ಡಿಕ್ಲರೇಷನ್ಗೆ ಸಹಿ ಹಾಕಿ ಅಥವಾ ದೇಶದ ಕ್ಷಮೆ ಕೇಳಿ; ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ಸೂಚನೆ
ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಮತಗಳ್ಳತನ ನಡೆದಿದೆ, ಅಕ್ರಮ ಮತದಾನ ನಡೆದಿದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ ಈ ಬಗ್ಗೆ ಸುದ್ದಿಗೋಷ್ಠಿಯನ್ನೂ ನಡೆಸಿದ್ದರು. ಈ ಬಗ್ಗೆ ಸಾಕ್ಷಿಗಳನ್ನು ಕೇಳಿರುವ ಚುನಾವಣಾ ಆಯೋಗ ಅವರ ಆರೋಪಗಳನ್ನು ಬೆಂಬಲಿಸಲು ಡಿಕ್ಲರೇಷನ್ (ಘೋಷಣೆ)ಗೆ ಸಹಿ ಹಾಕುವಂತೆ ಸೂಚಿಸಿದೆ. ಅಥವಾ ತಾವು ಮಾಡಿದ 'ಸುಳ್ಳು' ಆರೋಪಗಳಿಗೆ ದೇಶಕ್ಕೆ ಕ್ಷಮೆಯಾಚಿಸಬೇಕು ಎಂದು ಚುನಾವಣಾ ಆಯೋಗ ಎರಡು ಆಯ್ಕೆಗಳನ್ನು ನೀಡಿದೆ.

ನವದೆಹಲಿ, ಆಗಸ್ಟ್ 9: ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನ ಹಾಗೂ ಅಕ್ರಮ ಮತದಾನದ ಆರೋಪ ಮಾಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಚುನಾವಣಾ ಆಯೋಗವು ಇಂದು ಮತ್ತೊಮ್ಮೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದು, ನಿಮ್ಮ ಹೇಳಿಕೆಯನ್ನು ಬೆಂಬಲಿಸಲು ಘೋಷಣೆಗೆ ಸಹಿ ಹಾಕಿ ಅಥವಾ “ನಕಲಿ” ಆರೋಪಗಳನ್ನು ಮಾಡಿದ್ದಕ್ಕಾಗಿ ದೇಶದ ಜನರ ಕ್ಷಮೆಯಾಚಿಸಿ ಎಂದು ಸೂಚಿಸಿದ್ದಾರೆ. ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಲ್ಲಿ ನಡೆದ ಮತ ಕಳ್ಳತನದ ಆರೋಪದ ಬಗ್ಗೆ ರಾಹುಲ್ ಗಾಂಧಿ ಮತ್ತು ಚುನಾವಣಾ ಆಯೋಗ ವಾಗ್ವಾದ ನಡೆದ ಒಂದು ದಿನದ ನಂತರ ಚುನಾವಣಾ ಪ್ರಾಧಿಕಾರದ ಅಧಿಕಾರಿಗಳು ಮತ್ತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಹಿ ಮಾಡಿದ ಘೋಷಣೆಯನ್ನು ನೀಡುವ ಮೂಲಕ ಅವರ ಆರೋಪವನ್ನು ದೃಢೀಕರಿಸಲು ಒತ್ತಾಯಿಸಿದ್ದಾರೆ.
“ರಾಹುಲ್ ಗಾಂಧಿ ನಿಯಮಗಳ ಪ್ರಕಾರ ಘೋಷಣೆ ಮಾಡಬೇಕು ಅಥವಾ ತಮ್ಮ ಸುಳ್ಳು ಆರೋಪಗಳಿಗೆ ದೇಶಕ್ಕೆ ಕ್ಷಮೆಯಾಚಿಸಬೇಕು” ಎಂದು ಚುನಾವಣಾ ಆಯೋಗ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಮತಗಟ್ಟೆಗಳ ದೃಶ್ಯಾವಳಿ ನೀಡಿದ್ರೆ ಮತಗಳ್ಳತನ ಸಾಬೀತು ಮಾಡುವೆ: ಚುನಾವಣೆ ಆಯೋಗಕ್ಕೆ ರಾಹುಲ್ ಸವಾಲ್
ಆಗಸ್ಟ್ 7ರಂದು ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಠಿಯ ನಂತರ ಹಲವು ಬೆಳವಣಿಗೆಗಳು ನಡೆದವು. ರಾಹುಲ್ ಅವರು 2024ರ ಲೋಕಸಭಾ ಚುನಾವಣೆಯನ್ನು ಬಿಜೆಪಿಗೆ ಲಾಭವಾಗುವಂತೆ ಚುನಾವಣಾ ಆಯೋಗವು ಅಕ್ರಮ ಮತದಾನಕ್ಕೆ ಸಹಾಯ ಮಾಡಿದೆ ಎಂದು ಆರೋಪಿಸಿದ್ದರು. ಅಕ್ಕೆ ಬೇಕಾದ ಕೆಲವು ದಾಖಲೆಗಳನ್ನೂ ನೀಡಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಆದರೆ, ಆ ಸಾಕ್ಷಿಗಳು ಸಾಕಾಗುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿತ್ತು.
Election Commission of India has once again said sternly: “Rahul Gandhi should either give a Declaration as per rules or apologise to the country for his false allegations.” pic.twitter.com/obOrHMMGiI
— ANI (@ANI) August 9, 2025
ಕಾಂಗ್ರೆಸ್ ಪಕ್ಷದ ಆಂತರಿಕ ವಿಶ್ಲೇಷಣೆಯನ್ನು ಉಲ್ಲೇಖಿಸಿದ್ದ ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಕಾಂಗ್ರೆಸ್ 16 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿತ್ತು, ಆದರೆ ಕೇವಲ 9 ಸ್ಥಾನಗಳನ್ನು ಗೆದ್ದಿತು. ಕಾಂಗ್ರೆಸ್ 7 ಅನಿರೀಕ್ಷಿತ ಸೋಲುಗಳನ್ನು ತನಿಖೆ ಮಾಡಿದೆ. ಮಹದೇವಪುರದಲ್ಲಿ 1,00,250 ಮತಗಳನ್ನು ಒಳಗೊಂಡ ಮತ ಕಳ್ಳತನ ನಡೆದಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಮತಗಳ್ಳತನ: ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಲು ಮುಂದಾದ ಬಿಜೆಪಿ
“ರಾಹುಲ್ ಗಾಂಧಿ ತಮ್ಮ ಪಕ್ಷದ ವಿಶ್ಲೇಷಣೆಯನ್ನು ನಂಬಿದರೆ ಮತ್ತು ಇಸಿಐ ವಿರುದ್ಧದ ಅವರ ಆರೋಪಗಳು ನಿಜವೆಂದು ನಂಬಿದರೆ ಡಿಕ್ಲರೇಷನ್ಗೆ ಸಹಿ ಹಾಕಬೇಕು. ಅಫಿಡವಿಟ್‌ಗಳಿಗೆ ಸಹಿ ಹಾಕದಿದ್ದರೆ ಅವರು ದೇಶದ ಕ್ಷಮೆಯಾಚಿಸಬೇಕು” ಎಂದು ಇಸಿಐ ರಾಹುಲ್ ಗಾಂಧಿಗೆ ಸೂಚಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:33 pm, Sat, 9 August 25
