AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಉದ್ಯಮಿಯನ್ನು ಹೆಲ್ಮೆಟ್​​ನಿಂದ ಹೊಡೆದು ಕೊಂದ ಮೂವರು ಡೆಲಿವರಿ ಏಜೆಂಟ್​ಗಳು

ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಉದ್ಯಮಿ ಶಿವಂ ಗುಪ್ತಾ ಅವರನ್ನು ಮೂವರು ಡೆಲಿವರಿ ಏಜೆಂಟ್‌ಗಳು ಹೆಲ್ಮೆಟ್‌ನಿಂದ ಹೊಡೆದು ಕೊಂದಿದ್ದಾರೆ. ಜನವರಿ 3ರಂದು ನಡೆದ ಮಾರಣಾಂತಿಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿವಂ, ಜನವರಿ 19ರಂದು ಕೊನೆಯುಸಿರೆಳೆದರು. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮೂರನೇ ಆರೋಪಿಗಾಗಿ ಹುಡುಕಾಟ ನಡೆದಿದೆ. ಉದ್ಯಮಿಯ ಕುಟುಂಬ ನ್ಯಾಯಕ್ಕಾಗಿ ಆಗ್ರಹಿಸಿದೆ.

ದೆಹಲಿಯಲ್ಲಿ ಉದ್ಯಮಿಯನ್ನು ಹೆಲ್ಮೆಟ್​​ನಿಂದ ಹೊಡೆದು ಕೊಂದ ಮೂವರು ಡೆಲಿವರಿ ಏಜೆಂಟ್​ಗಳು
ಸಾಂದರ್ಭಿಕ ಚಿತ್ರ Image Credit source: NDTV
ನಯನಾ ರಾಜೀವ್
|

Updated on: Feb 04, 2026 | 7:51 AM

Share

ನವದೆಹಲಿ, ಫೆಬ್ರವರಿ 04: ರಾತ್ರಿ ಪಾರ್ಟಿಗೆಂದು ಹೋಗಿದ್ದ ಉದ್ಯಮಿಯೊಬ್ಬರನ್ನು ಮೂವರು ಡೆಲಿವರಿ ಏಜೆಂಟ್​​ಗಳು ಸೇರಿ ಹೆಲ್ಮೆಟ್​ನಿಂದ ಹೊಡೆದು ಕೊಲೆ(Murder)ಮಾಡಿರುವ ಘಟನೆ ದೆಹಲಿಯ ಕನ್ನಾಟ್ ಪ್ಲೇಸ್​​ನಲ್ಲಿ ನಡೆದಿದೆ. ಜನವರಿ 3 ರ ರಾತ್ರಿ ಈ ಘಟನೆ ನಡೆದಿದೆ. ಉದ್ಯಮಿ ಶಿವಂ ಗುಪ್ತಾ ಎರಡು ವಾರಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಜನವರಿ 19 ರಂದು ಅವರು ಕೊನೆಯುಸಿರೆಳೆದಿದ್ದಾರೆ.

ಪೊಲೀಸರು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಗುಪ್ತಾ ಅವರ ರಕ್ತದ ಕಲೆಗಳಿಂದ ಕೂಡಿದ ಬಟ್ಟೆಗಳನ್ನು ವಿಧಿವಿಜ್ಞಾನ ತಂಡ ತೆಗೆದುಕೊಂಡು ಹೋಗಿದ್ದಾರೆ. ಪ್ರಕರಣ ದಾಖಲಿಸಲಾಗಿದೆ. ಮೂವರು ದಾಳಿಕೋರರು ಗುಪ್ತಾಗೆ ಹೆಲ್ಮೆಟ್‌ಗಳಿಂದ ಗುದ್ದಿ, ಬಳಿಕ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅವರು ಜನಪ್ರಿಯ ಶಾಪಿಂಗ್ ಪ್ರದೇಶದ ಪಾದಚಾರಿ ಮಾರ್ಗದಲ್ಲಿ ರಕ್ತಸಿಕ್ತವಾಗಿ ಅವರನ್ನು ಬಿಟ್ಟು ಹೋಗಿದ್ದರು.

ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂರನೇ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ಜನವರಿ 3 ರಂದು ರಾತ್ರಿ, ಕನ್ನಾಟ್ ಪ್ಲೇಸ್‌ನ ಪಾದಚಾರಿ ಮಾರ್ಗದಲ್ಲಿ ವ್ಯಕ್ತಿಯೊಬ್ಬರು ಗಾಯಗೊಂಡ ಸ್ಥಿತಿಯಲ್ಲಿ ಬಿದ್ದಿರುವ ಕುರಿತು ಪೊಲೀಸ್ ತಂಡಕ್ಕೆ ಕರೆ ಬಂದಿತು. ಗುಪ್ತಾ ಗಂಭೀರ ಗಾಯಗಳಿಂದ ಬಳಲುತ್ತಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಪ್ತಾ ಅವರಿಗೆ ಹೊರಗಿನಿಂದ ಹೆಚ್ಚು ಗಾಯಗಳಾದಂತೆ ಕಾಣದಿದ್ದರೂ ತಲೆಯ ಒಳಗೆ ರಕ್ತಸ್ರಾವವಾಗಿರಬಹುದು ಎಂದು ಪೊಲೀಸರು ಕಂಡುಕೊಂಡರು, ಆದರೆ ಗುಪ್ತಾ ಅವರು ಯಾವುದೇ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ಈ ಕಾರಣದಿಂದಾಗಿ, ಕ್ರೂರ ಹಲ್ಲೆಯ ಹಿಂದಿನ ಕಾರಣವನ್ನು ತಕ್ಷಣವೇ ಕಂಡುಹಿಡಿಯಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಓದಿ: ಆಸ್ತಿಗಾಗಿ ಒಡಹುಟ್ಟಿದವನನ್ನೇ ಕೊಂದ ಪಾಪಿ: ಒಂದೂವರೆ ಎಕರೆ ಜಮೀನಿಗಾಗಿ ಹರಿದ ನೆತ್ತರು

ಜನವರಿ 4 ರಂದು ಗುಪ್ತಾ ಅವರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಮತ್ತು ಮರುದಿನ ಅವರಿಗೆ ಶಸ್ತ್ರಚಿಕಿತ್ಸೆ ನೀಡಲಾಯಿತು. ಆ ನಂತರ ಅವರು ಚೇತರಿಸಿಕೊಳ್ಳುತ್ತಾರೆ ಎಂದು ಅವರ ಕುಟುಂಬ ಸದಸ್ಯರು ಭಾವಿಸಿದ್ದರು, ಆದರೆ ಅವರು ಜನವರಿ 19 ರಂದು ನಿಧನರಾದರು. ದೆಹಲಿಯ ಪಹರ್‌ಗಂಜ್‌ನಲ್ಲಿ ಎರಡು ಅಂಗಡಿಗಳನ್ನು ನಡೆಸುತ್ತಿರುವ ಶಿವಂ ಅವರ ತಂದೆ ಅನಿಲ್ ಕಾಂತ್ ಗುಪ್ತಾ, ತಮ್ಮ ಮಗನನ್ನು ಕೊಂದ ಸವಾರರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ಅನಿಲ್ ಕಾಂತ್ ಅವರ ಮಗ ಜನವರಿ 2 ರಂದು ಸಂಜೆ ಪಾರ್ಟಿಯಲ್ಲಿ ಭಾಗವಹಿಸುವುದಾಗಿ ಹೇಳಿ ಲಕ್ಷ್ಮಿ ನಗರದಿಂದ ಹೊರಟು ಹೋಗಿದ್ದರು. ನಾನು ಪದೇ ಪದೇ ಕರೆ ಮಾಡುತ್ತಲೇ ಇದ್ದೆ, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಸ್ವಲ್ಪ ಸಮಯದ ನಂತರ, ನನ್ನ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರಿಂದ ನನಗೆ ಕರೆ ಬಂತು ಎಂದು ಉದ್ಯಮಿಯ ತಂದೆ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