ತಮಿಳುನಾಡಿನಾದ್ಯಂತ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದ ಮದ್ರಾಸ್ ಹೈಕೋರ್ಟ್
ಬೆಲೆಬಾಳುವ ವಿಗ್ರಹಗಳ ಫೋಟೊ ತೆಗೆಯುವುದು ಆಗಮ ನಿಯಮಗಳಿಗೆ (ದೇವಸ್ಥಾನದ ಆಚರಣೆಗಳಿಗೆ ಸಂಬಂಧಿಸಿದ) ವಿರುದ್ಧವಾಗಿರುವುದಲ್ಲದೆ, ದೇವಾಲಯದ ಭದ್ರತೆ ಮತ್ತು ಅದರ ಬೆಲೆಬಾಳುವ ವಸ್ತುಗಳಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ಅವರು ಹೇಳಿದರು.
ತಮಿಳುನಾಡಿನಾದ್ಯಂತ (Tamil Nadu) ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧವನ್ನು ಜಾರಿಗೆ ತರುವಂತೆ ಮದ್ರಾಸ್ (Madras High Court) ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ದೇವಾಲಯದಲ್ಲಿ ನೈರ್ಮಲ್ಯ ಮತ್ತು ಪಾವಿತ್ರ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಮೊಬೈಲ್ ಫೋನ್ ಬಳಕೆ ನಿಷೇಧಿಸಲಾಗುತ್ತಿದೆ. ಮಧುರೈನ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಆರ್ ಮಹದೇವನ್ ಮತ್ತು ನ್ಯಾಯಮೂರ್ತಿ ಜೆ ಸತ್ಯನಾರಾಯಣ ಪ್ರಸಾದ್ ಅವರು ಶುಕ್ರವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಹಿಂದೂ ಧಾರ್ಮಿಕ ಮತ್ತು ದತ್ತಿ (ಎಚ್‌ಆರ್ ಮತ್ತು ಸಿಇ) ಇಲಾಖೆಗೆ ಈ ನಿರ್ದೇಶನ ನೀಡಿದರು.ರಾಜ್ಯದ ಟುಟಿಕೋರಿನ್ (ತೂತುಕುಡಿ) ಜಿಲ್ಲೆಯ ತಿರುಚೆಂಡೂರಿನ ಅರುಲ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಆವರಣದಲ್ಲಿ ಆಂಡ್ರಾಯ್ಡ್ ಸೆಲ್‌ಫೋನ್‌ಗಳನ್ನು ಹೊಂದುವುದು ಮತ್ತು ಬಳಸುವುದನ್ನು ನಿಷೇಧಿಸಲು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರ ಎಂ ಸೀತಾರಾಮನ್ ಕೋರಿದ್ದಾರೆ. ಇದು ಭಗವಾನ್ ಮುರುಗನ ಆರು ನೆಲೆಗಳಲ್ಲಿ ಒಂದಾಗಿದೆ. ಇನ್ನುಳಿದಂತೆ, ಈ ದೇವಾಲಯವು ಪುರಾತನ ದೇಗುಲವಾಗಿರುವುದರಿಂದ ಮುಕ್ತ ಮತ್ತು ಶಾಂತಿಯುತ ದರ್ಶನಕ್ಕಾಗಿ, ದೀಪಾರಾಧನೆ, ಪೂಜೆಗಳು ಮತ್ತು ಇತರ ಆಚರಣೆಗಳ ವಿಡಿಯೊ ಚಿತ್ರೀಕರಣ ಅಥವಾ ಫೋಟೊ ತೆಗೆಯುವ ಕ್ಯಾಮೆರಾವನ್ನು ಬಳಸುವುದು ಅಡ್ಡಿಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಎಲ್ಲಾ ಭಕ್ತರು ಮೊಬೈಲ್ ಫೋನ್‌ಗಳನ್ನು ಹೊಂದಿದ್ದಾರೆ. ಅವರು ಯಾವುದೇ ನಿರ್ಬಂಧಗಳಿಲ್ಲದೆ ದೇವಾಲಯದ ಆವರಣದಲ್ಲಿ ಫೋಟೊ ಅಥವಾ ವಿಡಿಯೊಗಳನ್ನು ತೆಗೆದುಕೊಳ್ಳುತ್ತಾರೆ.
