AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ ಠಾಕ್ರೆ ಅಣಕಿಸಿ ರೀಲ್ಸ್ ಮಾಡಿದ್ದಕ್ಕೆ ‘ಎಂಎನ್‌ಎಸ್ ಸ್ಟೈಲ್’ ಶಿಕ್ಷೆ: ಇನ್‌ಫ್ಲುಯೆನ್ಸರ್ ಮುಖಕ್ಕೆ ಮಸಿ, ತಲೆಯ ಮೇಲೆ ಚಪ್ಪಲಿ ಇರಿಸಿ ಅವಮಾನ

ರಾಜ್ ಠಾಕ್ರೆ ಅಣಕಿಸಿದ್ದ ಇನ್‌ಫ್ಲುಯೆನ್ಸರ್ ಮಹೇಶ್ ಮೋಟೆಗೆ ಪುಣೆಯಲ್ಲಿ ಎಂಎನ್​ಎಸ್ ಕಾರ್ಯಕರ್ತರಿಂದ ಘೋರ ಅವಮಾನ. ಮುಖಕ್ಕೆ ಮಸಿ ಬಳಿದು, ತಲೆಯ ಮೇಲೆ ಚಪ್ಪಲಿ ಇರಿಸಿ ಕ್ಷಮೆಯಾಚಿಸುವಂತೆ ಒತ್ತಾಯಿಸಲಾಯಿತು. ಈ 'ಎಂಎನ್​ಎಸ್ ಸ್ಟೈಲ್ ನ್ಯಾಯ' ವಾಕ್ ಸ್ವಾತಂತ್ರ್ಯದ ಮೇಲಿನ ಆತಂಕ ಮೂಡಿಸಿದೆ. ಪೊಲೀಸರ ಕಾನೂನು ಕ್ರಮಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಈ ಘಟನೆ ರಾಜಕೀಯ ಹಿಂಸಾಚಾರ ಮತ್ತು ಸಾಮಾಜಿಕ ಮಾಧ್ಯಮ ವಿಡಂಬನೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ರಾಜ್ ಠಾಕ್ರೆ ಅಣಕಿಸಿ ರೀಲ್ಸ್ ಮಾಡಿದ್ದಕ್ಕೆ ‘ಎಂಎನ್‌ಎಸ್ ಸ್ಟೈಲ್’ ಶಿಕ್ಷೆ: ಇನ್‌ಫ್ಲುಯೆನ್ಸರ್ ಮುಖಕ್ಕೆ ಮಸಿ, ತಲೆಯ ಮೇಲೆ ಚಪ್ಪಲಿ ಇರಿಸಿ ಅವಮಾನ
ಇನ್​ಫ್ಲುಯೆನ್ಸರ್Image Credit source: Karan Singh Screen Shot from X Account
ನಯನಾ ರಾಜೀವ್
|

