AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನ ಮಾಜಿ ಪ್ರೇಯಸಿ ಅಂದುಕೊಂಡು ಯಾವುದೋ ಯುವತಿ ಮೇಲೆ ಆ್ಯಸಿಡ್ ಎರಚಿದ ವ್ಯಕ್ತಿ

ನ್ನ ಮಾಜಿ ಪ್ರೇಯಸಿ ಎಂದು ತಪ್ಪಾಗಿ ಭಾವಿಸಿ ವ್ಯಕ್ತಿಯೊಬ್ಬ ಯಾವುದೋ ಯುವತಿಗೆ ಆ್ಯಸಿಡ್(Acid) ಎರಚಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಭಾನುವಾರ ರಾತ್ರಿ ಸೆಕ್ಟರ್ 10 ರ ಗುರುಗ್ರಾಮ್ ಸಿವಿಲ್ ಆಸ್ಪತ್ರೆಯ ಆವರಣದಲ್ಲಿ ಈ ಭಯಾನಕ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಪಿಜಿಐಎಂಎಸ್ ರೋಹ್ಟಕ್‌ಗೆ ಕಳುಹಿಸಲಾಗಿದೆ.

ತನ್ನ ಮಾಜಿ ಪ್ರೇಯಸಿ ಅಂದುಕೊಂಡು ಯಾವುದೋ ಯುವತಿ ಮೇಲೆ ಆ್ಯಸಿಡ್ ಎರಚಿದ ವ್ಯಕ್ತಿ
ಆ್ಯಸಿಡ್ ದಾಳಿ
ನಯನಾ ರಾಜೀವ್
|

Updated on:Mar 09, 2026 | 12:54 PM

Share

ಗುರುಗ್ರಾಮ, ಮಾರ್ಚ್​ 09: ತನ್ನ ಮಾಜಿ ಪ್ರೇಯಸಿ ಎಂದು ತಪ್ಪಾಗಿ ಭಾವಿಸಿ ವ್ಯಕ್ತಿಯೊಬ್ಬ ಯಾವುದೋ ಯುವತಿಗೆ ಆ್ಯಸಿಡ್(Acid) ಎರಚಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಭಾನುವಾರ ರಾತ್ರಿ ಸೆಕ್ಟರ್ 10 ರ ಗುರುಗ್ರಾಮ್ ಸಿವಿಲ್ ಆಸ್ಪತ್ರೆಯ ಆವರಣದಲ್ಲಿ ಈ ಭಯಾನಕ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಪಿಜಿಐಎಂಎಸ್ ರೋಹ್ಟಕ್‌ಗೆ ಕಳುಹಿಸಲಾಗಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ರಾತ್ರಿ 8.15 ರಿಂದ 8.30 ರ ನಡುವೆ ಈ ದಾಳಿ ನಡೆದಿದೆ. ಆರೋಪಿ ಹಿಂದಿನಿಂದ ಬಂದು ಯುವತಿಯ ಮೇಲೆ ಆ್ಯಸಿಡ್ ಎರಚಿದ ನಂತರ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

20 ವರ್ಷದ ಯುವತಿ ಹಲ್ಲೆ ನಡೆಸಿದ ವ್ಯಕ್ತಿ ತನ್ನ ಮಾಜಿ ಗೆಳೆಯನಾಗಿದ್ದು, ತನ್ನ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸುವಾಗ ತಪ್ಪಾಗಿ ಇನ್ನೊಬ್ಬ ಯುವತಿಯ ಮೇಲೆ ದಾಳಿ ನಡೆಸಿರಬಹುದು ಎಂದು ಆರೋಪಿಸಿದ್ದಾರೆ.

ಆ ವ್ಯಕ್ತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಮತ್ತು ನಂತರ ಆಸ್ಪತ್ರೆಗೆ ತನ್ನನ್ನು ಹುಡುಕಿಕೊಂಡು ಬಂದಿದ್ದಾಗಿ ಯುವತಿ ಹೇಳಿಕೊಂಡಿದ್ದಾಳೆ, ಅಲ್ಲಿ ಮತ್ತೊಬ್ಬ ಮಹಿಳೆ ಆ್ಯಸಿಡ್ ದಾಳಿಯಲ್ಲಿ ಗಾಯಗೊಂಡಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.ತಾಯಿಯ ಚಿಕ್ಕಮ್ಮನನ್ನು ಭೇಟಿ ಮಾಡಲು ಹೋಗಿದ್ದ ನುಹ್ ನಿವಾಸಿ ಮೇಲೆ ಆ್ಯಸಿಡ್ ದಾಳಿ ನಡೆದಿದೆ.

