AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದಿ ಬದಿಯ ತಿಂಡಿ ತಿನ್ನುವಾಗ ಎಚ್ಚರ; ಪಾನಿಪುರಿ ತಿಂದ 20ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

ಬೀದಿಬದಿಯಲ್ಲಿ ಮಾರಾಟ ಮಾಡುತ್ತಿದ್ದ ಪಾನಿಪುರಿ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪಾನಿಪುರಿ ತಿಂದ ಕೆಲವು ಗಂಟೆಗಳಲ್ಲೇ ಮಕ್ಕಳಿಗೆ ವಾಂತಿ, ಭೇದಿ ಮತ್ತು ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಸದ್ಯ ಎಲ್ಲರನ್ನೂ ಜಿಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಎಲ್ಲಾ ಮಕ್ಕಳಲ್ಲೂ ಒಂದೇ ರೀತಿಯ ಲಕ್ಷಣಗಳು ಕಾಣಿಸಿಕೊಂಡಿರುವುದರಿಂದ, ಅವರು ಫುಡ್ ಪಾಯ್ಸನಿಂಗ್​ನಿಂದ ಬಳಲುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ವೈದ್ಯಕೀಯ ಸಿಬ್ಬಂದಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಮಕ್ಕಳ ಅನಾರೋಗ್ಯದ ನಿಜವಾದ ಕಾರಣಗಳನ್ನು ನಿರ್ಧರಿಸಲು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಬೀದಿ ಬದಿಯ ತಿಂಡಿ ತಿನ್ನುವಾಗ ಎಚ್ಚರ; ಪಾನಿಪುರಿ ತಿಂದ 20ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
PanipuriImage Credit source: TV9
ಸುಷ್ಮಾ ಚಕ್ರೆ
|

Updated on: Jun 17, 2026 | 7:19 PM

Share

ಹೈದರಾಬಾದ್, ಜೂನ್ 17: ತೆಲಂಗಾಣದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯಲ್ಲಿ ಗಂಭೀರ ದುರಂತವೊಂದು ಬೆಳಕಿಗೆ ಬಂದಿದೆ. ತಂಗಲ್ಲಪಲ್ಲಿ ಮಂಡಲದ ಕೆಸಿಆರ್ ನಗರ ಕಾಲೋನಿಯಲ್ಲಿ ಪಾನಿಪುರಿ (Panipuri) ತಿಂದು 18 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಮಂಗಳವಾರ ಸಂಜೆ ಸ್ಥಳೀಯ ಪಾನಿಪುರಿ ವ್ಯಾನ್‌ನಲ್ಲಿ ಕೆಲವು ಮಕ್ಕಳು ಪಾನಿಪುರಿ ತಿಂದರು. ಅದನ್ನು ತಿಂದ ಸ್ವಲ್ಪ ಸಮಯದ ನಂತರ ಕೆಲವು ಮಕ್ಕಳು ಅಸ್ವಸ್ಥರಾದರು. ಅವರಲ್ಲಿ ಕೆಲವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಇನ್ನು ಕೆಲವರು ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಇದರಿಂದಾಗಿ, ಕುಟುಂಬ ಸದಸ್ಯರು ಅವರನ್ನು ಚಿಕಿತ್ಸೆಗಾಗಿ ಸಿರಿಸಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದರು.

