AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲ ಶಾಸಕರಿಗೂ ಆಲ್ಕೋಹಾಲ್ ಪರೀಕ್ಷೆಯಾಗಲಿ; ಪಂಜಾಬ್ ಸಿಎಂ ಕುಡಿದಿದ್ದಾರೆ ಎಂದು ಆರೋಪಿಸಿ ಸದನದಿಂದ ಹೊರನಡೆದ ಕಾಂಗ್ರೆಸ್

ಪಂಜಾಬ್ ವಿಧಾನಸಭಾ ಅಧಿವೇಶನದಲ್ಲಿ ಇಂದು ಹೈಡ್ರಾಮಾ ನಡೆದಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸದನದೊಳಗೆ ಕುಡಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದ ನಂತರ, ವಿಧಾನಸಭೆಯಲ್ಲಿರುವ ಎಲ್ಲಾ ಶಾಸಕರಿಗೆ ಆಲ್ಕೋಹಾಲ್ ಪರೀಕ್ಷೆ ನಡೆಸಬೇಕೆಂದು ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ ಒತ್ತಾಯಿಸಿದ್ದಾರೆ. ಈ ನಡುವೆ ಇಂದಿನ ಸದನದ ವೇಳೆ ಕಾಂಗ್ರೆಸ್ ವಿಧಾನಸಭೆಯಿಂದ ಹೊರನಡೆದಿದೆ.

ಎಲ್ಲ ಶಾಸಕರಿಗೂ ಆಲ್ಕೋಹಾಲ್ ಪರೀಕ್ಷೆಯಾಗಲಿ; ಪಂಜಾಬ್ ಸಿಎಂ ಕುಡಿದಿದ್ದಾರೆ ಎಂದು ಆರೋಪಿಸಿ ಸದನದಿಂದ ಹೊರನಡೆದ ಕಾಂಗ್ರೆಸ್
Bhagwant MannImage Credit source: TV9
ಸುಷ್ಮಾ ಚಕ್ರೆ
|

Updated on: May 01, 2026 | 3:43 PM

Share

ಪಂಜಾಬ್, ಮೇ 1: ಪಂಜಾಬ್ ವಿಧಾನಸಭೆಯಲ್ಲಿ ಇಂದು ಹೈಡ್ರಾಮಾ ನಡೆದಿದೆ. ಕಾಂಗ್ರೆಸ್ ಮತ್ತು ಅಕಾಲಿ ದಳ ಪಂಜಾಬ್​ನ ಸಿಎಂ ಭಗವಂತ್ ಮಾನ್ ಸದನದ ಕಲಾಪಗಳ ಸಮಯದಲ್ಲಿ ಕುಡಿದಿದ್ದರು ಎಂದು ಆರೋಪಿಸಿದೆ. ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಇಂದು ಪಂಜಾಬ್​​ನಲ್ಲಿ ವಿಶೇಷ ಅಧಿವೇಶನ ಕರೆಯಲಾಗಿತ್ತು. ಪಂಜಾಬ್ (Punjab) ಮುಖ್ಯಮಂತ್ರಿ ಭಗವಂತ್ ಮಾನ್ ಕುಡಿದ ಸ್ಥಿತಿಯಲ್ಲಿ ಸದನಕ್ಕೆ ಬಂದಿದ್ದಾರೆ. ಹೀಗಾಗಿ ಸದನದಲ್ಲಿರುವ ಎಲ್ಲಾ ಶಾಸಕರಿಗೆ ಮದ್ಯ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿತು.

ಕಾರ್ಮಿಕ ದಿನದ ಸಂದರ್ಭದಲ್ಲಿ ನಿರ್ಣಯವನ್ನು ಅಂಗೀಕರಿಸಲು ಕರೆಯಲಾದ ದಿನವಿಡೀ ವಿಶೇಷ ಅಧಿವೇಶನವು ಸೌಹಾರ್ದಯುತ ರೀತಿಯಲ್ಲೇ ಪ್ರಾರಂಭವಾಯಿತು. ಆದರೆ ಸದನ ನಡೆಯುತ್ತಿರುವಾಗ ಕಾಂಗ್ರೆಸ್ ಶಾಸಕ ಸುಖ್‌ಪಾಲ್ ಸಿಂಗ್ ಖೈರಾ ಮೊಬೈಲ್ ಫೋನ್ ಬಳಸುವುದಕ್ಕೆ ಸಿಎಂ ಭಗವಂತ್ ಮಾನ್ ಆಕ್ಷೇಪಿಸಿದಾಗ ಚರ್ಚೆಗಳು ಬೇರೆ ದಿಕ್ಕಿನೆಡೆ ಸಾಗಿದವು.

ಇದನ್ನೂ ಓದಿ: Video:ಪಂಜಾಬ್​ನಲ್ಲಿ ಬಸ್ ಪಲ್ಟಿ, ಐವರು ಸಾವು, 15 ಮಂದಿಗೆ ಗಾಯ

ಸದನದಲ್ಲಿ ಅನುಸರಿಸಬೇಕಾದ ಒಂದು ಶಿಷ್ಟಾಚಾರವಿದೆ. ಅಲ್ಲಿ ಯಾರೂ ಕಾಲುಗಳನ್ನು ಚಾಚಿ ಕುಳಿತುಕೊಳ್ಳಬಾರದು ಎಂದು ಸಿಎಂ ಭಗವಂತ್ ಮಾನ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಖೈರಾ, ಹಿಂದಿನ ಅಧಿವೇಶನದಲ್ಲಿ ಸಂದರ್ಶಕರ ಗ್ಯಾಲರಿಯಲ್ಲಿ ಭಗವಂತ್ ಮಾನ್ ಅವರ ಪತ್ನಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದರು ಎಂದು ಹೇಳಿದರು.

