AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರ: ಆಟವಾಡುತ್ತಿದ್ದಾಗ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು 5 ವರ್ಷದ ಬಾಲಕ ಸಾವು

ಮಹಾರಾಷ್ಟ್ರದ ಭೀವಂಡಿಯಲ್ಲಿ 5 ವರ್ಷದ ಬಾಲಕ ತೆರೆದ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು ಮೃತಪಟ್ಟಿದ್ದು, ನಿರ್ಲಕ್ಷ್ಯವೇ ದುರಂತಕ್ಕೆ ಕಾರಣವಾಗಿದೆ. ಕಟ್ಟಡ ಆವರಣದಲ್ಲಿ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂತಹ ಸರಣಿ ದುರಂತಗಳನ್ನು ತಡೆಯಲು ಎಲ್ಲಾ ವಸತಿ ಸಂಕೀರ್ಣಗಳಲ್ಲಿ ಕಡ್ಡಾಯ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಲು ಸಾರ್ವಜನಿಕರು ಆಡಳಿತವನ್ನು ಒತ್ತಾಯಿಸಿದ್ದಾರೆ. ಇದು ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಚಿಂತನೆಗೆ ಹಚ್ಚಿದೆ.

ಮಹಾರಾಷ್ಟ್ರ: ಆಟವಾಡುತ್ತಿದ್ದಾಗ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು 5 ವರ್ಷದ ಬಾಲಕ ಸಾವು
ಬಾಲಕ Image Credit source: X Account- Devesh
ನಯನಾ ರಾಜೀವ್
|

Updated on: Jun 16, 2026 | 9:55 AM

Share

ಭೀವಂಡಿ, ಜೂನ್ 16: ಆಟವಾಡುವಾಗ ಐದು ವರ್ಷದ ಬಾಲಕ(Boy) ತೆರೆದಿದ್ದ ಸೆಪ್ಟಿಕ್ ಟ್ಯಾಂಕ್​ಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಭೀವಂಡಿ ನಗರದ ಫರೀದ್ ಬಾಗ್ ಪ್ರದೇಶದಲ್ಲಿ ನಡೆದಿದೆ. ಮೊಹಮ್ಮದ್ ಅಹ್ಮದ್ ಮೃತ ಬಾಲಕ. ಸಿಸಿಟಿವಿಯಲ್ಲಿ ಈ ದೃಶ್ಯ ರೆಕಾರ್ಡ್​ ಆಗಿದೆ. ವೈರಲ್ ಆಗಿರುವ ಸಿಸಿಟಿವಿ ದೃಶ್ಯದಲ್ಲಿ ಕಟ್ಟಡದ ಆವರಣದಲ್ಲಿ ಕೆಲವು ಮಕ್ಕಳು ಆಟವಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಸೆಪ್ಟಿಕ್ ಟ್ಯಾಂಕ್ ಬಳಿ ಬಂದ ಬಾಲಕ ಮೊಹಮ್ಮದ್, ಟ್ಯಾಂಕ್‌ನ ಮುಚ್ಚಳವನ್ನು ಸರಿಯಾಗಿ ಮುಚ್ಚದ ಕಾರಣ ಆಕಸ್ಮಿಕವಾಗಿ ಸಮತೋಲನ ಕಳೆದುಕೊಂಡು ನೇರವಾಗಿ ಟ್ಯಾಂಕ್ ಒಳಗಡೆ ಬಿದ್ದಿದ್ದಾನೆ.

ಬಾಲಕ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಮತ್ತು ಕುಟುಂಬಸ್ಥರು ತಕ್ಷಣವೇ ಮಗುವನ್ನು ಟ್ಯಾಂಕ್‌ನಿಂದ ಹೊರತೆಗೆದು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಬಾಲಕ ಈಗಾಗಲೇ ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ.