ಮತ್ತಷ್ಟು ಓದಿ: ಬಿಹಾರದಲ್ಲಿ ಬಿಜೆಪಿ ನಾಯಕನ ಪುತ್ರಿ ಮೇಲೆ ಆ್ಯಸಿಡ್ ದಾಳಿ

ಆಕೆಯ ಕುಟುಂಬದವರು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ನಾವಿಬ್ಬರೂ ಒಂದೇ ರೀತಿಯ ಉಡುಪು ಹಾಕಿದ್ದರಿಂದ ಆ್ಯಸಿಡ್ ಎರಚಿರಬಹುದು ಎಂದು ಹೇಳಿದ್ದಾರೆ.ಭುಜ, ಕುತ್ತಿಗೆ, ಕೆನ್ನೆ ಮತ್ತು ತೋಳುಗಳಿಗೆ ಗಾಯಗಳಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪಿಜಿಐಎಂಎಸ್ ರೋಹ್ಟಕ್‌ಗೆ ಕರೆದೊಯ್ಯಲಾಗಿದೆ.

ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಲಾಗುತ್ತಿದ್ದು, ತನಿಖೆಯ ಭಾಗವಾಗಿ ಮಹಿಳೆ ಮತ್ತು ಆಕೆಯ ಕುಟುಂಬದವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:51 pm, Mon, 9 March 26

Follow Us
ಬೆಂಗಳೂರಿನಲ್ಲಿ ಧರೆಗುರುಳಿದ ಮರದ ಬೃಹತ್ ರೆಂಬೆ: ತಪ್ಪಿದ ಭಾರೀ ಅನಾಹುತ
ಬೆಂಗಳೂರಿನಲ್ಲಿ ಧರೆಗುರುಳಿದ ಮರದ ಬೃಹತ್ ರೆಂಬೆ: ತಪ್ಪಿದ ಭಾರೀ ಅನಾಹುತ
ಗ್ಯಾಸ್ ಸಿಲಿಂಡರ್ ಅಭಾವ ಬಗ್ಗೆ ಭಕ್ತರಿಗೆ ಸಿದ್ಧಗಂಗಾಶ್ರೀ ಮಹತ್ವದ ಕರೆ
ಗ್ಯಾಸ್ ಸಿಲಿಂಡರ್ ಅಭಾವ ಬಗ್ಗೆ ಭಕ್ತರಿಗೆ ಸಿದ್ಧಗಂಗಾಶ್ರೀ ಮಹತ್ವದ ಕರೆ
ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ
ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ
ತನ್ನ ಕಾರು ಚಾಲಕನ ಮಗನಿಗೆ ಎಲೆಕ್ಷನ್ ಟಿಕೆಟ್ ಕೊಟ್ಟ ವಿಜಯ್: ವಿಡಿಯೋ
ತನ್ನ ಕಾರು ಚಾಲಕನ ಮಗನಿಗೆ ಎಲೆಕ್ಷನ್ ಟಿಕೆಟ್ ಕೊಟ್ಟ ವಿಜಯ್: ವಿಡಿಯೋ
ರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ವಧು, ವರನ ಕಡೆಯವರು: ಆಗಿದ್ದೇನು?
ರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ವಧು, ವರನ ಕಡೆಯವರು: ಆಗಿದ್ದೇನು?
‘ಧುರಂಧರ್ 2’, ‘ಕೇರಳ ಸ್ಟೋರಿ’ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
‘ಧುರಂಧರ್ 2’, ‘ಕೇರಳ ಸ್ಟೋರಿ’ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ರಹಾನೆ ಅಬ್ಬರಕ್ಕೆ ಹೌಹಾರಿದ ಮುಂಬೈ ಬೌಲರ್ಸ್
ರಹಾನೆ ಅಬ್ಬರಕ್ಕೆ ಹೌಹಾರಿದ ಮುಂಬೈ ಬೌಲರ್ಸ್
ಜಿಎಂ ಸಿದ್ದೇಶ್ವರ್, ರೇಣುಕಾಚಾರ್ಯರನ್ನು ಒಗ್ಗೂಡಿಸಿದ ವಿಜಯೇಂದ್ರ
ಜಿಎಂ ಸಿದ್ದೇಶ್ವರ್, ರೇಣುಕಾಚಾರ್ಯರನ್ನು ಒಗ್ಗೂಡಿಸಿದ ವಿಜಯೇಂದ್ರ
ಇರಾನ್ ಮೇಲೆ ವಿಧ್ವಂಸಕ ದಾಳಿಗೆ ಸಜ್ಜಾಗಿರುವ B-52 ಬಾಂಬರ್!
ಇರಾನ್ ಮೇಲೆ ವಿಧ್ವಂಸಕ ದಾಳಿಗೆ ಸಜ್ಜಾಗಿರುವ B-52 ಬಾಂಬರ್!
ತಾಯಿ, ಅಕ್ಕನ ಕತ್ತು ಸೀಳಿ ಯುವಕ ಆತ್ಮಹತ್ಯೆಗೆ ಯತ್ನ: ಅಸಲಿಗೆ ಆಗಿದ್ದೇನು?
ತಾಯಿ, ಅಕ್ಕನ ಕತ್ತು ಸೀಳಿ ಯುವಕ ಆತ್ಮಹತ್ಯೆಗೆ ಯತ್ನ: ಅಸಲಿಗೆ ಆಗಿದ್ದೇನು?