ಅದಕ್ಕೆ ಉತ್ತರಿಸಿದ ಸಿಎಂ, “ಅವರು ಕೂಡಲೆ ತಮ್ಮನ್ನು ತಾವು ಸರಿಪಡಿಸಿಕೊಂಡರು. ಅವರು ಸದನದ ಸದಸ್ಯರಲ್ಲ. ನೀವು ನನ್ನ ಮಗಳನ್ನು ಸಹ ಟಾರ್ಗೆಟ್ ಮಾಡಿದ್ದೀರಿ. ಇವರೆಲ್ಲ ಮನಸಿಗೆ ಬಂದಂತೆ ಮಾತಾಡುತ್ತಿದ್ದಾರೆ ಸ್ಪೀಕರ್ ಸಆಹೇಬ್. ವಿಧಾನಸಭೆಯ ಖರ್ಚಿನಲ್ಲಿ ಇವರಿಗೆ ವೈದ್ಯಕೀಯ ಚಿಕಿತ್ಸೆ ನೀಡಬೇಕು” ಎಂದು ಟೀಕಿಸಿದರು.

ಇದಾದ ಸ್ವಲ್ಪ ಸಮಯದ ನಂತರ, ಅಧಿಕೃತ ನಿರ್ಣಯದ ಮೇಲಿನ ಚರ್ಚೆ ಇನ್ನೂ ನಡೆಯುತ್ತಿರುವಾಗ, ಸಿಎಂ ಭಗವಂತ್ ಮಾನ್ ಸದನದಕ್ಕೆ ಕುಡಿದು ಬಂದಿದ್ದಾರೆ ಎಂದು ಖೈರಾ ಆರೋಪಿಸಿದರು. ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ ಅವರು ಈ ಆರೋಪವನ್ನು ಬೆಂಬಲಿಸಿದರು. ಅಲ್ಲದೆ ಸದನದಲ್ಲಿ ಹಾಜರಿದ್ದ ಎಲ್ಲಾ ಸದಸ್ಯರ ಮೇಲೆ ಮದ್ಯ ಪರೀಕ್ಷೆಯನ್ನು ನಡೆಸಬೇಕೆಂದು ಒತ್ತಾಯಿಸಿದರು, ಇದು ಭಾರೀ ವಾದ-ವಿವಾದಕ್ಕೆ ಕಾರಣವಾಯಿತು.

ಇದನ್ನೂ ಓದಿ: ನಾಚಿಕೆಗೇಡಿನ ಸಂಗತಿ; ಆಪರೇಷನ್ ಸಿಂಧೂರ್ ಕುರಿತ ಹೇಳಿಕೆಗೆ ಭಗವಂತ್ ಮಾನ್​ ವಿರುದ್ಧ ಬಿಜೆಪಿ ಟೀಕೆ

ಕಾಂಗ್ರೆಸ್ ಶಾಸಕರು ಸಭಾತ್ಯಾಗ ಮಾಡಿ ಸ್ಪೀಕರ್ ಅವರಲ್ಲಿ ಈ ಭಗವಂತ್ ಮಾನ್ ವಿರುದ್ದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಕಾಂಗ್ರೆಸ್ ನಾಯಕ ಸುಖ್‌ಪಾಲ್ ಸಿಂಗ್ ಖೈರಾ ಮದ್ಯ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಪ್ರತಾಪ್ ಸಿಂಗ್ ಬಜ್ವಾ, “ಮುಖ್ಯಮಂತ್ರಿಗಳೇ ಕುಡಿದ ಮತ್ತಿನಲ್ಲಿ ಇರುವ ವಿಧಾನಸಭೆಗೆ ಬಂದು ನಾವು ಏನು ಮಾಡಬೇಕು? ರಾಜ್ಯದ ಮುಖ್ಯಸ್ಥರೇ ಸಂಪೂರ್ಣವಾಗಿ ನಿದ್ದೆಗೆಟ್ಟಿರುವಾಗ ಅಧಿವೇಶನ ನಡೆಸುವ ಉದ್ದೇಶವೇನು? ಎಲ್ಲರ ಆಲ್ಕೋಹಾಲ್ ಪರೀಕ್ಷೆ ನಡೆಸಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಈ ರಾಶಿಯವರಿಗೆ ಇಂದು ಅದೃಷ್ಟ ಕೂಡಿ ಬರಲಿದೆ
ಈ ರಾಶಿಯವರಿಗೆ ಇಂದು ಅದೃಷ್ಟ ಕೂಡಿ ಬರಲಿದೆ
ಚಿಕ್ಕಬಳ್ಳಾಪುರ: ಅನ್ನಭಾಗ್ಯ ಯೋಜನೆಯ ಗೋಧಿ ಅಕ್ರಮ ಸಾಗಾಟ, 14 ಟನ್ ವಶಕ್ಕೆ
ಚಿಕ್ಕಬಳ್ಳಾಪುರ: ಅನ್ನಭಾಗ್ಯ ಯೋಜನೆಯ ಗೋಧಿ ಅಕ್ರಮ ಸಾಗಾಟ, 14 ಟನ್ ವಶಕ್ಕೆ
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