ಸಂಸತ್ತೇ ಸರ್ವೋಚ್ಚ; ನ್ಯಾಯಾಂಗದ ವಿರುದ್ಧ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಮತ್ತೆ ವಾಗ್ದಾಳಿ
ನ್ಯಾಯಾಂಗದ ಮೇಲೆ ಉಪಾಧ್ಯಕ್ಷ ಜಗದೀಪ್ ಧಂಖರ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ. 'ಸಂವಿಧಾನವಿರುವುದು ಜನರಿಗಾಗಿ, ಜನರಿಂದ ಆಯ್ಕೆಯಾದವರೇ ಈ ದೇಶದಲ್ಲಿ ಸುಪ್ರೀಂ' ಎಂದು ಧಂಖರ್ ಹೇಳಿದ್ದಾರೆ. 'ಸಂಸತ್ತೇ ಸರ್ವೋಚ್ಚ'ಎಂದು ಅವರು ಹೇಳಿದ್ದಾರೆ. ಚುನಾಯಿತ ಪ್ರತಿನಿಧಿಗಳು ಸಂವಿಧಾನದ ಬಗ್ಗೆ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂದು ಉಪರಾಷ್ಟ್ರಪತಿ ಜಗದೀಪ್ ಧಂಖರ್ ಒತ್ತಿ ಹೇಳಿದ್ದಾರೆ.

ನವದೆಹಲಿ, ಏಪ್ರಿಲ್ 22: ಸುಪ್ರೀಂ ಕೋರ್ಟ್ (Supreme Court) ತೀರ್ಪಿನ ಕುರಿತು ಇತ್ತೀಚಿನ ತಮ್ಮ ಹೇಳಿಕೆಗಳ ವಿವಾದದ ನಡುವೆಯೇ ಉಪರಾಷ್ಟ್ರಪತಿ ಜಗದೀಪ್ ಧಂಖರ್ (Jagdeep Dhankhar) ಇಂದು ನ್ಯಾಯಾಂಗದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಜನರಿಗಾಗಿ ಮತ್ತು ಸಾಂವಿಧಾನಿಕ ಪದ್ಧತಿಗಳ ಮೂಲಕ ಆಯ್ಕೆಯಾದವರು ಅದನ್ನು ರಕ್ಷಿಸುವ ಮತ್ತು ಅದರ ವಿಷಯ ಏನಾಗಿರಬೇಕು ಎಂಬುದನ್ನು ನಿರ್ಧರಿಸುವ “ಸುಪ್ರೀಂ ಮಾಸ್ಟರ್ಸ್” ಎಂದು ಪ್ರತಿಪಾದಿಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಸಾಂವಿಧಾನಿಕ ಕಾರ್ಯಕಾರಿಣಿ ಉಚ್ಚರಿಸುವ ಪ್ರತಿಯೊಂದು ಪದವೂ ರಾಷ್ಟ್ರದ ಅತ್ಯುನ್ನತ ಹಿತಾಸಕ್ತಿಯಿಂದ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ.
“ಸಂವಿಧಾನವು ಅದರ ಸಾರ, ಅದರ ಮೌಲ್ಯ, ಅದರ ಅಮೃತವನ್ನು ಸಂವಿಧಾನದ ಪೀಠಿಕೆಯಲ್ಲಿ ಒಳಗೊಂಡಿದೆ. ನಾವು ಭಾರತದ ಜನರಲ್ಲೇ ಸರ್ವೋಚ್ಚ ಶಕ್ತಿಯಿದೆ. ಯಾರೂ ಭಾರತದ ಜನರಿಗಿಂತ ಮೇಲಲ್ಲ. ಭಾರತದ ಜನರು ಸಂವಿಧಾನದ ಅಡಿಯಲ್ಲಿ ತಮ್ಮ ಅಭಿವ್ಯಕ್ತಿಗಳು, ಅವರ ಆಸೆ, ಅವರ ಇಚ್ಛೆಯನ್ನು ತಮ್ಮ ಸಾರ್ವಜನಿಕ ಪ್ರತಿನಿಧಿಗಳ ಮೂಲಕ ಪ್ರತಿಬಿಂಬಿಸಲು ಆಯ್ಕೆ ಮಾಡಿಕೊಂಡಿರುತ್ತಾರೆ. ಅವರು ಚುನಾವಣೆಯ ಸಮಯದಲ್ಲಿ ಈ ಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ. ಸಂಸತ್ತೇ ನಮ್ಮ ದೇಶದಲ್ಲಿ ಸುಪ್ರೀಂ” ಎಂದು ಅವರು ಹೇಳಿದ್ದಾರೆ.
#WATCH | Delhi: Vice President Jagdeep Dhankhar says “The Constitution is encapsulated, its essence, its worth, its nectar, in the Preamble of the Constitution. And what does it say? “We, the People of India.” The supreme power is with them. No one is above the people of India.… pic.twitter.com/VI8E4xhrnl
— ANI (@ANI) April 22, 2025
ಇದನ್ನೂ ಓದಿ: ಸುಪ್ರೀಂ ಕೋರ್ಟ್ ರಾಷ್ಟ್ರಪತಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ; ಉಪರಾಷ್ಟ್ರಪತಿ ಜಗದೀಪ್ ಧಂಖರ್ ಆಕ್ಷೇಪ
ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಇತ್ತೀಚೆಗೆ ಹೇಳಿಕೆಗಳನ್ನು ನೀಡಿದ್ದರು. ರಾಷ್ಟ್ರಪತಿಗಳು, ರಾಜ್ಯಪಾಲರಿಗೆ ಸರ್ಕಾರ ನೀಡುವ ಮಸೂದೆಗಳ ಅನುಮೋದನೆಗೆ ಅಥವಾ ಆ ಬಗ್ಗೆ ನಿರ್ಧರಿಸಲು ಸುಪ್ರೀಂ ಕೋರ್ಟ್ ಗಡುವು ನೀಡಿತ್ತು. ರಾಷ್ಟ್ರಪತಿಗಳು ತಮ್ಮ ಅನುಮೋದನೆಗಾಗಿ ರಾಜ್ಯಪಾಲರು ಕಾಯ್ದಿರಿಸಿದ ಮಸೂದೆಗಳ ಕುರಿತು ನಿರ್ಧರಿಸಲು ಸುಪ್ರೀಂ ಕೋರ್ಟ್ ಇತ್ತೀಚೆಗೆ ಮೂರು ತಿಂಗಳ ಕಾಲಾವಕಾಶವನ್ನು ನಿಗದಿಪಡಿಸಿತ್ತು. ಇದಾದ ನಂತರ ಜಗದೀಪ್ ಧಂಖರ್ ಸುಪ್ರೀಂ ಕೋರ್ಟ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡುವ ಅಧಿಕಾರ ಸುಪ್ರೀಂ ಕೋರ್ಟ್ ಹೊಂದಿಲ್ಲ ಎಂದು ಅವರು ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