Autobiography : ಅಭಿಜ್ಞಾನ ; ಬಯ್ದೂ ಬಯ್ದೂ ಸುಸ್ತಾದ ಬಸಪ್ಪನಿಗೆ ಬೋಡರುದ್ರಗೌಡರು ಕೊಟ್ಟ ಬಿರುದೇನಾಗಿತ್ತು?

Kum. Veerabhadrappa : ಇಪ್ಪತ್ನಾಲ್ಕು ತಾಸುಗಳ ಕಾಲ ನಿರರ್ಗಳವಾಗಿ ಆತ ಬಯ್ದಾಡುತ್ತಿದ್ದ. ತೊಟ್ಟ ಬಾಣ ತೊಡುವುದಿಲ್ಲವೆಂದು ಕರ್ಣ ಶಪಥ ಮಾಡಿದ್ದನಲ್ಲ, ಹಾಗೆಯೇ ಆತ ಬಳಕೆ ಮಾಡಿದ್ದ ಬಯ್ಗುಳ ಪದವನ್ನು ಪುನಃ ಬಳಸುತ್ತಿರಲಿಲ್ಲವೆಂಬುದೇ ವಿಶೇಷ. ಭೀಕರ ಬಡತನದಿಂದಾಗಿಯೇ ಆತ ಬಯ್ಗುಳ ಪ್ರಖರ ವಿದ್ವಾಂಸನಾಗಿದ್ದ.

Autobiography : ಅಭಿಜ್ಞಾನ ; ಬಯ್ದೂ ಬಯ್ದೂ ಸುಸ್ತಾದ ಬಸಪ್ಪನಿಗೆ ಬೋಡರುದ್ರಗೌಡರು ಕೊಟ್ಟ ಬಿರುದೇನಾಗಿತ್ತು?
ಕಥೆಗಾರ ಕುಂಬಾರ ವೀರಭದ್ರಪ್ಪ
Follow us
ಶ್ರೀದೇವಿ ಕಳಸದ
|

Updated on:Dec 09, 2021 | 9:35 AM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com 

* ಕಥೆಗಾರ ಕುಂ. ವೀರಭದ್ರಪ್ಪ ಅವರ ‘ರಾಯಲ ಸೀಮಾ’ ಆತ್ಮಕಥನದಿಂದ. * ಬೋಡರುದ್ರಗೌಡರು ಹೇಳುತ್ತಿದ್ದ ಒಂದೊಂದು ಪ್ರಸಂಗಗಳೂ ನೆನಪಾಗಿ ಪುಳಕಗೊಳಿಸುತ್ತಿವೆ. ಪಲ್ಲದ ಮೂಟೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಐದಾರು ಮೈಲಿ ದೂರದವರೆಗೆ ನಿರಾಯಾಸವಾಗಿ ನಡೆಯುತ್ತಿದ್ದ ಮಳೆಯ್ಯನವರ ಬಗೆಗಾಗಿರಬಹುದು, ಹೆಂಡತಿಯನ್ನು ಪ್ರಿಯತಮನೊಂದಿಗೆ ಮದುವೆ ಮಾಡಿದ ವೆಂಕಣ್ಣ ಬಗೆಗಿರಬಹುದು. ಈಡಿಗರ ಮಲ್ಲಯ್ಯನ ರುಂಡವನ್ನು ಕೈಲಿ ಹಿಡಿದುಕೊಂಡು ಠಾಣೆಗೆ ನಡೆದ ದಿಬ್ಬಯ್ಯನ ಬಗೆಗಿರಬಹುದು. ಒಂದೇ ಎರಡೇ ನೂರಾರು ಪ್ರಸಂಗಗಳನ್ನು ಕಣ್ಣಿಗೆ ಕಟ್ಟುವಂತೆ ಪುನರ್ ನಿರೂಪಿಸುತ್ತಿದ್ದ ಆ ಅದ್ಭುತ ಮೌಖಿಕ ಕಥೆಗಾರ ಇಳಿವಯಸ್ಸಿನಲ್ಲೂ ಯೂರಿ ಬ್ರೈನರ್​ನಂತಿದ್ದ. ಹತ್ತಿಪ್ಪತ್ತು ಸಹಸ್ರ ಎಕರೆ ಜಮೀನಿಗೆ ಒಡೆಯರಾಗಿದ್ದ ಅವರಿಗೆ ಗರ್ವ, ಅಹಂಕಾರ ಒಂಚೂರು ಇರಲಿಲ್ಲ. ಉದಾರಿಗಳಾಗಿದ್ದ ಅವರು ಜನಸಾಮಾನ್ಯರಿಂದಲೇ ಮೋಸಕ್ಕೊಳಗಾಗುತ್ತಿರುವಷ್ಟು ಅಮಾಯಕರಾಗಿದ್ದರು.

