AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳ್ಳಿ ಮಕ್ಕಳಿಗೆ ಹೋಲಿಸಿದರೆ ನಗರದ ಮಕ್ಕಳು ತಡವಾಗಿ ಮಾತನಾಡುತ್ತಾರೆ; ಅಧ್ಯಯನ

ಅಧ್ಯಯನವು ನಾಲ್ಕು ವರ್ಷದೊಳಗಿನ 1001 ಮಕ್ಕಳನ್ನು ಒಳಗೊಂಡಿತ್ತು. ಈ ಮಕ್ಕಳನ್ನು ನಗರಗಳು ಮತ್ತು ಹಳ್ಳಿಗಳಲ್ಲಿ ವಾಸಿಸುವ ಮಕ್ಕಳು ಎಂದು ವಿಂಗಡಿಸಲಾಗಿತ್ತು. ಅವರು ಬೆಳೆದ ಪರಿಸರವು ಅವರ ಭಾಷಾ ಕಲಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ಮಾಡಲಾಗಿದೆ.

ಹಳ್ಳಿ ಮಕ್ಕಳಿಗೆ ಹೋಲಿಸಿದರೆ ನಗರದ ಮಕ್ಕಳು ತಡವಾಗಿ ಮಾತನಾಡುತ್ತಾರೆ; ಅಧ್ಯಯನ
ಹಳ್ಳಿ ಮಕ್ಕಳಿಗೆ ಹೋಲಿಸಿದರೆ ನಗರದ ಮಕ್ಕಳು ತಡವಾಗಿ ಮಾತನಾಡುತ್ತಾರೆImage Credit source: Pinterest
ಅಕ್ಷತಾ ವರ್ಕಾಡಿ
|

Updated on:Feb 21, 2024 | 4:52 PM

Share

ಹಾರ್ವರ್ಡ್ ವಿಶ್ವವಿದ್ಯಾಲಯವು 12 ದೇಶಗಳು ಮತ್ತು 43 ಭಾಷೆಗಳಲ್ಲಿ ಈ ಅಧ್ಯಯನವನ್ನು ನಡೆಸಿತು. ಈ ಅಧ್ಯಯನದಲ್ಲಿ ನಗರ ಮತ್ತು ಗ್ರಾಮೀಣ ಮಕ್ಕಳು ಭಾಗವಹಿಸಿದ್ದರು. ಅಧ್ಯಯನದಲ್ಲಿ ಭಾಗವಹಿಸಿದ ಮಕ್ಕಳನ್ನು ಎರಡು ತಿಂಗಳಿಂದ ನಾಲ್ಕು ವರ್ಷದೊಳಗಿನ ಆಯ್ಕೆ ಮಾಡಲಾಗಿತ್ತು. 40,000 ಗಂಟೆಗಳ ಅಧ್ಯಯನದ ನಂತರ, ಮಕ್ಕಳ ಭಾಷಾ ಕಲಿಕೆಯ ಮೇಲೆ ಯಾವ ಅಂಶಗಳು ಪ್ರಭಾವ ಬೀರುತ್ತವೆ ಎಂಬುದನ್ನು ಸಂಶೋಧಕರು ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.

ಮಕ್ಕಳ ಮಾತಿನಲ್ಲಿ ಇಷ್ಟೊಂದು ವ್ಯತ್ಯಾಸ ಹೇಗಿದೆ ಎಂದು ಅಧ್ಯಯನದ ಪ್ರಮುಖ ಲೇಖಕಿ ಎಲಿಕಾ ಬರ್ಗೆಲ್ಸನ್ ವಿವಾನಾ ವಿವರಿಸಿದ್ದಾರೆ. ಅಧ್ಯಯನವು ನಾಲ್ಕು ವರ್ಷದೊಳಗಿನ 1001 ಮಕ್ಕಳನ್ನು ಒಳಗೊಂಡಿತ್ತು. ಈ ಮಕ್ಕಳನ್ನು ನಗರಗಳು ಮತ್ತು ಹಳ್ಳಿಗಳಲ್ಲಿ ವಾಸಿಸುವ ಮಕ್ಕಳು ಎಂದು ವಿಂಗಡಿಸಲಾಗಿತ್ತು. ಅವರು ಬೆಳೆದ ಪರಿಸರವು ಅವರ ಭಾಷಾ ಕಲಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅವರು ಅಧ್ಯಯನ ಮಾಡಿದರು. ಅಧ್ಯಯನವು ಮಕ್ಕಳ ಮಾತನಾಡುವ ಸಮಯ, ಲಿಂಗ, ಅವರ ಪರಿಸರ ಮತ್ತು ಬಹು ಭಾಷೆಗಳಿಗೆ ಒಡ್ಡಿಕೊಳ್ಳುವಂತಹ ಅಂಶಗಳನ್ನು ಗಣನೆಗೆ ತೆಗೆದುಕೊಂಡಿದೆ. ಈ ಅಧ್ಯಯನದಲ್ಲಿ, ತ್ವರಿತವಾಗಿ ಮಾತನಾಡಲು ಕಲಿಯುವ ಮಕ್ಕಳು ತಮ್ಮ ಮನೆಯಲ್ಲಿ ದೊಡ್ಡವರ ಮಾತುಗಳನ್ನು ಕೇಳುವ ಮೂಲಕ ಹೆಚ್ಚು ಕಲಿಯುತ್ತಾರೆ ಎಂದು ಕಂಡುಬಂದಿದೆ.

