AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಡನ್‌ನಲ್ಲಿದ್ದಾಳೆ ಎಂದುಕೊಂಡಿದ್ದ ಪೋಷಕರಿಗೆ ಶಾಕ್; ಪುಣೆಯ ಫ್ಲಾಟ್​​ನಲ್ಲಿ ಮಗಳ ಶವ ಪತ್ತೆ

ಲಂಡನ್‌ನಲ್ಲಿ ಎಂಬಿಎ ಓದುತ್ತಿದ್ದಾಳೆ ಎಂದು ಭಾವಿಸಿದ್ದ ಪೋಷಕರಿಗೆ ಮಗಳ ಸಾವಿನ ಸುದ್ದಿ ಆಘಾತ ತಂದಿದೆ. 34 ವರ್ಷದ ಮುಗ್ಧಾ ಅವಿನಾಶ್ ದೇಶಮುಖ್ ಲಂಡನ್‌ನಿಂದ ಯಾರಿಗೂ ತಿಳಿಸದೆ ಭಾರತಕ್ಕೆ ಮರಳಿ ಪುಣೆಯಲ್ಲಿ ವಾಸಿಸುತ್ತಿದ್ದರು. ಅಕ್ಟೋಬರ್ 24ರಿಂದ ಮೊಬೈಲ್ ಸ್ವಿಚ್ ಆಫ್ ಆಗಿದ್ದ ಹಿನ್ನೆಲೆಯಲ್ಲಿ ಪೋಷಕರು ಹುಡುಕಾಟ ನಡೆಸಿದಾಗ ಬ್ಯಾಂಕ್ ವಹಿವಾಟು ಮತ್ತು Swiggy, Zomato ಫುಡ್ ಆರ್ಡರ್‌ಗಳಿಂದ ಆಕೆ ಭಾರತದಲ್ಲಿರುವುದು ಪತ್ತೆಯಾಗಿದೆ. ಬಳಿಕ ಪುಣೆಯ ಫ್ಲ್ಯಾಟ್‌ನಲ್ಲಿ ಆಕೆಯ ಮೃತದೇಹ ಪತ್ತೆಯಾಗಿದ್ದು, ಸಾವಿನ ಕಾರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಲಂಡನ್‌ನಲ್ಲಿದ್ದಾಳೆ ಎಂದುಕೊಂಡಿದ್ದ ಪೋಷಕರಿಗೆ ಶಾಕ್; ಪುಣೆಯ ಫ್ಲಾಟ್​​ನಲ್ಲಿ ಮಗಳ ಶವ ಪತ್ತೆ
ಮೃತ ಮುಗ್ಧಾ ಅವಿನಾಶ್ ದೇಶಮುಖ್
ಅಕ್ಷತಾ ವರ್ಕಾಡಿ
|

Updated on:Oct 31, 2026 | 1:09 PM

Share

ಪುಣೆ: ಲಂಡನ್‌ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ಭಾವಿಸಿದ್ದ ಪೋಷಕರಿಗೆ ಮಗಳ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. 34 ವರ್ಷದ ಮುಗ್ಧಾ ಅವಿನಾಶ್ ದೇಶಮುಖ್ ಎಂಬ ಯುವತಿ ಪುಣೆಯ ಫ್ಲ್ಯಾಟ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ವಿಶೇಷವೆಂದರೆ, ಆಕೆ ಲಂಡನ್‌ನಿಂದ ಭಾರತಕ್ಕೆ ಮರಳಿರುವ ವಿಚಾರವನ್ನೇ ತನ್ನ ಪೋಷಕರಿಂದ ಮುಚ್ಚಿಟ್ಟಿದ್ದಳು. ಆಕೆ ಭಾರತದಲ್ಲಿರುವ ಸುಳಿವನ್ನು ಪತ್ತೆಹಚ್ಚಲು ಆನ್‌ಲೈನ್ ಫುಡ್ ಆರ್ಡರ್ ಮತ್ತು ಬ್ಯಾಂಕ್ ವಹಿವಾಟುಗಳು ಪ್ರಮುಖ ಪಾತ್ರ ವಹಿಸಿವೆ.

ಲಂಡನ್‌ಗೆ ತೆರಳಿದ್ದ ಯುವತಿ ರಹಸ್ಯವಾಗಿ ಭಾರತಕ್ಕೆ ವಾಪಸ್:

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ (ಔರಂಗಾಬಾದ್) ಮೂಲದ ಮುಗ್ಧಾ ಅವಿನಾಶ್ ದೇಶಮುಖ್ 2025ರ ಜುಲೈನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿದ್ದಳು. ಆದರೆ, ಅಲ್ಲಿಗೆ ಹೋದ ಕೆಲವೇ ವಾರಗಳಲ್ಲಿ ಅಂದರೆ ಆಗಸ್ಟ್ ತಿಂಗಳಲ್ಲೇ ಯಾರಿಗೂ ತಿಳಿಸದೆ ಭಾರತಕ್ಕೆ ಮರಳಿದ್ದಳು. ಬಳಿಕ ಪುಣೆಯ ಗಹುಂಜೆ ಪ್ರದೇಶದಲ್ಲಿರುವ ‘ಲೋಧಾ ಬೆಲ್ಮೊಂಡೋ’ ಹೌಸಿಂಗ್ ಸೊಸೈಟಿಯಲ್ಲಿ ಬಾಡಿಗೆಗೆ ಫ್ಲ್ಯಾಟ್ ಪಡೆದು ಏಕಾಂಗಿಯಾಗಿ ವಾಸಿಸುತ್ತಿದ್ದಳು. ಇನ್ನೊಂದೆಡೆ, ತಾನು ಲಂಡನ್‌ನಲ್ಲೇ ಇರುವುದಾಗಿ ಫೋನ್ ಕರೆಗಳು ಮತ್ತು ವಾಟ್ಸಾಪ್ ಸಂದೇಶಗಳ ಮೂಲಕ ಪೋಷಕರನ್ನು ನಂಬಿಸಿದ್ದಳು. ಹೀಗಾಗಿ ಮಗಳು ವಿದೇಶದಲ್ಲಿಯೇ ಇದ್ದಾಳೆ ಎಂದು ಭಾವಿಸಿದ್ದರು.

ಬ್ಯಾಂಕ್ ಸ್ಟೇಟ್‌ಮೆಂಟ್‌ನಿಂದ ಬಯಲಾಯಿತು ಅಸಲಿ ವಿಚಾರ!

ಅಕ್ಟೋಬರ್ 24ರಿಂದ ಮುಗ್ಧಾಳ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಮಗಳೊಂದಿಗೆ ಸಂಪರ್ಕ ಸಾಧ್ಯವಾಗದ ಕಾರಣ ಆತಂಕಗೊಂಡ ಪೋಷಕರು, ಲಂಡನ್‌ನಲ್ಲಿದ್ದ ಆಕೆಯ ಸ್ನೇಹಿತೆಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಸ್ನೇಹಿತೆ ಲಂಡನ್ ಪೊಲೀಸರನ್ನು ಸಂಪರ್ಕಿಸಿದಾಗ, ಮುಗ್ಧಾ ಆಗಸ್ಟ್ ತಿಂಗಳಲ್ಲೇ ಬ್ರಿಟನ್ ತೊರೆದು ಭಾರತಕ್ಕೆ ಮರಳಿರುವ ವಿಚಾರ ಬೆಳಕಿಗೆ ಬಂದಿದೆ. ಇದರಿಂದ ಮತ್ತಷ್ಟು ಆತಂಕಗೊಂಡ ತಂದೆ ಅವಿನಾಶ್ ದೇಶಮುಖ್ ಮಗಳ ಬ್ಯಾಂಕ್ ಖಾತೆಯ ವಹಿವಾಟುಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅಕ್ಟೋಬರ್ 8 ರಿಂದ 25ರ ಅವಧಿಯಲ್ಲಿ ಭಾರತದಲ್ಲಿನ Swiggy, Zomato ಸೇರಿದಂತೆ ವಿವಿಧ ಆನ್‌ಲೈನ್ ಸೇವೆಗಳಿಗೆ ಹಣ ಪಾವತಿಯಾಗಿರುವುದು ಪತ್ತೆಯಾಗಿದೆ. ಈ ವಹಿವಾಟುಗಳು ಮಗಳು ಭಾರತದಲ್ಲೇ ಇರುವ ಸಾಧ್ಯತೆಯನ್ನು ಬಲಪಡಿಸಿವೆ. ತಕ್ಷಣವೇ ಪೋಷಕರು ಛತ್ರಪತಿ ಸಂಭಾಜಿನಗರ ಅಪರಾಧ ವಿಭಾಗದ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಗರ್ಭಿಣಿ ಪತ್ನಿಯ ಕೊಲೆಗೂ ಮುನ್ನ ಗೂಗಲ್‌ನಲ್ಲಿ ಆತ್ಮಹತ್ಯೆಯ ಶಿಕ್ಷೆ ಬಗ್ಗೆ ಹುಡುಕಿದ್ದ ಪತಿ!