ಬೆಲೆಬಾಳುವ ವಿಗ್ರಹಗಳ ಫೋಟೊ ತೆಗೆಯುವುದು ಆಗಮ ನಿಯಮಗಳಿಗೆ (ದೇವಸ್ಥಾನದ ಆಚರಣೆಗಳಿಗೆ ಸಂಬಂಧಿಸಿದ) ವಿರುದ್ಧವಾಗಿರುವುದಲ್ಲದೆ, ದೇವಾಲಯದ ಭದ್ರತೆ ಮತ್ತು ಅದರ ಬೆಲೆಬಾಳುವ ವಸ್ತುಗಳಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ಅವರು ಹೇಳಿದರು. ಮಹಿಳಾ ಭಕ್ತರ ಫೋಟೊಗಳನ್ನು ಅವರ ಒಪ್ಪಿಗೆಯಿಲ್ಲದೆ ತೆಗೆದರೆ ಅದನ್ನು ದುರುಪಯೋಗಪಡಿಸಿಕೊಳ್ಳುವ ಆತಂಕವನ್ನು ಅರ್ಜಿದಾರರು ವ್ಯಕ್ತಪಡಿಸಿದ್ದಾರೆ.
ದೇಗುಲದೊಳಗೆ ಅರ್ಚಕರು, ಭಕ್ತರು, ಸಾರ್ವಜನಿಕರು ಮತ್ತು ಇತರರು ಸೆಲ್ ಫೋನ್ ಬಳಕೆಗೆ ನಿರ್ಬಂಧ ಹೇರಲು ಕ್ರಮ ಕೈಗೊಳ್ಳಲಾಗಿದೆ, ಸೆಲ್ ಫೋನ್ ಬಳಕೆಯ ಮೇಲ್ವಿಚಾರಣೆಗಾಗಿ ಸ್ವಸಹಾಯ ಗುಂಪುಗಳನ್ನು ಮತ್ತು ಸೆಲ್ ಫೋನ್‌ಗಳ ಕೌಂಟರ್ ಗಳನ್ನು ಸ್ಥಾಪಿಸಲಾಗುವುದು ಎಂದು ದೇವಸ್ಥಾನದ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು.
ಎರಡನೇ ಪ್ರತಿವಾದಿ (ಕಾರ್ಯನಿರ್ವಾಹಕ ಅಧಿಕಾರಿ/ಜಂಟಿ ಕಮಿಷನರ್) ಈಗಾಗಲೇ ಮಂದಿರದ ಆವರಣದೊಳಗೆ ಮೊಬೈಲ್ ಫೋನ್ ನಿಷೇಧ, ಸಭ್ಯ ಡ್ರೆಸ್ ಕೋಡ್ ಇತ್ಯಾದಿಗಳಿಗೆ ಎಲ್ಲಾ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಈ ನ್ಯಾಯಾಲಯವು ನಿರ್ದೇಶಿಸುತ್ತದೆ. ಎರಡನೇ ಪ್ರತಿವಾದಿಯು ಮಾಡಿದ ಮನವಿಗೆ ಸಮ್ಮತಿಸುವಂತೆ ಪೊಲೀಸ್ ವರಿಷ್ಠಾಧಿಕಾರಿ ಮತ್ತು ತೂತುಕುಡಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವುದರ ಜೊತೆಗೆ, ಪ್ರತಿವಾದಿ ಅಧಿಕಾರಿಗಳು ಮೇಲಿನ ಷರತ್ತುಗಳನ್ನು ಕಾರ್ಯಗತಗೊಳಿಸಬೇಕು. ಮೊದಲ ಪ್ರತಿವಾದಿ (ದಿ ಕಮಿಷನರ್, ಎಚ್‌ಆರ್ & ಸಿಇ) ತಮಿಳುನಾಡಿನ ಎಲ್ಲಾ ದೇವಾಲಯಗಳಲ್ಲಿ ಶುದ್ಧತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಮೇಲಿನ ನಿರ್ದೇಶನಗಳನ್ನು ಅನುಸರಿಸಲು ನಿರ್ದೇಶಿಸಲಾಗಿದೆ ಎಂದು ಪೀಠ ತೀರ್ಪು ನೀಡಿದೆ.