Updated on: Sep 21, 2026 | 11:23 AM

Share

ಪುಣೆ, ಸೆಪ್ಟೆಂಬರ್ 21: ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಸಾಮಾಜಿಕ ಜಾಲತಾಣದ ರೀಲ್ಸ್‌ನಲ್ಲಿ ಅಣಕಿಸಿದ್ದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮಹೇಶ್ ಮೋಟೆ ಎಂಬುವವರನ್ನು ಎಂಎನ್‌ಎಸ್ ಕಾರ್ಯಕರ್ತರು ಹಿಡಿದು, ಮುಖಕ್ಕೆ ಮಸಿ ಬಳಿದು, ತಲೆಯ ಮೇಲೆ ಚಪ್ಪಲಿ ಇರಿಸಿ ಅವಮಾನಿಸಿರುವ ಆಘಾತಕಾರಿ ಘಟನೆ ಪುಣೆಯಲ್ಲಿ ನಡೆದಿದೆ. ರಾಜ್ ಠಾಕ್ರೆ ಅವರ ಭಾವಚಿತ್ರದ ಮುಂದೆ ಬಲವಂತವಾಗಿ ಸಾಷ್ಟಾಂಗ ನಮಸ್ಕಾರ ಹಾಕಿಸಿ, ಕಣ್ಣೀರು ಹಾಕುತ್ತಾ ಕ್ಷಮೆಯಾಚಿಸುವಂತೆ ಮಾಡಿದ ವಿಡಿಯೋವನ್ನು ಎಂಎನ್‌ಎಸ್ ಮುಖಂಡರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವಿವಾದಕ್ಕೆ ಕಾರಣವಾದ ರೀಲ್ಸ್: ಹಡಪ್ಸರ್ ವಿಧಾನಸಭಾ ಕ್ಷೇತ್ರದ ಎಂಎನ್‌ಎಸ್ ಉಪ-ವಿಭಾಗೀಯ ಅಧ್ಯಕ್ಷ ಶುಭಂ ಜಗದಾಳೆ ಪ್ರಕಾರ, ಮಹೇಶ್ ಮೋಟೆ ಸುಮಾರು 15 ದಿನಗಳ ಹಿಂದೆ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ರಾಜ್ ಠಾಕ್ರೆ ಮತ್ತು ಪಕ್ಷದ ಮುಖಂಡರ ವಿರುದ್ಧ ಆಕ್ಷೇಪಾರ್ಹ ಹಾಗೂ ನಿಂದನೀಯ ಭಾಷೆ ಬಳಸಿದ್ದರು.

ಕತ್ರಜ್ ಪಾರ್ಕ್‌ನಿಂದ ಎತ್ತಾಕಿದ ಕಾರ್ಯಕರ್ತರು: ವಿವಾದದ ಬೆನ್ನಲ್ಲೇ ಮಹೇಶ್ ಮೋಟೆ ಸುಮಾರು 20 ದಿನಗಳ ಕಾಲ ಕೇರಳದಲ್ಲಿದ್ದರು. ಅವರು ಪುಣೆಗೆ ಹಿಂತಿರುಗಿ ಕತ್ರಜ್ ಪ್ರದೇಶದ ಉದ್ಯಾನವನವೊಂದರಲ್ಲಿ ಇದ್ದಾರೆಂಬ ಮಾಹಿತಿ ಸಿಗುತ್ತಿದ್ದಂತೆಯೇ, ಎಂಎನ್‌ಎಸ್ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಅವರನ್ನು ಹಿಡಿದು ಪಕ್ಷದ ಸಾರ್ವಜನಿಕ ಸಂಪರ್ಕ ಕಚೇರಿಗೆ ಎಳೆತಂದಿದ್ದಾರೆ.

ಮುಖಕ್ಕೆ ಮಸಿ, ತಲೆಮೇಲೆ ಚಪ್ಪಲಿ: ಕಚೇರಿಯೊಳಗೆ ಮೋಟೆ ಅವರ ಮುಖಕ್ಕೆ ಕಪ್ಪು ಮಸಿ ಬಳಿಯಲಾಗಿದೆ, ತಲೆಯ ಮೇಲೆ ಚಪ್ಪಲಿಗಳನ್ನು ಇಟ್ಟು ಕೂರಿಸಿ, ರಾಜ್ ಠಾಕ್ರೆ ಭಾವಚಿತ್ರಕ್ಕೆ ಕೈಮುಗಿದು ಬೇಷರತ್ ಕ್ಷಮೆ ಕೋರುವಂತೆ ಒತ್ತಾಯಿಸಲಾಗಿದೆ.

