AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುರಕ್ಷತೆಗೆ ಮೊದಲ ಆದ್ಯತೆ: ಮುಂಬೈ ಹಳಿಗಳ ಮೇಲೆ ಓಡಲಿದೆ ಮೊದಲ ‘ಕ್ಲೋಸ್ಡ್ ಡೋರ್’ ನಾನ್-ಎಸಿ ರೈಲು

ಮುಂಬೈನ ರೈಲು(Train) ಹಳಿಗಳ ಮೇಲೆ ಪ್ರತಿದಿನ ಲಕ್ಷಾಂತರ ಕನಸುಗಳು ಪ್ರಯಾಣಿಸುತ್ತವೆ. ಆದರೆ, ಆ ಕನಸುಗಳ ಜೊತೆಗೇ ಸಾವು ಕೂಡ ತೆರೆದ ಬಾಗಿಲುಗಳ ರೂಪದಲ್ಲಿ ಹೊಂಚು ಹಾಕುತ್ತಿರುತ್ತದೆ. 2025ರ ಜೂನ್‌ನಲ್ಲಿ ನಡೆದ 'ಮುಂಬ್ರಾ ರೈಲು ಅಪಘಾತ' ಇಡೀ ದೇಶವನ್ನು ನಡುಗಿಸಿತ್ತು. ಕಿಕ್ಕಿರಿದು ತುಂಬಿದ್ದ ರೈಲಿನ ತೆರೆದ ಬಾಗಿಲಿನಿಂದ ಆಯತಪ್ಪಿ ಬಿದ್ದ ಪ್ರಯಾಣಿಕರು ಪ್ರಾಣ ಕಳೆದುಕೊಂಡಾಗ, "ಪ್ರಗತಿಗಿಂತ ಪ್ರಯಾಣಿಕರ ಪ್ರಾಣ ಮುಖ್ಯ" ಎಂಬ ಕೂಗು ಕೇಳಿಬಂತು.

ಸುರಕ್ಷತೆಗೆ ಮೊದಲ ಆದ್ಯತೆ: ಮುಂಬೈ ಹಳಿಗಳ ಮೇಲೆ ಓಡಲಿದೆ ಮೊದಲ 'ಕ್ಲೋಸ್ಡ್ ಡೋರ್' ನಾನ್-ಎಸಿ ರೈಲು
ರೈಲು
ನಯನಾ ರಾಜೀವ್
|

Updated on: Apr 14, 2026 | 11:28 AM

Share

ಮುಂಬೈ, ಏಪ್ರಿಲ್ 14: ಮುಂಬೈನ ರೈಲು(Train) ಹಳಿಗಳ ಮೇಲೆ ಪ್ರತಿದಿನ ಲಕ್ಷಾಂತರ ಕನಸುಗಳು ಪ್ರಯಾಣಿಸುತ್ತವೆ. ಆದರೆ, ಆ ಕನಸುಗಳ ಜೊತೆಗೇ ಸಾವು ಕೂಡ ತೆರೆದ ಬಾಗಿಲುಗಳ ರೂಪದಲ್ಲಿ ಹೊಂಚು ಹಾಕುತ್ತಿರುತ್ತದೆ. 2025ರ ಜೂನ್‌ನಲ್ಲಿ ನಡೆದ ‘ಮುಂಬ್ರಾ ರೈಲು ಅಪಘಾತ’ ಇಡೀ ದೇಶವನ್ನು ನಡುಗಿಸಿತ್ತು. ಕಿಕ್ಕಿರಿದು ತುಂಬಿದ್ದ ರೈಲಿನ ತೆರೆದ ಬಾಗಿಲಿನಿಂದ ಆಯತಪ್ಪಿ ಬಿದ್ದ ಪ್ರಯಾಣಿಕರು ಪ್ರಾಣ ಕಳೆದುಕೊಂಡಾಗ, “ಪ್ರಗತಿಗಿಂತ ಪ್ರಯಾಣಿಕರ ಪ್ರಾಣ ಮುಖ್ಯ” ಎಂಬ ಕೂಗು ಕೇಳಿಬಂತು.

ಇದೀಗ ಆ ಕೂಗಿಗೆ ಉತ್ತರ ಸಿಕ್ಕಿದೆ, ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮೊದಲ ಬಾರಿಗೆ, ಹವಾನಿಯಂತ್ರಣ (AC) ಇಲ್ಲದಿದ್ದರೂ ಬಾಗಿಲುಗಳು ಸ್ವಯಂಚಾಲಿತವಾಗಿ ಮುಚ್ಚುವ ಹೈಟೆಕ್ ರೈಲೊಂದು ಸಿದ್ಧವಾಗಿದೆ.

