AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡ-ಹೆಂಡತಿ ಪರಸ್ಪರ ಈ ವಿಷಯಗಳನ್ನು ಮುಚ್ಚಿಡಲೇಬಾರದು; ಏಕೆ ಗೊತ್ತಾ?

ಗಂಡ ಹೆಂಡತಿಯ ನಡುವೆ ಪ್ರೀತಿ ಎಷ್ಟು ಮುಖ್ಯವೋ ಪ್ರಾಮಾಣಿಕತೆ, ನಂಬಿಕೆಯೂ ಅಷ್ಟೇ ಮುಖ್ಯ. ಆದರೆ ಹೆಚ್ಚಿನವರು ತಮ್ಮ ಸಂಗಾತಿಯ ಬಳಿ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುವುದಿಲ್ಲ. ಇದು ಒಳ್ಳೆಯ ಲಕ್ಷಣವಲ್ಲ. ಏನೇ ವಿಚಾರಗಳಿದ್ದರೂ ಮುಕ್ತವಾಗಿ ಮಾತನಾಡಬೇಕಂತೆ. ಇದು ಸಂಗಾತಿಗಳಿಬ್ಬರ ನಡುವಿನ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಗಂಡ-ಹೆಂಡತಿ ಪರಸ್ಪರ ಈ ವಿಷಯಗಳನ್ನು ಮುಚ್ಚಿಡಲೇಬಾರದು; ಏಕೆ ಗೊತ್ತಾ?
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Jun 06, 2026 | 7:05 PM

Share

ಗಂಡ ಹೆಂಡತಿಯ ಸಂಬಂಧ (Relationship) ಪ್ರೀತಿ, ನಂಬಿಕೆ, ಗೌರವ, ಪ್ರಾಮಾಣಿಕತಯ ಮೇಲೆ ನಿಂತಿರುವ ಪವಿತ್ರ ಬಂಧ. ಈ ಸಂಬಂಧ ಶಾಶ್ವತವಾಗಿ ಗಟ್ಟಿಯಾಗಿರಬೇಕೆಂದರೆ ಪತಿ ಪತ್ನಿಯರ ನಡುವೆ ಯಾವುದೇ ರೀತಿಯ ಮುಚ್ಚುಮರೆ ಎನ್ನುವಂತಹದ್ದು ಇರಬಾರದು. ಯಾವುದೇ ವಿಚಾರಗಳನ್ನು ಒಬ್ಬರಿಗೊಬ್ಬರು ರಹಸ್ಯವಾಗಿಡಬಾರದು. ಮನಸ್ಸಿನಲ್ಲಿರುವ ಎಲ್ಲವನ್ನೂ  ಮುಕ್ತವಾಗಿ ಹಂಚಿಕೊಳ್ಳಬೇಕು. ಬಹಳಷ್ಟು ವಿಷಯಗಳನ್ನು ಮನಸ್ಸಿನಲ್ಲೇ ಇಟ್ಟುಕೊಂಡರೆ ಅಥವಾ ಸುಳ್ಳು ಹೇಳಿದರೆ ಕಾಲ ಕಳೆದಂತೆ ಸಂಬಂಧದಲ್ಲಿ ಬಿರುಕು ಮೂಡಲು ಪ್ರಾರಂಭವಾಗುತ್ತದೆ. ಹಾಗಾಗಿ ಯಾವುದೇ ಸಮಸ್ಯೆಗಳಿದ್ದರೂ, ಏನನ್ನೂ ಮರೆಮಾಡದೆ ಎಲ್ಲವನ್ನೂ ಸಂಗಾತಿಯೊಂದಿಗೆ ಹಂಚಿಕೊಳ್ಳಬೇಕು. ಅದರಲ್ಲೂ ಈ ಕೆಲವು ವಿಚಾರಗಳನ್ನು ಗಂಡ ಹೆಂಡತಿ ಪರಸ್ಪರ ಮರೆಮಾಡಲೇಬಾರದು.

ದಂಪತಿಗಳು ಯಾವ ಸಂಗತಿಗಳನ್ನು ಪರಸ್ಪರ ಮುಚ್ಚಿಡಬಾರದು?