ದೇಗುಲಗಳು ಧಾರ್ಮಿಕ ಕ್ಷೇತ್ರಗಳಾಗಿದ್ದು, ಪಾರಂಪರಿಕವಾಗಿ ಪ್ರತಿಯೊಬ್ಬರ ಜೀವನದಲ್ಲಿ ಅವು ಪ್ರಮುಖವಾಗಿವೆ ಎಂದು ನ್ಯಾಯಾಧೀಶರು ಹೇಳಿದರು. ಇದು ಕೇವಲ ಪೂಜಾ ಸ್ಥಳವಲ್ಲ, ಆದರೆ ಜನರ ಸಾಮಾಜಿಕ-ಸಾಂಸ್ಕೃತಿಕ ಮತ್ತು ಆರ್ಥಿಕ ಜೀವನಕ್ಕೆ ಅವಿಭಾಜ್ಯವಾಗಿದೆ.ಇದು ಸಂಪ್ರದಾಯವಾಗಿದ್ದು, ದೇವಾಲಯವು ನೀಡುವ ದೈವಿಕತೆ ಮತ್ತು ಆಧ್ಯಾತ್ಮಿಕತೆಯನ್ನು ಅನುಭವಿಸಲು ಲಕ್ಷಾಂತರ ಭಕ್ತರನ್ನು ಇದು ಸೆಳೆಯುತ್ತದೆ., ಇದು ದೇವಾಲಯವು ನೀಡುವ ದೈವಿಕತೆ ಮತ್ತು ಆಧ್ಯಾತ್ಮಿಕತೆಯನ್ನು ಅನುಭವಿಸಲು ಬಯಸುತ್ತದೆ. ಈ ಅನುಭವವನ್ನು ಬೆಂಬಲಿಸುವ ವ್ಯವಸ್ಥೆಗಳು ಮತ್ತು ದೇವಾಲಯಗಳು ತನ್ನದೇ ಆದ ನಿರ್ವಹಣಾ ಅಗತ್ಯಗಳನ್ನು ಹೊಂದಿವೆ ಎಂದು ಪೀಠ ಹೇಳಿದೆ. ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ, ಎಲ್ಲಾ ಜನರು ಮುಕ್ತವಾಗಿ ಧರ್ಮವನ್ನು ಪ್ರತಿಪಾದಿಸಲು, ಆಚರಿಸಲು ಮತ್ತು ಪ್ರಚಾರ ಮಾಡಲು ಅರ್ಹರಾಗಿದ್ದಾರೆ ಎಂಬುದಕ್ಕೆ ಯಾವುದೇ ತಕರಾರು ಇರುವಂತಿಲ್ಲ, ಆದಾಗ್ಯೂ, ದೇವಾಲಯದ ಆವರಣದೊಳಗೆ ಕಾರ್ಯನಿರ್ವಹಿಸಲು ಮತ್ತು ಆಚರಣೆಗೆ ಅಂತಹ ಸ್ವಾತಂತ್ರ್ಯವು ನಿಯಮಗಳಿಗೆ ಒಳಪಟ್ಟಿರುತ್ತದೆ.
1947 ರ ತಮಿಳುನಾಡು ದೇವಾಲಯ ಪ್ರವೇಶ ದೃಢೀಕರಣ ಕಾಯಿದೆಯ ಅಡಿಯಲ್ಲಿ ನಿಯಮಗಳು ಟ್ರಸ್ಟಿ ಅಥವಾ ಪ್ರಾಧಿಕಾರವು ಮಾಡಿದ ನಿಬಂಧನೆಗಳನ್ನು ಹೊರತುಪಡಿಸಿ ದೇವಸ್ಥಾನದಲ್ಲಿ ಸುವ್ಯವಸ್ಥೆ ಮತ್ತು ಅಲಂಕಾರಗಳ ನಿರ್ವಹಣೆಗಾಗಿ ಕೆಲವು ನೀತಿ ಸಂಹಿತೆಗಳನ್ನು ಸೂಚಿಸುತ್ತವೆ ಎಂದು ನ್ಯಾಯಾಲಯವು ಹೇಳಿದೆ.
ಕೇರಳದ ಗುರುವಾಯೂರ್ ಶ್ರೀಕೃಷ್ಣ ದೇವಸ್ಥಾನ, ಮಧುರೈನ ಮೀನಾಕ್ಷಿ ಅಮ್ಮನ್ ದೇವಸ್ಥಾನ ಮತ್ತು ಆಂಧ್ರಪ್ರದೇಶದ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಮೊಬೈಲ್ ಫೋನ್ ನಿಷೇಧ ಮಾಡಲಾಗಿದ್ದು ಇದನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದು ಪೀಠವು ಸೂಚಿಸಿತು. ಆವರಣವನ್ನು ಪ್ರವೇಶಿಸುವ ಮೊದಲು ಮೊಬೈಲ್ ಫೋನ್ ಅನ್ನು ಇರಿಸಲುಪ್ರತಿಯೊಂದು ದೇವಾಲಯಗಳಲ್ಲಿ ಪ್ರತ್ಯೇಕ ಭದ್ರತಾ ಕೌಂಟರ್‌ಗಳಿವೆ ಎಂದು ಅದು ಹೇಳಿದೆ
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