AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆಗೆ ಗುಲಾಬಿ ಬಣ್ಣ ಹಚ್ಚಿ ಫೋಟೊಶೂಟ್, ಒಂದು ತಿಂಗಳಲ್ಲೇ ಆನೆ ಸಾವು

ಈಗಾಗಲೇ ವಿದೇಶಿ ಛಾಯಾಗ್ರಾಹಕ ಜೂಲಿಯಾ ಎಂಬುವವರು  ತಮ್ಮ ಫೋಟೊಶೂಟ್​ಗೆ ಜೈಪುರದ ಆನೆಯನ್ನು ಬಳಸಿಕೊಂಡಿದ್ದಕ್ಕೆ ಭಾರಿ ವಿವಾದ ಸೃಷ್ಟಿಯಾಗಿತ್ತು. ಆನೆ ಹಾಗೂ ಮಾಡೆಲ್​ ಇಬ್ಬರಿಗೂ ಗುಲಾಬಿ ಬಣ್ಣವನ್ನು ಬಳಿಯಲಾಗಿತ್ತು. ಇದಾಗಿ ಒಂದು ತಿಂಗಳಿಗೆ ಆನೆ ಸಾವನ್ನಪ್ಪಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಫೋಟೋಶೂಟ್‌ನಲ್ಲಿ ಆನೆಗೆ ಗುಲಾಬಿ ಬಣ್ಣ ಬಳಿದು ಅದರ ಮೇಲೆ ಮಾಡೆಲ್ ಕುಳಿತಿರುವುದನ್ನು ಕಾಣಬಹುದು.ಇದು ಸಾರ್ವಜನಿಕರ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು.ಚಂಚಲ್ ಎಂಬ ಹೆಸರಿನ ಈ ಆನೆಗೆ 65 ವರ್ಷ ವಯಸ್ಸಾಗಿದ್ದು, ಕಳೆದ ತಿಂಗಳು ಸಾವನ್ನಪ್ಪಿದೆ.

ಆನೆಗೆ ಗುಲಾಬಿ ಬಣ್ಣ ಹಚ್ಚಿ ಫೋಟೊಶೂಟ್, ಒಂದು ತಿಂಗಳಲ್ಲೇ ಆನೆ ಸಾವು
ಆನೆImage Credit source: Free Press Journal
ನಯನಾ ರಾಜೀವ್
|

Updated on: Apr 02, 2026 | 8:07 AM

Share

ಜೈಪುರ, ಏಪ್ರಿಲ್ 02: ವಿದೇಶಿ ಛಾಯಾಗ್ರಾಹಕ ಫೋಟೊಶೂಟ್​ಗೆ ಬಳಸಿಕೊಂಡಿದ್ದ ಆನೆ ‘ಚಂಚಲ್’ ಸಾವನ್ನಪ್ಪಿದೆ. ಅಂದು ಆನೆ(Elephant) ಹಾಗೂ ಮಾಡೆಲ್​ ಇಬ್ಬರಿಗೂ ಗುಲಾಬಿ ಬಣ್ಣವನ್ನು ಬಳಿಯಲಾಗಿತ್ತು ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾಗಿ ಒಂದು ತಿಂಗಳಿಗೆ ಆನೆ ಸಾವನ್ನಪ್ಪಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಚಂಚಲ್ ಎಂಬ ಹೆಸರಿನ ಈ ಆನೆಗೆ 65 ವರ್ಷ ವಯಸ್ಸಾಗಿದ್ದು, ಕಳೆದ ತಿಂಗಳು ಸಾವನ್ನಪ್ಪಿದೆ. ಜೈಪುರ ಆನೆಗಳ ಸಂಘವು ಇದು ಸಹಜ ಸಾವು ಎಂದು ದೃಢಪಡಿಸಿದೆ. ಆನೆ ಗ್ರಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಲ್ಲು ಖಾನ್, ಆನೆಗೆ ಗುಲಾಬಿ ಬಣ್ಣ ಬಳಿಯಲಾಗಿತ್ತು, ನಂತರ ಅದನ್ನು ಸ್ವಲ್ಪ ಸಮಯದ ನಂತರ ಅಳಿಸಲಾಗಿತ್ತು.

ಇದು ನೈಸರ್ಗಿಕ ಬಣ್ಣವಾಗಿತ್ತು.ಒಂದು ಫೋಟೋವನ್ನು ಸುಂದರವಾಗಿ ಕಾಣುವಂತೆ ಮಾಡಲು ಆನೆಯನ್ನು ನೋವುಂಟು ಮಾಡುವುದು ತಪ್ಪು, ಇದಕ್ಕಾಗಿ ಎಐ ಬಳಸಬಹುದಿತ್ತು.ಆನೆಗಳ ಚರ್ಮ ಸೂಕ್ಷ್ಮವಾಗಿರುತ್ತದೆ ಎಂದರು.

ಮತ್ತಷ್ಟು ಓದಿ: Video: ಗುಲಾಬಿ ಆನೆಯ ಮೇಲೆ ಗುಲಾಬಿ ಸುಂದರಿ, ಜೈಪುರದಲ್ಲಿ ಯುವತಿಯ ಫೋಟೊಶೂಟ್​ಗೆ ಆಕ್ರೋಶ

ನಾವು ಆನೆಯನ್ನು ಚಿತ್ರಿಸಲು ನೈಸರ್ಗಿಕ ಬಣ್ಣವನ್ನು ಬಳಸಿದ್ದೇವೆ, ಹಬ್ಬಗಳ ಸಮಯದಲ್ಲಿ ಬಳಸಲಾಗುವ ಅದೇ ರೀತಿಯ ಬಣ್ಣ. ಆದ್ದರಿಂದ, ಆ ಬಣ್ಣವು ಪ್ರಾಣಿಗಳಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಛಾಯಾಗ್ರಾಹಕ ಜೂಲಿಯಾ ಹೇಳಿದ್ದಾರೆ. ಸಾವಯವ ಬಣ್ಣವು ಆನೆಗೆ ಹಾನಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗಣೇಶ ದೇವಸ್ಥಾನದಲ್ಲಿ ಫೋಟೋಶೂಟ್ ಮಾಡಲಾಗಿದೆ ಫೋಟೋಶೂಟ್ ಸ್ಥಳವನ್ನು ಹುಡುಕುವುದು ಒಂದು ಸವಾಲಿಗಿಂತ ಕಡಿಮೆಯಿಲ್ಲ , ಪಾರಂಪರಿಕ ತಾಣಗಳು, ಅನುಮತಿಗಳು, ಸರ್ಕಾರಿ ಕಾರ್ಯವಿಧಾನಗಳು ಸ್ವಲ್ಪ ಕಷ್ಟವಾಗಿಯೇ ಇತ್ತು.ಭಾರತದಂತಹ ಸಂಪ್ರದಾಯವಾದಿ ಸಮಾಜದಲ್ಲಿ, ಅರೆಬರೆ ಬಟ್ಟೆ ಧರಿಸಿ ಗುಲಾಬಿ ಬಣ್ಣ ಬಳಿದು ಚಿತ್ರೀಕರಣಕ್ಕೆ ಪೋಸ್ ನೀಡುವುದು ಕಷ್ಟಕರವಾಗಿತ್ತು. ಡಜನ್‌ಗಟ್ಟಲೆ ಮಾಡೆಲ್‌ಗಳಿಗೆ ಸಂದೇಶ ಕಳುಹಿಸಿದೆ, ಆದರೆ ಬಹುತೇಕ ಎಲ್ಲರೂ ನಿರಾಕರಿಸಿದರು.ನಂತರ ಯಶಸ್ವಿ ಇದಕ್ಕೆ ಸಿದ್ಧರಾದರು ಎಂದು ವಿವರಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us