ಮೂರನೇ ಅಲೆ ಬಂದಲ್ಲಿ ಅದನ್ನು ಎದುರಿಸಲು ಸಕಲ ಸಿದ್ಧತೆಗಳನ್ನು ನಮ್ಮ ಸರ್ಕಾರ ಮಾಡಿಕೊಳ್ಳುತ್ತಿದೆ: ಕೇಜ್ರಿವಾಲ್

ಮೂರನೇ ಅಲೆ ಬಂದಲ್ಲಿ ಅದನ್ನು ಎದುರಿಸಲು ಸಕಲ ಸಿದ್ಧತೆಗಳನ್ನು ನಮ್ಮ ಸರ್ಕಾರ ಮಾಡಿಕೊಳ್ಳುತ್ತಿದೆ: ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ಕಳೆದೆರಡು ವಾರಗಳಿಂದ ದೆಹಲಿಯಲ್ಲಿ ಸೋಂಕಿನ ಪ್ರಕರಣಗಳು ಮತ್ತು ಪಾಸಿಟಿವಿಟಿ ದರ ತ್ವರಿತಗತಿಯಲ್ಲಿ ಇಳಿಮುಖಗೊಳ್ಳುತ್ತಿದೆ. ಕಳೆದ 24 ಗಂಟೆಗಳಲ್ಲಿ, 0.5ಪಾಸಿಟಿವಿಟಿ ದರದೊಂದಿಗೆ 400 ತಾಜಾ ಪ್ರಕರಣಗಳು ವರದಿಯಾಗಿವೆ ಎಂದು ಶನಿವಾರದಂದು ಕೇಜ್ರಿವಾಲ್ ಹೇಳಿದರು. ಏಪ್ರಿಲ್ 20 ರಂದು ದೆಹಲಿಯಲ್ಲಿ ಅತ್ಯಧಿಕ 28,000 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು.

TV9kannada Web Team

| Edited By: Rajesh Duggumane

Jun 05, 2021 | 8:32 PM

ನವದೆಹಲಿ:  ದೆಹಲಿಯಲ್ಲಿ ಕೊವಿಡ್-19 ಪಿಡುಗಿನ ಮೂರನೇ ಅಲೆ ತಲೆದೋರಿದರೆ, ಒಂದು ದಿನದಲ್ಲಿ 37,000ಸೋಂಕಿತರನ್ನು ನಿರ್ವಹಿಸಲು ದೆಹಲಿ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಶುಕ್ರವಾರದಂದು ಅಧಿಕಾರಿಗಳೊಂದಿಗೆ ನಡೆಸಿದ ಎರಡು ಸಭೆಗಳಲ್ಲಿ, ಮೂಲ ಹಂತದಲ್ಲಿ 37,000 ಸೋಂಕಿತರ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು. ಒಂದು ವೇಳೆ ಇದಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾದರೆ ಅದಕ್ಕೂ ವ್ಯವಸ್ಥೆ ಮಾಡಲು ನಾವು ತಯಾರಿದ್ದೇವೆ. ಬೆಡ್​ಗಳು, ಐಸಿಯು, ಮಕ್ಕಳಿಗಾಗಿ ಬೆಡ್​ಗಳು, ಆಕ್ಸಿಜನ್ ಮತ್ತು ಔಷಧಿ ಎಲ್ಲದಕ್ಕೂ ನಾವು ಲೆಕ್ಕಾಚಾರ ಮಾಡಿಕೊಂಡಿದ್ದೇವೆ. ಮಕ್ಕಳಲ್ಲಿ ಹೆಚ್ಚು ಸೋಂಕು ಕಂಡು ಬಂದರೆ ಸ್ಥಿತಿಯನ್ನು ನಿಭಾಯಿಸಲು ಮಕ್ಕಳ ರೋಗ ತಜ್ಞರ ಟಾಸ್ಕ್​ಪೋರ್ಸನ್ನು ತಯಾರು ಮಾಡಲಾಗಿದೆ. ಉದಾಹರಣೆಗೆ ಹೇಳುವುದಾದರೆ, ಲಭ್ಯವಿರುವ ಐಸಿಯು ಬೆಡ್​ಗಳಲ್ಲಿ ಎಷ್ಟನ್ನು ಮಕ್ಕಳಿಗಾಗಿ ಮೀಸಲಿಡಬೇಕು ಎನ್ನುವ ಅಂಶವನ್ನು ಲೆಕ್ಕ ಮಾಡಲಾಗಿದೆ. ಮಾಸ್ಕ್​ ಮತ್ತು ಮಕ್ಕಳಿಗೆ ಬಳಸುವ ಉಪಕರಣಗಳು ಭಿನ್ನವಾಗಿರಲಿವೆ,’ ಎಂದು ಕೇಜ್ರಿವಾಲ್ ಹೇಳಿದರು.

ಕಳೆದೆರಡು ವಾರಗಳಿಂದ ದೆಹಲಿಯಲ್ಲಿ ಸೋಂಕಿನ ಪ್ರಕರಣಗಳು ಮತ್ತು ಪಾಸಿಟಿವಿಟಿ ದರ ತ್ವರಿತಗತಿಯಲ್ಲಿ ಇಳಿಮುಖಗೊಳ್ಳುತ್ತಿದೆ. ಕಳೆದ 24 ಗಂಟೆಗಳಲ್ಲಿ, 0.5ಪಾಸಿಟಿವಿಟಿ ದರದೊಂದಿಗೆ 400 ತಾಜಾ ಪ್ರಕರಣಗಳು ವರದಿಯಾಗಿವೆ ಎಂದು ಶನಿವಾರದಂದು ಕೇಜ್ರಿವಾಲ್ ಹೇಳಿದರು. ಏಪ್ರಿಲ್ 20 ರಂದು ದೆಹಲಿಯಲ್ಲಿ ಅತ್ಯಧಿಕ 28,000 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು.

ದೆಹಲಿಯಲ್ಲಿ ಅತ್ಯಂತ ಮಾರಣಾಂತಿಕವಾಗಿದ್ದ ಎರಡನೇ ಅಲೆಯಲ್ಲಿ ಆಮ್ಲಜನಕದ ಲಭ್ಯತೆ ದೊಡ್ಡ ಸಮಸ್ಯೆ ಸೃಷ್ಟಿಸಿತು ಎಂದು ಕೇಜ್ರಿವಾಲ್ ಹೇಳಿದರು.

‘ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಗದಂತಾಗಿತ್ತು, ಜನರಿಗೆ ಬೆಡ್​​ಗಳೂ ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ.ಆದರೆ ಆಂತಮವಾಗಿ ಸುಪ್ರೀಮ್ ಕೋರ್ಟಿನ ಮಧ್ಯಸ್ತಿಕೆ ಮತ್ತು ಕೇಂದ್ರ ಸರ್ಕಾರದ ನೆರವಿನಿಂದ ನಾವು ಆಕ್ಸಿಜನ್ ಪಡೆಯುವಂತಾಯಿತು. ಆದರೆ ಅದನ್ನು ಪಡೆಯುವವರೆಗೆ ಎಲ್ಲರಲ್ಲೂ ಅತಂಕ ಮನೆಮಾಡಿತ್ತು. ಒಂದು ವೇಳೆ ಮೂರನನೇ ಅಲೆ ಬಂದರೆ ನಾವು ಇಂಥ ಪರಿಸ್ಥಿತಿಯನ್ನಯ ಎದುರಿಸಲಾರೆವು. ಯಾಕೆಂದರೆ, 420 ಮೆಟ್ರಿಕ್ ಟನ್ ಸಾಮರ್ಥ್ಯದ ಆಕ್ಸಿಜನ್ ಸ್ಟೋರೇಜ್ ವ್ಯವಸ್ಥೆಯನ್ನು ನಾವು ಮಾಡಿಕೊಳ್ಳುತ್ತಿದ್ದೇವೆ. ಇಂದ್ರಪ್ರಸ್ಥ ಗ್ಯಾಸ್​ ಸಂಸ್ಥೆಗೆ 150 ಟನ್ ಆಕ್ಸಿಜನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಹೇಳಲಾಗಿದೆ. ಅದಕ್ಕೆ 18 ತಿಂಗಳು ಕಾಲಾವಕಾಶ ಹಿಡಿಯುತ್ತದೆ ಎಂದು ಕಂಪನಿ ಹೇಳಿದೆ. ಆದರೆ ಬೇರೆ ಎಲ್ಲಿಂದಾದರೂ ನಾವು ಏರ್ಪಾಟು ಮಾಡಿಕೊಳ್ಳಬೇಕು,’ ಎಂದು ಕೇಜ್ರಿವಾಲ್ ಹೇಳಿದರು.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶದ ಪ್ರಕಾರ ದೆಹಲಿಯಲ್ಲಿ ಯಾವುದೇ ಭಾರೀ ಉದ್ದಿಮೆ ನಡೆಯದಿರುವ ಕಾರಣ ನಗರದಲಲ್ಲಿ ಆಕ್ಸಿಜನ್ ಉತ್ಪಾದಿಸುವ ಘಟಕಗಳಿಲ್ಲ. ದೆಹಲಿ ಔದ್ಯೋಗಿಕ ನಗರವೂ ಅಲ್ಲದಿರುವುದರಿಂದ ಟ್ಯಾಂಕರ್​ಗಳು ಸಹ ಲಭ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದರು.

