AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Solar Eclipse 2021: ವರ್ಷದ ಕೊನೆಯ ಸೂರ್ಯ ಗ್ರಹಣ; ಗ್ರಹಣಕಾಲದಲ್ಲಿ ಏನು ಮಾಡಬೇಕು? ಏನು ಮಾಡಬಾರದು ? ಇಲ್ಲಿದೆ ಮಾಹಿತಿ

Surya Grahan 2021: ಗ್ರಹಣವನ್ನು ಕಣ್ತುಂಬಿಕೊಳ್ಳುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ. ಇಲ್ಲವಾದರೆ ಕಣ್ಣಿನ ಸಮಸ್ಯೆ ಸೇರಿದಂತೆ ದೇಹದ ಮೇಲೆ ಹಲವು ವ್ಯತಿರಿಕ್ತ ಪರಿಣಾಮ ಬೀರಲಿದೆ.

Solar Eclipse 2021: ವರ್ಷದ ಕೊನೆಯ ಸೂರ್ಯ ಗ್ರಹಣ; ಗ್ರಹಣಕಾಲದಲ್ಲಿ ಏನು ಮಾಡಬೇಕು? ಏನು ಮಾಡಬಾರದು ? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Dec 04, 2021 | 12:58 PM

Share

Solar Eclipse 2021: ಈ ವರ್ಷದ ಎರಡನೇ ಸೂರ್ಯಗ್ರಹಣ (Solar Eclipse) ಹಾಗೂ 2021 ರ ಕೊನೆಯ ಸೂರ್ಯಗ್ರಹಣ (Solar Eclipse) ಇಂದು ಸಂಭವಿಸುತ್ತಿದೆ. ಬೆಳಗ್ಗೆ 10.59ರಿಂದ ಮದ್ಯಾಹ್ನ 3.07ರವರೆಗೆ ಅಂದರೆ 4 ಗಂಟೆಗಳ ಕಾಲ ಸೂರ್ಯಗ್ರಣವಿರಲಿದೆ. ಅಂಟಾರ್ಟಿಕಾ, ದಕ್ಷಿಣ ಅಮೆರಿಕ, ಆಫ್ರಿಕಾ,ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ದೇಶಗಳಲ್ಲಿ ಇಂದಿನ ಸೂರ್ಯಗ್ರಹಣ ಕಾಣಿಸಲಿದೆ. ಆದರೆ ಭಾರತದಲ್ಲಿ ಇಂದಿನ ಗ್ರಹಣ ಕಾಣುವುದಿಲ್ಲ. ಹೀಗಾಗಿ ಈ ಬಾರಿಯ ಕೊನೆಯ ಸೂರ್ಯಗ್ರಹಣಕ್ಕೆ ಕೆಲವು ದೇಶಗಳು ಮಾತ್ರ ಸಾಕ್ಷಿಯಾಗಲಿವೆ.

ಗ್ರಹಣವನ್ನು ಕಣ್ತುಂಬಿಕೊಳ್ಳುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ. ಇಲ್ಲವಾದರೆ ಕಣ್ಣಿನ ಸಮಸ್ಯೆ ಸೇರಿದಂತೆ ದೇಹದ ಮೇಲೆ ಹಲವು ವ್ಯತಿರಿಕ್ತ ಪರಿಣಾಮ ಬೀರಲಿದೆ.

ಗ್ರಹಣ ವೀಕ್ಷಿಸುವ ಮೊದಲು ಈ ಕ್ರಮಗಳನ್ನು ಅನುಸರಿಸಿ: ಗ್ರಹಣದ ವೇಳೆ ಸೂರ್ಯನ ಕಿರಣಗಳನ್ನು ನೀರಿನಲ್ಲಿ ವೀಕ್ಷಿಸಬೇಡಿ. ಏಕೆಂದರೆ ಗ್ರಹಣದ ವೇಳೆ ಸೂರ್ಯನ ಸೂಕ್ಷ್ಮ ಕಿರಣಗಳು ಕಣ್ಣಿಗೆ ಹಾನಿಮಾಡುವ ಸಾಧ್ಯತೆ ಹೆಚ್ಚು. ಸೂರ್ಯನನ್ನು ನೇರವಾಗಿ ಬರಿಗಣ್ಣಿನಿಂದ ವೀಕ್ಷಿಸಬೇಡಿ ಬದಲಾಗಿ ಕಣ್ಣಿನ ರೆಟಿನಾಕ್ಕೆ ಹಾನಿಯಾಗದಂತಹ ಕನ್ನಡಕಗಳನ್ನು ಬಳಸಿ. ಮರಗಿಡಗಳ ಎಲೆಗಳ ನಡುವಿನಿಂದ ಸೂರ್ಯನ ಗ್ರಹಣವನ್ನು ನೋಡಬಹುದು ಎಲೆಗಳ ನಡುವಿನ ಅಂತರವು ಪಿನ್‌ಹೋಲ್‌ನಂತೆ ಕಾರ್ಯನಿರ್ವಹಿಸುವುದರಿಂದಗ್ರಹಣಗೊಂಡ ಸೂರ್ಯನ ಹಲವಾರು ಚಿತ್ರಗಳನ್ನು ನೆಲದ ಮೇಲೆ ಕಾಣಬಹುದು. ಹಳೆಯ ಎಕ್ಸ್ ರೇ ಶೀಟ್ ಅಥವಾ ಕಪ್ಪು ಕನ್ನಡಕಗಳನ್ನು ಬಳಸಬೇಡಿ. ಇದರಿಂದ ಕಣ್ಣಿನ ಸುರಕ್ಷತೆಗೆ ಒಳ್ಳೆಯದಲ್ಲ. ಕ್ಯಾಮರಾಗಳಲ್ಲಿ ಗ್ರಹಣವನ್ನು ಸೆರೆಹಿಡಿಯಲು ಯತ್ನಿಸಬೇಡಿ. ಏಕೆಂದರೆ ಸೂರ್ಯನ ಕೇಂದ್ರೀಕೃತ ಕಿರಣಗಳು ಕಣ್ಣಿಗೆ ಹಾನಿಯುಂಟು ಮಾಡಬಲ್ಲದು.