AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆದರ್ಲ್ಯಾಂಡ್ಸ್​​ನಿಂದ ಭಾರತಕ್ಕೆ ಹಿಂತಿರುಗಲಿವೆ ಚೋಳರ ಯುಗದ ತಾಮ್ರ ಶಾಸನಗಳು; ಏನಿದರ ವಿಶೇಷತೆ?

ಪ್ರಧಾನಿ ನರೇಂದ್ರ ಮೋದಿ ನೆದರ್ಲ್ಯಾಂಡ್ಸ್​​ಗೆ ಭೇಟಿ ನೀಡಿದ್ದಾರೆ. ಈ ಪ್ರವಾಸದ ಸಮಯದಲ್ಲಿ ಪ್ರಧಾನಿ ಮೋದಿಗೆ ನೆದರ್ಲ್ಯಾಂಡ್ಸ್​​ನಲ್ಲಿರುವ 11ನೇ ಶತಮಾನದ ಭಾರತ ಮೂಲದ ತಾಮ್ರದ ಶಾಸನಗಳನ್ನು ವಾಪಾಸ್ ನೀಡಲಾಗುತ್ತಿದೆ. ಚೋಳ ರಾಜವಂಶದ ಅತ್ಯಂತ ಮಹತ್ವದ ದಾಖಲೆಗಳಲ್ಲಿ ಒಂದಾದ 11ನೇ ಶತಮಾನದ ಅನೈಮಂಗಲಂ ತಾಮ್ರ ಶಾಸನಗಳನ್ನು ನೆದರ್ಲ್ಯಾಂಡ್ಸ್ ಭಾರತಕ್ಕೆ ಹಿಂದಿರುಗಿಸಲಿದೆ. ಭಾರತ, ಡಚ್ ಸರ್ಕಾರ ಮತ್ತು ಲೈಡೆನ್ ವಿಶ್ವವಿದ್ಯಾಲಯದ ನಡುವಿನ 14 ವರ್ಷಗಳ ರಾಜತಾಂತ್ರಿಕ ಮಾತುಕತೆಯ ನಂತರ ಲೈಡೆನ್ ಫಲಕಗಳು ಎಂದೂ ಕರೆಯಲ್ಪಡುವ ಚೋಳ-ಕಾಲದ ತಾಮ್ರ ಶಾಸನಗಳನ್ನು ವಾಪಸ್ ಕಳುಹಿಸಲು ಒಪ್ಪಲಾಗಿದೆ.

ನೆದರ್ಲ್ಯಾಂಡ್ಸ್​​ನಿಂದ ಭಾರತಕ್ಕೆ ಹಿಂತಿರುಗಲಿವೆ ಚೋಳರ ಯುಗದ ತಾಮ್ರ ಶಾಸನಗಳು; ಏನಿದರ ವಿಶೇಷತೆ?
Chola Era Copper Plates
ಸುಷ್ಮಾ ಚಕ್ರೆ
|

Updated on:May 16, 2026 | 4:55 PM

Share

ನವದೆಹಲಿ, ಮೇ 16: ಭಾರತದ ಪ್ರಧಾನಿ ನೆದರ್ಲ್ಯಾಂಡ್ಸ್ (PM Modi in Netherlands) ಪ್ರವಾಸದಲ್ಲಿದ್ದಾರೆ. ಕಳೆದ 14 ವರ್ಷಗಳ ರಾಜತಾಂತ್ರಿಕ ಪ್ರಯತ್ನಗಳ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿಯವರು ನೆದರ್ಲ್ಯಾಂಡ್ಸ್​​ನಿಂದ 11ನೇ ಶತಮಾನದ ಇತಿಹಾಸವಿರುವ ಭಾರತದ ಅನೈಮಂಗಲಂ ಚೋಳ ತಾಮ್ರ ಶಾಸನಗಳನ್ನು ನಮ್ಮ ದೇಶಕ್ಕೆ ವಾಪಾಸ್ ತರಲಿದ್ದಾರೆ. ಆ ತಾಮ್ರದ ಶಾಸನಗಳನ್ನು ಭಾರತಕ್ಕೆ ಹಿಂತಿರುಗಿಸಲು ನೆದರ್ಲ್ಯಾಂಡ್ಸ್ ಒಪ್ಪಿಗೆ ನೀಡಿದೆ. ಲೈಡನ್ ಶಾಸನಗಳು ಎಂದೂ ಕರೆಯಲ್ಪಡುವ ಅನೈಮಂಗಲಂ ತಾಮ್ರ ಶಾಸನಗಳು ಚೋಳ ರಾಜವಂಶದ ಅತ್ಯಂತ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ.