‘ನಾವು 25 ಟ್ಯಾಂಕರ್​ಗಳನ್ನು ಖರೀದಿಸುತ್ತಿದ್ದೇವೆ ಮತ್ತು 64 ಚಿಕ್ಕ ಪ್ರಮಾಣದ ಆಕ್ಸಿಜನ್​ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಇದರ ಪ್ರಕ್ರಿಯೆ ಜಾರಿಯಲ್ಲಿದ್ದು ಎರಡು ತಿಂಗಳ ಅವಧಿಯಲ್ಲಿ ಮುಗಿಯುವ ನಿರೀಕ್ಷೆಯಿದೆ. ಆಕ್ಸಿಜನ್ ಸಿಲಿಂಡರ್ ಮತ್ತು ಸಾಂದ್ರಕಗಳನ್ನೂ ನಾವು ಖರೀದಿಸುತ್ತಿದ್ದೇವೆ. ಸೋಂಕಿತರು ತಾವು ತೆಗೆದುಕೊಂಡ ಮೆಡಿಸಿನ್​ಗಳ ವಿವರಣೆಯನ್ನು ವಾಟ್ಸಾಪ್​ನಲ್ಲಿ ಶೇರ್​ ಮಾಡುವುದರಿಂದ ಅವು ಮಾರ್ಕೆಟ್​ನಲ್ಲಿ ಲಭ್ಯವಾಗದೆ ಹೋಗುತ್ತವೆ. ವೈದ್ಯರ ಮತ್ತು ತಜ್ಞರ ಒಂದು ಸಮಿತಿಯನ್ನು ನಾವು ರಚಿಸಲಿದ್ದು ಕೋವಿಡ್-19 ಸೋಂಕು ನಿರ್ವಹಣೆಗೆ ಯಾವ ಔಷಧಿ ಸೂಕ್ತ ಅಂತ ಅವರೇ ನಿರ್ಧರಿಸುತ್ತಾರೆ. ಅಮೇಲೆ ನಾವು ಅವುಗಳ ಖರೀದಿ ಪ್ರಕ್ರಿಯೆಯನ್ನು ಆರಂಭಿಸುತ್ತೇವೆ. ಯಾವುದಾದರೂ ಔಷಧಿ ಉಪಯೋಗವಿಲ್ಲದ್ದು ಅಂತಾದರೆ ನಾವು ಒಂದು ಜಾಗೃತಿ ಅಭಿಯಾನ ನಡೆಸಿ ಜನರು ಅದನ್ನು ಖರೀದಿಸಿ ಹಣ ವ್ಯರ್ಥ ಮಾಡಬಾರದು ಅಂತ ಹೇಳುತ್ತೇವೆ. ಅಗತ್ಯ ಔಷಧಿಗಳಿಗಾಗಿ ಬಫರ್ ಸ್ಟಾಕನ್ನು ನಾವು ನಿರ್ಮಿಸುತ್ತೇವೆ,’ ಎಂದು ಕೇಜ್ರಿವಾಲ್ ಹೇಳಿದರು.

ಇದನ್ನೂ ಓದಿ: ಕೊರೊನಾ ಕೆಟ್ಟ ಕಾಲದಲ್ಲಿ… ಪ್ರಧಾನಿ ನರೇಂದ್ರ ಮೋದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೊಟ್ಟ ನಾಲ್ಕು ಸಲಹೆಗಳು

Follow us on

Related Stories

Most Read Stories

Click on your DTH Provider to Add TV9 Kannada