ನಿಮ್ಮ ಈ ತಪ್ಪುಗಳೇ ಫ್ರಿಡ್ಜ್‌ನಿಂದ ಕೆಟ್ಟ ವಾಸನೆ ಬರಲು ಕಾರಣ
ವಿಶೇಷವಾಗಿ ಮಳೆಗಾಲದಲ್ಲಿ ಫ್ರಿಡ್ಜ್‌ನಿಂದ ದುರ್ವಾಸನೆ ಬರುತ್ತವೆ. ರೆಫ್ರಿಜರೇಟರ್ ಅನ್ನು ಎಷ್ಟೇ ಸ್ವಚ್ಛಗೊಳಿಸಿದರೂ ಸಹ ಈ ವಾಸನೆ ಕಡಿಮೆಯಾಗುವುದಿಲ್ಲ. ಈ ಮಳೆಗಾಲದಲ್ಲಿ ನಿಮ್ಮ ಮನೆಯ ಫ್ರಿಡ್ಜ್ ಕೂಡ ತುಂಬಾ ವಾಸನೆ ಬರ್ತಿದ್ಯಾ? ಇದಕ್ಕೆ ನಿಮ್ಮ ಈ ತಪ್ಪುಗಳೇ ಮುಖ್ಯ ಕಾರಣ. ಫ್ರಿಡ್ಜ್‌ನಿಂದ ವಾಸನೆ ಬರಲು ಕಾರಣವಾಗುವ ಆ ತಪ್ಪುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಮಳೆಗಾಲದ ಆಗಮನದೊಂದಿಗೆ, ಗೋಡೆಗಳು, ನೆಲ ಮಾತ್ರವಲ್ಲದೆ ಅನೇಕ ಗೃಹೋಪಯೋಗಿ ವಸ್ತುಗಳಲ್ಲಿ ತೇವಾಂಶ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ವಿಶೇಷವಾಗಿ ಫ್ರಿಡ್ಜ್‌ನಲ್ಲೂ (fridge) ತೇವಾಂಶ ಕಾಣಿಸಿಕೊಳ್ಳುತ್ತದೆ. ತೇವಾಂಶದ ಜೊತೆಗೆ ಈ ಮಳೆಗಾಲದಲ್ಲಿ ಫ್ರಿಡ್ಜ್‌ನಿಂದ ದುರ್ವಾಸನೆ ಕೂಡ ಬರುತ್ತವೆ. ಫ್ರಿಡ್ಜ್ ಅನ್ನು ಹಲವು ದಿನಗಳಿಂದ ಸ್ವಚ್ಛಗೊಳಿಸದಿರುವುದೇ ಇದಕ್ಕೆ ಕಾರಣ ಎಂದು ಹಲವು ಜನರು ಭಾವಿಸುತ್ತಾರೆ. ಆದರೆ ಈ ಕೆಲವೊಂದು ತಪ್ಪುಗಲೇ ಇದಕ್ಕೆ ಮುಖ್ಯ ಕಾರಣ. ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗುವುದರಿಂದ, ಫ್ರಿಡ್ಜ್ ಒಳಗೆ ಬ್ಯಾಕ್ಟೀರಿಯಾಗಳು ಸಂಗ್ರಹವಾಗಿ ಆಹಾರ ಹಾಳಾಗುತ್ತವೆ ಇದರಿಂದಾಗಿ ಫ್ರಿಡ್ಜ್ ವಾಸನೆ ಬರುತ್ತವೆ. ಜೊತೆಗೆ ಈ ಕೆಲವು ಸಣ್ಣ ತಪ್ಪುಗಳು ಫ್ರಿಡ್ಜ್‌ನಿಂದ ಕೆಟ್ಟ ವಾಸನೆ ಬರಲು ಕಾರಣವಾಗಬಹುದು. ಆ ತಪ್ಪುಗಳು ಯಾವುವು, ಫ್ರಿಡ್ಜ್‌ನಿಂದ ಬರುವ ಕೆಟ್ಟ ವಾಸನೆಯನ್ನು ತಡೆಯುವುದು ಹೇಗೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.
