ರಾಷ್ಟ್ರಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬಹುದೇ?; ಭಾರತದ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ
ಭಾರತೀಯ ಸಂವಿಧಾನದ ಪ್ರಕಾರ, ರಾಷ್ಟ್ರಪತಿಯನ್ನು ರಾಜ್ಯಸಭೆ ಮತ್ತು ಲೋಕಸಭೆಯ ಸದಸ್ಯರು ಆಯ್ಕೆ ಮಾಡುತ್ತಾರೆ. ಚುನಾಯಿತ ವ್ಯಕ್ತಿ ದೇಶದ ಅತ್ಯುನ್ನತ ಸಾಂವಿಧಾನಿಕ ಸ್ಥಾನವನ್ನು ಹೊಂದಿರುತ್ತಾರೆ. ಆದರೆ, ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಬಹುದೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ನವದೆಹಲಿ: ಭಾರತದ ರಾಷ್ಟ್ರಪತಿಗಳಿಗೆ ಸಂವಿಧಾನದಲ್ಲಿ ವಿಶೇಷ ಪಾತ್ರವನ್ನು ನೀಡಲಾಗಿದೆ. ಭಾರತೀಯ ಪ್ರಜಾಪ್ರಭುತ್ವದ ಸಾಂವಿಧಾನಿಕ ರಕ್ಷಕ ಮತ್ತು ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಸಂವಿಧಾನವನ್ನು ರಕ್ಷಿಸುವುದು ರಾಷ್ಟ್ರಪತಿಗಳ ಕೆಲಸ. ಆದರೆ, ಭಾರತದ ರಾಷ್ಟ್ರಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಬಹುದೇ? ಎಂಬ ಕುರಿತು ವಿವರವಾದ ಮಾಹಿತಿ ಇಲ್ಲಿದೆ.
ಭಾರತೀಯ ಸಂವಿಧಾನದ ಪ್ರಕಾರ, ರಾಷ್ಟ್ರಪತಿಯನ್ನು ರಾಜ್ಯಸಭೆ ಮತ್ತು ಲೋಕಸಭೆಯ ಸದಸ್ಯರು ಆಯ್ಕೆ ಮಾಡುತ್ತಾರೆ. ಚುನಾಯಿತ ವ್ಯಕ್ತಿ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುತ್ತಾರೆ. ಆದರೆ, ರಾಷ್ಟ್ರಪತಿಗಳ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಬಹುದೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಹಾಗಾಗಿ, ರಾಷ್ಟ್ರಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿಲ್ಲ ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ರಾಷ್ಟ್ರಪತಿಯ ಅಧಿಕಾರದ ಅವಧಿಯು 5 ವರ್ಷ. ಅವರ ಅವಧಿ ಮುಗಿಯುವ ಮೊದಲು ಅವರನ್ನು ರಾಷ್ಟ್ರಪತಿ ಹುದ್ದೆಯಿಂದ ಕೆಳಗೆ ಇಳಿಸಬೇಕಾದರೆ ಅದಕ್ಕೆ ವಿಶೇಷ ಪ್ರಕ್ರಿಯೆ ಇರುತ್ತದೆ.
ಇದನ್ನೂ ಓದಿ: ಕೇರಳದ ಸೀರೆ ತೊಟ್ಟು, ಸಂವಿಧಾನದ ಪುಸ್ತಕ ಹಿಡಿದು ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣವಚನ
ರಾಷ್ಟ್ರಪತಿಯನ್ನು ಅಧಿಕಾರದಿಂದ ಕೆಳಗಿಳಿಸುವುದು ಹೇಗೆ?:
ಭಾರತದ ಸಂವಿಧಾನವು ರಾಷ್ಟ್ರಪತಿಯನ್ನು ತೆಗೆದುಹಾಕಲು ಅವಿಶ್ವಾಸ ನಿರ್ಣಯಕ್ಕೆ ಅವಕಾಶ ನೀಡುವುದಿಲ್ಲ. ಆದರೆ ರಾಷ್ಟ್ರಪತಿಯ ವಿರುದ್ಧ ಅಶಿಸ್ತು, ಅಪರಾಧ ಅಥವಾ ಇತರ ಗಂಭೀರ ಆರೋಪಗಳಿದ್ದರೆ ಅವರನ್ನು ದೋಷಾರೋಪಣೆಯ ಮೂಲಕ ಮಾತ್ರ ಅಧಿಕಾರದಿಂದ ತೆಗೆದುಹಾಕಬಹುದು. ರಾಷ್ಟ್ರಪತಿಯ ವಿರುದ್ಧದ ದೋಷಾರೋಪಣೆ ಪ್ರಕ್ರಿಯೆಯನ್ನು ಸಂಸತ್ತು ನಿರ್ಧರಿಸುತ್ತದೆ. ಈ ಪ್ರಕ್ರಿಯೆಯು ತುಂಬಾ ಕಷ್ಟಕರವಾದುದಾಗಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ 6 ವರ್ಷಗಳ ಬಳಿಕ ರಾಷ್ಟ್ರಪತಿ ಆಡಳಿತ ಅಂತ್ಯ, ಸರ್ಕಾರ ರಚನೆಗೆ ಸಿದ್ಧತೆ
ಸಂವಿಧಾನದ 61ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತರಲು ಸಂಸತ್ತಿನ ಉಭಯ ಸದನಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ವಿಶೇಷ ಕಾರ್ಯವಿಧಾನವನ್ನು ಅನುಸರಿಸಬೇಕು. ಈ ಪ್ರಕ್ರಿಯೆಯಲ್ಲಿ ಮೊದಲನೆಯದಾಗಿ, ಒಬ್ಬ ಸಂಸದರು ರಾಷ್ಟ್ರಪತಿಯ ವಿರುದ್ಧ ದೋಷಾರೋಪಣೆಯನ್ನು ಮಂಡಿಸಬೇಕು. ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಕನಿಷ್ಠ 1/4 ಸದಸ್ಯರ ಬೆಂಬಲವನ್ನು ಈ ನಿರ್ಣಯವು ಪಡೆದರೆ, ಅದನ್ನು ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆಗೆ ತರಬಹುದು. ಈ ನಿರ್ಣಯವನ್ನು ಅಂಗೀಕರಿಸಲು, ಉಭಯ ಸದನಗಳಲ್ಲಿ 2/3 ಬಹುಮತದ ಅಗತ್ಯವಿದೆ. ಉಭಯ ಸದನಗಳಲ್ಲಿ ಅವಿಶ್ವಾಸ ನಿರ್ಣಯ ಅಂಗೀಕಾರವಾದರೆ ರಾಷ್ಟ್ರಪತಿಯನ್ನು ಹುದ್ದೆಯಿಂದ ವಜಾಗೊಳಿಸಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