ಕಾವೇರಿಯ ಮತ್ತಷ್ಟು ನೀರು ಬಳಕೆಗೆ ತಮಿಳುನಾಡು ಯೋಜನೆ: ಸುಪ್ರೀಂಕೋರ್ಟ್​ಗೆ ಕರ್ನಾಟಕ ತಕರಾರು ಅರ್ಜಿ

ಕರ್ನಾಟಕದಿಂದ ಸಿಗುತ್ತಿರುವ ಹೆಚ್ಚುವರಿ 45 ಟಿಎಂಸಿ ಅಡಿಗಳಷ್ಟು ನೀರನ್ನು ನೀರಾವರಿಗೆ ಬಳಸಿಕೊಳ್ಳುವ ತಮಿಳುನಾಡಿನ ಉದ್ದೇಶಕ್ಕೆ ಕರ್ನಾಟಕ ಆಕ್ಷೇಪ ಸಲ್ಲಿಸಿದೆ.

ಕಾವೇರಿಯ ಮತ್ತಷ್ಟು ನೀರು ಬಳಕೆಗೆ ತಮಿಳುನಾಡು ಯೋಜನೆ: ಸುಪ್ರೀಂಕೋರ್ಟ್​ಗೆ ಕರ್ನಾಟಕ ತಕರಾರು ಅರ್ಜಿ
ಸುಪ್ರೀಂಕೋರ್ಟ್​ ಮತ್ತು ಕಾವೇರಿ ನದಿ
Follow us
TV9 Web
| Updated By: Digi Tech Desk

Updated on:Jul 20, 2021 | 10:54 AM

ದೆಹಲಿ: ಕಾವೇರಿ ಕೊಳ್ಳದಲ್ಲಿ ಹೆಚ್ಚುವರಿ ಲಭ್ಯವಿರುವ 91 ಟಿಎಂಸಿ ಅಡಿ ನೀರಿನ ಮೇಲೆ ಹಕ್ಕು ಪ್ರತಿಪಾದಿಸಿರುವ ಕರ್ನಾಟಕ ರಾಜ್ಯವು, ತಮಿಳುನಾಡು ಸರ್ಕಾರ ಯೋಜಿಸಿರುವ ಕಾವೇರಿ-ವೈಗೈ-ಗುಂಡರ್ ಸರಪಳಿ ನೀರಾವರಿ ಯೋಜನೆಯನ್ನು ವಿರೋಧಿಸಿದೆ. ಈ ಯೋಜನೆ ಸಂಬಂಧ ತಮಿಳುನಾಡು ಸರ್ಕಾರವು ಕೋರಿರುವ ಅನುಮತಿಗಳನ್ನು ಕೇಂದ್ರ ಸರ್ಕಾರ ನೀಡದಂತೆ ಪ್ರತಿಬಂಧಕ ಆದೇಶ (ಇಂಜೆಂಕ್ಷನ್) ನೀಡಬೇಕು ಎಂದೂ ಕರ್ನಾಟಕ ಸರ್ಕಾರ ಕೋರಿದೆ. ಕರ್ನಾಟಕದಿಂದ ಸಿಗುತ್ತಿರುವ ಹೆಚ್ಚುವರಿ 45 ಟಿಎಂಸಿ ಅಡಿಗಳಷ್ಟು ನೀರನ್ನು ಈ ಯೋಜನೆಯ ಮೂಲಕ ನೀರಾವರಿಗೆ ಬಳಸಿಕೊಳ್ಳುವುದು ತಮಿಳುನಾಡಿನ ಉದ್ದೇಶವಾಗಿದೆ.

ಫೆಬ್ರುವರಿ 2, 2018ರಲ್ಲಿ ಸುಪ್ರೀಂಕೋರ್ಟ್​ ನೀಡಿದ್ದ ತೀರ್ಪಿನಲ್ಲಿ ತಮಿಳುನಾಡಿಗೆ ಕರ್ನಾಟಕದಿಂದ ಪ್ರತಿವರ್ಷ ಒಟ್ಟು 177.25 ಟಿಎಂಸಿ ನೀರು ಹರಿಸಬೇಕೆಂದು ಸೂಚಿಸಲಾಗಿತ್ತು. ಬಿಳಿಗುಂಡ್ಲು ಗ್ರಾಮದಲ್ಲಿರುವ ನದಿ ನೀರಿನ ಮಾಪಕದಲ್ಲಿ ತಮಿಳುನಾಡಿಗೆ ಕರ್ನಾಟಕದಿಂದ ಹರಿದ ನೀರಿನ ಪ್ರಮಾಣವನ್ನು ಲೆಕ್ಕಹಾಕಲಾಗುತ್ತದೆ. ಕೇರಳವು ಅದರ ಪಾಲಿನ 21 ಟಿಎಂಸಿ ನೀರು ಉಳಿಸಿಕೊಂಡ ನಂತರ ಮತ್ತು ತಮಿಳುನಾಡಿಗೆ 177.25 ಟಿಎಂಸಿ ನೀರು ಹರಿಸಿದ ನಂತರವೂ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 91 ಟಿಎಂಸಿ ನೀರು ಉಳಿದುಕೊಳ್ಳುತ್ತದೆ. ಹೆಚ್ಚುವರಿಯಾಗಿ ತಮಿಳುನಾಡಿಗೆ ಹರಿಯುತ್ತಿದ್ದ ಈ ನೀರಿನ ಸದುಪಯೋಗಕ್ಕಾಗಿ ಮೇಕೆದಾಟು ಸಮೀಪ ಅಣೆಕಟ್ಟು ಕಟ್ಟಲು ಕರ್ನಾಟಕ ಯೋಚಿಸಿದೆ.

1934-35ರಿಂದ 1971-72ರ ಅವಧಿಯಲ್ಲಿ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ವರ್ಷಕ್ಕೆ ಸರಾಸರಿ 483 ಟಿಎಂಸಿ ನೀರು ಹರಿದಿದೆ. ಇದರಲ್ಲಿ ಅರ್ಧದಷ್ಟು ಪ್ರಮಾಣವನ್ನು ಕರ್ನಾಟಕ ಸರ್ಕಾರ ತನ್ನ ಲೆಕ್ಕಾಚಾರಕ್ಕೆ ಆಧಾರವಾಗಿ ತೆಗೆದುಕೊಂಡಿದೆ.

ತಮಿಳುನಾಡು ರಾಜ್ಯವು ಹೊಸದಾಗಿ ಆರಂಭಿಸಿರುವ ನದಿ ಜೋಡಣೆ ಯೋಜನೆಯಿಂದ 45 ಟಿಎಂಸಿ ನೀರು ಬಳಸಿಕೊಳ್ಳಲು ಉದ್ದೇಶಿಸಿದೆ. ಈ ಯೋಜನೆಗೆ ಅನುಮತಿ ನೀಡಿದರೆ ಕರ್ನಾಟಕವು ಹೆಚ್ಚುವರಿಯಾಗಿ ತಮಿಳುನಾಡಿಗೆ ನೀರು ಹರಿಸಲೇಬೇಕಾದ ಅನಿವಾರ್ಯತೆಗೆ ಕಟ್ಟುಬೀಳಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಈ ನೀರನ್ನು ತಮಿಳುನಾಡು ತನ್ನ ಹಕ್ಕಿನಂತೆ ಪ್ರತಿಪಾದಿಸಬಹುದು. ಆಗ ಅವರಿಗೇ ಮೇಲುಗೈ ಆಗಬಹುದು. ಹೀಗಾಗಿಯೇ ನಾವು ಆಕ್ಷೇಪ ಸಲ್ಲಿಸಿದ್ದೇವೆ ಎಂದು ಕರ್ನಾಟಕ ಸರ್ಕಾರ ಹೇಳಿದೆ.

ಫೆಬ್ರುವರಿ 2021ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದ ಕರ್ನಾಟಕ ಸರ್ಕಾರ, ನೀರಾವರಿ ಯೋಜನೆ ಆರಂಭಿಸಲು ತಮಿಳುನಾಡು ಸರ್ಕಾರಿ ಕೋರಿರುವ ಅನುಮತಿಗಳನ್ನು ನೀಡಬಾರದು ಎಂದು ವಿನಂತಿಸಿತ್ತು.

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಸಂಬಂಧ ಹದಗೆಡಿಸಿರುವ ಕಾವೇರಿ ಜಲವಿವಾದಕ್ಕೆ ಸುಮಾರು 130 ವರ್ಷಗಳ ಇತಿಹಾಸವಿದೆ. 1892 ರಿಂದಲೂ ಕಾವೇರಿ ವಿವಾದದ ಚರ್ಚೆಗಳು ನಡೆಯುತ್ತಲೇ ಇವೆ. ಬ್ರಿಟಿಷರ ಅಧೀನದಲ್ಲಿದ್ದ ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ಸಂಸ್ಥಾನಗಳು ಈ ಸಂಬಂಧ 1892ರಲ್ಲಿ ಒಪ್ಪಂದ ಮಾಡಿಕೊಂಡಿದ್ದವು. 1911ರಲ್ಲಿ ಮೈಸೂರು ಮಹಾರಾಜರು ಕೃಷ್ಣರಾಜಸಾಗರ ಜಲಾಶಯ ನಿರ್ಮಾಣಕ್ಕೆ ಮುಂದಾದಾಗ ಹಲವು ಪ್ರಶ್ನೆಗಳು ಕೇಳಿಬಂದಿದ್ದವು. ನ್ಯಾಯಮೂರ್ತಿ ಎಚ್​.ಡಿ.ಗ್ರಿಫಿನ್ಸ್​ ಎರಡೂ ಸರ್ಕಾರಗಳ ನಡುವೆ ಸಹಮತ ಮೂಡಿಸಲು ಯತ್ನಿಸಿದ್ದರು. ಆದರೆ ಈ ಒಪ್ಪಂದವನ್ನು ಲಂಡನ್​ನಲ್ಲಿದ್ದ ಬ್ರಿಟಿಷ್ ಸರ್ಕಾರದ ಭಾರತದ ಕಾರ್ಯದರ್ಶಿ ತಡೆಹಿಡಿದಿದ್ದರು. ಇದಾದ ನಂತರ 1924ರಲ್ಲಿ ಮತ್ತೊಂದು ಒಪ್ಪಂದವಾಗಿತ್ತು.