ಫ್ಲ್ಯಾಟ್‌ನ ಬಾಗಿಲು ತೆರೆದಾಗ ಕಂಡುಬಂದಿದ್ದು ಯುವತಿಯ ಶವ:

ಬ್ಯಾಂಕ್ ವಹಿವಾಟುಗಳು ಹಾಗೂ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಪೊಲೀಸರು ಯುವತಿಯ ಸ್ಥಳವನ್ನು ಪತ್ತೆಹಚ್ಚಿದ್ದಾರೆ. ಆಕೆ ಇಷ್ಟು ದಿನ ಪುಣೆಯ ಲೋಧಾ ಬೆಲ್ಮೊಂಡೋ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವುದು ತಿಳಿದುಬಂದಿದೆ. ಕೂಡಲೇ ಛತ್ರಪತಿ ಸಂಭಾಜಿನಗರ ಪೊಲೀಸರು ಪುಣೆಯ ಪಿಂಪ್ರಿ-ಚಿಂಚವಾಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಶಿರಗಾಂವ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ದೇವೇಂದ್ರ ಚೌಹಾಣ್ ನೇತೃತ್ವದ ಪೊಲೀಸ್ ತಂಡ ಫ್ಲ್ಯಾಟ್‌ಗೆ ತೆರಳಿದೆ. ಒಳಗಿನಿಂದ ಬಾಗಿಲು ಲಾಕ್ ಆಗಿದ್ದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ಒಳಗೆ ಹೋಗಿ ಪರಿಶೀಲಿಸಿದಾಗ ಯುವತಿಯ ಮೃತದೇಹ ಪತ್ತೆಯಾಗಿದೆ. ಮೃತದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸಾವಿಗೆ ಕಾರಣವೇನು? ವಿಧಿವಿಜ್ಞಾನ ವರದಿಗಾಗಿ ಕಾಯುತ್ತಿರುವ ಪೊಲೀಸರು:

ಸದ್ಯ ಯುವತಿಯ ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಿಂದಲೂ ಸಾವಿನ ಕಾರಣ ಸ್ಪಷ್ಟವಾಗದ ಹಿನ್ನೆಲೆಯಲ್ಲಿ, ಆಕೆಯ ದೇಹದ ಆಂತರಿಕ ಅಂಗಾಂಶಗಳ ಮಾದರಿಗಳನ್ನು (Viscera) ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಲಂಡನ್‌ನಿಂದ ಭಾರತಕ್ಕೆ ಮರಳಿದ ವಿಚಾರವನ್ನು ಮುಗ್ಧಾ ತಮ್ಮ ಕುಟುಂಬದಿಂದ ಏಕೆ ಮುಚ್ಚಿಟ್ಟಿದ್ದರು? ಪುಣೆಯಲ್ಲಿ ಯಾರಿಗೂ ತಿಳಿಯದಂತೆ ಏಕಾಂಗಿಯಾಗಿ ವಾಸಿಸುತ್ತಿದ್ದ ಉದ್ದೇಶವೇನು? ಆಕೆಯ ಸಾವಿಗೆ ಕಾರಣವೇನು? ಎಂಬ ಹಲವು ಪ್ರಶ್ನೆಗಳು ಇದೀಗ ಎದುರಾಗಿವೆ. ಈ ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದು, ವಿಧಿವಿಜ್ಞಾನ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ಹಿಂದಿನ ನೈಜ ಕಾರಣ ತಿಳಿದುಬರುವ ನಿರೀಕ್ಷೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:55 pm, Sat, 31 October 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಮುಗಿಯಿತು ಮದುವೆ ಸಂಭ್ರಮ, ಶುರು ಆಯ್ತು ಎವಿಕ್ಷನ್ ಭಯ: ವಿಡಿಯೋ
ಮುಗಿಯಿತು ಮದುವೆ ಸಂಭ್ರಮ, ಶುರು ಆಯ್ತು ಎವಿಕ್ಷನ್ ಭಯ: ವಿಡಿಯೋ
ಹಾಸನಾಂಬೆ ದರ್ಶನೋತ್ಸವಕ್ಕೆ ಬೆಳ್ಳಂಬೆಳಿಗ್ಗೆಯೇ ಭಕ್ತಸಾಗರ
ಹಾಸನಾಂಬೆ ದರ್ಶನೋತ್ಸವಕ್ಕೆ ಬೆಳ್ಳಂಬೆಳಿಗ್ಗೆಯೇ ಭಕ್ತಸಾಗರ
ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವೂ ಲೀಟರ್​​ಗೆ​​ 14 ರೂ.ಹೆಚ್ಚಳ
ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವೂ ಲೀಟರ್​​ಗೆ​​ 14 ರೂ.ಹೆಚ್ಚಳ
ಇಂದು ಈ ರಾಶಿಯವರು ಅತಿಯಾಗಿ ಯಾರಿಗೂ ಆಶ್ವಾಸನೆ ನೀಡಬೇಡಿ
ಇಂದು ಈ ರಾಶಿಯವರು ಅತಿಯಾಗಿ ಯಾರಿಗೂ ಆಶ್ವಾಸನೆ ನೀಡಬೇಡಿ
ನಿಯಮ ಉಲ್ಲಂಘಿಸಿದ್ದ ಎಂಟು ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು ಬಂದ್
ನಿಯಮ ಉಲ್ಲಂಘಿಸಿದ್ದ ಎಂಟು ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು ಬಂದ್
ಕೇದಾರನಾಥದಲ್ಲಿ ಈ ಋತುವಿನ ಮೊದಲ ಹಿಮಪಾತ; ಭಕ್ತರ ಮೇಲೆ ಹಿಮದ ಮಳೆ!
ಕೇದಾರನಾಥದಲ್ಲಿ ಈ ಋತುವಿನ ಮೊದಲ ಹಿಮಪಾತ; ಭಕ್ತರ ಮೇಲೆ ಹಿಮದ ಮಳೆ!
ನಿರಾಣಿ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ ಲಾರಿಗಳನ್ನ ತಡೆದ ರೈತರು
ನಿರಾಣಿ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ ಲಾರಿಗಳನ್ನ ತಡೆದ ರೈತರು
ಧನ್ವೀರ್ ವಿರುದ್ಧ ನಿರ್ಬಂಧಜಾಜ್ಞೆ: ದರ್ಶನ್ ಪರ ವಕೀಲರು ಹೇಳಿದ್ದಿಷ್ಟು
ಧನ್ವೀರ್ ವಿರುದ್ಧ ನಿರ್ಬಂಧಜಾಜ್ಞೆ: ದರ್ಶನ್ ಪರ ವಕೀಲರು ಹೇಳಿದ್ದಿಷ್ಟು
ರಷ್ಯಾದ ತೈಲ ಸಂಸ್ಕರಣಾಗಾದ ಮೇಲೆ ಉಕ್ರೇನ್​ನ ಡ್ರೋನ್ ದಾಳಿ
ರಷ್ಯಾದ ತೈಲ ಸಂಸ್ಕರಣಾಗಾದ ಮೇಲೆ ಉಕ್ರೇನ್​ನ ಡ್ರೋನ್ ದಾಳಿ
ಹೆಲಿಕಾಪ್ಟರ್​​ ದುರಂತದಲ್ಲಿ ಸಾವನ್ನಪ್ಪಿದ CCB ಇನ್ಸ್​ಪೆಕ್ಟರ್ ಅರುಣ್ ಯಾರು
ಹೆಲಿಕಾಪ್ಟರ್​​ ದುರಂತದಲ್ಲಿ ಸಾವನ್ನಪ್ಪಿದ CCB ಇನ್ಸ್​ಪೆಕ್ಟರ್ ಅರುಣ್ ಯಾರು