ಅದೇ ಗ್ರಾಮದಲ್ಲಿ ಓರ್ವ ವ್ಯಕ್ತಿ ಇದ್ದ. ಹೆಸರು ಸಿದ್ಧಬಸಪ್ಪನೋ, ಗುರುಬಸಪ್ಪನೋ ಯಾವುದೋ ಒಂದು. ಆತನಂತೆ ಪುಂಖಾನುಪುಂಖವಾಗಿ ಬಯ್ಯುತ್ತಿದ್ದವರು ಉಭಯ ರಾಜ್ಯಗಳಲ್ಲಿ ಯಾರೊಬ್ಬರೂ ಇರಲಿಲ್ಲವೆಂಬುದು ಉತ್ಪ್ರೇಕ್ಷೆಯ ಮಾತಲ್ಲ. ಇಪ್ಪತ್ನಾಲ್ಕು ತಾಸುಗಳ ಕಾಲ ನಿರರ್ಗಳವಾಗಿ ಆತ ಬಯ್ದಾಡುತ್ತಿದ್ದ. ತೊಟ್ಟ ಬಾಣ ತೊಡುವುದಿಲ್ಲವೆಂದು ಕರ್ಣ ಶಪಥ ಮಾಡಿದ್ದನಲ್ಲ, ಹಾಗೆಯೇ ಆತ ಬಳಕೆ ಮಾಡಿದ್ದ ಬಯ್ಗುಳ ಪದವನ್ನು ಪುನಃ ಬಳಸುತ್ತಿರಲಿಲ್ಲವೆಂಬುದೇ ವಿಶೇಷ. ಭೀಕರ ಬಡತನದಿಂದಾಗಿಯೇ ಆತ ಬಯ್ಗುಳ ಪ್ರಖರ ವಿದ್ವಾಂಸನಾಗಿದ್ದ.

ಯುಗಾದಿ ಬಂತೆಂದರೆ ಪಂದ್ಯ ಸ್ಪರ್ಧೆಗಳಿಗೆಲ್ಲಿಯದು ಬರ! ಅದರಲ್ಲೂ ಹೊಳಗುಂದಿಯಲ್ಲಿ ಕೇಳುವುದೇನಿದೆ! ಕುವ್ವಾಡಕ್ಕೋ, ದ್ವೇಷಕ್ಕೋ ಏನೋ! ಯಾರೋ ಪಂಪನಗೌಡರನ್ನು ಬಯ್ದವರಿಗೆ ನೂರು ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿಬಿಡುವುದೋ! ಆ ಕಾಲಕ್ಕೆ ನೂರೆಂದರೆ ಕಡಿಮೆ ಮೊತ್ತವಾಗಿರಲಿಲ್ಲ. ಐದರ ನೋಟು ನೋಡಿರದಿದ್ದ ಬಸಪ್ಪ ಸುಮ್ಮನಿರಲಾದೀತೆ! ಒಪ್ಪಿಕೊಂಡುಬಿಟ್ಟ. ವಿಶೇಷ ಬಯ್ಗುಳನ್ನು ನೆನಪಿನ ನಿಘಂಟಿನಿಂದ ಹೆಕ್ಕಿ ತೆಗೆದಿಟ್ಟುಕೊಳ್ಳುತ್ತ…

Abhijnana anecdote from Rayala Seema by Kannada writer kum veerabhadrappa published by Ankita Pustaka

