AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿಯ ಪ್ರಧಾನ ಕಾರ್ಯದರ್ಶಿಯ ಮಗಳು, ಅಳಿಯನಂತೆ ನಟಿಸಿ ವಂಚಿಸುತ್ತಿದ್ದವರ ಬಂಧನ

ತಾವು ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾರ ಮಗಳು, ಅಳಿಯ ಎಂದು ಹೇಳಿಕೊಂಡು ನೂರಾರು ಜನರನ್ನು ವಂಚಿಸಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹನ್ಸಿತಾ ಅಭಿಲಿಪ್ಸಾ ಮತ್ತು ಅನಿಲ್ ಮೊಹಾಂತಿ, ಒಡಿಶಾದ ಪ್ರಮುಖ ಅಧಿಕಾರಿಗಳು ಮತ್ತು ರಾಜಕಾರಣಿಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವುದಾಗಿ ಹೇಳಿಕೊಂಡು ಜನರನ್ನು ವಂಚಿಸಿದ್ದಾರೆ.

ಪ್ರಧಾನಿ ಮೋದಿಯ ಪ್ರಧಾನ ಕಾರ್ಯದರ್ಶಿಯ ಮಗಳು, ಅಳಿಯನಂತೆ ನಟಿಸಿ ವಂಚಿಸುತ್ತಿದ್ದವರ ಬಂಧನ
ಬಂಧನImage Credit source: India Today
ನಯನಾ ರಾಜೀವ್
|

Updated on: Dec 31, 2024 | 9:13 AM

Share

ಪ್ರಧಾನಿ ಮೋದಿಯವರ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾರ ಮಗಳು, ಅಳಿಯ ಎಂದು ಹೇಳಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದ ಇಬ್ಬರನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ. ಭುವನೇಶ್ವರದಲ್ಲಿ ಹಲವು ಬಿಲ್ಡರ್‌ಗಳು, ಗಣಿ ಮಾಲೀಕರು ಮತ್ತು ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ ಅವರ ಮಗಳು ಮತ್ತು ಅಳಿಯನಂತೆ ನಟಿಸಿದ್ದ ದಂಪತಿಯನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

ಹನ್ಸಿತಾ ಅಭಿಲಿಪ್ಸಾ ಮತ್ತು ಅನಿಲ್ ಮೊಹಾಂತಿ, ಒಡಿಶಾದ ಪ್ರಮುಖ ಅಧಿಕಾರಿಗಳು ಮತ್ತು ರಾಜಕಾರಣಿಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವುದಾಗಿ ಹೇಳಿಕೊಂಡು ಜನರನ್ನು ವಂಚಿಸಿದ್ದಾರೆ. ಭುವನೇಶ್ವರದ ಇನ್ಫೋಸಿಟಿ-ನಂದಂಕನನ್ ರಸ್ತೆಯಲ್ಲಿರುವ ಐಷಾರಾಮಿ ಕಚೇರಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿ ತಮ್ಮ ಪ್ರಭಾವಿ ಸಂಪರ್ಕಗಳನ್ನು ಬಳಸಿಕೊಂಡು ಟೆಂಡರ್ ಮತ್ತು ಒಪ್ಪಂದಗಳನ್ನು ಅಂತಿಮಗೊಳಿಸುವ ಹುಸಿ ಭರವಸೆ ನೀಡಿ ಹಣ ವಂಚಿಸುತ್ತಿದ್ದರು.

ಗಣಿ ಮಾಲೀಕನ ದೂರನ್ನು ಆಧರಿಸಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಮತ್ತು ಒಡಿಶಾ ಮುಖ್ಯ ಕಾರ್ಯದರ್ಶಿ ಮನೋಜ್ ಅಹುಜಾ ಸೇರಿದಂತೆ ಉನ್ನತ ಅಧಿಕಾರಿಗಳೊಂದಿಗೆ ನಿಕಟ ಒಡನಾಟವನ್ನು ಹೊಂದಿರುವಂತೆ ಬಿಂಬಿಸಿದ್ದರು.

ಮತ್ತಷ್ಟು ಓದಿ: ಎಚ್ಚರ..ಎಚ್ಚರ: ವರ್ಕ್ ಫ್ರಾಮ್ ಹೋಂ ಕೆಲಸದ ಹೆಸರಿನಲ್ಲಿ ನಡೆಯುತ್ತಿದೆ ವಂಚನೆ

ದಂಪತಿಯನ್ನು  ಪಾಟಿಯಾ ಪ್ರದೇಶದಲ್ಲಿ ಬಂಧಿಸಲಾಗಿದೆ ಮತ್ತು ವಂಚನೆಯಲ್ಲಿ ಭಾಗಿಯಾಗಿರುವ ಇತರ ಸಂಭಾವ್ಯ ಸಹಚರರು ಮತ್ತು ಬಲಿಪಶುಗಳನ್ನು ಗುರುತಿಸಲು ಹೆಚ್ಚಿನ ತನಿಖೆಗಳು ನಡೆಯುತ್ತಿವೆ. ಹನ್ಸಿತಾ ಅಭಿಲಿಪ್ಸಾ ಮತ್ತು ಅನಿಲ್ ಮೊಹಂತಿ ಅವರು ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ ಅವರ ಸಂಬಂಧಿಕರು ಎಂದು ಹೇಳುವ ಮೂಲಕ ಜನರನ್ನು ವಂಚಿಸಿದ್ದಾರೆ ಎಂದು ನಮಗೆ ಗೌಪ್ಯ ಮಾಹಿತಿ ಸಿಕ್ಕಿದೆ.

ಪಿಕೆ ಮಿಶ್ರಾ ಅವರ ಮಗಳು ಮತ್ತು ಅಳಿಯ ಎಂದು ಗುರುತು ಹಾಕುತ್ತಿದ್ದಾರೆ. ಡಿಸೆಂಬರ್ 26 ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಡಿಸಿಪಿ ಸ್ವರಾಜ್ ಡಿಬಾಟಾ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ
ಪರಿಷತ್​​​ ಬಿಜೆಪಿ ಅಭ್ಯರ್ಥಿ ಸುರೇಶ್​​ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ
ಪರಿಷತ್​​​ ಬಿಜೆಪಿ ಅಭ್ಯರ್ಥಿ ಸುರೇಶ್​​ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು
ಬಿಗ್ ಬಾಸ್: ಸುದೀಪ್ ಎದುರಲ್ಲೇ ಬಗೆಬಗೆಯ ಶಿಕ್ಷೆ ಅನುಭವಿಸಿದ ಪ್ರಶಾಂತ್
ಬಿಗ್ ಬಾಸ್: ಸುದೀಪ್ ಎದುರಲ್ಲೇ ಬಗೆಬಗೆಯ ಶಿಕ್ಷೆ ಅನುಭವಿಸಿದ ಪ್ರಶಾಂತ್
ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ
ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