ಮತ್ತಷ್ಟು ಓದಿ: ‘ಚಾರಿತ್ರ್ಯವಧೆ ಮಾಡುವ ಷಡ್ಯಂತ್ರ’; ದಿಶಾ ಸಾಲಿಯಾನ್ ಸಾವಿನ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದ ಆದಿತ್ಯ ಠಾಕ್ರೆ

ವಿಡಿಯೋದಲ್ಲಿ ಮಹೇಶ್ ಮೋಟೆ ಭಯದಿಂದ ನಡುಗುತ್ತಾ, ಕಣ್ಣೀರು ಸುರಿಸಿ ಕ್ಷಮೆಯಾಚಿಸುವುದು ಸೆರೆಯಾಗಿದೆ. ಈ ಘಟನೆಯನ್ನು ಸಮರ್ಥಿಸಿಕೊಂಡಿರುವ ಶುಭಂ ಜಗದಾಳೆ, “ಇದು ನಮ್ಮ ಎಂಎನ್‌ಎಸ್ ಸ್ಟೈಲ್ ನ್ಯಾಯ, ನಮ್ಮ ಭಾಷೆಯಲ್ಲೇ ‘ಮಹಾಪ್ರಸಾದ’ ನೀಡಿದ್ದೇವೆ. ರಾಜ್ ಸಾಹೇಬರ ವಿರುದ್ಧ ಯಾರು ಮಾತನಾಡಿದರೂ ಇದೇ ಗತಿ” ಎಂದು ಎಚ್ಚರಿಸಿದ್ದಾರೆ.

ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯು ಆರಂಭದಿಂದಲೂ ತನ್ನ ಆಕ್ರಮಣಕಾರಿ ಹಾಗೂ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕುಖ್ಯಾತಿ ಪಡೆದಿದೆ. ಹಿಂದಿ ಭಾಷಿಕರ ಮೇಲಿನ ಹಲ್ಲೆ, ಟೋಲ್ ಪ್ಲಾಜಾಗಳ ಧ್ವಂಸ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದವರ ಮೇಲೆ ಹಲ್ಲೆ ನಡೆಸಿ ಕ್ಷಮೆ ಕೇಳಿಸುವುದು ಈ ಪಕ್ಷದ ಚಾಳಿಯಾಗಿದೆ.

ಮಹಾರಾಷ್ಟ್ರದಲ್ಲಿ ರಾಜಕೀಯ ನಾಯಕರನ್ನು ಅಣಕಿಸಿ ವಿಡಿಯೋ ಮಾಡುವ ಹಾಸ್ಯನಟರು, ಯೂಟ್ಯೂಬರ್‌ಗಳು ಮತ್ತು ಸಾಮಾನ್ಯ ನಾಗರಿಕರ ಮೇಲೆ ಶಿವಸೇನೆ ಅಥವಾ ಎಂಎನ್‌ಎಸ್‌ನಂತಹ ಪ್ರಾದೇಶಿಕ ಪಕ್ಷಗಳ ಕಾರ್ಯಕರ್ತರು ಹಲ್ಲೆ ನಡೆಸಿ ವಿಡಿಯೋ ವೈರಲ್ ಮಾಡುತ್ತಿರುವುದು ವಾಕ್ ಸ್ವಾತಂತ್ರ್ಯದ ದೃಷ್ಟಿಯಿಂದ ಪದೇ ಪದೇ ಆತಂಕಕ್ಕೆ ಕಾರಣವಾಗುತ್ತಿದೆ.

ಪೊಲೀಸ್ ತನಿಖೆಯ ನಿರೀಕ್ಷೆ: ವ್ಯಕ್ತಿಯೊಬ್ಬನನ್ನು ಅಕ್ರಮವಾಗಿ ಕೂಡಿಹಾಕಿ, ಮುಖಕ್ಕೆ ಮಸಿ ಬಳಿದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿರುವ ಈ ಕೃತ್ಯದ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುತ್ತಾರೆಯೇ ಅಥವಾ ಸಂತ್ರಸ್ತ ವ್ಯಕ್ತಿ ದೂರು ನೀಡುತ್ತಾರೆಯೇ ಎಂಬುದರ ಮೇಲೆ ಮುಂದಿನ ಕಾನೂನು ಕ್ರಮ ಅವಲಂಬಿತವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