ರಾಯಲ ಸೀಮಾ

ಕರಿದಿವಸ ಬೇರೆ, ಬೆಳಗ್ಗೆ ಯಾರ ಮುಖ ನೋಡಿದ್ದರೇನೋ! ದಿವಾನಖಾನದಲ್ಲಿ ಲೋಡಿಗಾತು ಗೌಡರು ಕುಳಿತಿದ್ದರು. ಆಸ್ಥಾನದಲ್ಲಿ ಸಭಾಸದರಿಗೇನು ಬರವಿರಲಿಲ್ಲ. ನಮಸ್ಕರಿಸಲು ಬಂದಿರಬಹುದೆಂದೇ ಭಾವಿಸಿದ ಅವರು… ಬಸಪ್ಪ ಮತ್ತವನ ಸಂಗಡಿಗರನ್ನು ಆಶೀರ್ವಚನ ಭಂಗಿಯಲ್ಲಿಯೇ ಸ್ವಾಗತಿಸಿದರು. ವಿವಿಧ ಮೂಲೆಗಳಲ್ಲಿ ನಿಂತ ತನ್ನ ಬೆಂಬಲಿಗರನ್ನೂ, ಗೋಡೆಗೆ ತೂಗುಬಿಟ್ಟಿದ್ದ ತರಾವರಿ ಬಂದೂಕುಗಳನ್ನೂ ನೋಡಿದ. ವಿಚಿತ್ರವೆಂದರೆ ಗೌಡರಿಗೆ ಸಾಷ್ಟಾಂಗ ಪ್ರಣಾಮ ಸಲ್ಲಿಸಿ ರಾಜಗಾಂಭೀರ್ಯದಲದಲ್ಲಿ ನಿಂತ ಬಸಪ್ಪ ವಾಚಾಮಗೋಚರವಾಗಿ ಬಯ್ಯಲಾರಂಭಿಸಿದ. ಒಂದೊಂದು ಬಯ್ಗುಳನ್ನು ಕೇಳಿಸಿಕೊಳ್ಳುತ್ತಿದ್ದ ಗೌಡರು ಮತ್ತವರ ಬಂದೂಕುಗಳೂ ಹಸನ್ಮುಖರಾಗದೆ ಇರಲಿಲ್ಲ.

ದೊರೆಯನ್ನು ಏಕಪ್ರಕಾರವಾಗಿ ದಕ್ಕಿಸಿಕೊಂಡವರುಂಟೆ? ಮಳಗುವಳ್ಳಿ ಲಕ್ಷ್ಮೀಕಾಂತ ರೆಡ್ಡಿ, ಕೋಸಿಗಿ ದೊರೆ, ಕುಂಪಣಿ ದೊರೆಗಳಿಂದ ನಮಸ್ಕರಿಸಿಕೊಳ್ಳುತ್ತಿರುವ ಗೌಡರನ್ನು ನಿಂದಿಸುತ್ತಿರುವ ದೃಶ್ಯ ಏನು ಕೊಟ್ಟರೆ ಸಿಕ್ಕೀತು? ಜನ ತಂಡೋಪತಂಡವಾಗಿ ಬಂದು ನಿಂತು ಪರಿಣಾಮದ ಕಡೆ ನಿಗಾ ಇಟ್ಟಿತ್ತು. ಬಯ್ಗುಳ ಯಜ್ಞ ಇಡೀ ಒಂದು ತಾಸಿನವರೆಗೆ ನಡೆಯಿತು.

ಬಯ್ದೂ ಬಯ್ದೂ ಸುಸ್ತಾದ… ಬಸಪ್ಪ ಪುನಃ ಸಾಷ್ಟಾಂಗ ಪ್ರಣಾಮ ಸಲ್ಲಿಸಿ ಭಯಭಕ್ತಿಯಿಂದ ನಿಂತನೆಂದೂ , ಅವನ ವಾಗ್​ವಿಲಾಸಕ್ಕೆ ಮೆಚ್ಚಿದ ಗೌಡರು ‘ನೀನು ಸರಸ್ವತಿ ಪುತ್ರ ಕಣಪ್ಪಾ’ ಎಂದು ಆಲಂಗಿಸಿಕೊಂಡರೆಂದೂ, ನಗದು ಬಹುಮಾನ ಬಟ್ಟೆ ಬರೆ ನೀಡಿ ಸತ್ಕರಿಸಿದರೆಂದೂ…

ರುದ್ರಪ್ಪಗೌಡರು ತಮ್ಮ ಬೋಡುದಲೆ ಮೇಲೆ ಕೈಯ್ಯಾಡಿಸುತ್ತ ಹೇಳುತ್ತಿದ್ದುದನ್ನು ಆಲಿಸುವ ಸೊಗಸೇ ಬೇರೆ!

ಸೌಜನ್ಯ : ಅಂಕಿತ ಪುಸ್ತಕ

*

ಇದನ್ನೂ ಓದಿ : Kuvempu : ‘ಟಿ. ಎಸ್. ಎಲಿಯಟ್​ರ ಕಾವ್ಯದ ಬಗ್ಗೆ ಅಣ್ಣ ಯಾವತ್ತೂ ಶ್ರೇಷ್ಠ ಎನ್ನುವ ಅಭಿಪ್ರಾಯ ಇಟ್ಟುಕೊಂಡಿರಲಿಲ್ಲ’

Published On - 9:31 am, Thu, 9 December 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