AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಕ್ಸ್ ಔತಣಕೂಟ ರಾಜಕೀಯ ಸಂಘರ್ಷ: ಆಹ್ವಾನವಿದ್ದರೂ ಮೋದಿ ಡಿನ್ನರ್ ತಪ್ಪಿಸಿಕೊಂಡ ಕಾಂಗ್ರೆಸ್ ಸಿಎಂಗಳು

ಭಾರತದ ಅಧ್ಯಕ್ಷತೆಯಲ್ಲಿ ನಡೆದ ಬ್ರಿಕ್ಸ್ ಔತಣಕೂಟ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಆಹ್ವಾನವಿದ್ದರೂ ತೆಲಂಗಾಣ, ಕರ್ನಾಟಕ, ಕೇರಳದ ಕಾಂಗ್ರೆಸ್ ಸಿಎಂಗಳು ಗೈರಾಗಿದ್ದಾರೆ. ವಿಪಕ್ಷ ನಾಯಕರನ್ನು ಆಹ್ವಾನಿಸಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದರೆ, ಸರ್ಕಾರ ಆಹ್ವಾನಿಸಿದ್ದರೂ ಅವರೇ ದೂರ ಉಳಿದಿದ್ದಾರೆ ಎಂದಿದೆ. ಕೇಂದ್ರ ಸರ್ಕಾರದ ರಾಜತಾಂತ್ರಿಕ ಕಾರ್ಯಕ್ರಮದಿಂದ ವಿರೋಧ ಪಕ್ಷಗಳು ದೂರ ಉಳಿದಿರುವುದು ದುರದೃಷ್ಟಕರ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಘಟನೆ ಫೆಡರಲಿಸಂ ಕುರಿತು ಚರ್ಚೆಗೆ ಕಾರಣವಾಗಿದೆ.

ಬ್ರಿಕ್ಸ್ ಔತಣಕೂಟ ರಾಜಕೀಯ ಸಂಘರ್ಷ: ಆಹ್ವಾನವಿದ್ದರೂ ಮೋದಿ ಡಿನ್ನರ್ ತಪ್ಪಿಸಿಕೊಂಡ ಕಾಂಗ್ರೆಸ್ ಸಿಎಂಗಳು
ನರೇಂದ್ರ ಮೋದಿImage Credit source: PTI
ನಯನಾ ರಾಜೀವ್
|

Updated on: Sep 15, 2026 | 1:42 PM

Share

ನವದೆಹಲಿ, ಸೆಪ್ಟೆಂಬರ್ 15: ಭಾರತದ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ವಿದೇಶಿ ನಾಯಕರ ಗೌರವಾರ್ಥ ಕೇಂದ್ರ ಸರ್ಕಾರ ಏರ್ಪಡಿಸಿದ್ದ ಭವ್ಯ ಔತಣಕೂಟದ ಸುತ್ತ ರಾಜಕೀಯ ವಿವಾದ ಭುಗಿಲೆದ್ದಿದೆ. ಈ ಕೂಟದಲ್ಲಿ ಕೇವಲ ಎನ್‌ಡಿಎ ಮತ್ತು ಬಿಜೆಪಿ ಮಿತ್ರಪಕ್ಷಗಳ ಮುಖ್ಯಮಂತ್ರಿಗಳೇ ಹೆಚ್ಚಾಗಿ ಕಾಣಿಸಿಕೊಂಡಿದ್ದರಿಂದ, ಇದು ಕೇವಲ ಆಡಳಿತ ಪಕ್ಷದ ಕಾರ್ಯಕ್ರಮದಂತೆ ಬಿಂಬಿತವಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಆದರೆ, ಈ ಆರೋಪಗಳನ್ನು ಸಾರಾಸಾಗಟಾಗಿ ತಳ್ಳಿಹಾಕಿರುವ ಅಧಿಕೃತ ಮೂಲಗಳು, ವಿಪಕ್ಷಗಳ ಸಿಎಂಗಳಿಗೂ ಅಧಿಕೃತ ಆಹ್ವಾನ ನೀಡಲಾಗಿತ್ತು, ಆದರೆ ಅವರೇ ದೂರ ಉಳಿದಿದ್ದಾರೆ ಎಂದು ಸ್ಪಷ್ಟಪಡಿಸಿವೆ.

ಆಹ್ವಾನವಿದ್ದರೂ ಗೈರಾದ ಮುಖ್ಯಮಂತ್ರಿಗಳು: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಸೆಪ್ಟೆಂಬರ್ 12 ರಂದು ಔತಣಕೂಟದ ಆಹ್ವಾನವನ್ನು ಸ್ವೀಕರಿಸಿದ್ದರೂ, ಕೊನೆ ಕ್ಷಣದಲ್ಲಿ ಅನಿವಾರ್ಯ ಕಾರಣಗಳನ್ನು ನೀಡಿ ಗೈರಾಗುವುದಾಗಿ ತಿಳಿಸಿದರು. ಇವರೊಂದಿಗೆ ಕರ್ನಾಟಕ ಹಾಗೂ ಕೇರಳದ ಕಾಂಗ್ರೆಸ್ ಸಿಎಂ ವಿಡಿ ಸತೀಶನ್ ಭೋಜನಕೂಟದಿಂದ ಅಂತರ ಕಾಯ್ದುಕೊಂಡರು.