ಆರ್ಥಿಕ ಪರಿಸ್ಥಿತಿ ಅಥವಾ ಸಾಲಗಳು: ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ನಿಮ್ಮ ಸಂಗಾತಿಯಿಂದ ಮರೆಮಾಡುವುದು ದೊಡ್ಡ ತಪ್ಪಾಗಿರಬಹುದು. ನೀವು ಯಾವುದೇ ಉದ್ದೇಶಕ್ಕಾಗಿ ಬೇರೆಯವರಿಂದ ಹಣವನ್ನು ಸಾಲ ಪಡೆದರೆ, ನೀವು ಅದನ್ನು ನಿಮ್ಮ ಸಂಗಾತಿಗೆ ಬಹಿರಂಗವಾಗಿ ಹಂಚಿಕೊಳ್ಳಿ. ಅನೇಕ ಜನರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸುಳ್ಳು ಹೇಳುತ್ತಾರೆ. ಆದರೆ ಸತ್ಯ ಹೊರಬಂದಾಗ, ಸಂಗಾತಿಯ ಮೇಲಿನ ನಂಬಿಕೆ ಕಳೆದು ಹೋಗುವ ಸಾಧ್ಯತೆ ಇರುತ್ತದೆ. ಆರ್ಥಿಕ ಪರಿಸ್ಥಿತಿಯ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳುವುದರಿಂದ ನಿಮ್ಮ ಸಂಗಾತಿಯೂ ನಿಮಗೆ ಹೆಗಲಾಗಿ ನಿಲ್ಲುತ್ತಾರೆ. ಇದು ನಿಮ್ಮ ಸಂಬಂಧವನ್ನು ಮತ್ತಷ್ಟು ಗಾಢವಾಗಿಸುತ್ತದೆ.

ಆರೋಗ್ಯ ಸಂಬಂಧಿತ ಸಮಸ್ಯೆಗಳು: ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳು ಅಥವಾ ಭಯಗಳಿದ್ದರೆ, ನೀವು ಖಂಡಿತವಾಗಿಯೂ ನಿಮ್ಮ ಸಂಗಾತಿಗೆ ಅವುಗಳ ಬಗ್ಗೆ ಹೇಳಬೇಕು. ಉದಾಹರಣೆಗೆ, ನಿಮಗೆ ದೀರ್ಘಕಾಲದ ಕಾಯಿಲೆ, ಅಲರ್ಜಿಗಳು ಅಥವಾ ಇನ್ನಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ನೀವು ಅವುಗಳನ್ನು ನಿಮ್ಮ ಸಂಗಾತಿಯಿಂದ ಮರೆಮಾಡಬಾರದು. ನಿಮ್ಮ ಸಂಗಾತಿಗೆ ನಿಮ್ಮ ಬಗ್ಗೆ ತಿಳಿದಿದ್ದರೆ, ಅವರು ನಿಮ್ಮನ್ನು ಸರಿಯಾಗಿ ನೋಡಿಕೊಳ್ಳಬಹುದು, ಇದು ನಿಮ್ಮ ಆರೋಗ್ಯ ಸುಧಾರಿಸಲು ಮತ್ತಷ್ಟು ಸಹಾಯ ಮಾಡುತ್ತದೆ.

ಮಾನಸಿಕ ಸ್ಥಿತಿಗತಿ: ಹೆಚ್ಚಿನವರು ತಮಗಾಗುವ ಒತ್ತಡ, ಮಾನಸಿಕ ಹಿಂಸೆಯ ಬಗ್ಗೆ ತಮ್ಮ ಸಂಗಾತಿಯ ಬಳಿ ಹಂಚಿಕೊಳ್ಳುವುದಿಲ್ಲ. ಇದು ಒತ್ತಡ ಮತ್ತಷ್ಟು ಹೆಚ್ಚಲು ಕಾರಣವಾಗುತ್ತದೆ. ಅದೇ ಗಂಡ ಹೆಂಡತಿ ಚಿಂತೆ ಮತ್ತು ಒತ್ತಡಗಳನ್ನು ಪರಸ್ಪರ ಹಂಚಿಕೊಂಡಾಗ ಮನಸ್ಸು ನಿರಾಳವಾಗುತ್ತದೆ. ಅಲ್ಲದೆ ಬೆಂಬಲಕ್ಕೆ ಸಹಾಯಾಸ್ತವು ಸಿಕ್ಕಂತಾಗುತ್ತದೆ. ಅಲ್ಲದೆ ಇಂತಹ ಕಠಿಣ ಪರಿಸ್ಥಿತಿಗಳು ಗಂಡ ಹೆಂಡತಿಯ ನಡುವಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸುತ್ತದೆ.

