Mahakaleshwar Temple: ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಭಕ್ತರ ನಡುವೆ ಹೊಡೆದಾಟದ ವಿಡಿಯೊ ವೈರಲ್

Mahakaleshwar Temple Fight Video: ಭಕ್ತರ ನಡುವಿನ ಜಗಳದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆದರೆ, ಅವರ್ಯಾರೂ ದೂರು ದಾಖಲಿಸಿಕೊಂಡಿಲ್ಲ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Mahakaleshwar Temple: ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಭಕ್ತರ ನಡುವೆ ಹೊಡೆದಾಟದ ವಿಡಿಯೊ ವೈರಲ್
ಮಹಾಕಾಳೇಶ್ವರ ದೇವಸ್ಥಾನದಲ್ಲಿ ಜಗಳ
Follow us
TV9 Web
| Updated By: Digi Tech Desk

Updated on:Jan 27, 2023 | 1:52 PM

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯ (Ujjain) ಮಹಾಕಾಳೇಶ್ವರ ದೇವಸ್ಥಾನದಲ್ಲಿ (Mahakaleshwar Temple) ಈ ವಾರದ ಆರಂಭದಲ್ಲಿ ಎರಡು ಗುಂಪುಗಳ ಭಕ್ತರ ನಡುವೆ ಮಾರಾಮಾರಿ ನಡೆದಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರ ಪ್ರಕಾರ, ಇ-ರಿಕ್ಷಾದಲ್ಲಿ ಯಾರು ಹೋಗುತ್ತಾರೆ ಎಂಬ ಬಗ್ಗೆ ಭಕ್ತರ ನಡುವೆ ಜಗಳ ನಡೆದು, ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ.ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ, ಭಯಭೀತರಾದ ಪ್ರೇಕ್ಷಕರು ಪರಸ್ಪರ ಹೊಡೆಯುವುದು ಮತ್ತು ಗುದ್ದುತ್ತಿರುವುದು ಕಾಣುತ್ತದೆ.

ಕೆಲವು ವ್ಯಕ್ತಿಗಳು ಈ ಹೊಡೆದಾಟವನ್ನು ನಿಯಂತ್ರಿಸಲು ಒದ್ದಾಡುತ್ತಿರುವುದನ್ನೂ ಕಾಣಬಹುದು.

“ಭಕ್ತರ ನಡುವಿನ ಜಗಳದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆದರೆ, ಅವರ್ಯಾರೂ ದೂರು ದಾಖಲಿಸಿಕೊಂಡಿಲ್ಲ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:37 pm, Fri, 27 January 23