ಕಾವೇರಿ ಕೊಳ್ಳದ ಶೇ 80ರಷ್ಟು ನೀರನ್ನು ತಂಜಾವೂರು ಡೆಲ್ಟಾ ಪ್ರದೇಶಕ್ಕೆ ಮೆಟ್ಟೂರು ಜಲಾಶಯದಿಂದ ಒದಗಿಸಲು ಬ್ರಿಟಿಷ್ ಆಡಳಿತ ಮುಂದಾಗಿತ್ತು. ಈ ಕ್ರಮಕ್ಕೆ ಮೈಸೂರು ಬದ್ಧವಾಗಬೇಕಾಯಿತು. ಸ್ವಾತಂತ್ರ್ಯ ಬಂದ ನಂತರ 1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಹೇಮಾವತಿ, ಕಬಿನಿ, ಹಾರಂಗಿ ಮತ್ತಿತರರ ಕಾವೇರಿ ಉಪನದಿಗಳಿಗೆ ಹಲವು ಜಲಾಶಯಗಳನ್ನು ನಿರ್ಮಿಸಿ ತನ್ನ ಪಾಲಿನ ನೀರು ಬಳಸಿಕೊಳ್ಳಲು ಮುಂದಾಯಿತು. ಎರಡೂ ರಾಜ್ಯಗಳ ನಡುವೆ ನೀರಿನ ಬಳಕೆ ವಿವಾದದ ಕಾವು ಹೆಚ್ಚಾದ ಹಿನ್ನೆಲೆಯಲ್ಲಿ 1990ರಲ್ಲಿ ನ್ಯಾಯಾಧಿಕರಣ ರಚಿಸಲಾಯಿತು.

ತಮಿಳುನಾಡು ಸರ್ಕಾರವು ವಾರ್ಷಿಕ 360 ಟಿಎಂಸಿ ನೀರನ್ನು ಮೆಟ್ಟೂರು ಜಲಾಶಯದ ಮೂಲಕ ಬಳಸಿಕೊಳ್ಳುತ್ತೇನೆಂದು ಹಕ್ಕು ಸ್ಥಾಪಿಸಲು ಯತ್ನಿಸಿತು. ಆದರೆ ನ್ಯಾಯಾಧಿಕರಣವು 192 ಟಿಎಂಸಿ ನೀರು ಒದಗಿಸಲು ಸಮ್ಮತಿಸಿತ್ತು. ನಂತರ, ಫೆಬ್ರುವರಿ 16, 2021ರಲ್ಲು ಸುಪ್ರೀಂಕೋರ್ಟ್​ ಐತಿಹಾಸಿಕ ತೀರ್ಪು ನೀಡಿ ಈ ಪ್ರಮಾಣವನ್ನು 177.25 ಟಿಎಂಸಿಗೆ ಇಳಿಸಿತು. ಇದೀಗ ಕರ್ನಾಟಕ ಸರ್ಕಾರವು ಸಲ್ಲಿಸಿರುವ ತಕರಾರರು ಅರ್ಜಿಯು ಈ ತೀರ್ಪಿನ ಅರ್ಥೈಸುವಿಕೆಯನ್ನು ವಿನಂತಿಸುತ್ತಿದೆ.

(Karnataka Questions Tamilnadu Plan for Constructing Another Dam for Cauvery)

ಇದನ್ನೂ ಓದಿ: ಕಾವೇರಿಗೆ ತಮಿಳುನಾಡಿನಲ್ಲಿ ಮತ್ತೊಂದು ಅಣೆಕಟ್ಟೆಗೆ ಕರ್ನಾಟಕ ಆಕ್ಷೇಪ: ಸುಪ್ರೀಂಕೋರ್ಟ್​ಗೆ ತಕರಾರು ಅರ್ಜಿ

ಇದನ್ನೂ ಓದಿ: Karnataka Rain: ಕೊಡಗಿನಲ್ಲಿ ಮುಂದುವರಿದ ವರುಣ; ಕಾವೇರಿ, ಲಕ್ಷ್ಮಣ ತೀರ್ಥ ನದಿಗಳ ನೀರಿನ ಮಟ್ಟ ಏರಿಕೆ

Published On - 5:01 pm, Mon, 19 July 21

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