ತಮಿಳುನಾಡು ಸಿಎಂ ವಿದೇಶ ಪ್ರವಾಸ: ತಮಿಳುನಾಡು ಮುಖ್ಯಮಂತ್ರಿ ವಿಜಯ್​ಗೆ ಆಹ್ವಾನವಿದ್ದರೂ ಅವರು ವಿದೇಶ ಪ್ರವಾಸದಲ್ಲಿದ್ದ ಕಾರಣ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.

ಮತ್ತಷ್ಟು ಓದಿ: ಶೇ.80ರಷ್ಟು ಭಾರತೀಯರು ಮಾಂಸಾಹಾರಿಗಳು: ಬ್ರಿಕ್ಸ್ ಡಿನ್ನರ್ ಬೆನ್ನಲ್ಲೇ ‘ಫುಡ್ ವಾರ್’ ಶುರುಮಾಡಿದ ರಾಹುಲ್ ಗಾಂಧಿ

ಖರ್ಗೆ, ರಾಹುಲ್‌ಗೆ ಆಹ್ವಾನವಿಲ್ಲದ್ದಕ್ಕೆ ಕಿಡಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ರಾಜ್ಯ ಔತಣಕೂಟಕ್ಕೆ ಆಹ್ವಾನ ನೀಡದಿರುವುದನ್ನು ಕಾಂಗ್ರೆಸ್ ಬಲವಾಗಿ ಆಕ್ಷೇಪಿಸಿದ್ದು, ಕೇಂದ್ರ ಸರ್ಕಾರದ ರಾಜತಾಂತ್ರಿಕ ಧೋರಣೆಯನ್ನು ಪ್ರಶ್ನಿಸಿದೆ.

ಸರ್ಕಾರದ ಸ್ಪಷ್ಟನೆ: ಭಾರತದ ವಿವಿಧ ನಗರಗಳಲ್ಲಿ ಬ್ರಿಕ್ಸ್ ಸಭೆಗಳು ನಡೆದಿರುವುದರಿಂದ ಎಲ್ಲಾ ರಾಜ್ಯಗಳ ಸಿಎಂಗಳನ್ನು ಆಹ್ವಾನಿಸಲಾಗಿತ್ತು. ಆದರೆ ರಾಷ್ಟ್ರೀಯ ಮಹತ್ವದ ಜಾಗತಿಕ ರಾಜತಾಂತ್ರಿಕ ಕಾರ್ಯಕ್ರಮದಿಂದ ವಿರೋಧ ಪಕ್ಷಗಳ ಮುಖಂಡರು ದೂರ ಉಳಿದಿರುವುದು ತೀವ್ರ ದುರದೃಷ್ಟಕರ ಎಂದು ಸರ್ಕಾರದ ಮೂಲಗಳು ಬೇಸರ ವ್ಯಕ್ತಪಡಿಸಿವೆ.

ಫೆಡರಲಿಸಂ ಮತ್ತು ಜಾಗತಿಕ ಸಮಾರಂಭ: ಜಾಗತಿಕ ವೇದಿಕೆಗಳಲ್ಲಿ ಭಾರತದ ಸಾಂಸ್ಕೃತಿಕ ಹಾಗೂ ಆಡಳಿತಾತ್ಮಕ ಒಗ್ಗಟ್ಟನ್ನು ಪ್ರದರ್ಶಿಸಲು ಎಲ್ಲಾ ರಾಜ್ಯಗಳ ನಾಯಕರನ್ನು ಒಟ್ಟಿಗೆ ಕರೆದೊಯ್ಯುವ ಪರಿಕಲ್ಪನೆಯೊಂದಿಗೆ ಈ ಆಹ್ವಾನ ನೀಡಲಾಗಿತ್ತು.

ಪರಸ್ಪರ ಆರೋಪ-ಪ್ರತ್ಯಾರೋಪ: ಆಹ್ವಾನ ನೀಡಿದಾಗ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಕಾಂಗ್ರೆಸ್ ನಾಯಕರು ಉದ್ದೇಶಪೂರ್ವಕವಾಗಿ ಬಹಿಷ್ಕರಿಸುತ್ತಾರೆ ಎಂದು ಬಿಜೆಪಿ ಈ ಹಿಂದೆ ಹಲವು ಬಾರಿ ಆರೋಪಿಸಿತ್ತು. ಪ್ರಸ್ತುತ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲೂ ಈ ಆಂತರಿಕ ರಾಜಕೀಯ ಭಿನ್ನಾಭಿಪ್ರಾಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us