ಸ್ಥಳೀಯ ನಿವಾಸಿಗಳ ಪ್ರಕಾರ, ಮಂಗಳವಾರ ಸಂಜೆ ಕಾಲೋನಿಗೆ ಬಂದಿದ್ದ ಚಾಟ್ಸ್ ವ್ಯಾಪಾರಿಯೊಬ್ಬನ ಬಳಿ ಮಕ್ಕಳು ಹಾಗೂ ಅವರ ಕುಟುಂಬಸ್ಥರು ಪಾನಿಪುರಿ ಸೇವಿಸಿದ್ದರು. ಆದರೆ, ಇಂದು ಮುಂಜಾನೆ ವೇಳೆ ಮಕ್ಕಳಿಗೆ ತೀವ್ರ ಹೊಟ್ಟೆನೋವು, ನಿರಂತರ ವಾಂತಿ ಮತ್ತು ಭೇದಿ ಆರಂಭವಾಗಿದೆ. ಒಬ್ಬರಾದ ಮೇಲೊಬ್ಬರಂತೆ ಕಾಲೋನಿಯ ಹಲವು ಮಕ್ಕಳು ಇದೇ ರೋಗಲಕ್ಷಣಗಳಿಂದ ಬಳಲಲು ಆರಂಭಿಸಿದಾಗ ಗಾಬರಿಗೊಂಡ ಪಾಲಕರು ತಕ್ಷಣವೇ ಅವರನ್ನು ರಾಜಣ್ಣ ಸಿರ್ಸಿಲ್ಲಾ ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಹತ್ತಿರದ ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿದ್ದಾರೆ. ಇಂದು ಸಂಜೆ ವೇಳೆಗೆ ಆಸ್ಪತ್ರೆಗೆ ದಾಖಲಾದ ಮಕ್ಕಳ ಸಂಖ್ಯೆ 20 ದಾಟಿದೆ ಎನ್ನಲಾಗಿದೆ. ಸದ್ಯ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಪಾನಿಪುರಿಯಲ್ಲಿ ಮೂಳೆ ಪತ್ತೆ; ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದ ಯುವತಿಗೆ ಶಾಕ್

ಈ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ತಂಗಲ್ಲಪಲ್ಲಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಪಾಲಕರು ಮತ್ತು ನಿವಾಸಿಗಳ ಪ್ರಾಥಮಿಕ ಹೇಳಿಕೆಗಳ ಆಧಾರದ ಮೇಲೆ ಸದ್ಯ ಪಾನಿಪುರಿ ವ್ಯಾಪಾರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಕ್ಕಳು ಬೀದಿಬದಿಯ ಪಾನಿಪುರಿ ತಿಂದ ಬಳಿಕವೇ ಅಸ್ವಸ್ಥಗೊಂಡಿದ್ದಾರೆ ಎಂದು ಪಾಲಕರು ಆರೋಪಿಸುತ್ತಿದ್ದಾರೆ. ಸದ್ಯ ವ್ಯಾಪಾರಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಚಿಕ್ಕೋಡಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಮತ್ತೊಮ್ಮೆ ಫುಡ್ ಪಾಯ್ಸನಿಂಗ್: 12 ವಿದ್ಯಾರ್ಥಿಗಳು ಅಸ್ವಸ್ಥ

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಹಾರ ಸುರಕ್ಷತಾ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಮಕ್ಕಳು ಸೇವಿಸಿದ ಪಾನಿಪುರಿ, ಅದಕ್ಕೆ ಬಳಸಲಾದ ಮಸಾಲೆ ನೀರು ಮತ್ತು ಆಲೂಗಡ್ಡೆ ಮಿಶ್ರಣದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ. ಕಲುಷಿತ ನೀರು ಅಥವಾ ಹಳಸಿದ ಆಹಾರ ಪದಾರ್ಥಗಳ ಬಳಕೆಯಿಂದ ಈ ಫುಡ್ ಪಾಯ್ಸನಿಂಗ್ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು
ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು
'ಗ್ಯಾರಂಟಿಯಲ್ಲಿ ಅಕ್ರಮವಾಗಿದೆ ಎಂದಾದರೆ ಅನುಷ್ಠಾನ ಸಮಿತಿ ಏನ್ಮಾಡ್ತಿತ್ತು?"
'ಗ್ಯಾರಂಟಿಯಲ್ಲಿ ಅಕ್ರಮವಾಗಿದೆ ಎಂದಾದರೆ ಅನುಷ್ಠಾನ ಸಮಿತಿ ಏನ್ಮಾಡ್ತಿತ್ತು?