ಮಳೆಗಾಲದಲ್ಲಿ ಫ್ರಿಡ್ಜ್‌ನಿಂದ ವಾಸನೆ ಬರಲು ಕಾರಣವೇನು?
ಒದ್ದೆಯಾದ ತರಕಾರಿ, ಹಣ್ಣುಗಳನ್ನು ನೇರವಾಗಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುವುದು: ಅನೇಕರು ಮಾರುಕಟ್ಟೆಯಿಂದ ತಂದಂತಹ ಹಣ್ಣು ತರಕಾರಿಗಳನ್ನು ತೊಳೆದು, ಅದನ್ನು ಒಣಗಿಸದೆ ಹಾಗೆಯೇ ಫ್ರಿಡ್ಜ್‌ನಲ್ಲಿ ಸ್ಟೋರ್ ಮಾಡುತ್ತಾರೆ. ಹಾಗೆ ಮಾಡುವುದರಿಂದ ಹೆಚ್ಚುವರಿ ತೇವಾಂಶದಿಂದಾಗಿ ಹಣ್ಣು, ತರಕಾರಿಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಇದರಿಂದ ಅವು ಬೇಗನೆ ಹಾಳಾಗುತ್ತವೆ, ಮತ್ತು ಇದರಿಂದ ವಾಸನೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ, ತರಕಾರಿಗಳು ಮತ್ತು ಹಣ್ಣುಗಳನ್ನು ತೊಳೆದ ನಂತರ, ಅವುಗಳನ್ನು ಚೆನ್ನಾಗಿ ಒಣಗಿದ ನಂತರವೇ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡಿ.
ಉಳಿದ ಆಹಾರಗಳನ್ನು ಹೆಚ್ಚು ಸಮಯ ಫ್ರಿಡ್ಜ್‌ನಲ್ಲಿಡುವುದು: ಹೆಚ್ಚಿನವರು ಅನ್ನ, ಸಾಂಬಾರ್ ಸೇರಿದಂತೆ ಉಳಿದ ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟುಬಿಡುತ್ತಾರೆ. ಹೀಗೆ ಇದನ್ನು ಮಳೆಗಾಲದಲ್ಲಿ ಹೆಚ್ಚು ಸಮಯದ ಕಾಲ ಫ್ರಿಡ್ಜ್‌ನಲ್ಲಿಟ್ಟರೆ ಬ್ಯಾಕ್ಟೀರಿಯಾಗಳು ಅದರಲ್ಲಿ ಬೆಳೆದು ಕೆಟ್ಟ ವಾಸನೆಯನ್ನು ಉಂಟುಮಾಡಬಹುದು. ಆದ್ದರಿಂದ, ಹೆಚ್ಚು ಸಮಯ ಉಳಿದ ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಇಡುವ ತಪ್ಪನ್ನು ಮಾಡಬೇಡಿ.
ರೆಫ್ರಿಜರೇಟರ್ ಡ್ರೈನ್ ಹೋಲ್ ಅನ್ನು ಪರೀಕ್ಷಿಸದಿರುವುದು: ಆಗಾಗ್ಗೆ, ಫ್ರಿಜ್‌ನಲ್ಲಿರುವ ಹೆಚ್ಚುವರಿ ತೇವಾಂಶವು ಸಣ್ಣ ಡ್ರೈನ್ ಹೋಲ್ ಮೂಲಕ ಹೊರಬರುತ್ತದೆ. ಅದು ಮುಚ್ಚಿಹೋದರೆ, ನೀರು ಫ್ರಿಡ್ಜ್ ಒಳಗಡೆಯೇ ಸಂಗ್ರಹವಾಗಬಹುದು. ಮಳೆಗಾಲದ ದಿನಗಳಲ್ಲಿ, ನೀರಿನಲ್ಲಿ ಆ ಬ್ಯಾಕ್ಟೀರಿಯಾಗಳು ಬೆಳೆಯಬಹುದು ಮತ್ತು ಅದು ಕೆಟ್ಟ ವಾಸನೆಯನ್ನು ಬರಲು ಪ್ರಾರಂಭಿಸುತ್ತದೆ. ಆದ್ದರಿಂದ, ಕಾಲಕಾಲಕ್ಕೆ ಡ್ರೈನ್ ಹೋಲ್ ಅನ್ನು ಪರಿಶೀಲಿಸುತ್ತಿರಿ.
ಬಾಗಿಲಿನ ರಬ್ಬರ್ ಸೀಲ್ ಅನ್ನು ಸ್ವಚ್ಛಗೊಳಿಸದಿರುವುದು: ರೆಫ್ರಿಜರೇಟರ್ ಬಾಗಿಲಿನ ಮೇಲಿನ ರಬ್ಬರ್ ಸೀಲ್ (ಗ್ಯಾಸ್ಕೆಟ್) ನಲ್ಲಿ ಧೂಳು, ಸಣ್ಣ ಆಹಾರ ಕಣಗಳು ಮತ್ತು ತೇವಾಂಶ ಸಂಗ್ರಹವಾಗುತ್ತದೆ. ಇದರಿಂದ ಮಳೆಗಾಲದಲ್ಲಿ ರಬ್ಬರ್ ಸೀಲ್‌ಗಳಲ್ಲಿ ಬ್ಯಾಕ್ಟೀರಿಯ, ಸೂಕ್ಷ್ಮ ಜೀವಿಗಳು ಬೆಳೆಯಬಹುದು. ಇದು ಕೆಟ್ಟ ವಾಸನೆಯನ್ನು ಉಂಟುಮಾಡಬಹುದು. ಆದ್ದರಿಂದ, ರಬ್ಬರ್ ಸೀಲ್ ಅನ್ನು ನಿಯಮಿತವಾಗಿ ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಿ.
ಇದನ್ನೂ ಓದಿ: ಮಳೆಗಾಲದಲ್ಲಿ ಫ್ರಿಡ್ಜ್‌ನಲ್ಲಿ ಒಂದು ಬೌಲ್ ಕಲ್ಲುಪ್ಪು ಇಡುವುದರಿಂದ ಏನಾಗುತ್ತದೆ ಗೊತ್ತಾ?
ಫ್ರಿಡ್ಜ್ ಅನ್ನು ಅತಿಯಾಗಿ ತುಂಬುವುದು: ಹೆಚ್ಚು ವಸ್ತುಗಳನ್ನು ಸಂಗ್ರಹಿಸುವುದರಿಂದ, ತಂಪಾದ ಗಾಳಿಯು ಇಡೀ ಫ್ರಿಡ್ಜ್ ಅನ್ನು ಸಮವಾಗಿ ತಲುಪಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ, ಆಹಾರ ಮತ್ತು ಪಾನೀಯಗಳು ಹಾಳಾಗಬಹುದು. ಇದು ಕೆಟ್ಟ ವಾಸನೆಯ ಅಪಾಯವನ್ನು ಹೆಚ್ಚಿಸುತ್ತದೆ.
ಫ್ರಿಡ್ಜ್ ವಾಸನೆಯನ್ನು ನಿವಾರಿಸುವ ಮನೆ ಮದ್ದುಗಳು:
- ಫ್ರಿಡ್ಜ್ ವಾಸನೆಯನ್ನು ಹೋಗಲಾಡಿಲಸು ಒಂದು ಬೌಲ್ ಉಪ್ಪನ್ನು ಫ್ರಿಡ್ಜ್‌ನಲ್ಲಿ ಇಡಬಹುದು.
- ಸ್ವಲ್ಪ ಅಡಿಗೆ ಸೋಡಾವನ್ನು ಉಪ್ಪಿನೊಂದಿಗೆ ಬೆರೆಸಿ, ಇದು ವಾಸನೆಯನ್ನು ಹೆಚ್ಚು ವೇಗವಾಗಿ ನಿವಾರಿಸುತ್ತದೆ.
- ನಿಂಬೆ ಸಿಪ್ಪೆಗಳನ್ನು ಫ್ರಿಡ್ಜ್‌ನಲ್ಲಿ ಇಡಬಹುದು. ಇದು ನೈಸರ್ಗಿಕ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




