Raaj Kumar Anand Joins BJP: ಎಎಪಿಯ ಮಾಜಿ ಸಚಿವ ರಾಜ್​ಕುಮಾರ್ ಆನಂದ್ ಬಿಜೆಪಿ ಸೇರ್ಪಡೆ

ದೆಹಲಿಯ ಮಾಜಿ ಸಚಿವ ರಾಜ್ ಕುಮಾರ್ ಆನಂದ್ ಅವರು ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡರು. ಬಿಜೆಪಿಯ ದೆಹಲಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಸಮ್ಮುಖದಲ್ಲಿ ಅವರು ಬಿಜೆಪಿ ಸೇರಿದರು.

Raaj Kumar Anand Joins BJP: ಎಎಪಿಯ ಮಾಜಿ ಸಚಿವ ರಾಜ್​ಕುಮಾರ್ ಆನಂದ್ ಬಿಜೆಪಿ ಸೇರ್ಪಡೆ
ರಾಜ್​ಕುಮಾರ್ ಆನಂದ್
Follow us
ನಯನಾ ರಾಜೀವ್
|

Updated on:Jul 10, 2024 | 3:38 PM

ಆಮ್​ ಆದ್ಮಿ ಪಕ್ಷದ ಮಾಜಿ ಸಚಿವ ರಾಜ್ ಕುಮಾರ್ ಆನಂದ್(Raaj Kumar Anand) ಬುಧವಾರ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡರು. ಈ ವರ್ಷದ ಏಪ್ರಿಲ್‌ನಲ್ಲಿ ಎಎಪಿಗೆ ರಾಜೀನಾಮೆ ನೀಡಿ ಬಿಎಸ್‌ಪಿ ಸೇರಿದ್ದರು. ಲೋಕಸಭೆ ಚುನಾವಣೆಗೂ ಮುನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು . ಕೇಂದ್ರ ಏಜೆನ್ಸಿಗಳ ಭಯದಿಂದ ಅವರು ಈ ಕ್ರಮ ಕೈಗೊಂಡಿದ್ದಾರೆ ಎಂದು ಎಎಪಿ ಆರೋಪಿಸಿತ್ತು.

ರಾಜ್‌ಕುಮಾರ್ ಆನಂದ್ ಅವರು ಏಪ್ರಿಲ್‌ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ನಂತರ ಮಾಯಾವತಿಯವರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಗೆ ಸೇರಿದ್ದರು. ಈಗ ಬಿಜೆಪಿ ಸೇರಿದ್ದಾರೆ.

ರಾಜಕುಮಾರ್ ಆನಂದ್ ಅವರು ತಮ್ಮ ರಾಜೀನಾಮೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಏಪ್ರಿಲ್ 12 ರಂದು ಕಳುಹಿಸಿದ್ದರು. ಜೂನ್ 14 ರಂದು, ಪಟೇಲ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ರಾಜ್‌ಕುಮಾರ್ ಆನಂದ್ ಅವರನ್ನು ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಅವರು ಅನರ್ಹಗೊಳಿಸಿದ್ದರು.

ಮತ್ತಷ್ಟು ಓದಿ: Kiran Choudhry: ಹರಿಯಾಣ ಕಾಂಗ್ರೆಸ್ ಶಾಸಕಿ ಕಿರಣ್ ಚೌಧರಿ ಇಂದು ಬಿಜೆಪಿಗೆ ಸೇರ್ಪಡೆ

ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು

ಈ ಬಾರಿ ರಾಜ್‌ಕುಮಾರ್ ಆನಂದ್ ಕೂಡ ಬಿಎಸ್‌ಪಿ ಟಿಕೆಟ್‌ನಲ್ಲಿ ನವದೆಹಲಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಅವರು ಗಳಿಸಿದ್ದು ಕೇವಲ 5629 ಮತಗಳು. ಈ ಕ್ಷೇತ್ರದಲ್ಲಿ ಬಿಜೆಪಿಯ ಬಾನ್ಸುರಿ ಸ್ವರಾಜ್ 78370 ಮತಗಳಿಂದ ಗೆದ್ದಿದ್ದಾರೆ. ಅವರು 453185 ಮತಗಳನ್ನು ಪಡೆದರು. ಆಮ್ ಆದ್ಮಿ ಪಕ್ಷದ ಸೋಮನಾಥ್ ಭಾರ್ತಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು 374815 ಮತಗಳನ್ನು ಪಡೆದಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:37 pm, Wed, 10 July 24