ಇದನ್ನೂ ಓದಿ: ಸಕರಾತ್ಮಕ ಚಿಂತನೆಯಿಂದ ಜೀವನದ ಯಶಸ್ಸಿಗೆ ದಾರಿ ಸುಲಭ

ಈ ಅಧ್ಯಯನವು ಮಕ್ಕಳಿಗೆ ಮಾತನಾಡಲು ಕಲಿಯಲು ಪೋಷಕರ ಆರ್ಥಿಕ ಮತ್ತು ಸಾಮಾಜಿಕ ಪರಿಸರವು ಕಾರಣವಾಗಿದೆ ಎಂದು ಸೂಚಿಸುತ್ತದೆ. ತ್ವರಿತವಾಗಿ ಮಾತನಾಡಲು ಕಲಿಯುವ ಮಕ್ಕಳು ತಮ್ಮ ಸುತ್ತಲಿನ ಜನರಿಂದ ಪ್ರಭಾವಿತರಾಗುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ನೀವು ಮಕ್ಕಳೊಂದಿಗೆ ಎಷ್ಟು ಹೆಚ್ಚು ಮಾತನಾಡುತ್ತೀರೋ ಅಷ್ಟು ಬೇಗ ಅವರು ಮಾತನಾಡಲು ಕಲಿಯುತ್ತಾರೆ ಎಂಬುದು ಸ್ಪಷ್ಟವಾಗಿದೆ. ಮಕ್ಕಳು ಮಾತನಾಡುವ ಅಥವಾ ಕಲಿಯುವ ಭಾಷೆ ನಗರ, ಹಳ್ಳಿಯನ್ನು ಅವಲಂಬಿಸಿರುತ್ತದೆ. ನಗರಗಳಲ್ಲಿ ಮಕ್ಕಳಿಗೆ ಮಾತನಾಡಲು ಅವಕಾಶ ಕಡಿಮೆ. ಆದರೆ, ಹಳ್ಳಿಗಳಲ್ಲಿ ಮಕ್ಕಳ ಸುತ್ತ ಜನ ಹೆಚ್ಚು ಇರುತ್ತಾರೆ. ಮಕ್ಕಳು ತಮ್ಮ ಸುತ್ತಮುತ್ತಲಿನ ಜನರ ಮಾತನ್ನು ಕೇಳುವ ಮೂಲಕ ಬೇಗನೆ ಕಲಿಯುತ್ತಾರೆ. ಆದ್ದರಿಂದ ಅವರು ಬೇಗನೆ ಮಾತನಾಡಲು ಅಭ್ಯಾಸ ಮಾಡುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:52 pm, Wed, 21 February 24

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಕಿಚ್ಚ ಸುದೀಪ್ ಎದುರಲ್ಲೇ ಬಿಗ್ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ
ಕಿಚ್ಚ ಸುದೀಪ್ ಎದುರಲ್ಲೇ ಬಿಗ್ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತರು
ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತರು
ಮೈಸೂರು:ಕನ್ನಡಾಂಬೆ ಭುವನೇಶ್ವರಿ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?
ಮೈಸೂರು:ಕನ್ನಡಾಂಬೆ ಭುವನೇಶ್ವರಿ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?
ಲವ್ ಮಾಡೋದು ಬಿಟ್ಟು ಆಟವಾಡು: ಸುದೀಪ್ ಎದುರಲ್ಲೇ ಸೌಂದರ್ಯಾಗೆ ಕಿರಣ್ ಟೀಕೆ
ಲವ್ ಮಾಡೋದು ಬಿಟ್ಟು ಆಟವಾಡು: ಸುದೀಪ್ ಎದುರಲ್ಲೇ ಸೌಂದರ್ಯಾಗೆ ಕಿರಣ್ ಟೀಕೆ
ಬೆಳಗಾವಿಯಲ್ಲಿ ಕಳೆಗಟ್ಟಿದ ಕನ್ನಡ ಹಬ್ಬ
ಬೆಳಗಾವಿಯಲ್ಲಿ ಕಳೆಗಟ್ಟಿದ ಕನ್ನಡ ಹಬ್ಬ
ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ!
ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ!