‘ನಾನು ಇನ್ನೂ ಶಾಕ್ನಲ್ಲಿದ್ದೇನೆ’: ಬೆಳಿಗ್ಗೆ 4 ಗಂಟೆಗೆ ಸೇವೆ ನೀಡಿ ಚಿಕ್ಕಮ್ಮನ ಜೀವನ ಕಾಪಾಡಿದ ಬ್ಲಿಂಕಿಟ್ ಆಂಬ್ಯುಲೆನ್ಸ್
ಬ್ಲಿಂಕಿಟ್ ದಿನಸಿ ಸೇವೆ ಮಾತ್ರವಲ್ಲದೆ, ಇದೀಗ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಿದೆ. ಮುಂಬೈನ ಪ್ರಾಚಿ, ಆಪ್ ಮೂಲಕ ದೆಹಲಿಯಲ್ಲಿದ್ದ ತನ್ನ ಚಿಕ್ಕಮ್ಮನ ಆರೋಗ್ಯದ ಪರಿಸ್ಥಿತಿಗೆ ಬ್ಲಿಂಕಿಟ್ ಆಂಬ್ಯುಲೆನ್ಸ್ ಸಹಾಯ ಮಾಡಿದೆ. ಇದರಿಂದ ಚಿಕ್ಕಮ್ಮನ ಜೀವ ಉಳಿದಿದೆ. ಈ ಸೇವೆ ಸಂಪೂರ್ಣ ಉಚಿತವಾಗಿದ್ದು, ಗುರಗಾಂವ್‌ನಿಂದ ಪ್ರಾರಂಭವಾಗಿ ದೆಹಲಿ ಸೇರಿದಂತೆ ಇತರ ನಗರಗಳಿಗೂ ವಿಸ್ತರಿಸಿದೆ. ಇದು 10 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಒದಗಿಸುವ ಗುರಿ ಹೊಂದಿದೆ.

ಮುಂಬೈ, ಫೆ.6: ಬ್ಲಿಂಕಿಟ್ ಆಹಾರ ಧ್ಯಾನಗಳನ್ನು ಮಾತ್ರವಲ್ಲದೆ, ಇದೀಗ ಆಂಬ್ಯುಲೆನ್ಸ್ ಸೇವೆಯನ್ನು ಕೂಡ ಆರಂಭಿಸಿದೆ. ಇದರಿಂದ ಅನೇಕರಿಗೆ ತುಂಬಾ ಸಹಾಯ ಕೂಡ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಗ್ಗಾಗೆ ಕೆಲವೊಂದು ಪೋಸ್ಟ್ಗಳು ವೈರಲ್ ಆಗುತ್ತ ಇರುತ್ತದೆ. ಇದೀಗ ಮತ್ತೊಂದು ವಿಚಾರವಾಗಿ ಬ್ಲಿಂಕಿಟ್ ಆಂಬ್ಯುಲೆನ್ಸ್ ಸೇವೆ ಸದ್ದು ಮಾಡಿದೆ. ಈ ಬಗ್ಗೆ ಮುಂಬೈನ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂಬೈ ಮೂಲದ ಪ್ರಾಚಿ (Prachi) ಎಂಬ ಮಹಿಳೆ ದೆಹಲಿಯಲ್ಲಿದ್ದ ತನ್ನ ಕುಟುಂಬಕ್ಕೆ ಬ್ಲಿಂಕಿಟ್ ಆಂಬ್ಯುಲೆನ್ಸ್ ಹೇಗೆ ಸಹಾಯವಾಗಿದೆ ಎಂಬುದನ್ನು ವಿವರಿಸಿದ್ದಾರೆ. ಬೆಳಗಿನ ಜಾವ 4 ಗಂಟೆಗೆ ಮುಂಬೈನಲ್ಲಿದ್ದ ಪ್ರಾಚಿಗೆ ದೆಹಲಿಯಿಂದ ಪೋಷಕರು ಕರೆ ಮಾಡುತ್ತಾರೆ.
ಚಿಕ್ಕಮ್ಮನಿಗೆ ಹಠಾತ್ತಾಗಿ ಫಿಟ್ಸ್ ಬಂದಿದೆ ಎಂದು ಗಾಬರಿಯಲ್ಲಿ ಫೋನ್ ಮಾಡಿದ್ದಾರೆ. ಆ ಸಮಯದಲ್ಲಿ ಯಾವುದೇ ಕ್ಯಾಬ್‌ಗಳು ಸಿಕ್ಕಿಲ್ಲ. ಕೊನೆಗೂ ಒಂದು ಕ್ಯಾಬ್ ಬುಕ್ ಆಯಿತು. ಆದರೆ ಅದು ಮಧ್ಯೆದಲ್ಲಿ ಕೈಕೊಟ್ಟಿದೆ. ಗಾಮ್ಯ ಸ್ಥಾನ ತುಂಬಾ ದೂರು ಇದೆ ಎಂದು ಕ್ಯಾನಲ್ಸ್ ಮಾಡಿದ್ದಾನೆ. ಇದರಿಂದ ಕುಟುಂಬದವರು ತೀವ್ರ ಆತಂಕಗೊಂಡಿದರು. ಪ್ರಾಚಿ ತನ್ನ ಪತಿಯ ಸಲಹೆಯಂತೆ ಬ್ಲಿಂಕಿಟ್ ಆಪ್ ತೆರೆದಾಗ ಅದರಲ್ಲಿ ‘ಆಂಬುಲೆನ್ಸ್’ ಬುಕಿಂಗ್ ಆಯ್ಕೆ ಮಾಡಿದ್ದಾರೆ. ಮುಂಬೈನಲ್ಲಿ ಕುಳಿತು ದೆಹಲಿಗೆ ಆಂಬುಲೆನ್ಸ್ ಬುಕ್ ಮಾಡಿದ್ದಾರೆ.
ಇದನ್ನೂ ಓದಿ: ಪ್ರೀತಿಗೆ ಒಪ್ಪಿಲ್ಲವೆಂದು ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ಪಿಯುಸಿ ವಿದ್ಯಾರ್ಥಿ; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ
ಇಲ್ಲಿದೆ ನೋಡಿ ವಿಡಿಯೋ:
View this post on Instagram
ಬುಕ್ ಮಾಡಿದ ಕೆಲವೇ ನಿಮಿಷಗಳಲ್ಲಿ ಬ್ಲಿಂಕಿಟ್‌ನಿಂದ ಕರೆ ಬರುತ್ತದೆ. ತಕ್ಷಣ ಮನೆಗೆ ತಲುಪಿ ಚಿಕ್ಕಮ್ಮನನ್ನು ಆಸ್ಪತ್ರೆಗೆ ಸಾಗಿಸುತ್ತಾರೆ. ಪ್ರಾಚಿ ಇಷ್ಟೆಲ್ಲಾ ತುರ್ತು ಸಂದರ್ಭದಲ್ಲಿ ಸಹಾಯ ಮಾಡಿದಕ್ಕೆ, ಹಣ ನೀಡಿದ್ದಾರೆ. ಆದರೆ ಬ್ಲಿಂಕಿಟ್ ಈ ಸೇವೆಯನ್ನು ಸಂಪೂರ್ಣ ಉಚಿತ ಎಂದು ಹೇಳಿದೆ. ಇದರಿಂದ ಪ್ರಾಚಿ ತುಂಬಾ ಆಶ್ಚರ್ಯ ಪಟ್ಟಿದ್ದಾರೆ. ಪ್ರಾಚಿ ಅವರು ಮುಂಬೈನಲ್ಲಿದ್ದರೂ ಆ್ಯಪ್ ಮೂಲಕ ದೆಹಲಿಯಲ್ಲಿದ್ದ ತನ್ನ ಕುಟುಂಬಕ್ಕೆ ಆ ಸಂಕಷ್ಟದ ಸಮಯದಲ್ಲಿ ನೆರವಾಗಲು ಸಾಧ್ಯವಾಯಿತು ಎಂದು ಬರೆದುಕೊಂಡಿದ್ದಾರೆ. ಬ್ಲಿಂಕಿಟ್ ಕಳೆದ ವರ್ಷದ ಜನವರಿಯಲ್ಲಿ ಗುರಗಾಂವ್‌ನಲ್ಲಿ ಈ ಸೇವೆಯನ್ನು ಪ್ರಾರಂಭಿಸಿತ್ತು. ಈಗ ಅದು ದೆಹಲಿ ಸೇರಿದಂತೆ ಇತರ ನಗರಗಳಿಗೂ ವ್ಯಾಪಿಸಿದೆ. ಕೇವಲ 10 ನಿಮಿಷಗಳಲ್ಲಿ ಆಂಬುಲೆನ್ಸ್ ಒದಗಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ. ಕೇವಲ ದಿನಸಿ ವಸ್ತುಗಳನ್ನು (Groceries) ತಲುಪಿಸುವ ಆಪ್ ಎಂದು ನಾವು ಅಂದುಕೊಂಡಿದ್ದ ಬ್ಲಿಂಕಿಟ್, ಇಂತಹ ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸುವ ಕೆಲಸ ಮಾಡುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Fri, 6 February 26