ರೈಲ್ವೆ ಮಂತ್ರಿಯ ಸಂಕಲ್ಪ, ಎಂಜಿನಿಯರ್‌ಗಳ ಸಾಧನೆ ಪ್ರಯಾಣಿಕರ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದೆಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನೀಡಿದ ಕಟ್ಟುನಿಟ್ಟಿನ ನಿರ್ದೇಶನದ ಫಲವಾಗಿ ಈ ‘ಪ್ರೊಟೊಟೈಪ್’ (ಮೂಲಮಾದರಿ) ರೈಲು ಸೃಷ್ಟಿಯಾಗಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ರೈಲ್ವೆ ಮಂಡಳಿಯ ಸಹಯೋಗದೊಂದಿಗೆ ಈ 12 ಬೋಗಿಗಳ (ಸಂಖ್ಯೆ 268201-268212) ರೈಲನ್ನು ವಿನ್ಯಾಸಗೊಳಿಸಿದೆ.

ಮತ್ತಷ್ಟು ಓದಿ: Video: ತಾಂತ್ರಿಕ ದೋಷ, ನಿಂತಿದ್ದ ರೈಲಿನಿಂದ ಇಳಿದ ಪ್ರಯಾಣಿಕನ ಮೇಲೆ ಹರಿದ ಮತ್ತೊಂದು ರೈಲು

ಈ ರೈಲಿನ  ವೈಶಿಷ್ಟ್ಯವೇನು? ಜೀವ ರಕ್ಷಕ ಬಾಗಿಲುಗಳು: ಮೆಟ್ರೋ ರೈಲುಗಳ ಮಾದರಿಯಲ್ಲಿ ಇದರ ಬಾಗಿಲುಗಳು ತಾವಾಗಿಯೇ ಮುಚ್ಚಿಕೊಳ್ಳುತ್ತವೆ. ಬಾಗಿಲು ಪೂರ್ಣವಾಗಿ ಮುಚ್ಚದ ಹೊರತು ರೈಲು ಇಂಚೂ ಚಲಿಸುವುದಿಲ್ಲ, ಇದು ಬೀಳುವ ಭಯವಿಲ್ಲದ ಪ್ರಯಾಣವನ್ನು ಖಚಿತಪಡಿಸುತ್ತದೆ.

ಇದೊಂದು ವೆಸ್ಟಿಬುಲ್ ರೈಲಾಗಿದ್ದು, ಆರು ಬೋಗಿಗಳ ಎರಡು ಘಟಕಗಳನ್ನು ಒಳಗೊಂಡಿದೆ. ಪ್ರಯಾಣಿಕರು ಎಸಿ ರೈಲುಗಳಲ್ಲಿ ಇರುವಂತೆ ಒಂದು ಬೋಗಿಯಿಂದ ಮತ್ತೊಂದು ಬೋಗಿಗೆ ಆರಾಮವಾಗಿ ಚಲಿಸಬಹುದು. ಇದರಲ್ಲಿ ಪ್ರಥಮ ದರ್ಜೆ (First Class) ಎಂಬ ಭೇದವಿಲ್ಲ. ಎಲ್ಲರಿಗೂ ಸಮಾನವಾದ ಆಧುನಿಕ ಸೌಲಭ್ಯಗಳಿವೆ. ಮಹಿಳೆಯರ ಸುರಕ್ಷತೆಗಾಗಿ ವಿಶೇಷ ಬೋಗಿಗಳ ವ್ಯವಸ್ಥೆ ಮಾಡಲಾಗಿದೆ.

ಪ್ರಯಾಣಿಕರ ಆತಂಕ ಮತ್ತು ಸವಾಲು ಬಾಗಿಲು ಮುಚ್ಚಿದರೆ ಎಸಿ ಇಲ್ಲದ ರೈಲಿನಲ್ಲಿ ಉಸಿರುಗಟ್ಟಬಹುದು ಎಂಬ ಆತಂಕ ಪ್ರಯಾಣಿಕರಲ್ಲಿದೆ. ಮುಂಬೈನ ವಿಪರೀತ ಬಿಸಿಲು ಮತ್ತು ಜನದಟ್ಟಣೆಯಲ್ಲಿ ಗಾಳಿಯ ಸಂಚಾರ ಹೇಗಿರಲಿದೆ ಎಂಬುದು ಸದ್ಯದ ದೊಡ್ಡ ಪ್ರಶ್ನೆ. ಆದರೆ, ರೈಲ್ವೆ ಇಲಾಖೆಯು ಗಾಳಿಯ ಮುಕ್ತ ಸಂಚಾರಕ್ಕಾಗಿ ವಿಶೇಷ ‘ವೆಂಟಿಲೇಶನ್’ ವ್ಯವಸ್ಥೆಯನ್ನು ಅಳವಡಿಸಿದ್ದು, ಪ್ರಾಯೋಗಿಕ ಓಡಾಟದ ನಂತರ ಇದಕ್ಕೆ ಅಂತಿಮ ರೂಪ ನೀಡಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us