ಇತಿಹಾಸ ಸೃಷ್ಟಿಸಿದ ಐಎನ್‌ಎಸ್ ವಿಕ್ರಾಂತ್; ಭಾರತದ ಸ್ವದೇಶಿ ಯುದ್ಧನೌಕೆ ಮೇಲೆ ಮೊದಲ ಬಾರಿಗೆ ರಫೇಲ್ ಮರೀನ್ ಲ್ಯಾಂಡಿಂಗ್
ಭಾರತೀಯ ನೌಕಾಪಡೆಯು ದೇಶೀಯ ನಿರ್ಮಿತ ವಿಮಾನವಾಹಕ ಯುದ್ಧನೌಕೆ ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ವಿಕ್ರಮಾದಿತ್ಯದಿಂದ ಕಾರ್ಯಾಚರಣೆ ನಡೆಸಲು ಫ್ರಾನ್ಸ್ ಮೂಲದ 'ರಫೇಲ್ ಮೆರೀನ್' ಯುದ್ಧ ವಿಮಾನಗಳನ್ನು ಮೌಲ್ಯಮಾಪನ ಮಾಡಲು ಗೋವಾದಲ್ಲಿ ಬೃಹತ್ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿದೆ. ನೌಕಾಪಡೆಯ ಯುದ್ಧ ವಿಮಾನಗಳ ವಿಭಾಗಕ್ಕೆ ರಫೇಲ್ ಸೇರ್ಪಡೆಗೊಳಿಸುವ ಪ್ರಕ್ರಿಯೆಯಲ್ಲಿ ಇದು ಅತ್ಯಂತ ಪ್ರಮುಖ ಮೈಲಿಗಲ್ಲಾಗಿದೆ. ಈ ಪರೀಕ್ಷಾರ್ಥ ಪ್ರಯೋಗಗಳು ಗೋವಾದಲ್ಲಿರುವ ನೌಕಾಪಡೆಯ ನೆಲೆಯಾದ ಐಎನ್‌ಎಸ್ ಹಂಸದಲ್ಲಿ ನಡೆಯುತ್ತಿವೆ.

ನವದೆಹಲಿ, ಅಕ್ಟೋಬರ್ 30: ಭಾರತೀಯ ನೌಕಾಪಡೆಯ ಬಲವರ್ಧನೆಯಲ್ಲಿ ಅತ್ಯಂತ ಐತಿಹಾಸಿಕ ಮೈಲಿಗಲ್ಲು ದಾಖಲಾಗಿದೆ. ಪ್ರಾನ್ಸ್ ಮೂಲದ ಅತ್ಯಾಧುನಿಕ ಸಮುದ್ರ ಆಧಾರಿತ ಯುದ್ಧ ವಿಮಾನ ‘ರಫೇಲ್ ಮೆರೀನ್’ ಭಾರತದ ದೇಶೀಯ ನಿರ್ಮಿತ ವಿಮಾನವಾಹಕ ಯುದ್ಧನೌಕೆ ಐಎನ್‌ಎಸ್ ವಿಕ್ರಾಂತ್ ಡೆಕ್ ಮೇಲೆ ಯಶಸ್ವಿಯಾಗಿ ಮೊದಲ ಬಾರಿ ಲ್ಯಾಂಡಿಂಗ್ ನಡೆಸಿದೆ. ಈ ಯಶಸ್ವಿ ಪರೀಕ್ಷಾರ್ಥ ಲ್ಯಾಂಡಿಂಗ್ ಮೂಲಕ ರಫೇಲ್ ಮೆರೀನ್ ಯುದ್ಧ ವಿಮಾನಗಳು ಭಾರತೀಯ ನೌಕಾಪಡೆಯ ರಕ್ಷಣಾ ಸಾಲಿಗೆ ಅಧಿಕೃತವಾಗಿ ಸೇರ್ಪಡೆಯಾಗುವ ಪ್ರಕ್ರಿಯೆ ಮತ್ತಷ್ಟು ಹತ್ತಿರವಾಗಿದೆ.
ಫ್ರಾನ್ಸ್‌ನ ದಸಾಲ್ಟ್ ಏವಿಯೇಷನ್ ನಿರ್ಮಿಸಿದ ರಫೇಲ್ ಮೆರೀನ್ ಅನ್ನು ಮೂಲತಃ ಫ್ರಾನ್ಸ್‌ನ ‘ಚಾರ್ಲ್ಸ್ ಡಿ ಗಲ್ಲೆ’ ನೌಕೆಗೆ ವಿನ್ಯಾಸಗೊಳಿಸಲಾಗಿತ್ತು. ಅದು ಕ್ಯಾಟಪಲ್ಟ್ ತಂತ್ರಜ್ಞಾನವನ್ನು ಬಳಸುತ್ತದೆ. ಆದರೆ, ಭಾರತೀಯ ನೌಕೆಗಳು ಸ್ಕಿ-ಜಂಪ್ ಮತ್ತು ಅರೆಸ್ಟರ್ ವೈರ್ ಹೊಂದಿರುವ STOBAR ವ್ಯವಸ್ಥೆಯನ್ನು ಹೊಂದಿವೆ. ಈ ಕಾರಣದಿಂದ ಭಾರತೀಯ ವಾತಾವರಣಕ್ಕೆ ವಿಮಾನದ ಹೊಂದಾಣಿಕೆಯನ್ನು ದೃಢೀಕರಿಸಲು ಈ ಪ್ರಯೋಗಗಳು ಅತ್ಯಗತ್ಯವಾಗಿವೆ.
#WATCH | A Rafale Marine aircraft successfully landed on board the Indian Navy’s indigenous Aircraft Carrier INS Vikrant on its maiden attempt on 29 Oct 26.
The ongoing trials mark the first steps towards operationalisation of the aircraft in the Indian Navy.
(Source: Indian Navy)
— ANI (@ANI) October 30, 2026
ರಫೇಲ್ ಮೆರೀನ್ ವಿಮಾನಗಳು ಸಮುದ್ರದ ಮಧ್ಯದಲ್ಲಿ ನೌಕಾನೆಲೆಯಿಂದಲೇ ಶತ್ರುಗಳ ಗುರಿಗಳನ್ನು ನಿಖರವಾಗಿ ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿವೆ. ಸುಧಾರಿತ ರೆಡಾರ್, ಕ್ಷಿಪಣಿ ವ್ಯವಸ್ಥೆ ಹಾಗೂ ದೀರ್ಘ ಶ್ರೇಣಿಯ ದಾಳಿ ಸಾಮರ್ಥ್ಯ ಇವುಗಳ ವಿಶೇಷತೆಯಾಗಿದೆ. ಪ್ರಸ್ತುತ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಿಗ್-29ಕೆ ಯುದ್ಧ ವಿಮಾನಗಳ ಸಾಲಿಗೆ ಬಲ ತುಂಬಲು ಮತ್ತು ಹಂತ-ಹಂತವಾಗಿ ಅವುಗಳ ಜಾಗವನ್ನು ತುಂಬಲು ಭಾರತ ಸರ್ಕಾರವು ಫ್ರಾನ್ಸ್‌ನಿಂದ 26 ರಫೇಲ್ ಮೆರೀನ್ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ.
ಇದನ್ನೂ ಓದಿ: ‘ರಫೇಲ್ ಯುದ್ಧ ವಿಮಾನಗಳ ಬಗ್ಗೆ ಪಾಕಿಸ್ತಾನದ ಸುಳ್ಳು ಬಯಲು’; ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ
ರಫೇಲ್ ಮೆರೀನ್ ವಿಮಾನದ ರೆಕ್ಕೆಗಳ ಅಗಲ ಸುಮಾರು 10.9 ಮೀಟರ್ ಇರುವುದರಿಂದ, ನೌಕೆಯ ಎಲಿವೇಟರ್‌ಗಳು ಮತ್ತು ಹ್ಯಾಂಗರ್‌ಗಳಲ್ಲಿ ವಿಮಾನಗಳನ್ನು ಇರಿಸಲು ಅನುಕೂಲವಾಗುವಂತೆ ವಿಮಾನವಾಹಕ ನೌಕೆಗಳಲ್ಲಿ ಅಗತ್ಯವಿರುವ ಸಣ್ಣಪುಟ್ಟ ಮಾರ್ಪಾಡುಗಳ ಬಗ್ಗೆ ನೌಕಾಪಡೆ ಪರಿಶೀಲಿಸುತ್ತಿದೆ.
63,000 ಕೋಟಿ ರೂ. ವೆಚ್ಚದ ಒಪ್ಪಂದ:
2025ರ ಏಪ್ರಿಲ್ 28ರಂದು ಭಾರತ ಮತ್ತು ಫ್ರಾನ್ಸ್ ನಡುವೆ 63,000 ಕೋಟಿ ರೂ. ಮೌಲ್ಯದ ಸರ್ಕಾರಾಂತರ ಒಪ್ಪಂದಕ್ಕೆ (ಐಜಿಎ) ಸಹಿ ಹಾಕಲಾಗಿತ್ತು. ಇದರ ಅಡಿಯಲ್ಲಿ 22 ಸಿಂಗಲ್ ಸೀಟರ್ ಯುದ್ಧ ವಿಮಾನಗಳು ಮತ್ತು 4 ಟ್ವಿನ್ ಸೀಟರ್ ತರಬೇತಿ ವಿಮಾನಗಳನ್ನು ಖರೀದಿಸಲಾಗುತ್ತಿದೆ. ಈ ಒಪ್ಪಂದದ ಭಾಗವಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸಿಮ್ಯುಲೇಟರ್‌ಗಳು, ಪೈಲಟ್‌ಗಳ ತರಬೇತಿಯ ಜೊತೆಗೆ ಭಾರತೀಯ ಮೂಲದ ಸ್ವದೇಶಿ ಕ್ಷಿಪಣಿಗಳನ್ನು ರಫೇಲ್‌ನಲ್ಲಿ ಸಂಯೋಜಿಸುವ ತಂತ್ರಜ್ಞಾನ ಹಸ್ತಾಂತರವೂ ಒಳಗೊಂಡಿದೆ.
ಇದನ್ನೂ ಓದಿ: ವಿಮಾನ ಇಂಧನ ಬೆಲೆ ಏರಿಕೆ ಎಫೆಕ್ಟ್; ವಿಮಾನ ಪ್ರಯಾಣದರ ಏರಿಕೆ ಅನಿವಾರ್ಯ ಎಂದ ಇಂಡಿಗೋ ಸಿಇಒ
ಈ ವಿಮಾನಗಳು ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ವಿಕ್ರಮಾದಿತ್ಯದಿಂದ ಕಾರ್ಯಾಚರಣೆ ನಡೆಸಲಿದ್ದು, ನೌಕಾಪಡೆಯ ವಾಯು ರಕ್ಷಣೆ ಹಾಗೂ ಕಡಲ ಮೇಲಿನ ದಾಳಿ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿವೆ. ಈ ಹಿಂದೆ 2022ರಲ್ಲೂ ಬೋಯಿಂಗ್ ಸಂಸ್ಥೆಯ ಎಫ್/ಎ-18 ಸೂಪರ್ ಹಾರ್ನೆಟ್ ವಿಮಾನದೊಂದಿಗೆ ಸ್ಪರ್ಧೆಯಿದ್ದಾಗ ರಫೇಲ್ ಮೆರೀನ್ ಅನ್ನು ಗೋವಾದ ಇದೇ ನೆಲೆಯಲ್ಲಿ ಯಶಸ್ವಿಯಾಗಿ ಮೌಲ್ಯಮಾಪನ ಮಾಡಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:15 pm, Fri, 30 October 26




