ಹೈದರಾಬಾದ್ ವಿದ್ಯಾರ್ಥಿಗಳಿಂದ ‘ಕಾಶ್ಮೀರ್ ಫೈಲ್ಸ್’ ವೀಕ್ಷಣೆ; ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ ಫೋಟೊ ಬಿಬಿಸಿ ಸಾಕ್ಷ್ಯಚಿತ್ರ ವೀಕ್ಷಿಸುತ್ತಿರುವ ವಿದ್ಯಾರ್ಥಿಗಳದ್ದು

Fact Check ವೈರಲ್ ಫೋಟೊ SFI ಸಂಘಟನೆ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಿದಾಗ ತೆಗೆದ ಫೋಟೊ ಆಗಿದೆ. ಈ ವೈರವ್ ಫೋಟೊವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ SFI ಯ HCU ಘಟಕದ ಟ್ವೀಟ್​​ನಲ್ಲಿ ಈ ಫೋಟೊ ಇದೆ

ಹೈದರಾಬಾದ್ ವಿದ್ಯಾರ್ಥಿಗಳಿಂದ 'ಕಾಶ್ಮೀರ್ ಫೈಲ್ಸ್' ವೀಕ್ಷಣೆ; ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ ಫೋಟೊ ಬಿಬಿಸಿ ಸಾಕ್ಷ್ಯಚಿತ್ರ ವೀಕ್ಷಿಸುತ್ತಿರುವ ವಿದ್ಯಾರ್ಥಿಗಳದ್ದು
ಹೈದರಾಬಾದ್ ವಿವಿ ವಿದ್ಯಾರ್ಥಿಗಳು ಕಾಶ್ಮೀರ್ ಫೈಲ್ಸ್ ವೀಕ್ಷಿಸುತ್ತಿರುವುದು ಎಂದು ಹೇಳಲಾದ ಟ್ವೀಟ್
Follow us
ರಶ್ಮಿ ಕಲ್ಲಕಟ್ಟ
|

Updated on:Feb 05, 2023 | 4:54 PM

ಹೈದರಾಬಾದ್‌ನ (Hyderabad) ಪ್ರಮುಖ ವಿಶ್ವವಿದ್ಯಾನಿಲಯದಲ್ಲಿ ಸಾಕ್ಷ್ಯ ಚಿತ್ರ ಪ್ರದರ್ಶನಕ್ಕೆ ನಿಷೇಧ, ಪ್ರತಿಭಟನೆ ನಡೆದಿತ್ತು, ವಿವಾದಾತ್ಮಕ ಬಿಬಿಸಿ (BBC documentary) ಸಾಕ್ಷ್ಯಚಿತ್ರ  ಇಂಡಿಯಾ: ದಿ ಮೋದಿ ಕ್ವೆಶ್ಚನ್ (India: The Modi Question) ಸಾಕ್ಷ್ಯಚಿತ್ರದ ಪ್ರದರ್ಶ ನಿಷೇಧದ ನಂತರ, ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ರಾಷ್ಟ್ರವ್ಯಾಪಿ ಪ್ರದರ್ಶನಕ್ಕೆ ಕರೆ ನೀಡಿತ್ತು. ಈ ವೇಳೆ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯವು ಕೂಡ ತನ್ನ ಕ್ಯಾಂಪಸ್‌ನಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸಿತ್ತು. ಗಣರಾಜ್ಯೋತ್ಸವದಂದು HCU ನಲ್ಲಿ BBC ಸಾಕ್ಷ್ಯಚಿತ್ರವನ್ನು ಎರಡನೇ ಬಾರಿ ಪ್ರದರ್ಶಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಕ್ಯಾಂಪಸ್‌ನಲ್ಲಿ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ “ದಿ ಕಾಶ್ಮೀರ್ ಫೈಲ್ಸ್” ಚಿತ್ರವನ್ನು ಪ್ರದರ್ಶಿಸಿತು. ಇದರ ಬೆನ್ನಲ್ಲೇ,HCU ನಲ್ಲಿ “ದಿ ಕಾಶ್ಮೀರ ಫೈಲ್ಸ್” ವೀಕ್ಷಿಸಿದ ಜನಸಮೂಹ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಕಿ ಮಾಧ್ಯಮದಲ್ಲಿ ಫೋಟೊ ವೈರಲ್ ಆಗಿದೆ. ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಪ್ರತಿಕ್ರಿಯೆಯಾಗಿ ಎಬಿವಿಪಿ ಕಾಶ್ಮೀರ ಫೈಲ್ಸ್ ತೋರಿಸುತ್ತದೆ. ಪಠಾಣ್‌ನ ಸ ವೀಕ್ಷಿಸಲು ಥಿಯೇಟರ್‌ನಲ್ಲಿರುವ ಜನರಿಗಿಂತ ಹೆಚ್ಚು ಯುವಕರು ಇಲ್ಲಿದ್ದಾರೆ ಎಂದು osintupdatee ಎಂಬ ಟ್ವಿಟರ್ ಹ್ಯಾಂಡಲ್ ಫೋಟೊವೊಂದನ್ನು ಟ್ವೀಟ್ ಮಾಡಿತ್ತು.

ವಿವೇಕ್ ಅಗ್ನಿಹೋತ್ರಿ ಜನವರಿ 28, 2023 ರಂದು ಈ ಟ್ವೀಟ್ ಅನ್ನು ಟ್ವೀಟ್ ಮಾಡಿದ್ದು ಹೌಸ್ ಫುಲ್ ಎಂದಿದ್ದಾರೆ. ಈ ಟ್ವೀಟ್ ಈಗ ಅಳಿಸಲಾಗಿದೆ. ಆ ಟ್ವೀಟ್ ಇಲ್ಲಿದೆ.

ಫ್ಯಾಕ್ಟ್ ಚೆಕ್

ವೈರಲ್ ಫೋಟೊ ಬಗ್ಗೆ ಇಂಡಿಯಾ ಟುಡೇ, ಫೋಟೋ HCU ನಲ್ಲಿ “ದಿ ಕಾಶ್ಮೀರ ಫೈಲ್ಸ್” ನ ಸ್ಕ್ರೀನಿಂಗ್‌ನಿಂದ ಅಲ್ಲ ಎಂದು ಕಂಡುಹಿಡಿದಿದೆ. ಈ ಫೋಟೊ SFI ಸಂಘಟನೆ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಿದಾಗ ತೆಗೆದ ಫೋಟೊ ಆಗಿದೆ. ಈ ವೈರವ್ ಫೋಟೊವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ SFI ಯ HCU ಘಟಕದ ಟ್ವೀಟ್​​ನಲ್ಲಿ ಈ ಫೋಟೊ ಇದೆ. ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನದ ನಾಲ್ಕು ಫೋಟೋಗಳಲ್ಲಿ ಇದೂ ಒಂದು. ಸುಳ್ಳು ಪ್ರಚಾರ ಮತ್ತು ಅಶಾಂತಿಯನ್ನು ಸೃಷ್ಟಿಸುವ ಎಬಿವಿಪಿಯ ಪ್ರಯತ್ನಗಳನ್ನು ಮತ್ತು ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಅಡ್ಡಿಪಡಿಸುವ ಆಡಳಿತವನ್ನು ನಿರಾಕರಿಸಿ 400 ವಿದ್ಯಾರ್ಥಿಗಳು ಸ್ಕ್ರೀನಿಂಗ್‌ಗೆ ಬಂದಿದ್ದಾರೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ದಿ ಹಿಂದೂ ಸೇರಿದಂತೆ ಹಲವಾರು ಮಾಧ್ಯಮ ವರದಿಗಳು ಕೂಡಾ ಇದೇ ಚಿತ್ರ ಪ್ರಕಟಿಸಿದೆ, ಇದು SFI-HCU ನ ಈ ಬಗ್ಗೆ ಟ್ವೀಟ್ ಮಾಡಿದ್ದು ” ಆಡಳಿತವು ಅದಕ್ಕೆ ಅನುಮತಿ ನೀಡಿಲ್ಲ ಎಂದು ಹೇಳಿದ್ದರೂ ಸಹ ಒಂದು ವಾರದಲ್ಲಿ ಎರಡನೇ ಬಾರಿಗೆ, ಪಿಎಂ ಮೋದಿ ಅವರ ಕುರಿತಾದ BBC ಸಾಕ್ಷ್ಯಚಿತ್ರವನ್ನು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಪ್ರದರ್ಶಿಸಲಾಯಿತು ಎಂದು ಬರೆದಿದೆ. ಎನ್​​ಡಿಟಿವಿ ಕೂಡಾ ಇದೇ ಫೋಟೊವಿರುವ ವರದಿ ಪ್ರಕಟಿಸಿದೆ.

ಇಂಡಿಯಾ ಟುಡೇ ಎಸ್‌ಎಫ್‌ಐ-ಎಚ್‌ಸಿಯು ಅಧ್ಯಕ್ಷ ಅಭಿಷೇಕ್ ನಂದನ್ ಅವರೊಂದಿಗೆ ಮಾತನಾಡಿದ್ದು, ಈ ಫೋಟೋ ನಿಜವಾಗಿಯೂ ಎಸ್‌ಎಫ್‌ಐ ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನದ್ದು ಎಂಬುದನ್ನು ಎಂದು ಖಚಿತಪಡಿಸಿದೆ. “ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು, ಅದೇ ಸಮಯದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಪ್ರದರ್ಶನವನ್ನು ಆಯೋಜಿಸುವ ಮೂಲಕ ನಮ್ಮ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಎಬಿವಿಪಿಯ ಪ್ರಯತ್ನಕ್ಕೆ ಭಾರಿ ಹೊಡೆತ ಇದು ಎಂದು ನಂದನ್ ಹೇಳಿದ್ದಾರೆ.

ಅವರು ಚಿತ್ರದಲ್ಲಿ ಕಾಣುವ ಪಾಲ್ಗೊಂಡವರಲ್ಲಿ ಒಬ್ಬರು ಅನುಶ್ರೀ ಎಂದು ಗುರುತಿಸಿದ್ದಾರೆ. ಆಕೆ ವಿಶ್ವವಿದ್ಯಾಲಯದ ತುಲನಾತ್ಮಕ ಸಾಹಿತ್ಯ ಕೇಂದ್ರದ ವಿದ್ಯಾರ್ಥಿನಿ. ಇಂಡಿಯಾ ಟುಡೇ ಅನುಶ್ರೀ ಅವರೊಂದಿಗೆ ಮಾತನಾಡಿದ್ದು, ಫೋಟೋದಲ್ಲಿರುವುದೇ ನಾನೇ ಎಂದು ಅವರು ಎಂದು ಖಚಿತಪಡಿಸಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್’ ಪ್ರದರ್ಶನಕ್ಕೆ ಎಷ್ಟು ಮಂದಿ ಬಂದಿದ್ದರು?

ಸುಮಾರು 200 ಜನರು “ದಿ ಕಾಶ್ಮೀರ್ ಫೈಲ್ಸ್” ಸ್ಕ್ರೀನಿಂಗ್‌ಗೆ ಹಾಜರಾಗಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ABVP-HCU ಘಟಕದ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದಾಗ ಈ ಬಗ್ಗೆ ಮಾಹಿತಿ ಸಿಕಿದೆ. ನಾವು ಸ್ಕ್ರೀನಿಂಗ್ ಆಯೋಜಿಸಿದ್ದ ಎಬಿವಿಪಿಯ ಪದಾಧಿಕಾರಿಗಳಲ್ಲಿ ಮಾತಾಡಿದಾಗ ಪ್ರದರ್ಶನದಲ್ಲಿ ಪಾಲ್ಗೊಂಡವರ ಸಂಖ್ಯೆಯನ್ನು 70 ಮತ್ತು 100 ರ ನಡುವೆ ಇತ್ತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ. “ದಿ ಕಾಶ್ಮೀರ್ ಫೈಲ್ಸ್” ಸ್ಕ್ರೀನಿಂಗ್‌ನಲ್ಲಿ ಹಾಜರಿದ್ದ ಎಬಿವಿಪಿಯ ಮಾಜಿ ಘಟಕ ಕಾರ್ಯದರ್ಶಿ ಕರ್ಣಿ ಸಿಂಗ್, “ವಿಶ್ವವಿದ್ಯಾಲಯದ ಆಡಳಿತವು ಚಲನಚಿತ್ರವನ್ನು ಪ್ರದರ್ಶಿಸದಂತೆ ನಮ್ಮನ್ನು ತಡೆಯಲು ಪ್ರಯತ್ನಿಸಿತು. ನಮ್ಮ ಪ್ರೊಜೆಕ್ಟರ್ ಅನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿತು, ಆದರೂ ನಾವು ಅದನ್ನು ಹೇಗಾದರೂ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆಡಳಿತದ ಪುನರಾವರ್ತಿತ ಬೆದರಿಕೆಗಳ ಹೊರತಾಗಿಯೂ ಸುಮಾರು 70 ಜನರು ಚಲನಚಿತ್ರವನ್ನು ವೀಕ್ಷಿಸಿದರು ಎಂದಿದ್ದಾರೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:53 pm, Sun, 5 February 23

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