ಸೆಪ್ಟಿಕ್ ಟ್ಯಾಂಕ್‌ನ ಮುಚ್ಚಳವನ್ನು ಸುರಕ್ಷಿತವಾಗಿ ಮುಚ್ಚದೇ ಇರುವುದೇ ಮುಗ್ಧ ಬಾಲಕನ ಸಾವಿಗೆ ನೇರ ಕಾರಣ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಭೀವಂಡಿ ಪ್ರದೇಶದಲ್ಲಿ ಇಂತಹ ನಿರ್ಲಕ್ಷ್ಯದ ಘಟನೆಗಳು ಇದೇ ಮೊದಲಲ್ಲ, ಈ ಹಿಂದೆಯೂ ಸಹ ತೆರೆದ ಹೊಂಡ ಹಾಗೂ ಟ್ಯಾಂಕ್‌ಗಳಿಗೆ ಬಿದ್ದು ಹಲವು ಜೀವಗಳು ಬಲಿಯಾಗಿವೆ. ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಎಲ್ಲಾ ವಸತಿ ಸಂಕೀರ್ಣಗಳಲ್ಲಿ ಕಡ್ಡಾಯ ಸುರಕ್ಷತಾ ನಿಯಮಗಳನ್ನು ಜಾರಿಗೆ ತರಬೇಕು ಎಂದು ಸಾರ್ವಜನಿಕರು ಆಡಳಿತವನ್ನು ಒತ್ತಾಯಿಸಿದ್ದಾರೆ.

ಮತ್ತಷ್ಟು ಓದಿ: ಶಾಲಾ ಕಟ್ಟಡದಿಂದ ಬಿದ್ದು ಬೀದರ್​​ನಲ್ಲಿ 15 ವರ್ಷದ ಬಾಲಕ ಸಾವು: ಕಾರಣ ನಿಗೂಢ

ಕಳೆದ ವರ್ಷ ಜಾರ್ಖಂಡ್‌ನ ಜಂಶೇದ್​ಪುರದ ಆಸ್ತಾ ಸಿಟಿ ಎಂಬಲ್ಲಿಯೂ ಇಂತಹುದೇ ಹೃದಯವಿದ್ರಾವಕ ಘಟನೆ ನಡೆದಿತ್ತು. ಅಲ್ಲಿ ತಂದೆಯ ಜೊತೆ ಕೆಲಸದ ಜಾಗಕ್ಕೆ ಹೋಗಿದ್ದ 5 ವರ್ಷದ ಆದರ್ಶ್ ಕುಮಾರ್ ಎಂಬ ಬಾಲಕ ತೆರೆದಿದ್ದ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದ.

ವಿಡಿಯೋ

ಇಂತಹ ಸರಣಿ ದುರಂತಗಳು ವಸತಿ ಸಂಕೀರ್ಣಗಳಲ್ಲಿ ಮುಚ್ಚದ ನೀರಿನ ಹೊಂಡಗಳು ಮತ್ತು ಸೆಪ್ಟಿಕ್ ಟ್ಯಾಂಕ್‌ಗಳು ಮಕ್ಕಳ ಪಾಲಿಗೆ ಎಷ್ಟು ಅಪಾಯಕಾರಿ ಎಂಬುದನ್ನು ನೆನಪಿಸುತ್ತವೆ. ಆಡಳಿತ ಮಂಡಳಿಗಳು ಹಾಗೂ ಪೋಷಕರು ಇಂತಹ ಜಾಗಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು ಉತ್ತಮ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಸಾಹುಕಾರ್ ನಿವಾಸಗಳಲ್ಲಿ 22 ಗಂಟೆಯಿಂದ ನಡೆಯುತ್ತಿದೆ ಇಡಿ ಪರಿಶೀಲನೆ
ಸಾಹುಕಾರ್ ನಿವಾಸಗಳಲ್ಲಿ 22 ಗಂಟೆಯಿಂದ ನಡೆಯುತ್ತಿದೆ ಇಡಿ ಪರಿಶೀಲನೆ
ಬೆಳಗ್ಗೆ 7ರಿಂದಲೇ ಬಿಜೆಪಿ ಕಚೇರಿಯಲ್ಲಿ ಬಿ.ಸಿ ನಾಗೇಶ್ ಅಂತಿಮ ದರ್ಶನ
ಬೆಳಗ್ಗೆ 7ರಿಂದಲೇ ಬಿಜೆಪಿ ಕಚೇರಿಯಲ್ಲಿ ಬಿ.ಸಿ ನಾಗೇಶ್ ಅಂತಿಮ ದರ್ಶನ
ಶೀತಲ ಸಪ್ತಮಿ, ತುಳಸೀದಾಸ ಜಯಂತಿ: ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ
ಶೀತಲ ಸಪ್ತಮಿ, ತುಳಸೀದಾಸ ಜಯಂತಿ: ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ
ಮೂವರ ಶೂಟೌಟ್​​ ಕೇಸ್​​: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಮೂವರ ಶೂಟೌಟ್​​ ಕೇಸ್​​: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು