AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Lion Day 2024: ಸಿಂಹದ ಬಗ್ಗೆ ನೀವು ತಿಳಿಯಬೇಕಾದ ವಿಷಯಗಳಿವು

2013 ರಿಂದ ಪ್ರತಿವರ್ಷ ಆಗಸ್ಟ್ 10 ರಂದು ವಿಶ್ವ ಸಿಂಹಗಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನವನ್ನು ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್‌ ಎಂಬ ದಂಪತಿ ಆಚರಣೆಗೆ ತಂದರು. ಈಗ ಸಿಂಹವನ್ನು ಅಳಿವಿನಂಚಿನಲ್ಲಿರುವ ಪ್ರಭೇದವೆಂದು ಗುರುತಿಸಲಾಗಿದೆ. ಭಾರತದಲ್ಲಿ ಕಂಡು ಬರುವ ಐದು ದೊಡ್ಡ ಬೆಕ್ಕುಗಳಲ್ಲಿ ಏಷ್ಯಾಟಿಕ್ ಸಿಂಹ ಕೂಡಾ ಒಂದಾಗಿದೆ. ಕಾಡಿನಲ್ಲಿ ಸಿಂಹಗಳ ಸಂಖ್ಯೆ ಕುಸಿಯುತ್ತಿದೆ. ಉದಾಹರಣೆಗೆ, ಆಫ್ರಿಕನ್ ಸಿಂಹಗಳ ಸಂಖ್ಯೆ 2001 ರಿಂದ 43% ರಷ್ಟು ಕಡಿಮೆಯಾಗಿದೆ. ಹಾಗಾಗಿ ಈ ದಿನಕ್ಕೆ ಎಲ್ಲರ ಸಹಕಾರವೂ ಬೇಕಾಗಿದೆ. ಜೊತೆಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.

World Lion Day 2024: ಸಿಂಹದ ಬಗ್ಗೆ ನೀವು ತಿಳಿಯಬೇಕಾದ ವಿಷಯಗಳಿವು
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 10, 2024 | 9:49 AM

Share

ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ. ಸಿಂಹಗಳ ಸಂರಕ್ಷಣೆಗೆ ಬೆಂಬಲ ಸೂಚಿಸುವ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಹಾಗಾಗಿ 2013 ರಿಂದ ಪ್ರತಿವರ್ಷ ವಿಶ್ವ ಸಿಂಹಗಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನವನ್ನು ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್‌ ಎಂಬ ದಂಪತಿ ಆಚರಣೆಗೆ ತಂದರು. ಈಗ ಸಿಂಹವನ್ನು ಅಳಿವಿನಂಚಿನಲ್ಲಿರುವ ಪ್ರಭೇದವೆಂದು ಗುರುತಿಸಲಾಗಿದೆ. ಭಾರತದಲ್ಲಿ ಕಂಡು ಬರುವ ಐದು ದೊಡ್ಡ ಬೆಕ್ಕುಗಳಲ್ಲಿ ಏಷ್ಯಾಟಿಕ್ ಸಿಂಹ ಕೂಡಾ ಒಂದಾಗಿದೆ. ಕಾಡಿನಲ್ಲಿ ಸಿಂಹಗಳ ಸಂಖ್ಯೆ ಕುಸಿಯುತ್ತಿದೆ. ಉದಾಹರಣೆಗೆ, ಆಫ್ರಿಕನ್ ಸಿಂಹಗಳ ಸಂಖ್ಯೆ 2001 ರಿಂದ 43% ರಷ್ಟು ಕಡಿಮೆಯಾಗಿದೆ. ಹಾಗಾಗಿ ಈ ದಿನಕ್ಕೆ ಎಲ್ಲರ ಸಹಕಾರವೂ ಬೇಕಾಗಿದೆ. ಜೊತೆಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.

ಸಿಂಹಗಳನ್ನು ಶೋಷಿಸಲಾಗುತ್ತಿದೆ;

ಸಿಂಹಗಳು ವಿಶಿಷ್ಟ ಫಾರ್ಮ್ ಯಾರ್ಡ್ ಪ್ರಾಣಿಗಳಲ್ಲ, ಆದರೆ ಸಾವಿರಾರು ಸಿಂಹಗಳನ್ನು ಅವುಗಳ ಮೂಳೆಗಳು ಮತ್ತು ಇತರ ದೇಹದ ಭಾಗಗಳಿಗಾಗಿ ಪ್ರಪಂಚದಾದ್ಯಂತ ಸಾಕಲಾಗುತ್ತಿದೆ. ಯಾವುದೇ ಪುರಾವೆಗಳಿಲ್ಲದಿದ್ದರೂ, ಇವುಗಳನ್ನು ಹೆಚ್ಚಾಗಿ ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತಿದೆ. ಹಾಗಾಗಿ ಸಿಂಹಗಳ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಕಡಿಮೆ ಮಾಡಲು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನಾವೆಲ್ಲರೂ ವಿಶ್ವ ಸಿಂಹ ದಿನವನ್ನು ಆಚರಿಸಬೇಕಾಗಿದೆ.

ಇದನ್ನೂ ಓದಿ: ಅಳಿವಿನಂಚಿನಲ್ಲಿದೆ ವಿಶ್ವದ ಈ ಬುಡಕಟ್ಟು ಜನಾಂಗಗಳು, ಈ ಜನರ ಸಂಪ್ರದಾಯಗಳೇ ವಿಚಿತ್ರ

ಭಾರತದ ಸಿಂಹಗಳ ಕುರಿತು ಮಾಹಿತಿ;

ನಮ್ಮ ದೇಶದ ಗಿರ್ ಕಾಡುಗಳಲ್ಲಿ ಸಿಂಹಗಳು ಹೆಚ್ಚಿನ ಪ್ರಮಾಣದಲ್ಲಿವೆ. ಅವುಗಳನ್ನು ಏಷ್ಯಾಟಿಕ್ ಸಿಂಹಗಳು ಎಂದು ಕರೆಯಲಾಗುತ್ತದೆ. ಈ ಸಿಂಹಗಳ ವೈಜ್ಞಾನಿಕ ಹೆಸರು ಪ್ಯಾಂಥೆರಾ ಲಿಯೋ ಪರ್ಸಿಕಾ. ಇವುಗಳ ಎತ್ತರ ಸುಮಾರು 110 ಸೆಂ.ಮೀ. ಇರುತ್ತದೆ. ಈ ಸಿಂಹಗಳು ಆಫ್ರಿಕನ್ ಸಿಂಹಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ವಯಸ್ಕ ಹೆಣ್ಣು ಸಿಂಹದ ತೂಕ 110 ರಿಂದ 120 ಕೆ.ಜಿ. ಇದ್ದರೆ, ಗಂಡು ಸಿಂಹದ ತೂಕ 160 ರಿಂದ 190 ಕೆ.ಜಿ. ಇರುತ್ತದೆ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