Heart Attack: ವಿಮಾನದಲ್ಲಿ 2 ಬಾರಿ ಹೃದಯಾಘಾತ, ಪ್ರಾಣ ಉಳಿಸಿದ ಭಾರತೀಯ ವೈದ್ಯನಿಗೆ ಕಣ್ಣೀರಿನ ಧನ್ಯವಾದ

ವಿಮಾನದಲ್ಲಿ ವ್ಯಕ್ತಿಯೊಬ್ಬರಿಗೆ ಹೃದಯ ಸ್ತಂಭನ ಉಂಟಾಗಿ ಕುಸಿದುಬಿದ್ದಿದ್ದರು. ಇದನ್ನು ಕಂಡು ಭಾರತೀಯ ಮೂಲದ ವೈದ್ಯರೊಬ್ಬರು ಐದು ಗಂಟೆಗಳ ಕಾಲ ಚಿಕತ್ಸೆ ನೀಡಿ ಅವರನ್ನು ಕಾಪಾಡಿದ್ದಾರೆ.

Heart Attack: ವಿಮಾನದಲ್ಲಿ 2 ಬಾರಿ ಹೃದಯಾಘಾತ, ಪ್ರಾಣ ಉಳಿಸಿದ ಭಾರತೀಯ ವೈದ್ಯನಿಗೆ ಕಣ್ಣೀರಿನ ಧನ್ಯವಾದ
ಡಾ.ವಿಶ್ವರಾಜ್ ವೇಮಲಾ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 06, 2023 | 4:06 PM

ವಿಮಾನದಲ್ಲಿ ವ್ಯಕ್ತಿಯೊಬ್ಬರಿಗೆ ಹೃದಯ ಸ್ತಂಭನ ಉಂಟಾಗಿ ಕುಸಿದುಬಿದ್ದಿದ್ದರು. ಇದನ್ನು ಕಂಡು ಭಾರತೀಯ ಮೂಲದ ವೈದ್ಯರೊಬ್ಬರು ಐದು ಗಂಟೆಗಳ ಕಾಲ ಚಿಕತ್ಸೆ ನೀಡಿ ಅವರನ್ನು ಕಾಪಾಡಿದ್ದಾರೆ. ಭಾರತಕ್ಕೆ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಹೃದಯ ಸ್ತಂಭ ಉಂಟಾಗಿ ತಾನು ಬದುಕಿದ ಬಗ್ಗೆ ವಿವರಿಸಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಕನ್ಸಲ್ಟೆಂಟ್ ಹೆಪಟಾಲಜಿಸ್ಟ್ ಆಗಿರುವ ಡಾ.ವಿಶ್ವರಾಜ್ ವೇಮಲಾ ಅವರು ತಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ 43 ವರ್ಷದ ವ್ಯಕ್ತಿಯೊಬ್ಬರು ಹೃದಯ ಸ್ತಂಭನಕ್ಕೆ ಒಳಗಾಗಿ ಕುಸಿದುಬಿದ್ದರು. ವಿಮಾನದಲ್ಲಿದ್ದ ವೈದ್ಯಕೀಯ ಸಾಮಗ್ರಿಗಳು ಹಾಗೂ ಅವರ ಜೊತೆಗೆ ಇದ್ದ ವೈದ್ಯಕೀಯ ಪರಿಕರಗಳ ನೆರವಿನಿಂದ, ಡಾ ವೇಮಲಾ ತನ್ನ ಸಹ ಪ್ರಯಾಣಿಕರಿಗೆ ಎರಡು ಬಾರಿ ಚಿಕಿತ್ಸೆ ನೀಡಿ ಅವರ ಜೀವನ ಉಳಿಸಿದ್ದಾರೆ. ಈ ಬಗ್ಗೆ ಹೃದಯಾಘಾತವಾದ ವ್ಯಕ್ತಿ ತಮ್ಮ ಅನುಭವನ್ನು ಹಂಚಿಕೊಂಡಿದ್ದಾರೆ.

ಕನ್ಸಲ್ಟೆಂಟ್ ಹೆಪಟಾಲಜಿಸ್ಟ್‌ಗಳಲ್ಲಿ ಒಬ್ಬರಾದ ಡಾ ವಿಶ್ವರಾಜ್ ವೇಮಲಾ ಅವರು ವಿಮಾನದ ಪ್ರಯಾಣಿಸುತ್ತಿದ್ದಾಗ ಎರಡು ಬಾರಿ ಹೃದಯ ಸ್ತಂಭನಕ್ಕೆ ಒಳಗಾದ ಪ್ರಯಾಣಿಕರೊಬ್ಬರ ಜೀವವನ್ನು ಉಳಿಸಿದರು. ವಿಮಾನ ಲ್ಯಾಂಡ್ ಆಗುವ ಮುನ್ನ, ತಮ್ಮಲ್ಲಿದ್ದ ಚಿಕಿತ್ಸೆ ಪರಿಕರಗಳ ಬಳಸಿಕೊಂಡು ಆತನ ಜೀವನ ಉಳಿಸಿದ್ದಾರೆ. ಈ ಬಗ್ಗೆ ಯೂನಿವರ್ಸಿಟಿ ಆಸ್ಪತ್ರೆಗಳು ಬರ್ಮಿಂಗ್ಹ್ಯಾಮ್ Twitter ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ:Heart Attack: ಪ್ರತಿ ದಿನ ಇಷ್ಟು ಹೆಜ್ಜೆ ನಡೆದರೆ ಹೃದಯಾಘಾತದ ಅಪಾಯ ಕಡಿಮೆಯಂತೆ

ಡಾ ವೇಮಲಾ ಅವರು ನವೆಂಬರ್‌ನಲ್ಲಿ ಯುನೈಟೆಡ್ ಕಿಂಗ್‌ಡಮ್‌ನಿಂದ ತಮ್ಮ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯೊಬ್ಬರು ಹೃದಯಾಘಾತಕ್ಕೆ ಒಳಗಾದಾಗ ವೈದ್ಯರನ್ನು ಕರೆಯಲು ಪ್ರಾರಂಭಿಸಿದ್ದಾರೆ. ವಿಮಾನದಲ್ಲಿದ್ದ ಡಾ ವೇಮಲಾ ಅವರು ಕುಸಿದುಬಿದ್ದ ವ್ಯಕ್ತಿಯನ್ನು ಕಂಡು ಸೂಕ್ತ ಚಿಕಿತ್ಸೆ ನೀಡಲು ಧಾವಿಸಿದ್ದಾರೆ.

ಪ್ರಯಾಣಿಕರಿಗೆ ಪ್ರಜ್ಞೆ ಬರುವ ಮೊದಲು ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಈ ಸಮಯದಲ್ಲಿ, ಡಾ.ವೇಮಲಾ ಅವರು ವಿಮಾನದಲ್ಲಿದ್ದ ಕ್ಯಾಬಿನ್ ಸಿಬ್ಬಂದಿಗೆ ಏನಾದರೂ ಔಷಧಿ ಇದೆಯೇ ಎಂದು ಕೇಳಿದರು. ತಕ್ಷಣ ಸಿಬ್ಬಂದಿಗಳು ತುರ್ತು ಕಿಟ್​​ಗಳನ್ನು ನೀಡಿದ್ದಾರೆ. ಆಮ್ಲಜನಕ ಮತ್ತು ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ ಹೊರತುಪಡಿಸಿ, ಅವರು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆಂದು ಮೇಲ್ವಿಚಾರಣೆ ಮಾಡಲು ಇತರ ಯಾವುದೇ ಉಪಕರಣಗಳು ವಿಮಾನದಲ್ಲಿ ಇರಲಿಲ್ಲ ಎಂದು ಅವರು ಹೇಳಿದರು.

ವಿಮಾನದಲ್ಲಿದ್ದ ಇತರ ಪ್ರಯಾಣಿಕರೊಂದಿಗೆ ಮಾತನಾಡಿದ ನಂತರ, ಡಾ. ವೇಮಲಾ ಅವರು ಹೃದಯ ಬಡಿತ ಮಾನಿಟರ್, ರಕ್ತದೊತ್ತಡ ಯಂತ್ರ, ಪಲ್ಸ್ ಆಕ್ಸಿಮೀಟರ್ ಮತ್ತು ಗ್ಲೂಕೋಸ್ ಮೀಟರ್‌ ಮೂಲಕ ಆತನಿಗೆ ಚಿಕಿತ್ಸೆ ನೀಡಲಾಯಿತು. ಆದರೆ ಆತನಿಗೆ ಪ್ರಜ್ಞೆ ಬಂದಾಗ ವೈದ್ಯರೊಂದಿಗೆ ಮಾತನಾಡುತ್ತಿದ್ದಂತೆ ಥಟ್ಟನೆ ಮತ್ತೆ ಹೃದಯ ಸ್ತಂಭನವಾಗಿದೆ. ಮತ್ತೆ ದೀರ್ಘವಧಿಯ ಚಿಕಿತ್ಸೆ ನೀಡುವ ಅಗತ್ಯವಿತ್ತು.

ಪತ್ರಿಕಾ ಪ್ರಕಟಣೆಯ ಪ್ರಕಾರ, ಡಾ.ವೇಮಲಾ ಅವರು, ಸುಮಾರು ಎರಡು ಗಂಟೆಗಳ ಕಾಲ ಆತನಿಗೆ ಉತ್ತಮ ನಾಡಿಮಿಡಿತ ಅಥವಾ ಯೋಗ್ಯವಾದ ರಕ್ತದೊತ್ತಡವನ್ನು ಹೊಂದಿರಲಿಲ್ಲ, 5 ಗಂಟೆಗಳ ಕಾಲ ಅವರಿಗೆ ವಿಮಾನದಲ್ಲಿ ಚಿಕಿತ್ಸೆ ನೀಡಲಾಗಿತ್ತು, ಇದು ನಮಗೆ ಮೊದಲ ಅನುಭವ ಮತ್ತು ಅತ್ಯಂತ ಭಯಾನಕವಾಗಿತ್ತು ಎಂದು ವಿಮಾನ ಸಿಬ್ಬಂದಿಗಳು ಹೇಳಿದ್ದಾರೆ.

ಹೃದಯಸ್ತಂಭವಾದ ವ್ಯಕ್ತಿಯ ಸ್ಥಿತಿಯನ್ನು ಕಂಡು ಹೆಚ್ಚಿನ ಚಿಕಿತ್ಸೆಗಾಗಿ ಪೈಲಟ್ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವ್ಯವಸ್ಥೆ ಮಾಡಿದರು, ನಂತರ ಅಲ್ಲಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆ ವ್ಯಕ್ತಿ ಒದ್ದಾಟ ಮತ್ತು ಅಲ್ಲಿದ್ದ ಇತರ ಪ್ರಯಾಣಿಕರ ಆತಂಕ ನಮಗೆಲ್ಲರಿಗೂ ಇದು ತುಂಬಾ ಭಾವನಾತ್ಮಕವಾಗಿತ್ತು. ಇಳಿಯುವ ಹೊತ್ತಿಗೆ ಆ ವ್ಯಕ್ತಿ ಗುಣಮುಖವಾಗಿದ್ದರು, ಆದರೂ ಅವರಿಗೆ ಹೆಚ್ಚಿನ ಚಿಕಿತ್ಸೆ ಬೇಕು ಎಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿ ಕಣ್ಣೀರಿನೊಂದಿಗೆ ಧನ್ಯವಾದಗಳನ್ನು ಅರ್ಪಿಸಿದರು ಎಂದು ಡಾ ವೇಮಲಾ ಹೇಳಿದರು. ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ತಂಡದೊಂದಿಗೆ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಲಾಗಿತ್ತು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:06 pm, Fri, 6 January 23