮಿಷಗಳವರೆಗೆ ಉಪ್ಪುಸಹಿತ ಸಮುದ್ರದ ನೀರನ್ನು ಕುಡಿಯಬಲ್ಲವು.
• ಪೆಂಗ್ವಿನ್‌ಗಳು ತೀಕ್ಷ್ಣವಾದ ದೃಷ್ಟಿಯನ್ನು ಹೊಂದಿವೆ. ಮನುಷ್ಯರಂತೆ, ಪೆಂಗ್ವಿನ್‌ಗಳು ಬೈನಾಕ್ಯುಲರ್ ದೃಷ್ಟಿಯನ್ನು ಹೊಂದಿದ್ದು, ಇವುಗಳು ಎರಡೂ ಕಣ್ಣುಗಳಿಂದ ಒಂದೇ ವಸ್ತುವಿನ ಮೇಲೆ ಕೇಂದ್ರೀಕರಿಸಬಹುದಾದ ಸಾಮರ್ಥ್ಯವನ್ನು ಹೊಂದಿವೆ.
• ವಿಭಿನ್ನ ಜಾತಿಯ ಪೆಂಗ್ವಿನ್‌ಗಳು ವಿಭಿನ್ನ ಜೀವಿತಾವಧಿಯನ್ನು ಹೊಂದಿರುತ್ತದ್ದು, ಸಾಮಾನ್ಯವಾಗಿ ಇವುಗಳು 6 ರಿಂದ 30 ವರ್ಷಗಳವರೆಗೆ ಬದುಕುತ್ತವೆ.
• ಹೆಚ್ಚಿನ ಪೆಂಗ್ವಿನ್ ಜಾತಿಗಳು ಒಂದು ಋತುವಿನಲ್ಲಿ ಎರಡು ಮೊಟ್ಟೆಗಳನ್ನು ಇಡುತ್ತವೆ, ಆದರೆ ಕಿಂಗ್ ಮತ್ತು ಎಂಪರರ್ ಪೆಂಗ್ವಿನ್‌ಗಳು ಕೇವಲ ಒಂದು ಮೊಟ್ಟೆ ಇಡುತ್ತವೆ.
• 17 ರಿಂದ 20 ಜಾತಿಯ ಪೆಂಗ್ವಿನ್‌ಗಳಲ್ಲಿ, 10 ಪೆಂಗ್ವಿನ್ ಜಾತಿಯನ್ನು ದುರ್ಬಲ ಅಥವಾ ಅಳಿವಿನಂಚಿನಲ್ಲಿರುವವೆಂದು ಘೋಷಿಸಲಾಗಿದೆ.
• 18 ಜಾತಿಯ ಪೆಂಗ್ವಿನ್‌ಗಳಿದ್ದು, ಎಂಪರರ್ ಪೆಂಗ್ವಿನ್ , ಅಡೆಲೀ ಪೆಂಗ್ವಿನ್, ಕಿಂಗ್ ಪೆಂಗ್ವಿನ್ , ಗ್ಯಾಲಪಗೋಸ್ ಪೆಂಗ್ವಿನ್ , ಆಫ್ರಿಕನ್ ಪೆಂಗ್ವಿನ್ ಇವೆಲ್ಲಾ ಕೆಲವು ಜಾತಿಯ ಪೆಂಗ್ವಿನ್‌ಗಳಾಗಿವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