AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Mandir Temple Donation Row: ಚಂಪತ್ ರಾಯ್ ರಾಜೀನಾಮೆ ಅಂಗೀಕಾರ; ರಾಮ ಮಂದಿರ ಟ್ರಸ್ಟ್‌ನ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಮೋಹನ್‌ ನೇಮಕ

ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಡೆದ ರಾಮಜನ್ಮಭೂಮಿ ಟ್ರಸ್ಟ್ ಸಭೆಯಲ್ಲಿ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರ ರಾಜೀನಾಮೆಗಳನ್ನು ಅಂಗೀಕರಿಸಲಾಯಿತು. ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಭೆಯ ನಂತರ, ಚಂಪತ್ ರಾಯ್ ಅವರ ಬದಲು ಕೃಷ್ಣ ಮೋಹನ್ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು. ಕೃಷ್ಣ ಮೋಹನ್ ಕೂಡ ಈ ಟ್ರಸ್ಟ್‌ನ ಸದಸ್ಯರಾಗಿದ್ದಾರೆ.

Ram Mandir Temple Donation Row: ಚಂಪತ್ ರಾಯ್ ರಾಜೀನಾಮೆ ಅಂಗೀಕಾರ; ರಾಮ ಮಂದಿರ ಟ್ರಸ್ಟ್‌ನ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಮೋಹನ್‌ ನೇಮಕ
Krishna MohanImage Credit source: TV9
ಸುಷ್ಮಾ ಚಕ್ರೆ
|

Updated on: Jul 06, 2026 | 8:06 PM

Share

ಅಯೋಧ್ಯೆ, ಜುಲೈ 6: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಕಳ್ಳತನದ (Ram Mandir Donation Theft Case) ಆರೋಪಗಳ ಹಿನ್ನೆಲೆಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಡಾ. ಅನಿಲ್ ಮಿಶ್ರಾ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ ಎಂದು ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಮಹಾರಾಜ್ ತಿಳಿಸಿದ್ದಾರೆ. ಇಂದು 2 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಉನ್ನತ ಮಟ್ಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಖಚಿತ” ಎಂದು ಹೇಳಿದರು. ಹಾಗೇ, ಚಂಪತ್ ರಾಯ್ ಅವರ ಸ್ಥಾನಕ್ಕೆ ಕೃಷ್ಣ ಮೋಹನ್ ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದರು.

ಎಸ್‌ಐಟಿ (SIT)ಯ ಅಂತಿಮ ವರದಿ ಬಂದ ನಂತರ ಜುಲೈ 22ರಂದು ಮತ್ತೊಂದು ಸಭೆ ಕರೆಯಲಾಗುವುದು ಎಂದು ಅವರು ಹೇಳಿದರು. “ನಮ್ಮ ಟ್ರಸ್ಟ್ ಯಾವುದೇ ಲೋಪವಿಲ್ಲದೆ ಪಾರದರ್ಶಕ ಆಡಳಿತ ನೀಡಲು ಬದ್ಧವಾಗಿದೆ. ಇದಕ್ಕಾಗಿ ನಿರ್ದಿಷ್ಟ ಅಧಿಕಾರಿಗಳನ್ನು ನೇಮಿಸಲು ನಾವು ಸಣ್ಣ ಸಮಿತಿಯೊಂದನ್ನು ರಚಿಸಿದ್ದೇವೆ. ಕಳ್ಳತನವು ಕಳ್ಳತನವೇ. ಈ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಅದು ಆಡಳಿತದ ಜವಾಬ್ದಾರಿಯಾಗಿದೆ” ಎಂದು ಗಿರಿ ಹೇಳಿದರು.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ವಿವಾದ: ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ರಾಮ ಮಂದಿರದ ಆವರಣದಲ್ಲಿರುವ ಅತಿಥಿಗೃಹದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಈ ಮಹತ್ವದ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ (SIT) ತನಿಖೆಯ ಮೇಲೆ ರಾಮ ಮಂದಿರ ಟ್ರಸ್ಟ್ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದೆ. ಈ ವಿವಾದದ ಕೇಂದ್ರಬಿಂದುವಾಗಿರುವ ಚಂಪತ್ ರಾಯ್ ಅವರ ಆಪ್ತ ಸಹಾಯಕ ಟಿನ್ನು ಯಾದವ್ ಸೇರಿದಂತೆ 8 ಜನರನ್ನು ಎಸ್‌ಐಟಿ ಈಗಾಗಲೇ ಬಂಧಿಸಿದೆ. ಚಂಪತ್ ರಾಯ್ ಮತ್ತು ಮಿಶ್ರಾ ಅವರನ್ನು ಎಸ್‌ಐಟಿ ಹಾಗೂ ಅಯೋಧ್ಯೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರಾದರೂ, ಇನ್ನೂ ಅವರ ವಿರುದ್ಧ ಯಾವುದೇ ಎಫ್​ಐಆರ್ ದಾಖಲಾಗಿಲ್ಲ.