ಇದನ್ನೂ ಓದಿ: ಗಂಡ ಹೆಂಡತಿ ನಡುವಿನ ಜಗಳಗಳಿಗೆ ನಿಜವಾದ ಕಾರಣವೇ ಅಂಶಗಳು

ನಿರೀಕ್ಷೆಗಳು, ಅಭ್ಯಾಸಗಳು: ಸಂಗಾತಿಯಿಂದ ನೀವು ಏನು ನಿರೀಕ್ಷಿಸುತ್ತೀರಿ ಮತ್ತು ಮುಖ್ಯವಾಗಿ ನಿಮ್ಮ ನಿರೀಕ್ಷೆಗಳೇನು ಅದನ್ನು ಸಂಗಾತಿಯೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ. ಇದಲ್ಲದೆ ಡ್ರಿಂಕ್ಸ್‌, ಸ್ಮೋಕ್‌ ಯಾವುದೇ ನಿಮ್ಮ ಅಭ್ಯಾಸಗಳಿದ್ದರೂ ಅದರ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಿ. ಇದು ಮೂರನೇ ವ್ಯಕ್ತಿಯ ಮೂಲಕ ನಿಮ್ಮ ಸಂಗಾತಿಗೆ ತಿಳಿದರೆ ಮನಸ್ತಾಪ ಎರ್ಪಡಲು ಕಾರಣವಾಗುತ್ತದೆ.

ಅಭದ್ರತೆ: ನಿಮ್ಮ ಸಂಗಾತಿಯ ನಡವಳಿಕೆಯು ನಿಮಗೆ ಅಸುರಕ್ಷಿತ ಭಾವನೆಯನ್ನುಂಟುಮಾಡಿದರೆ, ಅದರ ಬಗ್ಗೆ ಮೌನವಾಗಿರುವುದು ತಪ್ಪು. ಅನೇಕ ಜನರು ಈ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡುವುದಿಲ್ಲ. ಇದು ಸಂಬಂಧವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ, ಅಭದ್ರತೆಯ ಭಾವನೆ ಮೂಡಿದರೆ ಈ ಬಗ್ಗೆ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ, ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಿ.

ನಿಮ್ಮ ಕನಸಿನ ಬಗ್ಗೆ ಹೇಳಿಕೊಳ್ಳಿ: ನಿಮ್ಮ ಸಂಗಾತಿಗೆ ನೀವು ಜೀವನದಲ್ಲಿ ಏನನ್ನು ಕನಸು ಕಾಣುತ್ತಿದ್ದೀರಿ ಅಥವಾ ಏನನ್ನು ಸಾಧಿಸಲು ಬಯಸುತ್ತೀರಿ ಎಂಬುದನ್ನು ಹೇಳುವುದು ಮುಖ್ಯ. ನಿಮ್ಮ ಕನಸುಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಂಡಾಗ ಅವರು ಆ ಕನಸುಗಳನ್ನು ನನಸಾಗಿಸಲು ನಿಮಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ.

ಇದಲ್ಲದೆ ಹಿಂದಿನ ಸಂಬಂಧ, ಕುಟುಂಬ ಪರಿಸ್ಥಿತಿ, ಆರ್ಥಿಕ ಸ್ಥಿತಿ ಇವೆಲ್ಲವನ್ನೂ ಮೊದಲೇ ಸಂಗಾತಿ ಹೇಳಬೇಕು. ಇಲ್ಲದಿದ್ದರೆ ಈ ಕಾರಣದಿಂದ ಭವಿಷ್ಯದಲ್ಲಿ ತೊಂದರೆಗಳು ಎದುರಾಗುವ ಸಾಧ್ಯತೆ ಇರುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More