21 ತಾಮ್ರ ಶಾಸನಗಳು 11ನೇ ಶತಮಾನದಲ್ಲಿ ದಕ್ಷಿಣ ಭಾರತವನ್ನು ಆಳಿದ ರಾಜರಾಜ ಚೋಳ Iರ ಆಳ್ವಿಕೆಗೂ ಹಿಂದಿನವು. ಇಂದಿನ ತಮಿಳುನಾಡಿನ ನಾಗಪಟ್ಟಣಂ ನಗರವು ಡಚ್ ಈಸ್ಟ್ ಇಂಡಿಯಾ ಕಂಪನಿ ನಿಯಂತ್ರಣದಲ್ಲಿದ್ದಾಗ ಕ್ರಿಶ್ಚಿಯನ್ ಮಿಷನರಿಯಾಗಿ ಭಾರತದಲ್ಲಿದ್ದ ಫ್ಲೋರೆಂಟಿಯಸ್ ಕ್ಯಾಂಪರ್ ಈ ಶಾಸನಗಳನ್ನು ನೆದರ್ಲ್ಯಾಂಡ್ಸ್‌ಗೆ ತೆಗೆದುಕೊಂಡು ಹೋಗಿದ್ದರು. ಈ ಶಾಸನಗಳನ್ನು ವಾಪಾಸ್ ಪಡೆಯಲು ಭಾರತ ಸಾಕಷ್ಟು ಪ್ರಯತ್ನಪಟ್ಟಿತ್ತು.

ಈ ಫಲಕಗಳನ್ನು ಲೈಡೆನ್ ವಿಶ್ವವಿದ್ಯಾಲಯಕ್ಕೆ ದಾನ ಮಾಡಲಾಗಿತ್ತು. ಈ ಶಾಸನಗಳು ಮೂರು ಶತಮಾನಗಳಿಗೂ ಹೆಚ್ಚು ಕಾಲ ಈ ವಿಶ್ವವಿದ್ಯಾಲಯದ ಗ್ರಂಥಾಲಯದ ಏಷ್ಯನ್ ವಿಭಾಗದಲ್ಲಿತ್ತು. ಭಾರತವು 2012ರಲ್ಲಿ ಈ ಶಾಸನಗಳನ್ನು ವಾಪಾಸ್ ತರುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು. 2023ರಲ್ಲಿ ದ್ವಿಪಕ್ಷೀಯ ಮಾತುಕತೆಯ ಮೂಲಕ ಈ ಭಾರತೀಯ ಪಾರಂಪರಿಕ ಶಾಸನಗಳನ್ನು ಹಿಂದಿರುಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ನೆದರ್ಲ್ಯಾಂಡ್ಸ್ ಭಾರತ ಒತ್ತಾಯಿಸಿತು. UNESCO ಬೆಂಬಲಿತ ಈ ಪ್ರಕ್ರಿಯೆಯು ಅಂತಿಮವಾಗಿ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವೆ ಒಪ್ಪಂದಕ್ಕೆ ಕಾರಣವಾಯಿತು. ಹೀಗಾಗಿ, ಇದೀಗ ಪ್ರಧಾನಿ ಮೋದಿ ನೆದರ್ಲ್ಯಾಂಡ್ಸ್ ದೇಶಕ್ಕೆ ಭೇಟಿ ನೀಡಿರುವುದರಿಂದ ಈ ಶಾಸನಗಳನ್ನು ಹಿಂದಿರುಗಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ನೆದರ್‌ಲ್ಯಾಂಡ್ಸ್‌ ತಲುಪಿದ ಪ್ರಧಾನಿ ನರೇಂದ್ರ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಈ ತಾಮ್ರದ ಶಾಸನದ ಮಹತ್ವವೇನು?:

ಈ ಶಾಸನಗಳನ್ನು ಭಾರತೀಯ ಇತಿಹಾಸ ಮತ್ತು ತಮಿಳು ಶಿಲಾಶಾಸನದ ಹಲವಾರು ವಿದ್ವಾಂಸರು ಅಧ್ಯಯನ ಮಾಡಿದ್ದಾರೆ. ಕಲ್ಕಿ ಕೃಷ್ಣಮೂರ್ತಿಯವರ ಐತಿಹಾಸಿಕ ಕಾದಂಬರಿ ‘ಪೊನ್ನಿಯಿನ್ ಸೆಲ್ವನ್’ನಲ್ಲಿ ಕೂಡ ಈ ಬಗ್ಗೆ ಉಲ್ಲೇಖಿಸಲಾಗಿದೆ. ಈ ಶಾಸನಗಳು ಹಿಂದೂ ದೇವರಾದ ವಿಷ್ಣುವಿನ ಸ್ತುತಿಗಳೊಂದಿಗೆ ಪ್ರಾರಂಭವಾಗಿ, ದೇವರ ಪೂರ್ವಜರ ಸಂಪೂರ್ಣ ಪಟ್ಟಿಯ ಮೂಲಕ ಮುಂದುವರಿಯುವ ಮೂಲಕ ತಂಜಾವೂರಿನ ಚೋಳ ರಾಜವಂಶದ ವಂಶಾವಳಿಯನ್ನು ಒಳಗೊಂಡಿದೆ. ಈ ಶಾಸನವನ್ನು ಕಂಚಿನ ಕಡಗದಲ್ಲಿ ಸೇರಿಸಿಡಲಾಗಿದೆ. ಇದು ರಾಜೇಂದ್ರ ಚೋಳ I ಅವರ ಮುದ್ರೆಯನ್ನು ಕೂಡ ಹೊಂದಿದೆ. ತಾಳೆಗರಿಯಲ್ಲಿ ಇತಿಹಾಸವನ್ನು ಕೆತ್ತನೆ ಮಾಡುತ್ತಿದ್ದಂತೆಯೇ ಆಗಿನ ಕಾಲದಲ್ಲಿ ತಾಮ್ರದ ಹಾಳೆಗಳಲ್ಲಿ ಕೆತ್ತನೆ ಮಾಡಲಾಗುತ್ತಿತ್ತು. ಇದು ಭಾರತದ ಪಾಲಿಗೆ ದೊಡ್ಡ ಐತಿಹಾಸಿಕ ದಾಖಲೆಯಾಗಿದೆ.

18ನೇ ಶತಮಾನದಲ್ಲಿ ಕೋರಮಂಡಲ್ ಕರಾವಳಿಯಲ್ಲಿ ಡಚ್ ವಸಾಹತುಶಾಹಿ ಆಳ್ವಿಕೆಯಲ್ಲಿ ತಾಮ್ರದ ಶಾಸನಗಳನ್ನು ನೆದರ್‌ಲ್ಯಾಂಡ್ಸ್‌ಗೆ ಕೊಂಡೊಯ್ಯಲಾಯಿತು. ನಾಗಪಟ್ಟಣಂ ಡಚ್ ಈಸ್ಟ್ ಇಂಡಿಯಾ ಕಂಪನಿಯ ನಿಯಂತ್ರಣದಲ್ಲಿದ್ದಾಗ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ರಿಶ್ಚಿಯನ್ ಮಿಷನರಿಯ ಮೂಲಕ ಡಚ್ ಅಧಿಕಾರಿ ಫ್ಲೋರೆಂಟಿಯಸ್ ಕ್ಯಾಂಪರ್ ಅವುಗಳನ್ನು ಸ್ವಾಧೀನಪಡಿಸಿಕೊಂಡರು ಎಂದು ಇತಿಹಾಸಕಾರರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಯುಎಇ ಭೇಟಿಯಲ್ಲಿ ಹಲವು ಒಪ್ಪಂದಗಳಿಗೆ ಸಹಿ

1690ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿಯು ತನ್ನ ಕೋರಮಂಡಲ್ ಪ್ರಧಾನ ಕಚೇರಿಯನ್ನು ಪುಲಿಕಾಟ್‌ನಿಂದ ನಾಗಪಟ್ಟಣಂಗೆ ಸ್ಥಳಾಂತರಿಸಿತು. ಈ ಅವಧಿಯಲ್ಲಿ ಈ ಕಲಾಕೃತಿಗಳು ಮತ್ತು ಶಾಸನಗಳು ಯುರೋಪಿಯನ್ ಕೈಗೆ ತಲುಪಿದವು. ಇದಾದ ನಂತರ ಶಾಸನಗಳು 1862ರಲ್ಲಿ ಪ್ರೊಫೆಸರ್ ಹೆಂಡ್ರಿಕ್ ಅರೆಂಟ್ ಹಮಾಕರ್ ಅವರ ಎಸ್ಟೇಟ್ ಮೂಲಕ ಲೈಡೆನ್ ವಿಶ್ವವಿದ್ಯಾಲಯದ ಸಂಗ್ರಹವನ್ನು ಪ್ರವೇಶಿಸಿದವು. ಇವು ವಿಶ್ವವಿದ್ಯಾಲಯದ ಗ್ರಂಥಾಲಯದ ಏಷ್ಯನ್ ಸಂಗ್ರಹಗಳಲ್ಲಿ ಇರಿಸಲ್ಪಟ್ಟವು. ಇದನ್ನು ಇತಿಹಾಸಕಾರರು ಮತ್ತು ತಮಿಳು ಶಿಲಾಶಾಸನಕಾರರು ಅಧ್ಯಯನ ಮಾಡಿದರು. ಸಂಸ್ಕೃತ ಮತ್ತು ತಮಿಳು ಎರಡು ಭಾಷೆಯಲ್ಲೂ ಶಾಸನಗಳನ್ನು ಹೊಂದಿರುವ ಈ ಕಲಾಕೃತಿಗಳನ್ನು ಮೂಲತಃ ರಾಜರಾಜ ಚೋಳ I ಕ್ರಿ.ಶ. 985 ಮತ್ತು 1012ರ ನಡುವೆ ತಮಿಳುನಾಡಿನ ನಾಗಪಟ್ಟಣಂನಲ್ಲಿರುವ ಬೌದ್ಧ ವಿಹಾರದ ಸ್ವಾಧೀನತೆಯ ಸ್ಮರಣಾರ್ಥವಾಗಿ ಬಿಡುಗಡೆ ಮಾಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:51 pm, Sat, 16 May 26

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!
ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!
ನೆದರ್‌ಲ್ಯಾಂಡ್ಸ್‌ ತಲುಪಿದ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ
ನೆದರ್‌ಲ್ಯಾಂಡ್ಸ್‌ ತಲುಪಿದ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ
ಪ್ರಧಾನಿ ಕರೆಗೆ ಓಗೊಟ್ಟು ಮೆಟ್ರೋದಲ್ಲಿ ಪ್ರಾಯಾಣಿಸಿದ ವಿಜಯೇಂದ್ರ!
ಪ್ರಧಾನಿ ಕರೆಗೆ ಓಗೊಟ್ಟು ಮೆಟ್ರೋದಲ್ಲಿ ಪ್ರಾಯಾಣಿಸಿದ ವಿಜಯೇಂದ್ರ!
ಮೋದಿ ಸಾಗುವ ಮಾರ್ಗದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಮೋದಿ ಸಾಗುವ ಮಾರ್ಗದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಅಂಬೇಡ್ಕರ್ ಪ್ರತಿಮೆ ಎದುರು ಅಂತರ್ಜಾತಿ ವಿವಾಹವಾದ ಯುವ ಜೋಡಿ!
ಅಂಬೇಡ್ಕರ್ ಪ್ರತಿಮೆ ಎದುರು ಅಂತರ್ಜಾತಿ ವಿವಾಹವಾದ ಯುವ ಜೋಡಿ!