Marathi : ಅಭಿಜ್ಞಾನ ; ‘ಸಮರಸವಾಗುವುದು ನನ್ನ ಉದ್ದೇಶವಾಗಿತ್ತೇ ವಿನಾ ಪ್ರತ್ಯೇಕತೆಯನ್ನು ರಕ್ಷಿಸುವುದಾಗಿರಲಿಲ್ಲ ’

Kannada : ‘ಧಾರವಾಡದ ಕರ್ನಾಟಕ ಕಾಲೇಜು ಆಗ ಸಂಪೂರ್ಣ ಮರಾಠೀ ಪ್ರಾಧ್ಯಾಪಕರಿಂದಲೇ ತುಂಬಿತ್ತು. ಎಷ್ಟರ ಮಟ್ಟಿಗೆಂದರೆ, ಕಾಲೇಜಿನ ವಾರ್ಷಿಕ ಉತ್ಸವದಲ್ಲಿ ಕನ್ನಡ ನಾಟಕದ ಪ್ರದರ್ಶನಕ್ಕೆ ಹೋರಾಡಬೇಕಾಗುತ್ತಿತ್ತು. ಕೆಲವರು ಹೋರಾಟದ ನೇತೃತ್ವವನ್ನು ವಹಿಸಿಕೊಂಡು ಸ್ವಲ್ಪಮಟ್ಟಿಗಾದರೂ ಕನ್ನಡಿಗರ ಮಾನ ಕಾಯ್ದರು.’ ಡಾ. ಜಿ. ಎಸ್. ಆಮೂರ

Marathi : ಅಭಿಜ್ಞಾನ ; ‘ಸಮರಸವಾಗುವುದು ನನ್ನ ಉದ್ದೇಶವಾಗಿತ್ತೇ ವಿನಾ ಪ್ರತ್ಯೇಕತೆಯನ್ನು ರಕ್ಷಿಸುವುದಾಗಿರಲಿಲ್ಲ  ’
ವಿಮರ್ಶಕ ಡಾ. ಜಿ. ಎಸ್. ಆಮೂರ
Follow us
ಶ್ರೀದೇವಿ ಕಳಸದ
|

Updated on:Dec 30, 2021 | 8:30 AM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

* ಕಥೆಗಾರ ವಿವೇಕ ಶಾನಭಾಗ ಅವರ ಸಂಪಾದಕತ್ವದ ದೇಶಕಾಲ ತ್ರೈಮಾಸಿಕ ಪತ್ರಿಕೆಯಲ್ಲಿ ಪ್ರಕಟವಾದ ವಿಮರ್ಶಕ ಡಾ. ಜಿ. ಎಸ್. ಆಮೂರ ಅವರ ‘ನನ್ನ ಮರಾಠಿ ಅನುಭವ’ದಿಂದ ಆಯ್ದಭಾಗ. *

1943ರಲ್ಲಿ ನಾನು ಕರ್ನಾಟಕ ಕಾಲೇಜನ್ನು ಸೇರಿದ ನಂತರದ ಅನುಭವ ಬೇರೆಯೇ ಆಗಿತ್ತು. ಕರ್ನಾಟಕ ಕಾಲೇಜು ಆಗ ಸಂಪೂರ್ಣವಾಗಿ ಮರಾಠೀ ಪ್ರಾಧ್ಯಾಪಕರಿಂದಲೇ ತುಂಬಿದ್ದಿತು. ಎಷ್ಟರ ಮಟ್ಟಿಗೆಂದರೆ, ಕಾಲೇಜಿನ ವಾರ್ಷಿಕ ಉತ್ಸವದಲ್ಲಿ ಕನ್ನಡ ನಾಟಕದ ಪ್ರದರ್ಶನಕ್ಕೆ ಹೋರಾಡಬೇಕಾಗುತ್ತಿತ್ತು. ಅ.ತು. ಸಾಸನೂರ, ಆರ್‌.ವಿ. ಜಾಗೀರದಾರ (ಆದ್ಯರಂಗಾಚಾರ್ಯ) ಅವರಂಥವರು ಈ ಹೋರಾಟದ ನೇತೃತ್ವವನ್ನು ವಹಿಸಿಕೊಂಡು ಸ್ವಲ್ಪಮಟ್ಟಿಗಾದರೂ ಕನ್ನಡಿಗರ ಮಾನ ಕಾಯ್ದರು. ಹಾಗಾಗಿ ವಿದ್ಯಾರ್ಥಿಗಳಾಗಿದ್ದ ನಮ್ಮಲ್ಲಿ ಮರಾಠಿಗರ ಬಗ್ಗೆ ದ್ವೇಷದ ಭಾವನೆ ಬೇರೂರಿದ್ದಿತು. ಒಂದೆರಡು ವರ್ಷ ನಾನು ಜಾಗಿರದಾರರ ಮನೆಯಲ್ಲಿಯೇ ಇದ್ದೆ. ಜಾಗಿರದಾರರ ಪತ್ನಿ ಶಾರದಾಬಾಯಿಯವರು ಪುಣೆಯ ಪ್ರಸಿದ್ದ ಚಂದ್ರಚೂಡಾ ಮನೆತನಕ್ಕೆ ಸೇರಿದವರು. ಸಹಜವಾಗಿಯೇ ಕನ್ನಡದೊಡನೆ ಮರಾಠಿಯೂ ಕಿವಿಯ ಮೇಲೆ ಬೀಳುತ್ತಿತ್ತು. ಹೀಗಿದ್ದರೂ, ಜಾಗೀರದಾರರಲ್ಲಿಗೆ ಬರಹೋಗುವ ಕನ್ನಡಿಗರಿಂದಾಗಿ ಮನೆಯ ವಾತಾವರಣ ಕನ್ನಡದ್ದೇ ಆಗಿದ್ದಿತು. ಆದರೂ ಸಂಸ್ಕೃತಿಗಳ ಭಿನ್ನತೆಯ ಕಾರಣವಾಗಿ ನನಗೆ ಶಾರದಾಬಾಯಿಯವರೊಡನೆ ಹೊಂದಿಕೊಳ್ಳುವುದು ಕಠಿಣವಾಯಿತು. ಮುಂದಿನ ದಿನಗಳಲ್ಲಿ ಅವರು ಪ್ರಯತ್ನಪೂರ್ವಕವಾಗಿ ಇಲ್ಲಿಯ ಸಂಸ್ಕೃತಿಯನ್ನು ಅರಗಿಸಿಕೊಂಡರು; ಹಾಗೂ ನಮ್ಮ ಸಂಬಂಧ ಕೊನೆಯವರೆಗೂ ಸೌಹಾರ್ದಪೂರ್ಣವಾಗಿ ಉಳಿಯಿತು.

ಇಂಥ ಇನ್ನೊಂದು ಪ್ರಸಂಗವನ್ನು ನಾನು ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗವನ್ನು 1964ರಲ್ಲಿ  ಸೇರಿದ ನಂತರ ಎದುರಿಸಬೇಕಾಯಿತು. ಆಗ ಅಲ್ಲಿ ಮರಾಠಿಗರೊಬ್ಬರು ವಿಭಾಗದ ಮುಖ್ಯಸ್ಥರಾಗಿದ್ದರು. ದಶಕಗಳ ಕಾಲ ಕರ್ನಾಟಕದಲ್ಲಿ ಕಳೆದರೂ ಕನ್ನಡ ಭಾಷೆ ಹಾಗೂ ಸಂಸ್ಕೃತಿಗಳ ಬಗ್ಗೆ ಅವರು ಸಂಪೂರ್ಣವಾಗಿ ನಿರಾಸಕ್ತರಾಗಿದ್ದರು. ಹೀಗಾಗಿ ನಮ್ಮಲ್ಲಿ ಪರಸ್ಪರ ಸಂಶಯ, ಅಪನಂಬಿಕೆಗಳೇ ಬೆಳೆದುಬಂದವು.

ಈ ಹಿನ್ನೆಲೆಯಿಂದ ಹೊರಟು ನಾನು 1968ರಲ್ಲಿ ಮಹಾರಾಷ್ಟ್ರದ ಮರಾಠಾವಾಡಾ ವಿದ್ಯಾಪೀಠದ ಇಂಗ್ಲಿಷ್ ವಿಭಾಗವನ್ನು ಸೇರಿದೆ; ಹಾಗೂ ಹದಿನೇಳು ವರ್ಷಗಳ ದೀರ್ಘಕಾಲವನ್ನು ಮಹಾರಾಷ್ಟ್ರದಲ್ಲಿಯೇ ಕಳೆದ. ಇಲ್ಲಿ ನನ್ನ ಅನುಭವ ತೀರ ಬೇರೆಯ ರೀತಿಯದೇ ಆಗಿದ್ದಿತು. ವಿದರ್ಭ ಖಾನದೇಶಗಳಿದ್ದಂತೆ ಮರಾಠವಾಡಾ ಕೂಡಾ ಮಹಾರಾಷ್ಟ್ರದ ಒಂದು ಪ್ರದೇಶ. ಒಂದು ಕಾಲದಲ್ಲಿ ನಿಜಾಮರಾಜ್ಯದ ಭಾಗವಾಗಿದ್ದುದರಿಂದಲೇ ಏನೋ ಅಲ್ಲಿಯ ಜನರು ಬೇರೆ ಸಂಸ್ಕೃತಿಗಳಿಂದ ಬಂದ ಜನರನ್ನು ಹೆಚ್ಚು ಮುಕ್ತವಾಗಿ ಸ್ವೀಕರಿಸುತ್ತಾರೆ. ತಮ್ಮ ಮಾತೃಭಾಷೆಯನ್ನು ವಿಶೇಷವಾಗಿ ಪ್ರೀತಿಸುತ್ತಾರೆ. ಇಂದೊಂದು ಮಹಾರಾಷ್ಟ್ರ ಸಂಸ್ಕೃತಿಯ ನಿರ್ಣಾಯಕ ಲಕ್ಷಣವೇ, ಇಂಗ್ಲಿಷ್ ಸೇರಿದಂತೆ ಬೇರೆ ಭಾಷೆಗಳ ಬಗ್ಗೆ ಅವರಿಗೆ ವಿಶೇಷ ಒಲವಿಲ್ಲ. ಬೌದ್ಧಿಕ ವ್ಯವಹಾರಗಳೂ ಸೇರಿದಂತೆ ತಮ್ಮ ಎಲ್ಲ ವ್ಯವಹಾರಗಳನ್ನು ಅವರು ಮರಾಠಿಯಲ್ಲಿಯೇ ನಡೆಸಬಲ್ಲರು.

Abhijnana excerpt from My Marathi experience by Kannada Critic GS Amur in Deshakala Literary Magazine Edited by Author Vivek Shanbhag

‘ದೇಶಕಾಲ’ದ ಸಂಪಾದಕ, ಕಥೆಗಾರ ವಿವೇಕ ಶಾನಭಾಗ

ಔರಂಗಾಬಾದಿಗೆ ಹೋಗುವ ಮೊದಲೇ ನನಗೆ ಮರಾಠಿಯ ಅಲ್ಪಸ್ವಲ್ಪ ಪರಿಚಯವಿದ್ದುದು ಅನುಕೂಲವೇ ಆಯಿತು. ಕರ್ನಾಟಕದಲ್ಲಿದ್ದಂತೆ ಮಹಾರಾಷ್ಟ್ರದಲ್ಲಿಯೂ ಪ್ರಾದೇಶಿಕ ಭಿನ್ನತೆಗಳು ಉಳಿದುಕೊಂಡಿವೆ. ಪರಸ್ಪರ ಅಪನಂಬಿಕೆ ಹಾಗೂ ವಿರೋಧಗಳಿಗೂ ಅಲ್ಲಿ ಆಸ್ಪದವಿದೆ. ನಮ್ಮಲ್ಲಿ ದಕ್ಷಿಣ ಕರ್ನಾಟಕದ ಜನ ತಮ್ಮನ್ನು ಶ್ರೇಷ್ಠರೆಂದು ತಿಳಿದುಕೊಂಡಂತೆ ಪುಣೇರಿ ಜನ ಉಳಿದವರನ್ನು ಸ್ವಲ್ಪ ಮಟ್ಟಿಗೆ ತಿರಸ್ಕಾರದಿಂದಲೇ ನೋಡುತ್ತಾರೆ. ಉಳಿದವರೂ ಅವರನ್ನು ನಂಬುವುದಿಲ್ಲ. ನಮ್ಮ ವಿಭಾಗದಲ್ಲಿ ಮಹಾರಾಷ್ಟ್ರದ ಎಲ್ಲ ಪ್ರದೇಶಗಳಿಂದಲೂ ಬಂದ ಶಿಕ್ಷಕರಿದ್ದುದರಿಂದ ಮರಾಠಿ ಸಂಸ್ಕೃತಿಯ ಬೇರೆಬೇರೆ ಮುಖಗಳನ್ನು ನೋಡುವುದು ನನಗೆ ಸಾಧ್ಯವಾಯಿತು. ನನ್ನ ಕಾರ್ಯಕ್ಷೇತ್ರದ ಮಿತಿಗಳಿಂದಾಗಿ ಮಹಾರಾಷ್ಟ್ರದ ಮಧ್ಯಮ ಹಾಗೂ ಬೌದ್ಧಿಕ ವರ್ಗಗಳೊಡನ ಮಾತ್ರ ನನ್ನ ಸಂಬಂಧ ನಿಕಟವಾದುದರಿಂದ ಹಾಗೂ ಪ್ರಾದೇಶಿಕ ಭಿನ್ನತೆಗಳ ಆಳವಾದ ತಿಳಿವಿನ ಅಭಾವದ ಕಾರಣ ‘ಮರಾಠಿ’ ಮನಸ್ಸಿನ ಬಗ್ಗೆ ನಾನು ಅಧಿಕಾರವಾಣಿಯಿಂದ ಮಾತಾಡಲಾರೆ. ಅಲ್ಲಿ ನನ್ನ ಕಣ್ಣು ‘ಕನ್ನಡ’ದ್ದಾಗಿ ಉಳಿದಿರಲಿಲ್ಲ. ಅಲ್ಲಿಯ ಸಂಸ್ಕೃತಿಯೊಂದಿಗೆ ಸಮರಸವಾಗುವುದು ನನ್ನ ಉದ್ದೇಶವಾಗಿತ್ತೇ ವಿನಾ ನನ್ನ ಪ್ರತ್ಯೇಕತೆಯನ್ನು ರಕ್ಷಿಸುವುದಾಗಿರಲಿಲ್ಲ. ಅದರ ಅಪಾಯಗಳನ್ನು ನಾನು ಆ ಮೊದಲೇ ಕಂಡುಕೊಂಡಿದ್ದೆ. ಹೀಗಿದ್ದರೂ, ‘ಮರಾಠಿ’ ಮನಸ್ಸಿನ ಬಗ್ಗೆ ನಾನು ಜಾಗ್ರತನಾಗಿದ್ದುದರಿಂದ ಅದರ ಕೆಲವೊಂದು ಎದ್ದು ಕಾಣುವ ಲಕ್ಷಣಗಳು ನನಗೆ ಸಹಜವಾಗಿಯೇ ಹೊಳೆದವು.

ಮೊದಲನೆಯದಾಗಿ, ಮರಾಠಿ ಜನ ಪ್ರಗತಿಪರರು, ಹೋರಾಟಗಾರರು. ಅವರ ಹೋರಾಟಗಳು ಕೆಲವು ಸಲ ಆಕ್ರಮಣಶೀಲತೆಯ ಸ್ವರೂಪವನ್ನು ಪಡೆಯುತ್ತವೆಯಾದರೂ ಹೆಚ್ಚಿನವು ಆರೋಗ್ಯಕರವಾಗಿಯೇ ಇರುತ್ತವೆ.  ಬಹಳಷ್ಟು ಪ್ರಗತಿಪರ ಚಳುವಳಿಗಳ ಮೂಲ ಅಗರಕರ, ಟಿಳಕರ ಕಾಲದಿಂದಲೂ ಮಹಾರಾಷ್ಟ್ರವೇ ಆಗಿದೆಯೆನ್ನುವುದನ್ನು ಇಲ್ಲಿ ಸಾಂದರ್ಭಿಕವಾಗಿ ನೆನೆಯಬಹುದು. ಮರಾಠವಾಡಾ ಪ್ರದೇಶವೇ ಇದಕ್ಕೊಂದು ಉದಾಹರಣೆಯಾಗಿದೆ. ಮಹಾರಾಷ್ಟ್ರ ಏಕೀಕೃತವಾಗುವ ಮೊದಲು ಮರಾಠವಾಡಾ ಹೈದರಾಬಾದ ಕರ್ನಾಟಕದಂತೆ ಹಿಂದುಳಿದ ಪ್ರದೇಶವಾಗಿತ್ತು. ಆದರೆ ಈಗ ಅದು ಮಹಾರಾಷ್ಟ್ರದ ಪ್ರಗತಿಯ ಮುಂಚೂಣಿಯಲ್ಲಿದೆ.

ಸೌಜನ್ಯ : ‘ದೇಶಕಾಲ’ ತ್ರೈಮಾಸಿಕ ಪತ್ರಿಕೆ, ಬೆಂಗಳೂರು.

ಇದನ್ನೂ ಓದಿ : Kuvempu Birthday : ಅಭಿಜ್ಞಾನ ; ‘ಮನೆಯಲ್ಲಂತೂ ದನಗಳಿಲ್ಲ, ನಮ್ಮನ್ನು ದನ ಕಾಯಲು ಎಲ್ಲಿಗೆ ಕಳಿಸುತ್ತೀರಿ ಎಂದು ಕೇಳೇಬಿಟ್ಟೆವು’

Published On - 8:20 am, Thu, 30 December 21

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್