ಯಾರು ಈ ಕೃಷ್ಣ ಮೋಹನ್?:

ಕೃಷ್ಣ ಮೋಹನ್ ಅವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೀರ್ಘಕಾಲದ ಹಿರಿಯ ಸದಸ್ಯ ಮತ್ತು ನಂಬಿಕಸ್ಥ ಪದಾಧಿಕಾರಿಯಾಗಿದ್ದಾರೆ. ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ವಿಶ್ವ ಹಿಂದೂ ಪರಿಷತ್ (VHP) ಸಂಘಟನೆಗಳೊಂದಿಗೆ ದಶಕಗಳಿಂದ ನಿಕಟ ಸಂಬಂಧ ಹೊಂದಿದ್ದಾರೆ. ಕೃಷ್ಣ ಮೋಹನ್ ಅವರು ವಿಶ್ವ ಹಿಂದೂ ಪರಿಷತ್‌ನ ಹಿರಿಯ ಪದಾಧಿಕಾರಿಯಾಗಿದ್ದು, ಅಯೋಧ್ಯೆಯ ರಾಮ ಮಂದಿರ ಆಂದೋಲನದ ಸಮಯದಿಂದಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ವಿವಾದ: ಕೊನೆಗೂ ಮೌನ ಮುರಿದ ಟ್ರಸ್ಟ್ ಅಧ್ಯಕ್ಷರು, ಪ್ರಧಾನಿ, ಸಿಎಂಗೆ ಭಾವುಕ ಪತ್ರ

ರಾಮ ಮಂದಿರ ಟ್ರಸ್ಟ್‌ನ ಆಂತರಿಕ ವ್ಯವಹಾರಗಳು, ಹಣಕಾಸು ನಿರ್ವಹಣೆ ಮತ್ತು ಮಂದಿರದ ದೈನಂದಿನ ಚಟುವಟಿಕೆಗಳ ಉಸ್ತುವಾರಿಯಲ್ಲಿ ಇವರು ಹಿಂದಿನಿಂದಲೂ ಪ್ರಮುಖ ಪಾತ್ರ ವಹಿಸುತ್ತಿದ್ದರು. ಆಡಳಿತಾತ್ಮಕವಾಗಿ ಇವರಿಗಿರುವ ಹಿಡಿತ ಮತ್ತು ಸ್ವಚ್ಛ ಇಮೇಜ್ ಕಾರಣದಿಂದಾಗಿ ಇವರನ್ನು ರಾಮ ಮಂದಿರ ಟ್ರಸ್ಟ್​​ನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಮಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ
ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ
ಸುಬ್ರಹ್ಮಣ್ಯ, ಹನುಮನ ಲಹರಿ ಇರುವ ಪರ್ವ ದಿನ: 12 ರಾಶಿಗಳ ದಿನ ಭವಿಷ್ಯ
ಸುಬ್ರಹ್ಮಣ್ಯ, ಹನುಮನ ಲಹರಿ ಇರುವ ಪರ್ವ ದಿನ: 12 ರಾಶಿಗಳ ದಿನ ಭವಿಷ್ಯ
ಸರ್ಕಾರದ ಜೊತೆ ಇರುತ್ತೇವೆ: ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ
ಸರ್ಕಾರದ ಜೊತೆ ಇರುತ್ತೇವೆ: ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ
ಪಶುವೈದ್ಯ ನೇಮಕಾತಿ ಹಗರಣ: CBI ತನಿಖೆಗೆ ಒಪ್ಪಿಸಿ ಎಂದ ಸುರೇಶ್ ಕುಮಾರ್
ಪಶುವೈದ್ಯ ನೇಮಕಾತಿ ಹಗರಣ: CBI ತನಿಖೆಗೆ ಒಪ್ಪಿಸಿ ಎಂದ ಸುರೇಶ್ ಕುಮಾರ್
ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್​ಗೆ ಸದನದಲ್ಲಿ ಖರ್ಗೆ ಖಂಡನೆ
ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್​ಗೆ ಸದನದಲ್ಲಿ ಖರ್ಗೆ ಖಂಡನೆ
ಡಿಕೆಶಿಗೆ ಹೈ ಸೆಕ್ಯೂರಿಟಿ:ದೆಹಲಿಯಲ್ಲಿ ವಿಶೇಷ ಭದ್ರತೆ ಇದೇ ಮೊದಲು
ಡಿಕೆಶಿಗೆ ಹೈ ಸೆಕ್ಯೂರಿಟಿ:ದೆಹಲಿಯಲ್ಲಿ ವಿಶೇಷ ಭದ್ರತೆ ಇದೇ ಮೊದಲು
ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ತಿರುಗಿಬಿದ್ದ ಹೋಟೆಲ್ ಮಾಲೀಕರು
ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ತಿರುಗಿಬಿದ್ದ ಹೋಟೆಲ್ ಮಾಲೀಕರು
ಕುಡುಕ ಎಂದ ಕಾಂಗ್ರೆಸ್​​​​​ ವಿರುದ್ಧ ಸಿಟಿ ರವಿ ಕೆಂಡಾಮಂಡಲ
ಕುಡುಕ ಎಂದ ಕಾಂಗ್ರೆಸ್​​​​​ ವಿರುದ್ಧ ಸಿಟಿ ರವಿ ಕೆಂಡಾಮಂಡಲ
ಪಶುವೈದ್ಯ ನೇಮಕಾತಿ ಹಗರಣ: ಕೆಪಿಎಸ್‌ಸಿ ಕಚೇರಿಗೆ ಬಿಜೆಪಿ ನಿಯೋಗ ಭೇಟಿ
ಪಶುವೈದ್ಯ ನೇಮಕಾತಿ ಹಗರಣ: ಕೆಪಿಎಸ್‌ಸಿ ಕಚೇರಿಗೆ ಬಿಜೆಪಿ ನಿಯೋಗ ಭೇಟಿ
ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಹೈಡ್ರಾಮಾ
ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಹೈಡ್ರಾಮಾ